• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Umesh Katti Death: ಹೃದಯಾಘಾತದಿಂದ ಉಮೇಶ್ ಕತ್ತಿ ನಿಧನ; ಚಿಕಿತ್ಸೆ ನೀಡಿದ ವೈದ್ಯರು ಹೇಳಿದ್ದೇನು?

Umesh Katti Death: ಹೃದಯಾಘಾತದಿಂದ ಉಮೇಶ್ ಕತ್ತಿ ನಿಧನ; ಚಿಕಿತ್ಸೆ ನೀಡಿದ ವೈದ್ಯರು ಹೇಳಿದ್ದೇನು?

ಸಚಿವ ಉಮೇಶ್ ಕತ್ತಿ ನಿಧನ

ಸಚಿವ ಉಮೇಶ್ ಕತ್ತಿ ನಿಧನ

ಆಸ್ಪತ್ರೆ ತಲುಪುವಷ್ಟರಲ್ಲಿ ಉಮೇಶ್ ಕತ್ತಿ ಅವರ ಹೃದಯ ಬಡಿತವಿರಲಿಲ್ಲ. ಸುಮಾರು 7 ಸುತ್ತು ಸಿಪಿಆರ್ ಮಾಡುವ ಯತ್ನ ಮಾಡಲಾಯ್ತು. ಮನೆಯಲ್ಲಿಯೇ ಸಿಪಿಆರ್ ಪ್ರಯತ್ನ ಮಾಡಿದ್ರೆ ಬದುಕಿಸುವ ಸಾಧ್ಯತೆ ಹೆಚ್ಚಿರುತ್ತಿತ್ತು ಎಂದು ಡಾ.ಗುರುದೇವ್ ಹೇಳಿದ್ದಾರೆ.

  • Share this:

ಮನೆಯ ಬಾತ್​​ ರೂಂನಲ್ಲಿ ಕುಸಿದಿದ್ದ ಉಮೇಶ್ ಕತ್ತಿ (Minister Umesh Katti) ಅವರನ್ನು ಬೆಂಗಳೂರಿನ (Bengaluru) ಎಂ.ಎಸ್.ರಾಮಯ್ಯ ಆಸ್ಪತ್ರೆಗೆ (MS Ramaiah Hospital) ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಉಮೇಶ್ ಕತ್ತಿ (Umesh Katti Death) ವಿಧಿವಶರಾಗಿದ್ದಾರೆ. ವೈದ್ಯರು ಕೊನೆ ಕ್ಷಣದಲ್ಲಿ  ಚಿಕಿತ್ಸೆ (Treatment) ನೀಡುತ್ತಿರುವ ಮತ್ತು ಉಮೇಶ್ ಕತ್ತಿ ಅವರನ್ನ ಆಸ್ಪತ್ರೆಯೊಳಗೆ ಕರೆದುಕೊಂಡು ಹೋಗುತ್ತಿರುವ ವಿಡಿಯೋಗಳು (Umesh Katti last Videos) ಸೋಶಿಯಲ್ ಮೀಡಿಯಾದಲ್ಲಿ (Social Media) ಹರಿದಾಡುತ್ತಿವೆ. ಉಮೇಶ್ ಕತ್ತಿ ಅವರಿಗೆ ಚಿಕಿತ್ಸೆ ನೀಡಿದ ಎಂ.ಎಸ್.ರಾಮಯ್ಯ ಆಸ್ಪತ್ರೆ ವೈದ್ಯ ಡಾ.ಗುರುದೇವ್ (Dr Gurudev) ಮಾಧ್ಯಮಗಳ ಜೊತೆ ಮಾತನಾಡಿ ಕೆಲ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಸಚಿವ ಉಮೇಶ್ ಕತ್ತಿ ಅವರು ರಾತ್ರಿ 10:30ರ ಸುಮಾರಿಗೆ ಮನೆಯಲ್ಲಿ‌ ಬಿದ್ದಿದಾರೆ ಎಂದು ನಮ್ಮ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಆಸ್ಪತ್ರೆಗೆ ಬರುವಷ್ಟರಲ್ಲಿ 15 ನಿಮಿಷಗಳಾಗಿತ್ತು ಎಂದು ವೈದ್ಯರು ಹೇಳಿದ್ದಾರೆ.


ಆಸ್ಪತ್ರೆ ತಲುಪುವಷ್ಟರಲ್ಲಿ ಉಮೇಶ್ ಕತ್ತಿ ಅವರ ಹೃದಯ ಬಡಿತವಿರಲಿಲ್ಲ. ಸುಮಾರು 7 ಸುತ್ತು ಸಿಪಿಆರ್ ಮಾಡುವ ಯತ್ನ ಮಾಡಲಾಯ್ತು. ಮನೆಯಲ್ಲಿಯೇ ಸಿಪಿಆರ್ ಪ್ರಯತ್ನ ಮಾಡಿದ್ರೆ ಬದುಕಿಸುವ ಸಾಧ್ಯತೆ ಹೆಚ್ಚಿರುತ್ತಿತ್ತು ಎಂದು ಡಾ.ಗುರುದೇವ್ ಹೇಳಿದ್ದಾರೆ.


ಆಸ್ಪತ್ರೆಗೆ ಬಂದಾಗ ದೇಹ ಸ್ಪಂದಿಸುತ್ತಿರಲಿಲ್ಲ


ಚಿಕಿತ್ಸೆ ಫಲಕಾರಿಯಾಗದ ಪರಿಣಾಮ 11:30ಕ್ಕೆ ಮೃತಪಟ್ಟಿರುವುದಾಗಿ ಖಚಿತಪಡಿಸಲಾಯ್ತು. 2 ಬಾರಿ ಅವರಿಗೆ ಶಸ್ತ್ರಚಿಕಿತ್ಸೆ ಮಾಡಿ ಸ್ಟಂಟ್ ಹಾಕಲಾಗಿತ್ತು. ಆಸ್ಪತ್ರೆಗೆ ಕರೆತರುವಷ್ಟರಲ್ಲಿಯೇ ದೇಹ ಸ್ಪಂದಿಸುತ್ತಿರಲಿಲ್ಲ ಎಂದು ವೈದ್ಯರು ತಿಳಿಸಿದರು.


ಇದನ್ನೂ ಓದಿ:   Kannada Compulsory: ಕೇಂದ್ರ, ರಾಜ್ಯ ಸರ್ಕಾರಗಳ ಕಾರ್ಯಕ್ರಮದಲ್ಲಿ ಕನ್ನಡ ಕಡ್ಡಾಯ; ಅಧಿಕೃತ ಆದೇಶ


ಬೆಲ್ಲದ ಬಾಗೇವಾಡಿಯಲ್ಲಿ ಅಂತ್ಯಕ್ರಿಯೆ


ಏರ್ ಅಂಬುಲೆನ್ಸ್ ಮೂಲಕ ಬೆಳಗಾವಿಗೆ ಉಮೇಶ್ ಕತ್ತಿ ಅವರ ಪಾರ್ಥಿವ ಶರೀರ ರವಾನೆ ಮಾಡಲಾಗಿದೆ. ವಿಶ್ವನಾಥ್ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ನಂತರ ತೋಟದಲ್ಲಿರುವ ತಂದೆ ವಿಶ್ವನಾಥ್ ಅವರ ಸಮಾಧಿ ಪಕ್ಕದಲ್ಲಿಯೇ ಉಮೇಶ್ ಕತ್ತಿ ಅವರ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಿದ್ದಾರೆ. ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ. ಸಂಪುಟದ ಬಹುತೇಕ ಎಲ್ಲಾ ಸಚಿವರು, ರಾಜಕೀಯ ಮುಖಂಡರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.


ಉಮೇಶ್ ಕತ್ತಿ ನಿಧನಕ್ಕೆ ಸಿಎಂ ಕಣ್ಣೀರು


ಆತ್ಮೀಯರು, ಸೋದರರು ಆದ ಉಮೇಶ್ ಕತ್ತಿ ಅವರ ತಂದೆ ಮತ್ತು ನಮ್ಮ ತಂದೆ ಅವರ ಜೊತೆ ಅತ್ಯಂತ ಆತ್ಮೀಯರು. ಸುಮಾರು ನಾಲ್ಕು ದಶಕಗಳಿಂದ ಉಮೇಶ್ ಕತ್ತಿ ಕುಟುಂಬದ ಜೊತೆ ಒಡನಾಟ ಇದೆ. ತಂದೆಯವರ ಅಕಾಲಿಕ ನಿಧನದಿಂದಾಗಿ 25ನೇ ವಯಸ್ಸಿನಲ್ಲಿಯೇ ರಾಜಕೀಯ ಪ್ರವೇಶ ಮಾಡಿ, ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಎಂಟು ಬಾರಿ ಶಾಸಕರಾಗಿದ್ದ ಉಮೇಶ್ ಕತ್ತಿ ಅವರು ರಾಜ್ಯದ ಪ್ರಮುಖ ರಾಜಕೀಯ ನಾಯಕರಾಗಿದ್ದರು ಎಂದು ಸಿಎಂ ಭಾವುಕರಾದರು.


ಹಳೆಯ ನೆನಪು ನೆನೆದು ಬೊಮ್ಮಾಯಿ ಕಣ್ಣೀರು


ಉಮೇಶ್ ಕತ್ತಿ ಅವರ ಜೊತೆ ನಾನು ಮೂರು ದಶಕಗಳಿಂದ ಒಡನಾಟ ಹೊಂದಿದ್ದೇನೆ. ಇಬ್ಬರು ರಾಜಕೀಯದಲ್ಲಿ ಏಕಕಾಲದಲ್ಲಿ ಏರಿಳಿತ ಕಂಡಿದ್ದೇವೆ. ಜೊತೆಯಾಗಿ ಹೋರಾಟದಲ್ಲಿ ಭಾಗಿಯಾಗಿದ್ದೇವೆ. ನಮ್ಮ ಜೊತೆ ಸಹೋದರರ ಸಂಬಂಧ ಇತ್ತು ಎಂದು ಹೇಳುತ್ತಲೇ ಸಿಎಂ ಬೊಮ್ಮಾಯಿ ಕಣ್ಣೀರು ಹಾಕಿದರು.


ಇದನ್ನೂ ಓದಿ:  Umesh Katti: ನೇರ ನುಡಿಯ ಗಟ್ಟಿ ರಾಜಕಾರಣಿ ಉಮೇಶ್ ಕತ್ತಿ, ಹಿರಿಯ ನಾಯಕನ ಹೆಜ್ಜೆ ಗುರುತು ಇಲ್ಲಿದೆ


ತಂದೆ ನಿಧನದ ಬಳಿಕ ರಾಜಕೀಯ ಪ್ರವೇಶ

top videos


    ಉಮೇಶ್ ಕತ್ತಿ ತಂದೆ ವಿಶ್ವನಾಥ್ ಕತ್ತಿ ಅಂದಿನ ರಾಜ್ಯ ರಾಜಕೀಯದಲ್ಲಿ ದೊಡ್ಡ ಹೆಸರು ಮಾಡಿದ್ದವರು. ದುರಾದೃಷ್ಟವಶಾತ್ ಅಂದು ವಿಶ್ವನಾಥ್ ಕತ್ತಿಯವರು ವಿಧಾನಸಭೆಯಲ್ಲೇ ಹೃದಯಾಘಾತಕ್ಕೆ ಒಳಗಾಗಿ ನಿಧನರಾಗಿದ್ದರು. ಅವರ ನಿಧನದ ಬಳಿಕ ಉಮೇಶ್ ಕತ್ತಿ ಅವರು ರಾಜಕೀಯ ಪ್ರವೇಶ ಮಾಡಿದ್ದರು. ವಿಪರ್ಯಾಸ ಅಂದ್ರೆ ಇಂದು ಅವರೂ ಕೂಡ ಅಧಿಕಾರದಲ್ಲಿ ಇರುವಾಗಲೇ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.

    First published: