• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಉತ್ತರ ಕನ್ನಡ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಗುರುತಿನ ಚೀಟಿ ‌ನೀಡುವ ಯುಐಡಿ ಯೋಜನೆ ವಿಳಂಬ

ಉತ್ತರ ಕನ್ನಡ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಗುರುತಿನ ಚೀಟಿ ‌ನೀಡುವ ಯುಐಡಿ ಯೋಜನೆ ವಿಳಂಬ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಜಾನುವಾರುಗಳ ಮಾಲೀಕರು ಹಲವೆಡೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅವುಗಳ ಕಿವಿಗೆ ಹೊಡೆಯುವುದು ಬೇಡ ಕೈಗೆ ಕೊಡಿ ಎನ್ನುತ್ತಿದ್ದಾರೆ. ಪಶು ಸಂಗೋಪನಾ ಇಲಾಖೆಯಲ್ಲಿ ಶೇ. 50ಕ್ಕಿಂತ ಹೆಚ್ಚು ಸಿಬ್ಬಂದಿ ಕೊರತೆ ಇದೆ. ತಂಟೆ ಮಾಡುವ ಮಲೆನಾಡು ಗಿಡ್ಡದಂಥ ಸ್ಥಳೀಯ ತಳಿಯ ಹಸುಗಳಿಗೆ ಟ್ಯಾಗ್ ಅಳವಡಿಸುವುದು ದೊಡ್ಡ ಸವಾಲು. ಯೋಜನೆಯ ಲಾಭಗಳ ಬಗ್ಗೆ ಜಾನುವಾರು ಮಾಲೀಕರಿಗೆ ಮಾಹಿತಿ ಇಲ್ಲ.

ಮುಂದೆ ಓದಿ ...
  • Share this:

ಕಾರವಾರ(ಜು.13): ಜಾನುವಾರುಗಳಿಗೆ ಗುರುತಿನ ಚೀಟಿ ನೀಡುವ ಯುಐಡಿ ಯೋಜನೆ ವಿವಿಧ ಕಾರಣಗಳಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಳಂಬವಾಗಿದೆ. 2017ರಲ್ಲೇ ರಾಜ್ಯದಲ್ಲಿ ಜಾರಿಯಾದ ಯೋಜನೆ ಜಿಲ್ಲೆಯಲ್ಲಿ ಇದುವರೆಗೂ ಶೇ. 50ರಷ್ಟೂ ಪ್ರಗತಿ ಸಾಧಿಸಿಲ್ಲ.


ಜಿಲ್ಲೆಯಲ್ಲಿ ಒಟ್ಟಾರೆ 4,19,223 ಹಸು, ಎಮ್ಮೆ, ಮುಂತಾದ ಜಾನುವಾರುಗಳಿವೆ. ಇದುವರೆಗೆ ಜಿಲ್ಲೆಗೆ 1,30,800 ಕಾರ್ಡ್‌ಗಳು ಪೂರೈಕೆಯಾಗಿದ್ದು, ಅದರಲ್ಲಿ ಶೇ. 86ರಷ್ಟು ಅಂದರೆ, 1,12,472 ಜಾನುವಾರುಗಳಿಗೆ ಗುರುತಿನ ಚೀಟಿ ಅಳವಡಿಸಲಾಗಿದೆ. ಇನ್ನೂ 3 ಲಕ್ಷಕ್ಕೂ ಅಧಿಕ ಜಾನುವಾರುಗಳಿಗೆ ಇದನ್ನು ಅಳವಡಿಸುವುದು ಬಾಕಿ ಇದೆ.


ಏನಿದು ಗುರುತಿನ ಚೀಟಿ?


ಮನುಷ್ಯರಿಗೆ ಆಧಾರ ಕಾರ್ಡ್ ನೀಡಿದಂತೆ ಜಾನುವಾರುಗಳಿಗೆ 12 ಅಂಕೆಗಳು ಹಾಗೂ ಬಾರ್ ಕೋಡ್ ಇರುವ ಪಾಲಿ ಯುರೇಥಿನ್ ಗುರುತಿನ ಚೀಟಿ ನೀಡುವ ಯೋಜನೆ ಇದಾಗಿದೆ. ಜಾನುವಾರುಗಳ ಕಿವಿಗೆ ಇದನ್ನು ಪಂಚ್ ಮಾಡಿ ಅಳವಡಿಸಲಾಗುತ್ತದೆ. ನಂತರ ಇನ್‌ಫಾರ್ಮೆಷನ್ ನೆಟ್ವರ್ಕ್ ಫಾರ್ ಎನಿಮಲ್ ಪ್ರೊಡೆಕ್ಟಿವಿಟಿ ಆಂಡ್ ಹೆಲ್ತ್ (ಐಎನ್‌ಎಪಿಎಚ್)ಎಂಬ ತಂತ್ರಾಂಶದಲ್ಲಿ ಅಳವಡಿಸಲಾಗುತ್ತದೆ. ಐಎನ್‌ಎಪಿಎಚ್ ಹಾಗೂ ರಾಷ್ಟ್ರೀಯ ಡೇರಿ ಅಭಿವೃದ್ಧಿ ನಿಗಮ (ಎನ್‌ಡಿಡಿಬಿ)ಯಿಂದ ಯೋಜನೆ ಜಾರಿಯಾಗುತ್ತಿದೆ.


ಪ್ರಯೋಜನ ಏನು..?


ಇಡೀ ದೇಶದಲ್ಲಿ ಎಲ್ಲ ಜಾನುವಾರುಗಳ ಸಂಖ್ಯೆ ಆನ್‌ಲೈನ್‌ನಲ್ಲಿ ನೋಂದಣಿಯಾಗುತ್ತದೆ. ಪ್ರಾಣಿಗಳ ಕಳ್ಳತನವಾದಲ್ಲಿ ಹುಡುಕಬಹುದು. ಬಿಡಾಡಿ ದನಗಳ ಮಾಲೀಕರನ್ನು ಹುಡುಕಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಮುಂದೆ ಜಾನುವಾರುಗಳು ಮೃತಪಟ್ಟರೆ ಅವುಗಳಿಗೆ ಪರಿಹಾರ, ಅವುಗಳಿಗೆ ಕೃತಕ ಗರ್ಭಧಾರಣೆ, ಔಷಧ ವಿತರಣೆ, ಹಾಲಿನ ಇಳುವರಿ ಹೆಚ್ಚಳಕ್ಕೆ ತಜ್ಞರ ಸಲಹೆಗಳು ಎಲ್ಲವಕ್ಕೂ ಈ ಯುಐಡಿ ಸಂಖ್ಯೆ ಕಡ್ಡಾಯವಾಗಲಿದೆ.


ವಿಳಂಬವೇಕೆ..?


ಜಾನುವಾರುಗಳ ಮಾಲೀಕರು ಹಲವೆಡೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅವುಗಳ ಕಿವಿಗೆ ಹೊಡೆಯುವುದು ಬೇಡ ಕೈಗೆ ಕೊಡಿ ಎನ್ನುತ್ತಿದ್ದಾರೆ. ಪಶು ಸಂಗೋಪನಾ ಇಲಾಖೆಯಲ್ಲಿ ಶೇ. 50ಕ್ಕಿಂತ ಹೆಚ್ಚು ಸಿಬ್ಬಂದಿ ಕೊರತೆ ಇದೆ. ತಂಟೆ ಮಾಡುವ ಮಲೆನಾಡು ಗಿಡ್ಡದಂಥ ಸ್ಥಳೀಯ ತಳಿಯ ಹಸುಗಳಿಗೆ ಟ್ಯಾಗ್ ಅಳವಡಿಸುವುದು ದೊಡ್ಡ ಸವಾಲು. ಯೋಜನೆಯ ಲಾಭಗಳ ಬಗ್ಗೆ ಜಾನುವಾರು ಮಾಲೀಕರಿಗೆ ಮಾಹಿತಿ ಇಲ್ಲ.


ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಏನಂತಾರೆ?


ಇನ್ನು ಮುಂದಿನ ದಿನದಲ್ಲಿ ಸರ್ಕಾರದ ಪ್ರತಿ ಯೋಜನೆಯ ಪ್ರಯೋಜನ ಪಡೆಯುವಾಗಲೂ ಯುಐಡಿ ಕಾರ್ಡ್ ಕಡ್ಡಾಯ ಮಾಡಲಾಗುತ್ತದೆ. ಇದರಿಂದ ಜಾನುವಾರುಗಳ ಮಾಲೀಕರು ಈಗಲೇ ಇದನ್ನು ತಮ್ಮ ಜಾನುವಾರುಗಳಿಗೆ ಈ ಕಾರ್ಡ್ ಅಳವಡಿಸಿಕೊಳ್ಳುವುದು ಸೂಕ್ತ.

First published: