ಬಿಎಸ್​ವೈಗೆ ತಲೆನೋವು ತಂದಿಟ್ಟ ಹೈಕಮಾಂಡ್​ ನಿರ್ಧಾರ; ಉಮೇಶ್ ಕತ್ತಿ ಮನವೊಲಿಕೆಗೆ ಸಿಎಂ ಶತಪ್ರಯತ್ನ

ನಾಲ್ಕೈದು ದಿನಗಳಿಂದ ಯಾವ ಬಿಜೆಪಿ ನಾಯಕರ ಸಂಪರ್ಕಕ್ಕೂ ಸಿಗದೆ ದೂರ ಉಳಿದ ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಕರೆ ಮಾಡಿ ಮಾತನಾಡಿದ್ದು ಬಿಜೆಪಿ ನಾಯಕರಿಗೆ ಆತಂಕ ಮೂಡಿಸಿತ್ತು.

Sushma Chakre | news18-kannada
Updated:August 28, 2019, 9:41 AM IST
ಬಿಎಸ್​ವೈಗೆ ತಲೆನೋವು ತಂದಿಟ್ಟ ಹೈಕಮಾಂಡ್​ ನಿರ್ಧಾರ; ಉಮೇಶ್ ಕತ್ತಿ ಮನವೊಲಿಕೆಗೆ ಸಿಎಂ ಶತಪ್ರಯತ್ನ
ಉಮೇಶ್ ಕತ್ತಿ- ಸಿಎಂ ಯಡಿಯೂರಪ್ಪ
  • Share this:
ಬೆಂಗಳೂರು (ಆ. 28): ರಾಜ್ಯ ಸರ್ಕಾರದ ಸಚಿವ ಸಂಪುಟ ರಚನೆ ಮತ್ತು ಖಾತೆ ಹಂಚಿಕೆ ಬಗ್ಗೆ ಈಗಾಗಲೇ ಅನೇಕ ಬಿಜೆಪಿ ಶಾಸಕರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಬೆಳಗಾವಿಯ ಹುಕ್ಕೇರಿ ಶಾಸಕ ಉಮೇಶ್ ಕತ್ತಿ ತಮಗೆ ಸಚಿವ ಸ್ಥಾನ ಸಿಗದ ಬಗ್ಗೆ ಆಕ್ರೋಶಗೊಂಡಿದ್ದು, ಈ ಬಾರಿಯ ಚುನಾವಣೆಯಲ್ಲಿ ಸೋಲನ್ನನುಭವಿಸಿದ್ದ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಿದ್ದೂ ಅಲ್ಲದೆ ಉಪಮುಖ್ಯಮಂತ್ರಿಯನ್ನಾಗಿ ಮಾಡಿರುವುದು ಅವರ ಕೋಪಕ್ಕೆ ಮತ್ತಷ್ಟು ತುಪ್ಪ ಸುರಿದಂತಾಗಿದೆ.

ಮಾಜಿ ಶಾಸಕ ಲಕ್ಷ್ಮಣ್ ಸವದಿಗೆ ಸಚಿವ ಸ್ಥಾನ ನೀಡಿದ್ದಕ್ಕೆ ಆಕ್ರೋಶಗೊಂಡಿದ್ದ ಸಚಿವ ಸ್ಥಾನ ವಂಚಿತ ಉಮೇಶ್ ಕತ್ತಿ ಸಿಎಂ ಬಿ.ಎಸ್​. ಯಡಿಯೂರಪ್ಪನವರ ಎದುರಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಸವದಿಗೆ ಡಿಸಿಎಂ ಹುದ್ದೆಯನ್ನೂ ನೀಡಿರುವುದಕ್ಕೆ ಮತ್ತಷ್ಟು ಆಕ್ರೋಶಗೊಂಡಿದ್ದು, ಬಿಜೆಪಿ ನಾಯಕರಿಂದ ದೂರ ಉಳಿದಿದ್ದಾರೆ. ಸಿಎಂ ಯಡಿಯೂರಪ್ಪರನ್ನು ಭೇಟಿಯೂ ಮಾಡದ ಉಮೇಶ್ ಕತ್ತಿ ನಿನ್ನೆ ನೂತನ ‌ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಪದಗ್ರಹಣ ಸಮಾರಂಭಕ್ಕೂ ಗೈರಾಗಿದ್ದರು.

ಟ್ರಬಲ್ ಶೂಟರ್​ಗೆ ಇಂದು ಮಹತ್ವದ ದಿನ; ಇಡಿ ದಾಳಿ ಪ್ರಕರಣದಲ್ಲಿ ಡಿಕೆಶಿಗೆ ಸಿಗಲಿದೆಯಾ ಕ್ಲೀನ್​ಚಿಟ್​?

ನಾಲ್ಕೈದು ದಿನಗಳಿಂದ ಯಾವ ಬಿಜೆಪಿ ನಾಯಕರ ಸಂಪರ್ಕಕ್ಕೂ ಸಿಗದೆ ದೂರ ಉಳಿದ ಉಮೇಶ್ ಕತ್ತಿ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಕರೆ ಮಾಡಿ ಮಾತನಾಡಿದ್ದು ಬಿಜೆಪಿ ನಾಯಕರಿಗೆ ಆತಂಕ ಮೂಡಿಸಿತ್ತು. ಹೀಗಾಗಿ, ಮುಖ್ಯಮಂತ್ರಿ ಯಡಿಯೂರಪ್ಪ ಅಸಮಾಧಾನ ಶಮನ ಮಾಡುವ ಪ್ರಯತ್ನದಲ್ಲಿದ್ದು,  ಉಮೇಶ್ ಕತ್ತಿ ಅವರನ್ನು ಸಂಪರ್ಕಿಸಿ ಮನವೊಲಿಸೋ ಪ್ರಯತ್ನ ಮಾಡುತ್ತಿದ್ದಾರೆ. ಈಗಾಗಲೇ ಹಲವು ಬಾರಿ ಕತ್ತಿ‌ ಮನವೊಲಿಸೋ ಪ್ರಯತ್ನ ‌ಮಾಡಿ ವಿಫಲವಾಗಿರುವ ಸಿಎಂ ಯಡಿಯೂರಪ್ಪ ಇನ್ನೂ ಆ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಲಿದ್ದಾರೆ.

ಜಾಮೀನು ಪಡೆಯಲು ನ್ಯಾಯಾಧೀಶರಿಗೆ ಗಾಲಿ ಜನಾರ್ದನ ರೆಡ್ಡಿ ಕೋಟಿ ಕೋಟಿ ಆಫರ್!

ಉಪಮುಖ್ಯಮಂತ್ರಿ ಹುದ್ದೆ ಪ್ರಕಟವಾದ ನಂತರವೂ ಉಮೇಶ್ ಕತ್ತಿ ಸಂಪರ್ಕಕ್ಕೆ ಪ್ರಯತ್ನಿಸಿದ್ದ ಸಿಎಂ ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ನೀಡುವ ಭರವಸೆ ನೀಡುತ್ತಿದ್ದಾರೆ. ಈ ಮೂಲಕ ಉಮೇಶ್ ಕತ್ತಿಯ ‌ಮನವೊಲಿಸಲು ಶತಪ್ರಯತ್ನ ಮಾಡುತ್ತಿದ್ದಾರೆ. ಆದರೂ ಯಡಿಯೂರಪ್ಪನವರ ಮನವೊಲಿಕೆಗೆ ಬಗ್ಗದ ಉಮೇಶ್ ಕತ್ತಿ ನಡೆಯಿಂದ ಸಿಎಂ ಯಡಿಯೂರಪ್ಪ ಆತಂಕಕ್ಕೊಳಗಾಗಿದ್ದಾರೆ. ಹೈಕಮಾಂಡ್​ ತೀರ್ಮಾನದಿಂದ ರಾಜ್ಯದ ಬಿಜೆಪಿ ನಾಯಕರ ಅಸಾಮಾಧಾನಕ್ಕೆ ಸಿಎಂ ಯಡಿಯೂರಪ್ಪ ಗುರಿಯಾಗಿದ್ದಾರೆ. 

(ವರದಿ: ಕೃಷ್ಣ ಜಿ.ವಿ)
First published:August 28, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading