ಸಚಿವ ಉಮೇಶ್ ಕತ್ತಿ (Umesh Katti) ಹೃದಯಾಘಾತದಿಂದ (Heart attack) ನಿಧನರಾಗಿದ್ದು ಹುಟ್ಟೂರು ಬೆಳಗಾವಿಯ (Belagavi) ಬೆಲ್ಲದಬಾಗೇವಾಡಿಯಲ್ಲಿ ಅಂತ್ಯಕ್ರಿಯೆ (Funeral) ನಡೆಯಿತು. ಇದಕ್ಕೂ ಮೊದಲು ವಿಶ್ವರಾಜ್ ಶುಗರ್ಸ್ ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅಂತಿಮ ದರ್ಶನ ನಡೆಯುತ್ತಿರೋವಾಗಲೇ ಉಮೇಶ್ ಕತ್ತಿ ಅಕಾಲಿಕ ನಿಧನ ಹಿನ್ನೆಲೆ ತಮ್ಮ ರಮೇಶ್ ಕತ್ತಿಯವರ ಆರೋಗ್ಯದಲ್ಲಿ ಏರುಪೇರು (Health Problem) ಉಂಟಾಗಿದೆ. ಹೊರಗೆ ಅಣ್ಣನ ಅಂತಿಮ ದರ್ಶನ ನಡೆಯುತ್ತಿದ್ರೆ, ಇತ್ತ ಒಳಗೆ ತಮ್ಮನ ಆರೋಗ್ಯ ತಪಾಸಣೆ ನಡೆಯಿತು. ಅಣ್ಣನ ಸಾವಿನ ಸುದ್ದಿ ಕೇಳಿ ನಿನ್ನೆಯೇ ರಮೇಶ್ ಕತ್ತಿ ಬೆಂಗಳೂರಿಗೆ ಆಗಮಿಸಿದ್ದರು. ತೀವ್ರ ನೊಂದು ಅಸ್ವಸ್ಥರಾಗಿರುವ ರಮೇಶ್ ಕತ್ತಿಗೆ ಕೊಠಡಿಯೊಂದರಲ್ಲಿ ಚಿಕಿತ್ಸೆ, ಈಸಿಜಿ ತಪಾಸಣೆ ಮಾಡಲಾಯ್ತು.
ಬೆಳಗಾವಿ ಜಿಲ್ಲೆಯ ಬೆಲ್ಲದ ಬಾಗೇವಾಡಿ ಗ್ರಾಮದ ವಿಶ್ವರಾಜ್ ಶುಗರ್ಸ್ ನಲ್ಲಿ ಉಮೇಶ್ ಕತ್ತಿಯವರ ಅಂತಿಮ ದರ್ಶನ ನಡೆಯಿತು. ಈ ವೇಳೆ ರಮೇಶ್ ಕತ್ತಿಯವರ ಆರೋಗ್ಯದಲ್ಲಿ ಏರುಪೇರಾಗಿದೆ. ನಿನ್ನೆಯಿಂದಲೂ ಸಹ ಅಣ್ಣನ ಸಾವಿನಿಂದ ಕಂಗಾಲಾಗಿ ರಮೇಶ್ ಕತ್ತಿ ಕುಗ್ಗಿಹೋಗಿದ್ದಾರೆ. ರಮೇಶ್ ಕತ್ತಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದಾರೆ.
ಸ್ನೇಹಿತನನ್ನು ಕಳೆದುಕೊಂಡಿದ್ದೇನೆ- ಯಡಿಯೂರಪ್ಪ
ಉಮೇಶ್ ಕತ್ತಿಯವರ ಅಗಲಿಕೆ ನಾಡಿಗೆ ಹಾಗೂ ಪಕ್ಷಕ್ಕೆ ತುಂಬಲಾಗದ ನಷ್ಟ. ನಮ್ಮ ಜತೆಗೆ ಬಹುಕಾಲದ ಸ್ನೇಹಿತನಾಗಿದ್ದ ಉಮೇಶ್ ಕತ್ತಿ ಅಗಲಿಕೆ ಅರಗಿಸಿಕೊಳ್ಳಲಾಗುತ್ತಿಲ್ಲ ಅಂತಾ ಉಮೇಶ್ ಕತ್ತಿ ನೆನೆದು ಯಡಿಯೂರಪ್ಪ ಗದ್ಗದಿತರಾದರು. ಅವರ ಸಾವಿನ ನೋವನ್ನ ಅರಗಿಸಿಕೊಳ್ಳುವ ಶಕ್ತಿ ಭಗವಂತ ಅವರ ಕುಟುಂಬಕ್ಕೆ ನೀಡಲಿ ಅಂದ್ರು.
ಇದನ್ನೂ ಓದಿ: ಉಮೇಶ್ ಕತ್ತಿ ಪಾರ್ಥಿವ ಶರೀರ ಏರ್ಲಿಫ್ಟ್; ಬೆಂಗಳೂರಿಂದ ಬೆಳಗಾವಿಗೆ ಹೊರಟ ವಿಮಾನ
ನನ್ನ ಯಾವುದೇ ಕೆಲಸ ಅವರಿಗೆ ಹೇಳಿದರೂ ಸಹ ಕೆಲಸ ಮಾಡುತ್ತಿದ್ದರು. ಕೊಟ್ಟ ಕೆಲಸ ಮುಗಿಸಿ ನನಗೆ ವಾಪಸ್ ಕಾಲ್ ಮಾಡಿ ಕೆಲಸ ಮಾಡಿದ್ದೇನೆ ಅಂತ ಹೇಳುತ್ತಿದ್ದರು. ಅಂತಹ ಒಬ್ಬ ಸ್ನೇಹಿತನನನ್ನು ಕಳೆದುಕೊಂಡಿದ್ದೇನೆ ಅಂದ್ರು.
ರಸ್ತೆ ಉದ್ದಕ್ಕೂ ಅಭಿಮಾನಿಗಳು ದಂಡು
ಉಮೇಶ್ ಕತ್ತಿಯವರ ಪಾರ್ಥಿವ ಶರೀರ ಹುಟ್ಟೂರಿಗೆ ತಂದಾಗ ಅಭಿಮಾನಿಗಳಲ್ಲಿ ದುಃಖ ಮಡುಗಟ್ಟಿತ್ತು. ಪಾರ್ಥಿವ ಶರಿರ ಹೊತ್ತ ಗಾಡಿಯನ್ನು ಅಭಿಮಾನಿಗಳು ಅಡ್ಡಹಾಕುತ್ತಿದ್ದರು. ರಸ್ತೆಯ ಉದ್ದಕ್ಕೂ ಕ್ಷೇತ್ರದ ಜನ ಅಂತಿಮ ದರ್ಶನ ಪಡೆದರು. ಹುಕ್ಕೇರಿಯಿಂದ ಬೆಲ್ಲದ ಬಾಗೇವಾಡಿಗೆ ತೆರಳುವ ರಸ್ತೆ ಉದ್ದಕ್ಕೂ ಅಭಿಮಾನಿಗಳ ದಂಡು ನೆರೆದಿತ್ತು.
ಉಮೇಶ್ ಕತ್ತಿ ಅಮರ್ ರಹೇ ಎಂದು ಘೋಷಣೆ
ಉಮೇಶ್ ಕತ್ತಿಯವರ ಪಾರ್ಥಿವ ಶರೀರದ ಮೆರವಣಿಗೆ ವೇಳೆ ದಾರಿಯುದ್ದಕ್ಕೂ ಸಾವಿರಾರು ಅಭಿಮಾನಿಗಳು ನಿಂತಿದ್ದರು. ಈ ವೇಳೆ ಉಮೇಶ್ ಕತ್ತಿ ಅಮರ್ ರಹೇ ಅಮರ್ ರಹೇ ಎಂದು ಘೋಷಣೆ ಕೂಗಿದರು. ಇನ್ನು ಇದಕ್ಕೂ ಮೊದಲು ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು.
ಉಮೇಶ್ ಕತ್ತಿ ನಿಧನಕ್ಕೆ ಆರ್.ವಿ.ದೇಶಪಾಂಡೆ ಸಂತಾಪ
ಕತ್ತಿ ನಿಧನಕ್ಕೆ ಆರ್.ವಿ. ದೇಶಪಾಂಡೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಉಮೇಶ್ ನನ್ನ ಪ್ರೀತಿಯ ಸ್ನೇಹಿತ. ಉಮೇಶ್ ಕತ್ತಿ ಬಡವರ ಬಗ್ಗೆ ಕಾಳಜಿ ಇರುವ ಮನುಷ್ಯ. ನಾನು ಯಾವಾಗಲೂ ಕಾಲ್ ಮಾಡಿದ್ರು ತಕ್ಷಣ ಪ್ರತಿಕ್ರಿಯಿಸುತ್ತಿದ್ದ. ಅವರ ಸಾವು ನಂಬಲಿಕ್ಕೆ ಸಾಧ್ಯವಾಗುತ್ತಿಲ್ಲ ಅಂತಾ ಹೇಳಿದರು.
ಇದನ್ನೂ ಓದಿ: ಉಮೇಶ್ ಕತ್ತಿ ನಿಧನ ಹಿನ್ನೆಲೆ ಜನೋತ್ಸವ ಮುಂದೂಡಿಕೆ, ಭಾನುವಾರ ನಡೆಸಲು ತೀರ್ಮಾನ
ಸತೀಶ್ ಜಾರಕಿಹೊಳಿಯಿಂದ ಅಂತಿಮ ದರ್ಶನ
ಶಾಸಕ ಸತೀಶ್ ಜಾರಕಿಹೊಳಿ, ಉಮೇಶ್ ಕತ್ತಿಯವರ ಅಂತಿಮ ದರ್ಶನ ಪಡೆದರು. ನಮ್ಮದು ಅವರದ್ದು ಬೇರೆ ಪಕ್ಷ ಆಗಿರಬಹುದು. ಆದರೆ ಖಾಸಗಿ ವಿಚಾರಗಳು ಬಂದಾಗ ನಾವು ಸಹಕಾರ ಮಾಡಲೇಬೇಕು. ಅವರು ಸಿಎಂ ಆಗಬೇಕು ಅಂತ ಬಯಸಿದ್ರು. ಆದರೆ ವಿಧಿಯಾಟ ಬೇರೆಯಾಗಿದೆ ಅಂತಾ ಹೇಳಿದರು.
ಅವರ ಕುಟುಂಬಸ್ಥರು ಧೈರ್ಯ ತೆಗೆದುಕೊಳ್ಳಬೇಕು. ಜಾರಕಿಹೊಳಿ ಕುಟುಂಬ ಮತ್ತು ಕತ್ತಿ ಕುಟುಂಬ ಒಳ್ಳೆಯ ಬಾಂಧವ್ಯ ಇದೆ. ಆದರೆ ಅವರು ನಮ್ಮನ್ನ ಅಗಲಿದ್ದಾರೆ ಅಂತಾ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ