ರಾಜೀನಾಮೆ ಅಂಗೀಕಾರ - ಶಾಸಕ ಸ್ಥಾನದಿಂದ ವಜಾ?; ವಿಚಾರಣೆಗೆ ಆಗಮಿಸಿದ ಉಮೇಶ್ ಜಾಧವ್

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಮೇಶ್​ ಜಾಧವ್​, ನನ್ನನ್ನು ಇವತ್ತು ಸ್ಪೀಕರ್ ಕರೆದಿದ್ದಾರೆ. ಭೇಟಿ ನೀಡಲಿದ್ದೇನೆ. ಸ್ಪೀಕರ್​ ರಮೇಶ್ ಕುಮಾರ್ ಯಾರ ಒತ್ತಡಕ್ಕೂ ಮಣಿಯುವುದಿಲ್ಲ ಎಂಬ ನಂಬಿಕೆಯಿದೆ ಎಂದು ಬೆಳಗ್ಗೆ ಹೇಳಿದ್ದರು

sushma chakre | news18
Updated:March 25, 2019, 11:06 AM IST
ರಾಜೀನಾಮೆ ಅಂಗೀಕಾರ - ಶಾಸಕ ಸ್ಥಾನದಿಂದ ವಜಾ?; ವಿಚಾರಣೆಗೆ ಆಗಮಿಸಿದ ಉಮೇಶ್ ಜಾಧವ್
ಉಮೇಶ್​ ಜಾಧವ್​
sushma chakre | news18
Updated: March 25, 2019, 11:06 AM IST
ಕಲಬುರ್ಗಿ (ಮಾ. 25): ಉಮೇಶ್​ ಜಾಧವ್​ ಅವರ ಶಾಸಕತ್ವವನ್ನು ಅನರ್ಹಗೊಳಿಸುವಂತೆ ಸ್ಪೀಕರ್​ಗೆ ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ ಮನವಿ ಸಲ್ಲಿಸಿದ್ದರು. ನಂತರ ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ್ದ ಉಮೇಶ್​ ಜಾಧವ್​ ಅವರ ರಾಜೀನಾಮೆಯನ್ನು ಅಂಗೀಕಾರ ಮಾಡಬಾರದೆಂದು ಕಾಂಗ್ರೆಸ್​ ನಾಯಕರು ಪಟ್ಟು ಹಿಡಿದಿದ್ದರು. ಆ ವಿಚಾರದ ಬಗ್ಗೆ ಇದೀಗ ವಿಚಾರಣೆ ಆರಂಭವಾಗಿದ್ದು ಶಾಸಕ ಉಮೇಶ್​ ಜಾಧವ್​ ವಿಚಾರಣೆಗೆ ಹಾಜರಾಗಿದ್ದಾರೆ.

ರಾಜೀನಾಮೆ ಅಂಗೀಕಾರಕ್ಕೆ ಕೆಲವು ಸ್ಪಷ್ಟನೆಗಳನ್ನು ಕೇಳಿದ್ದ ಸ್ಪೀಕರ್​ ರಮೇಶ್​ ಕುಮಾರ್​ ಇಂದು ತೀರ್ಪು ಪ್ರಕಟಿಸುವ ಸಾಧ್ಯತೆಯಿದೆ. ಇಂದು ಈ ಬಗ್ಗೆ ವಿಚಾರಣೆಗೆ ದಿನ ನಿಗದಿಗೊಳಿಸಿದ್ದ ರಮೇಶ್​ ಕುಮಾರ್​ ತೀರ್ಪಿನ ಆಧಾರದಲ್ಲಿ ಉಮೇಶ್​ ಜಾಧವ್​ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ. ಬಿಜೆಪಿಗೆ ಸೇರ್ಪಡೆಯಾಗಿರುವ ಉಮೇಶ್​ ಜಾಧವ್​ ಈ ಬಾರಿಯ ಕಲಬುರ್ಗಿಯ ಲೋಕಸಭಾ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಆದರೆ ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಕಾಂಗ್ರೆಸ್​ ನೀಡಿದ್ದ ದೂರನ್ನು ಸ್ಪೀಕರ್​ ಅಂಗೀಕರಿಸಿದರೆ ಉಮೇಶ್​ ಜಾಧವ್​ ಮುಂದಿನ 6 ವರ್ಷಗಳ ಕಾಲ ಯಾವುದೇ ಚುನಾವಣೆಗಳಲ್ಲಿ ಸ್ಪರ್ಧಿಸುವಂತಿಲ್ಲ.

ಜೆಡಿಎಸ್​ನಿಂದ ಕಾಂಗ್ರೆಸ್​ಗೆ ಉಡುಗೊರೆಯಾಗಿ ಸಿಕ್ಕ ಬೆಂಗಳೂರು ಉತ್ತರ ಕ್ಷೇತ್ರ; ಯಾರಾಗಲಿದ್ದಾರೆ ಡಿವಿಎಸ್​ ಪ್ರತಿಸ್ಪರ್ಧಿ?

ಉಮೇಶ್​ ಜಾಧವ್​ ರಾಜೀನಾಮೆ ಅಂಗೀಕಾರವಾಗುತ್ತಾ ಅಥವಾ ಅನರ್ಹತೆಗೆ ಗುರಿಯಾಗುತ್ತಾರಾ ಎಂಬ ಬಗ್ಗೆ ಕುತೂಹಲ ಮೂಡಿದೆ. ಇನ್ನು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಮೇಶ್​ ಜಾಧವ್​, ನನ್ನನ್ನು ಇವತ್ತು ಸ್ಪೀಕರ್ ಕರೆದಿದ್ದಾರೆ. 11 ಗಂಟೆಗೆ ಭೇಟಿ ನೀಡಲಿದ್ದೇನೆ. ಸ್ಪೀಕರ್​ ರಮೇಶ್ ಕುಮಾರ್ ಯಾರ ಒತ್ತಡಕ್ಕೂ ಮಣಿಯುವುದಿಲ್ಲ. ಕಾನೂನು ಪ್ರಕಾರ ಏನಿದೆಯೋ ಅದರಂತೆ ಅವರು ಕ್ರಮ ಕೈಗೊಳ್ಳುತ್ತಾರೆ. ಅದಕ್ಕೆಂದೇ ಕೆಲವು ನಿಯಮಗಳಿವೆ.  ಅವರು ರಾಜೀನಾಮೆ ಅಂಗೀಕಾರ ಮಾಡ್ತಾರೆ. ಈಗ ಸ್ಪೀಕರ್ ರಾಜೀನಾಮೆ ಪತ್ರವನ್ನ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

First published:March 25, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ