HOME » NEWS » State » UMASHREE CONSOLED THE MUNICIPAL COUNCIL MEMBER WHO LOST HER CHILD SESR RBK

ಮಗು ಕಳೆದುಕೊಂಡ ಪುರಸಭಾ ಸದಸ್ಯೆ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಉಮಾಶ್ರೀ

ಈ ಘಟನೆ ಖಂಡಿಸಿ ಡಿಸೆಂಬರ್ 5ರಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಮಹಾಲಿಂಗಪುರ ಪಟ್ಟಣಕ್ಕೆ ಆಗಮಿಸಿ, ಶಾಸಕ ಸಿದ್ದು ಸವದಿ ವಿರುದ್ಧ ಪ್ರತಿಭಟಿಸಲು ನಿರ್ಧರಿಸಿದ್ದಾರೆ.

news18-kannada
Updated:December 1, 2020, 10:26 PM IST
ಮಗು ಕಳೆದುಕೊಂಡ ಪುರಸಭಾ ಸದಸ್ಯೆ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಉಮಾಶ್ರೀ
ಸಾಂತ್ವನಾ ಹೇಳಿದ ಉಮಾಶ್ರೀ ಮತ್ತು ಕಾಂಗ್ರೆಸ್​ ಮುಖಂಡರು
  • Share this:
ಬಾಗಲಕೋಟೆ (ಡಿ. 1):  ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ  ಮಹಾಲಿಂಗಪುರ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ವೇಳೆ ಬಿಜೆಪಿ ಶಾಸಕ ಸಿದ್ದು ಸವದಿ ಮಹಿಳಾ ಸದಸ್ಯೆ ನೂಕಿದ ಅಮಾನವೀಯ ಪ್ರಕರಣವೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ಮೂರು ತಿಂಗಳ ಗರ್ಭಿಣಿ, ಸದಸ್ಯೆ ಚಾಂದಿನಿ ನಾಯ್ಕಗೆ ಗರ್ಭಪಾತವಾಗಿದೆ ಈ ಘಟನೆ ಖಂಡಿಸಿ ಡಿಸೆಂಬರ್ 5ರಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಮಹಾಲಿಂಗಪುರ ಪಟ್ಟಣಕ್ಕೆ ಆಗಮಿಸಿ, ಶಾಸಕ ಸಿದ್ದು ಸವದಿ ವಿರುದ್ಧ ಪ್ರತಿಭಟಿಸಲು ನಿರ್ಧರಿಸಿದ್ದಾರೆ. ತೇರದಾಳ ಕ್ಷೇತ್ರದ ಮಾಜಿ ಶಾಸಕಿ,ಮಾಜಿ ಸಚಿವೆ ಉಮಾಶ್ರೀ ನೇತೃತ್ವದಲ್ಲಿ ಮಹಾಲಿಂಗಪುರ ಪಟ್ಟಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ  ಹೋರಾಟದ ರೂಪುರೇಷೆ  ನಿರ್ಧರಿಸಲಾಯಿತು. ಮಹಾಲಿಂಗಪುರದಲ್ಲಿ ಮೊದಲು ಪ್ರತಿಭಟನಾ ಮೆರವಣಿಗೆ ನಡೆಸಿ, ಬಳಿಕ  ಬಿಜೆಪಿ ಶಾಸಕ ಸಿದ್ದು ಸವದಿ ಮಹಿಳಾ ಸದಸ್ಯೆಯರ ಮೇಲಿನ ದೌರ್ಜನ್ಯ ಖಂಡಿಸಲಿದ್ದಾರೆ.

ಮಹಾಲಿಂಗಪುರ ಪಟ್ಟಣದ ಚಾಂದಿನಿ ನಾಯ್ಕ ಮನೆಗೆ ಉಮಾಶ್ರೀ ತಿಮ್ಮಾಪುರ ಭೇಟಿ, ಕುಟುಂಬಸ್ಥರಿಗೆ ಸಾಂತ್ವನ!!

ಪುರಸಭೆ ಸದಸ್ಯೆ ಚಾಂದಿನಿ ನಾಯ್ಕ ಮನೆಗೆ  ಕಾಂಗ್ರೆಸ್ ಮಾಜಿ ಸಚಿವೆ ಉಮಾಶ್ರೀ, ಹಾಗೂ ಮಾಜಿ ಸಚಿವ ಆರ್ ಬಿ ತಿಮ್ಮಾಪುರ ಸೇರಿದಂತೆ ಕಾಂಗ್ರೆಸ್ ಮುಖಂಡರು ಸಂಜೆ   ಭೇಟಿ ನೀಡಿ ಚಾಂದಿನಿ ಪತಿ ನಾಗೇಶ್ ನಾಯ್ಕ ಜೊತೆ ಚರ್ಚಿಸಿ, ಸಾಂತ್ವನ ಹೇಳಿದರು. ಗರ್ಭಪಾತವಾದ ಹಿನ್ನೆಲೆ ಚಾಂದಿನಿ ನಾಯ್ಕ ಮಾನಸಿಕವಾಗಿ ನೊಂದುಕೊಂಡಿದ್ದಾರೆ.  ಸಂಬಂಧಿಕರು, ಜನರು ಈ ಬಗ್ಗೆ ಮಾತನಾಡಿಸಲು ಬರುವುದರಿಂದ ಮತ್ತಷ್ಟು ಚಾಂದಿನಿ ನಾಯ್ಕ ನೊಂದುಕೊಳ್ಳಬಹುದೆಂದು ದೂರದ ಸಂಬಂಧಿಕರ ಮನೆಗೆ ಕಳುಹಿಸಲಾಗಿದೆ ಎಂದು ಸಾಂತ್ವನ ಹೇಳಲು ಬಂದಿದ್ದ ಕಾಂಗ್ರೆಸ್ ನಾಯಕರು ಮುಖಂಡರಿಗೆ ಕುಟುಂಬಸ್ಥರು ತಿಳಿಸಿದ್ದಾರೆ. ಆದರೆ ಚಾಂದಿನಿ ನಾಯ್ಕ ಎಲ್ಲಿದ್ದಾರೆ ಎನ್ನುವ ವಿಳಾಸವನ್ನು ಚಾಂದಿನಿ ನಾಯ್ಕ ಆರೋಗ್ಯ ದೃಷ್ಟಿಯಿಂದ  ಬಿಟ್ಟುಕೊಡದೇ ಗೌಪ್ಯತೆ ಕಾಪಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಘಟನೆ ಹಿನ್ನೆಲೆ ಏನು?

ಮಹಾಲಿಂಗಪುರ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ  ಕಳೆದ ನವೆಂಬರ್ 9ರಂದು ನಡೆದಿತ್ತು. ಈ ವೇಳೆ ಬಿಜೆಪಿಯಿಂದ ಆಯ್ಕೆಯಾಗಿದ್ದ  ಸವಿತಾ ಹುರಕಡ್ಲಿ, ಗೋದಾವರಿ ಬಾಟ್ ,ಚಾಂದಿನಿ ನಾಯ್ಕ ಮೂವರು ಸದಸ್ಯೆಯರು ಬಂಡೆದ್ದು, ಕಾಂಗ್ರೆಸ್ ನೊಂದಿಗೆ ಗುರುತಿಸಿಕೊಂಡಿದ್ದರು. ಕಾಂಗ್ರೆಸ್ ಬೆಂಬಲದೊಂದಿಗೆ ಅಧ್ಯಕ್ಷ ಸ್ಥಾನಕ್ಕೆ ಸವಿತಾ ಹುರಕಡ್ಲಿ, ಉಪಾಧ್ಯಕ್ಷ ಸ್ಥಾನಕ್ಕೆ ಗೋದಾವರಿ ಬಾಟ್ ನಾಮ ಪತ್ರ ಸಲ್ಲಿಸಿದ್ದರು.  ಚುನಾವಣೆ ಮತದಾನ ನಡೆಯುವ ವೇಳೆ ಬಂಡಾಯವೆದ್ದಿದ್ದ  ಮೂವರು ಬಿಜೆಪಿ ಸದಸ್ಯೆಯರನ್ನು ಮತದಾನದಿಂದ ಗೈರಾಗಿಸುವ ಉದ್ದೇಶ ಪುರಸಭೆ ಆವರಣದಲ್ಲಿ ಬಿಜೆಪಿ ಶಾಸಕ ಸಿದ್ದು ಸವದಿ ಹಾಗೂ ಬೆಂಬಲಿಗರು  ಮಹಿಳಾ ಸದಸ್ಯೆಯರನ್ನು ಎಳೆದಾಡಿ, ಅಮಾನವೀಯವಾಗಿ ನಡೆದುಕೊಂಡಿದ್ದ ವಿಡಿಯೋ ವೈರಲ್ ಆಗಿದ್ದವು. ಈ ವೇಳೆ ಮೂರು ತಿಂಗಳ ಗರ್ಭಿಣಿ ಚಾಂದಿನಿ ನಾಯ್ಕರನ್ನು ಶಾಸಕರು, ನೂಕಿದಾಗ, ಬೆಂಬಲಿಗರು, ನೆಲದ ಮೇಲೆ ಎಳೆದಾಡಿದ್ದರು.

ನವೆಂಬರ್ 25ರಂದು ರಕ್ತಸ್ರಾವವಾದ ವೇಳೆ ಸ್ಥಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ಮೂತ್ರ ಪರೀಕ್ಷೆ ನಡೆಸಿದ್ದಾರೆ. ಆ ಬಳಿಕ ಮತ್ತೇ ಖಾಸಗಿ ಆಸ್ಪತ್ರೆಯಲ್ಲೂ ಸ್ಕ್ಯಾನಿಂಗ್ ವೇಳೆ ಗರ್ಭಪಾತವಾಗಿದೆ. ಈ ವೇಳೆ ಆಕೆ ಪತಿ ನಾಗೇಶ್  ಈ ಕುರಿತು ಜಿಲ್ಲಾ ನ್ಯಾಯಾಲಯದಲ್ಲಿ ಶಾಸಕರು, ಅವರ ಬೆಂಬಲಿಗರ ವಿರುದ್ಧ ದೂರು ಸಲ್ಲಿಸಲು ಮುಂದಾಗಿದ್ದು. ಆ ಮೂಲಕ ಕಾನೂನು ಹೋರಟಕ್ಕೆ ಸಜ್ಜಾಗಿದ್ದಾರೆ. ಘಟನೆ ಬಳಿಕ ಶಾಸಕರು ರಾಜಕೀಯವಾಗಿ ಒತ್ತಡ ಹಾಕುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
Published by: Seema R
First published: December 1, 2020, 10:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories