ಸ್ಪೀಕರ್ ತೀರ್ಪನ್ನು ಪ್ರಶ್ನಿಸುವ ಜಿ. ಪರಮೇಶ್ವರ್ ಅವರಿಗೆ ದೇವರು ಬುದ್ಧಿ ಕೊಡಲಿ: ಉಮೇಶ್ ಜಾಧವ್

ಕಾಂಗ್ರೆಸ್​ನವರಿಗೆ ಸೋಲಿನ ಭೀತಿ ಶುರುವಾಗಿದೆ. ಅದೇ ಹತಾಶೆಯಲ್ಲಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಉಮೇಶ್ ಜಾಧವ್ ಟೀಕಿಸಿದ್ದಾರೆ.

news18
Updated:May 17, 2019, 8:57 AM IST
ಸ್ಪೀಕರ್ ತೀರ್ಪನ್ನು ಪ್ರಶ್ನಿಸುವ ಜಿ. ಪರಮೇಶ್ವರ್ ಅವರಿಗೆ ದೇವರು ಬುದ್ಧಿ ಕೊಡಲಿ: ಉಮೇಶ್ ಜಾಧವ್
ಉಮೇಶ್​ ಜಾಧವ್​
  • News18
  • Last Updated: May 17, 2019, 8:57 AM IST
  • Share this:
ಕಲಬುರ್ಗಿ(ಮೇ 16): ಬಿಜೆಪಿಯಿಂದ ಆಮಿಷಕ್ಕೊಳಗಾಗಿ ಕಾಂಗ್ರೆಸ್ ತೊರೆದಿದ್ದಾರೆ ಎಂಬ ಡಾ| ಜಿ. ಪರಮೇಶ್ವರ್ ಅರೋಪಕ್ಕೆ ಉಮೇಶ್ ಜಾಧವ್ ತಿರುಗೇಟು ನೀಡಿದರು. ಚಿಂಚೋಳಿಯಲ್ಲಿ ನ್ಯೂಸ್18 ಕನ್ನಡದೊಂದಿಗೆ ಮಾತನಾಡಿದ ಡಾ| ಉಮೇಶ್ ಜಾಧವ, ಕಾಂಗ್ರೆಸ್​ನವರಿಗೆ ಸೋಲಿನ ಹತಾಶೆ ಬಂದಿದೆ. ಅವರು ಏನು ಮಾತನಾಡುತ್ತಿದ್ದಾರೆಂದು ಅವರಿಗೇ ಗೊತ್ತಿಲ್ಲ ಎಂದು ಟೀಕಿಸಿದರು.

ಸ್ಪೀಕರ್ ರಮೇಶ್ ಕುಮಾರ್ ಅವರು ಎಲ್ಲಾ ತನಿಖೆ ನಡೆಸಿ ತಾವು ಯಾವುದೇ ಆಮಿಷಕ್ಕೊಳಗಾಗಿಲ್ಲವೆಂದು ಹೇಳಿ ರಾಜೀನಾಮೆ ಪತ್ರ ಅಂಗೀಕರಿಸಿದ್ದಾರೆ. ಸ್ಪೀಕರ್ ತೀರ್ಪಿನ ವಿರುದ್ಧ ರಾಜಕೀಯ ಮಾಡುತ್ತಿರುವ ಡಿಸಿಎಂ ಪರಮೇಶ್ವರ್ ಅವರಿಗೆ ನಾಚಿಕೆಯಾಗಬೇಕು. ಅವರಿಗೆ ದೇವರು ಬುದ್ಧಿ ಕೊಡಲಿ ಎಂದು ಡಾ| ಉಮೇಶ್ ಜಾಧವ್ ಪ್ರಾರ್ಥಿಸಿದರು.

ಇದನ್ನೂ ಓದಿ: ಖರ್ಗೆ ಅವಕಾಶ ವಂಚಿತರಾಗಿದ್ದು ನಿಜ; ಆದರೆ ಈಗ ದಲಿತ ಸಿಎಂ ವಿಚಾರ ಅಪ್ರಸ್ತುತ; ಮುನಿಯಪ್ಪ

ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ:

ಚಿಂಚೋಳಿ ಜನರು ತನ್ನನ್ನು ದತ್ತು ಪಡೆದಿದ್ದಾರೆ ಎಂಬ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಯನ್ನೂ ಉಮೇಶ್ ಜಾಧವ್ ತಳ್ಳಿಹಾಕಿದರು. “ನಾನೊಬ್ಬ ಕ್ವಾಲಿಫೈಡ್ ಡಾಕ್ಟರ್. ಚಿಂಚೋಳಿ ಜನರು ಎರಡು ಬಾರಿ ಕಲಬುರ್ಗಿಯಲ್ಲೇ ಅತಿ ಹೆಚ್ಚು ಮತಗಳಿಂದ ಆರಿಸಿದ್ದಾರೆ” ಎಂದು ಹೇಳಿ ಉಮೇಶ್ ಜಾಧವ್ ಅವರು ತಮ್ಮ ಪುತ್ರ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.

“ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಬಿಡದೆ ಟೀಕೆ ಮಾಡುತ್ತಿರುವ ಪ್ರಿಯಾಂಕ್ ಖರ್ಗೆ ಅವರ ತಲೆ ಮತ್ತು ನಾಲಿಗೆಗೆ ಲಿಂಕ್ ತಪ್ಪಿದೆ ಎಂಬುದು ಜನರ ಅನಿಸಿಕೆ. ಪ್ರಿಯಾಂಕ್​ಗೆ ಅವರ ತಂದೆಯ ಸೋಲಿನ ಭೀತಿ ಶುರುವಾಗಿದೆ. ಅದಕ್ಕಾಗಿ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ” ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: ಕೈಗೆ ಬಳೆ ತೊಟ್ಟುಕೊಳ್ಳಿ ಎಂದ ಶೋಭಾ ಹೇಳಿಕೆ: ಹೆಣ್ಣಾಗಿ ಸ್ತ್ರೀ ಕುಲಕ್ಕೆ ಅಪಮಾನ ಮಾಡಬೇಡಿ ಎಂದ ಸಿದ್ದರಾಮಯ್ಯ“ಕಳೆದ 9 ತಿಂಗಳಿನಿಂದ ಪ್ರಿಯಾಂಕ್ ಖರ್ಗೆ ಎಲ್ಲಿ ಪ್ರವಾಸ ಮಾಡಿದ್ದಾರೆ, ಸಭೆ ನಡೆಸಿದ್ದಾರೆ ಎಂಬುದರ ಮಾಹಿತಿ ನೀಡಲಿ. ಹಣದ ಬಲದಿಂದ ಅವರು ಈ ರೀತಿ ಮಾತನಾಡುತ್ತಿದ್ದಾರೆ. ಸ್ವಲ್ಪ ದಿನಗಳಲ್ಲೇ ಅವರಿಗೆ ವಾಸ್ತವ ಸ್ಥಿತಿ ಗೊತ್ತಾಗಲಿದೆ. ಸ್ಪೀಕರ್ ನೀಡಿದ ತೀರ್ಪಿನ ವಿರುದ್ಧವೇ ಅವರು ಮಾತನಾಡುತ್ತಾರೆಂದರೆ ನೀವೇ ಯೋಚಿಸಿ” ಎಂದು ಕಲಬುರ್ಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆಗಿರುವ ಉಮೇಶ್ ಜಾಧವ್ ಅಭಿಪ್ರಾಯಪಟ್ಟರು.

ಎಂ.ಬಿ. ಪಾಟೀಲ್ ಆರೋಪ ನಿರಾಧಾರ:

ಲಿಂಗಾಯತರು ವೋಟ್ ಹಾಕಿಲ್ಲವೆಂದು ಜಾಧವ್ ಹೇಳಿದ್ದಾರೆಂದು ಗೃಹ ಸಚಿವ ಎಂ.ಬಿ. ಪಾಟೀಲ್ ಮಾಡಿದ ಆರೋಪವನ್ನೂ ಅವರು ತಳ್ಳಿಹಾಕಿದರು. “ನಾನು ಆ ರೀತಿ ಹೇಳಿದ್ದರೆ ಸಾಕ್ಷಿ ನೀಡಲಿ. ಈ ರೀತಿ ಗೊಂದಲದ ಹೇಳಿಕೆ ನೀಡುವ ಮೂಲಕ ವೀರಶೈವ-ಲಿಂಗಾಯತ ಮತಗಳನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಈ ರೀತಿ ಗೊಂದಲ ಸೃಷ್ಟಿಸುತ್ತಿದೆ. ನಾನು ಲಿಂಗಾಯತರಿಗೆ ಅತೀ ಹೆಚ್ಚು ಗೌರವ ನೀಡುತ್ತೇನೆ. ಈ ಬಾರಿ ಶೇ. 99ರಷ್ಟು ಲಿಂಗಾಯತ ಮತಗಳು ನಮಗೆ ಬರಲಿವೆ. ಯಾಕೆಂದರೆ ಲಿಂಗಾಯತರದ್ದು ಮತ್ತು ನಮ್ಮದು ಎರಡೂ ತತ್ವಗಳು ಒಂದೇ ಆಗಿವೆ” ಎಂದು ಉಮೇಶ್ ಜಾಧವ್ ಹೇಳಿದರು.

(ವರದಿ: ಮಹೇಶ್ ವಿ. ಶಟಗಾರ)

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ
First published:May 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading