• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Umesh Katti: ಇನ್ನೂ ಟೇಕಾಫ್ ಆಗದ ಏರ್ ಅಂಬುಲೆನ್ಸ್; ಉಮೇಶ್ ಕತ್ತಿ ಅಂತ್ಯಕ್ರಿಯೆ ವಿಳಂಬ ಸಾಧ್ಯತೆ

Umesh Katti: ಇನ್ನೂ ಟೇಕಾಫ್ ಆಗದ ಏರ್ ಅಂಬುಲೆನ್ಸ್; ಉಮೇಶ್ ಕತ್ತಿ ಅಂತ್ಯಕ್ರಿಯೆ ವಿಳಂಬ ಸಾಧ್ಯತೆ

ಉಮೇಶ್ ಕತ್ತಿ

ಉಮೇಶ್ ಕತ್ತಿ

ಬೆಂಗಳೂರಿನಿಂದ ರಸ್ತೆ ಮಾರ್ಗವಾಗಿ ತೆರಳಲು ಕನಿಷ್ಠ ಏಳು ಗಂಟೆ ಸಮಯ ತಗಲುತ್ತದೆ. ಇದರಿಂದ ಅಂತ್ಯಕ್ರಿಯೆ ವಿಳಂಬವಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆ ವಿಶೇಷ ವಿಮಾನದಲ್ಲಿ ಪಾರ್ಥಿವ ಶರೀರ ರವಾನಿಸುವ ಕುರಿತು ಚಿಂತನೆಗಳು ನಡೆದಿದೆ.

  • Share this:

ನಿನ್ನೆ ನಿಧನರಾಗಿರುವ ಸಚಿವ ಉಮೇಶ್​ ಕತ್ತಿ (Minister Umesh Katti) ಅವರ ಪಾರ್ಥಿವ ಶರೀರವನ್ನು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ (Belagavi Airport) ಏರ್​ ಲಿಫ್ಟ್ (Airlift) ಮಾಡಲು ಸರ್ಕಾರ ಮುಂದಾಗಿದೆ. ಬೆಳಗ್ಗೆ ಏಳು ಗಂಟೆಗೆ ಪಾರ್ಥಿವ ಶರೀರರವನ್ನು ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ತರಲಾಗಿದೆ. ಆದ್ರೆ ಬೆಂಗಳೂರಿನಲ್ಲಿ (Bengaluru Weather) ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು (Cloudy Weather And Rain), ತುಂತುರು ಮಳೆಯಾಗುತ್ತಿದೆ. ಹವಾಮಾನ ವೈಪರೀತ್ಯದಿಂದಾಗಿ ಇದುವರೆಗೂ ಏರ್ ಅಂಬುಲೆನ್ಸ್ ಟೇಕಾಫ್ ಆಗಿಲ್ಲ. ಬೆಳಗ್ಗೆ 10.30ಕ್ಕೆ ಟೇಕಾಫ್ ಆಗುವ ಸಾಧ್ಯತೆಗಳಿವೆ ಎಂಬ ಮಾಹಿತಿ ನ್ಯೂಸ್ 18ಗೆ ಲಭ್ಯವಾಗಿದೆ.


ಹವಾಮಾನ ವೈಪರೀತ್ಯ ಹಿನ್ನೆಲೆ ಚೆನ್ನೈನಿಂದ HALಗೆ ಬರಬೇಕಿದ್ದ ಏರ್ ಅಂಬ್ಯುಲೆನ್ಸ್ ಬಂದಿಲ್ಲ. ಈ ಹಿನ್ನೆಲೆ ಹೈದರಾಬಾದ್​ನಿಂದ ಏರ್ ಅಂಬುಲೆನ್ಸ್ ಆಗಮಿಸುತ್ತಿದೆ.


ಇಂದು ಸಂಜೆ ಬೆಳಗಾವಿ (Belagavi) ಜಿಲ್ಲೆಯ ಬೆಲ್ಲದ ಬಾಗೇವಾಡಿಯಲ್ಲಿ ನಡೆಯುವ ಅಂತ್ಯಕ್ರಿಯೆಯಲ್ಲಿ ಸಿಎಂ ಸೇರಿದಂತೆ ಸಂಪುಟದ ಸಚಿವರು (Cabinet Ministers) ಬಹುತೇಕ ಭಾಗಿಯಾಗಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಸಿಎಂ ಬೆಂಗಳೂರಿನಿಂದ ಬೆಳಗಾವಿಗೆ ವಿಶೇಷ ವಿಮಾನದಲ್ಲಿ ಪ್ರಯಾಣಿಸಲಿದ್ದಾರೆ. ರಾಜಕೀಯ ಗಣ್ಯರು ಕತ್ತಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.


ಇದನ್ನೂಓದಿ:  Umesh Katti Death: ಹೃದಯಾಘಾತದಿಂದ ಉಮೇಶ್ ಕತ್ತಿ ನಿಧನ; ಚಿಕಿತ್ಸೆ ನೀಡಿದ ವೈದ್ಯರು ಹೇಳಿದ್ದೇನು?


ಬೆಂಗಳೂರಿನಿಂದ ರಸ್ತೆ ಮಾರ್ಗವಾಗಿ ತೆರಳಲು ಕನಿಷ್ಠ ಏಳು ಗಂಟೆ ಸಮಯ ತಗಲುತ್ತದೆ. ಇದರಿಂದ ಅಂತ್ಯಕ್ರಿಯೆ ವಿಳಂಬವಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆ ವಿಶೇಷ ವಿಮಾನದಲ್ಲಿ ಪಾರ್ಥಿವ ಶರೀರ ರವಾನಿಸುವ ಕುರಿತು ಚಿಂತನೆಗಳು ನಡೆದಿದೆ.


Umesh Katti:ಚಿಕಿತ್ಸೆ ನೀಡಿದ ವೈದ್ಯರು ಹೇಳಿದ್ದೇನು?


ಸಚಿವ ಉಮೇಶ್ ಕತ್ತಿ ಅವರು ರಾತ್ರಿ 10:30ರ ಸುಮಾರಿಗೆ ಮನೆಯಲ್ಲಿ‌ ಬಿದ್ದಿದಾರೆ ಎಂದು ನಮ್ಮ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಆಸ್ಪತ್ರೆಗೆ ಬರುವಷ್ಟರಲ್ಲಿ 15 ನಿಮಿಷಗಳಾಗಿತ್ತು. ಆಸ್ಪತ್ರೆ ತಲುಪುವಷ್ಟರಲ್ಲಿ ಉಮೇಶ್ ಕತ್ತಿ ಅವರ ಹೃದಯ ಬಡಿತವಿರಲಿಲ್ಲ. ಸುಮಾರು 7 ಸುತ್ತು ಸಿಪಿಆರ್ ಮಾಡುವ ಯತ್ನ ಮಾಡಲಾಯ್ತು.


ಮನೆಯಲ್ಲಿಯೇ ಸಿಪಿಆರ್ ಪ್ರಯತ್ನ ಮಾಡಿದ್ರೆ ಬದುಕಿಸುವ ಸಾಧ್ಯತೆ ಹೆಚ್ಚಿರುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದ ಪರಿಣಾಮ 11:30ಕ್ಕೆ ಮೃತಪಟ್ಟಿರುವುದಾಗಿ ಖಚಿತಪಡಿಸಲಾಯ್ತು. 2 ಬಾರಿ ಅವರಿಗೆ ಶಸ್ತ್ರಚಿಕಿತ್ಸೆ ಮಾಡಿ ಸ್ಟಂಟ್ ಹಾಕಲಾಗಿತ್ತು. ಆಸ್ಪತ್ರೆಗೆ ಕರೆತರುವಷ್ಟರಲ್ಲಿಯೇ ದೇಹ ಸ್ಪಂದಿಸುತ್ತಿರಲಿಲ್ಲ ಎಂದು ಡಾ.ಗುರುದೇವ್ ಹೇಳಿದ್ದಾರೆ.


https://kannada.news18.com/news/state/cm-basavaraj-bommai-condoles-death-of-umesh-katti-mrq-836719.html
ಉಮೇಶ್ ಕತ್ತಿ


ಇದನ್ನೂ ಓದಿ:  Umesh Katti Death: ಹಳೆಯ ಒಡನಾಟ ನೆನಪು ಮಾಡಿಕೊಳ್ಳುತ್ತಾ ಕಣ್ಣೀರಿಟ್ಟ ಸಿಎಂ; ಬೆಳಗಾವಿ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ


ಹೆಚ್​​ಡಿಕೆ ಕಂಬನಿ


ಆಹಾರ ಮತ್ತು ನಾಗರೀಕ ಸರಬರಾಜು ಖಾತೆ ಸಚಿವರಾದ ಶ್ರೀ ಉಮೇಶ್ ಕತ್ತಿ ಅವರ ನಿಧನದಿಂದ ನನಗೆ ತೀವ್ರ ಆಘಾತವಾಗಿದೆ. ಜನತಾ ಪರಿವಾರದ ಹಿರಿಯರಾಗಿದ್ದ ಶ್ರೀ ಕತ್ತಿ ಅವರು ಸ್ನೇಹಜೀವಿ ಆಗಿದ್ದರಲ್ಲದೆ, ತಮ್ಮ ನೇರ ನಡೆ ನುಡಿಯಿಂದ ನಮ್ಮೆಲ್ಲರ ಪ್ರೀತಿ ಗೌರವಕ್ಕೆ ಪಾತ್ರರಾಗಿದ್ದರು. ಶ್ರೀ ಉಮೇಶ್ ಕತ್ತಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಕುಟುಂಬ ಸದಸ್ಯರಿಗೆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಸಿಎಂ ಹೆಚ್. ಡಿ.ಕುಮಾರಸ್ವಾಮಿ (Former CM HD Kumarswamy) ಸಂತಾಪ ಸೂಚಿಸಿದ್ದಾರೆ.


ಸಿದ್ದರಾಮಯ್ಯ ಸಂತಾಪ


ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವರಾದ ಉಮೇಶ್ ಕತ್ತಿ ಅವರ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಕುಟುಂಬವರ್ಗಕ್ಕೆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaih) ತಮ್ಮ ಸಂತಾಪವನ್ನು ಸೂಚಿಸಿದ್ದಾರೆ.

top videos
    First published: