ಪಿಯುಸಿಯಲ್ಲಿ ನನ್ನ ಮಗಳು ಫೇಲ್ ಆಗಲು ಕಾಂಗ್ರೆಸ್ ನಾಯಕರು ಕಾರಣ; ಉಮೇಶ್​ ಜಾಧವ್​

ನನ್ನ ಮಗಳು ಪ್ರತಿ ಬಾರಿಯೂ ಉನ್ನತ ಶ್ರೇಣಿಯಲ್ಲಿ ಪಾಸು ಆಗುತ್ತಿದ್ದಳು. ಆದರೆ ಕಾಂಗ್ರೆಸ್​ ನಾಯಕರು ಈ ರೀತಿ ಆರೋಪ ಮಾಡಿದ್ದರಿಂದಾಗಿ ನನ್ನ ಕುಟುಂಬ ಸಾಕಷ್ಟು ನೋವನ್ನು ಅನುಭವಿಸಿದೆ. ಇದರಿಂದಾಗಿ ಆಕೆ ಪರೀಕ್ಷೆ ಉತ್ತಮವಾಗಿ ಬರೆದಿಲ್ಲ ಎಂದು ಆರೋಪಿಸಿದರು.

Seema.R | news18
Updated:May 8, 2019, 1:23 PM IST
ಪಿಯುಸಿಯಲ್ಲಿ ನನ್ನ ಮಗಳು ಫೇಲ್ ಆಗಲು ಕಾಂಗ್ರೆಸ್ ನಾಯಕರು ಕಾರಣ; ಉಮೇಶ್​ ಜಾಧವ್​
ಉಮೇಶ್​ ಜಾಧವ್​
  • News18
  • Last Updated: May 8, 2019, 1:23 PM IST
  • Share this:
ಕಲಬುರ್ಗಿ (ಮೇ.8): ಪಿಯುಸಿಯಲ್ಲಿ ನನ್ನ ಮಗಳು ಫೇಲ್​ ಆಗಲು ಕಾರಣ ಕಾಂಗ್ರೆಸ್​ ನಾಯಕರು ಎಂದು ಕಲಬುರ್ಗಿ ಬಿಜೆಪಿ ಅಭ್ಯರ್ಥಿ ಉಮೇಶ್​ ಜಾಧವ್​ ಆರೋಪ ಮಾಡಿದ್ದಾರೆ.

ಚಿಂಚೋಳಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸೇರಲು ನಾನು ಹಣ ಪಡೆದಿದ್ದೇನೆ ಎಂದು ಕಾಂಗ್ರೆಸ್​ ನಾಯಕರು ಸಾಕಾಷ್ಟು ಆರೋಪ ಮಾಡಿದ್ದರು. ಈ ಆರೋಪದಿಂದ ನನ್ನ ಕುಟುಂಬ ಮಾನಸಿಕ ಹಿಂಸೆ ಅನುಭವಿಸಿದೆ. ಅಲ್ಲದೇ ನನ್ನ ಮಗಳು ಕೂಡ ಸಾಕಷ್ಟು ಮುಜುಗರ ಅನುಭವಿಸಿದ್ದಾಳೆ. ಇದರ ಪರಿಣಾಮವಾಗಿ ನನ್ನ ಕಿರಿಯ ಮಗಳು ಪಿಯುಸಿ  ಪರೀಕ್ಷೆಯಲ್ಲಿ ಫೇಲ್​ ಆಗಿದ್ದಾಳೆ ಎಂದಿದ್ದಾರೆ.

ನನ್ನ ಮಗಳು ಪ್ರತಿ ಬಾರಿಯೂ ಉನ್ನತ ಶ್ರೇಣಿಯಲ್ಲಿ ಪರೀಕ್ಷೆಯಲ್ಲಿ ಪಾಸು ಆಗುತ್ತಿದ್ದಳು. ಆದರೆ, ಕಾಂಗ್ರೆಸ್​ ನಾಯಕರು ಚುನಾವಣೆ ಸಂದರ್ಭದಲ್ಲಿ ಮಾಡಿದ ಆರೋಪದಿಂದಾಗಿ ಕುಟುಂಬಸ್ಥರು ಸಾಕಷ್ಟು ನೋವನ್ನು ಅನುಭವಿಸಿದ್ದಾರೆ.  ಇದರಿಂದಾಗಿ ಆಕೆ ಪರೀಕ್ಷೆಯನ್ನು ಉತ್ತಮವಾಗಿ ಬರೆದಿಲ್ಲ ಎಂದು ಆರೋಪಿಸಿದರು.

ಕಾಂಗ್ರೆಸ್​ನಲ್ಲಿದ್ದಾಗ ಎರಡು ಬಾರಿ ಶಾಸಕರಾಗಿದ್ದ ಜಾಧವ್​, ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿಗೆ ಸೇರ್ಪಡನೆಗೊಂಡಿದ್ದರು. ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.

ಇದನ್ನು ಓದಿ: 'ಜೆಡಿಎಸ್​ ವ್ಯವಹಾರದಲ್ಲಿ ನಾವು ಮೂಗು ತೂರಿಸಿದರೆ ಸರಿ ಇರುತ್ತಾ?'; ಹೊರಟ್ಟಿಗೆ ತಿರುಗೇಟು ನೀಡಿದ ಸಚಿವ ದೇಶಪಾಂಡೆ

ಜಾಧವ್​ 50-60 ಕೋಟಿ ಹಣ ಪಡೆದು ಬಿಜೆಪಿ ಸೇರಿದ್ದಾರೆ ಎಂದು ಕೆಪಿಸಿಸಿ ದಿನೇಶ್​ ಗುಂಡೂರಾವ್​ ಹಾಗೂ ಹಲವು ಕಾಂಗ್ರೆಸ್​ ನಾಯಕರು ಪದೇ ಪದೇ ಆರೋಪಿಸಿದ್ದರು. ಈ  ರೀತಿ ವೈಯಕ್ತಿಕ ಆರೋಪದಿಂದ ನನ್ನ ಕುಟುಂಬ ಸಾಕಷ್ಟು ಹಿನ್ನಡೆ ಅನುಭವಿಸುವಂತೆ ಆಗಿದೆ ಎಂದು ಕಾಂಗ್ರೆಸ್​ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

First published: May 8, 2019, 11:41 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading