Rajya Sabha Election: ರಾಜ್ಯಸಭಾ ಟಿಕೆಟ್​ಗೆ ಬಿಜೆಪಿಯಲ್ಲಿ ಭಾರೀ ಪೈಪೋಟಿ; ಇಂದು ಮತ್ತೆ ಸಿಎಂ ಭೇಟಿಯಾದ ಉಮೇಶ್ ಕತ್ತಿ

Karnataka Rajya Sabha Election: ನಿನ್ನೆ ತಾನೇ ಸಿಎಂ ಭೇಟಿ ಮಾಡಿ ಹೋಗಿದ್ದ ಉಮೇಶ್ ಕತ್ತಿ ಇಂದು ಮತ್ತೆ ಬೆಳ್ಳಂಬೆಳಗ್ಗೆ ಸಿಎಂ ಭೇಟಿ ಮಾಡಿದ್ದಾರೆ. ಸಹೋದರ ರಮೇಶ್ ಕತ್ತಿಗೆ ರಾಜ್ಯಸಭಾ ಚುನಾವಣೆಯ ಟಿಕೆಟ್ ಕೊಡುವಂತೆ ಉಮೇಶ್ ಕತ್ತಿ ಸಿಎಂ ಮೇಲೆ ಒತ್ತಡ ಹೇರಿದ್ದಾರೆ.

ಉಮೇಶ್​ ಕತ್ತಿ ಮತ್ತು ಬಿಎಸ್ ಯಡಿಯೂರಪ್ಪ

ಉಮೇಶ್​ ಕತ್ತಿ ಮತ್ತು ಬಿಎಸ್ ಯಡಿಯೂರಪ್ಪ

  • Share this:
ಬೆಂಗಳೂರು (ಜೂ. 4): ಜೂನ್ 19ರಂದು ರಾಜ್ಯಸಭಾ ಚುನಾವಣೆ ಘೋಷಣೆಯಾಗಿದೆ. ಕರ್ನಾಟಕದ ನಾಲ್ವರು ರಾಜ್ಯಸಭಾ ಸದಸ್ಯರ ಅಧಿಕಾರಾವಧಿ ಜೂನ್-ಜುಲೈನಲ್ಲಿ ಅಂತ್ಯಗೊಳ್ಳುವುದರಿಂದ ಆ 4 ಸ್ಥಾನಗಳಿಗೂ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಟಿಕೆಟ್​ಗಾಗಿ ಭಾರೀ ಪೈಪೋಟಿ ಶುರುವಾಗಿದೆ.

ನಿನ್ನೆ ರಾತ್ರಿ ಬೆಳಗಾವಿ ಭಾಗದ ಶಾಸಕರ ಜೊತೆ ಸಚಿವ ರಮೇಶ್ ಜಾರಕಿಹೊಳಿ ಡಿನ್ನರ್ ಮೀಟಿಂಗ್ ನಡೆಸಿದ್ದರು. ಮಲ್ಲೇಶ್ವರಂನಲ್ಲಿರುವ ಅಪಾರ್ಟ್​ಮೆಂಟ್​ನಲ್ಲಿ ರಮೇಶ್ ಜಾರಕಿಹೊಳಿ ನಿನ್ನೆ ರಾತ್ರಿ ಭೋಜನಕೂಟ ಆಯೋಜಿಸಿದ್ದರು. ಇದರಲ್ಲಿ ಬಿಜೆಪಿಯ ಕೆಲವು ಸಚಿವರು, ಶಾಸಕರು ಪಾಲ್ಗೊಂಡಿದ್ದರು. ರಾಜ್ಯಸಭಾ ಚುನಾವಣೆ ಘೋಷಣೆಯಾದ ಹಿನ್ನೆಲೆ ಈ ಡಿನ್ನರ್ ಮೀಟಿಂಗ್ ಕುತೂಹಲಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಸಿಎಂ ಯಡಿಯೂರಪ್ಪನವರನ್ನು ಭೇಟಿಯಾಗಿರುವ ಉಮೇಶ್ ಕತ್ತಿ ರಾಜ್ಯಸಭಾ ಟಿಕೆಟ್ ಬಗ್ಗೆ ಚರ್ಚಿಸಿದ್ದಾರೆ.

ಇದನ್ನೂ ಓದಿ:  ಕರ್ನಾಟಕದ 4 ರಾಜ್ಯಸಭಾ ಸ್ಥಾನಗಳಿಗೆ ಜೂನ್ 19ಕ್ಕೆ ಮತದಾನ

ಇಂದು ಸಿಎಂ ಯಡಿಯೂರಪ್ಪನವರ ಸರ್ಕಾರಿ ನಿವಾಸ ಕಾವೇರಿಗೆ ತೆರಳಿರುವ ಉಮೇಶ್ ಕತ್ತಿ ಮತ್ತೊಮ್ಮೆ ಸಿಎಂ ಜೊತೆಗೆ ಟಿಕೆಟ್ ಬಗ್ಗೆ ಚರ್ಚೆ ನಡೆಸಿದ್ದಾರೆ. ಸುಮಾರು ‌ಅರ್ಧ ಗಂಟೆಗಳ ಕಾಲ ಚರ್ಚೆ ನಡೆದಿದೆ. ನಿನ್ನೆ ತಾನೇ ಸಿಎಂ ಭೇಟಿ ಮಾಡಿ ಹೋಗಿದ್ದ ಉಮೇಶ್ ಕತ್ತಿ ಇಂದು ಮತ್ತೆ ಬೆಳ್ಳಂಬೆಳಗ್ಗೆ ಸಿಎಂ ಭೇಟಿ ಮಾಡಿದ್ದಾರೆ. ಸಹೋದರ ರಮೇಶ್ ಕತ್ತಿಗೆ ರಾಜ್ಯಸಭಾ ಚುನಾವಣೆಯ ಟಿಕೆಟ್ ಕೊಡುವಂತೆ ಉಮೇಶ್ ಕತ್ತಿ ಸಿಎಂ ಮೇಲೆ ಒತ್ತಡ ಹೇರಿದ್ದಾರೆ. ವಾಕಿಂಗ್ ಮೂಡ್ ನಲ್ಲಿದ್ದ ವೇಳೆ ಸಿಎಂ ಜೊತೆಗೆ ಉಮೇಶ್ ಕತ್ತಿ ಚರ್ಚೆ ನಡೆಸಿದ್ದಾರೆ.

ಜೂನ್ 25ಕ್ಕೆ ಕರ್ನಾಟಕದ ಪ್ರಭಾಕರ್ ಕೋರೆ, ರಾಜೀವ್‌ ಗೌಡ, ಬಿ.ಕೆ. ಹರಿಪ್ರಸಾದ್, ಕುಪೇಂದ್ರ ರೆಡ್ಡಿ ಅವರ ರಾಜ್ಯಸಭೆ ಅವಧಿ ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಈ 4 ಸ್ಥಾನಗಳಿಗೆ ಜೂನ್ 19ರಂದು ಚುನಾವಣೆ ನಡೆಯಲಿದೆ. ಜೂನ್ 9ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನ. ಜೂನ್ 10ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಜೂನ್ 13ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.First published: