UGC Guidelines: ನ.17ರಿಂದ ಯುಜಿ, ಪಿಜಿ ಕಾಲೇಜು ಆರಂಭ; ಯುಜಿಸಿಯಿಂದ ಮಾರ್ಗಸೂಚಿ ಬಿಡುಗಡೆ

ಕಂಟೋನ್ಮೆಂಟ್ ಜೋನ್ ಹೊರಗೆ ಇರುವ ಕಾಲೇಜು ಹಾಗೂ ವಿವಿಗಳನ್ನ ಓಪನ್ ಮಾಡಬಹುದು. ಕಂಟೋನ್ಮೆಂಟ್ ಜೋನ್ ನಲ್ಲಿರುವ ವಿದ್ಯಾರ್ಥಿಗಳು, ಸಿಬ್ಬಂದಿ ಕಾಲೇಜಿಗೆ ಬರುವಂತಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬೆಂಗಳೂರು(ನ.06): ಕೊರೋನಾ ಬಿಕ್ಕಟ್ಟಿನ ನಡುವೆಯೇ ಶಾಲಾ-ಕಾಲೇಜುಗಳನ್ನು ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ. ಇನ್ನೂ ಸಹ ಶಾಲೆಗಳ ಆರಂಭದ ಬಗ್ಗೆ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಆದರೆ ಪದವಿ ಮತ್ತು ಸ್ನಾತಕೋತ್ತರ ಕಾಲೇಜುಗಳು ಇದೇ ನವೆಂಬರ್ 17ರಿಂದ ಪ್ರಾರಂಭವಾಗಲಿವೆ. ಕಾಲೇಜು ಆರಂಭಕ್ಕೆ ಸಂಬಂಧಿಸಿದಂತೆ ಯುಜಿ ಮತ್ತು ಪಿಜಿ ವಿದ್ಯಾರ್ಥಿಗಳಿಗೆ ಯುಜಿಸಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.  ಮಾಸ್ಕ್, ಸ್ಯಾನಿಟೈಸರ್ ದೈಹಿಕ ಅಂತರ ಕಡ್ಡಾಯವಾಗಿರಬೇಕೆಂದು ಯುಜಿಸಿ ಹೇಳಿದೆ. 6 ಅಡಿಯಷ್ಟು ಸಾಮಾಜಿಕ ಅಂತರ ಪಾಲನೆ‌ ಮಾಡಬೇಕು. ಶುಚಿತ್ವದ ವಿಚಾರದಲ್ಲಿ‌ ಶುದ್ದ ಕುಡಿಯುವ ನೀರು ಕಡ್ಡಾಯವಾಗಿರಬೇಕು. ಕಾಲೇಜು ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು.  ಖಾಸಗಿ ವಾಹನಗಳು, ಕಾಲೇಜು ಬಸ್ ಗಳನ್ನು ಸತತವಾಗಿ ಸ್ಯಾನಿಟೈಸ್ ಮಾಡಬೇಕು.

    ಇನ್ನು ಕೈಗಳನ್ನ ಸೋಪಿನಿಂದ 40-60 ಸೆಕೆಂಡ್​​ಗಳ ಕಾಲ ಸತತವಾಗಿ ತೊಳೆಯಬೇಕು ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಗಮನ ಕೊಡೋಕೆ ಕಡ್ಡಾಯ ಆರೋಗ್ಯ ಸಮಿತಿ ರಚನೆ ಮಾಡಬೇಕು. ಕಾಲೇಜು ಆವರಣರಲ್ಲಿ ಉಗುಳುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಜೊತೆಗೆ ವಿದ್ಯಾರ್ಥಿಗಳು ಕಡ್ಡಾಯವಾಗಿ ಆರೋಗ್ಯ ಸೇತು ಆಪ್ ಅನ್ನು ಇನ್ ಸ್ಟಾಲ್ ಮಾಡಿಕೊಳ್ಳಬೇಕು.

    ಕಾಲೇಜು ಆರಂಭಕ್ಕೆ ಕೈಗೊಳ್ಳಬೇಕಾದ ಪೂರ್ವ ಸಿದ್ಧತೆಗಳು

    1.ಯುಜಿಸಿ ಹಾಗೂ ಮಿನಿಸ್ಟರಿ ಆಫ್ ಎಜುಕೇಶನ್ ಗೈಡ್ ಲೈನ್ಸ್ ಕಡ್ಡಾಯವಾಗಿ ಪಾಲನೆ ಮಾಡಬೇಕು.

    2.ಕಾಲೇಜು ಆರಂಭಿಕ್ಕಿಂತ ಮೊದಲು ಆರೋಗ್ಯ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆಯಿಂದ- ಕೋವಿಡ್ 19 ನಿಂದ ಪ್ರದೇಶ ಸುರಕ್ಷಿತವಾಗಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು.

    3.ಯುಜಿಸಿ ಗೈಡ್ ಲೈನ್ಸ್ ಹಾಗೂ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಗೈಡ್ ಲೈನ್ ಕಡ್ಡಾಯ ಪಾಲನೆ ಮಾಡಬೇಕು.

    4.ಆರೋಗ್ಯ ಹಿತದೃಷ್ಟಿಯಿಂದ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಎಲ್ಲಾ ವಿವಿಯ ಪಾಲಿಸಬೇಕು.

    5. ಕಂಟೋನ್ಮೆಂಟ್ ಜೋನ್ ಹೊರಗೆ ಇರುವ ಕಾಲೇಜು ಹಾಗೂ ವಿವಿಗಳನ್ನ ಓಪನ್ ಮಾಡಬಹುದು.

    6.ಕಂಟೋನ್ಮೆಂಟ್ ಜೋನ್ ನಲ್ಲಿರುವ ವಿದ್ಯಾರ್ಥಿಗಳು, ಸಿಬ್ಬಂದಿ ಕಾಲೇಜಿಗೆ ಬರುವಂತಿಲ್ಲ.

    7. ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಆರೋಗ್ಯ ಸೇತು ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳುವುದು ಕಡ್ಡಾಯ.

    8.ಕಾಲೇಜುಗಳಲ್ಲಿ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸ್ ಕಡ್ಡಾಯವಾಗಿ ಮಾಡಬೇಕು.

    9.ವಿದ್ಯಾರ್ಥಿಗಳ ಆರೋಗ್ಯದ ಕಡೆ ಗಮನ ಹರಿಸಬೇಕು.

    10.ತರಗತಿಗಳನ್ನ ಆರಂಭ ಮಾಡೋದಕ್ಕೆ ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು.

    11.ಕಾಲೇಜುಗಳು ಏನೆಲ್ಲಾ ಕ್ರಮಗಳನ್ನ ಕೈಗೊಳ್ಳಬೇಕು.

    12. ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಗುಂಪು ಸೇರಿದಂತೆ ನೋಡಿಕೊಳ್ಳಬೇಕು.

    13. ಕೆಲ ವಿದ್ಯಾರ್ಥಿಗಳು ಕಾಲೇಜಿಗೆ ಬಾರದೆ ಅಂತ ವಿದ್ಯಾರ್ಥಿಗಳಿಗೆ ಆನ್ ಲೈನ್ ಸ್ಟಡಿ ‌ಮೆಟಿರಿಯಲ್ ನೀಡಬೇಕು.

    14. ವಿದೇಶಿ ವಿದ್ಯಾರ್ಥಿಗಳಿಗೆ ಆನ್ ಲೈನ್ ನಲ್ಲಿ ಪಾಠ ಮುಂದುವರಿಸುವ ಅವಕಾಶವಿದೆ.

    15. ಹವಾನಿಯಂತ್ರಿತ(ಎಸಿ) ಅತಿ ಹೆಚ್ಚಾಗಿ ಬಳಸಬಾರದು, 24c ರಿಂದ 30c ನಿರ್ವಹಣೆ ‌ಮಾಡಬೇಕು.

    16.ಕಾಲೇಜು ತರಗತಿಯೊಳಗೆ ಬೆಳಕು ಹಾಗೂ ಗಾಳಿಯ ಪ್ರಮಾಣ ಚೆನ್ನಾಗಿರಬೇಕು.

    17. ಕಾಲೇಜುಗಳಲ್ಲಿ ಸ್ವಿಮ್ಮಿಂಗ್ ಪುಲ್ ಇದ್ದರೆ ಮುಚ್ಚಬೇಕು. ಕಾಲೇಜಿನ ಎಲ್ಲಾ ಸಿಬ್ಬಂದಿಗಳು, ವಯಸ್ಸಾದವರು, ಗರ್ಭಿಣಿಯರು ಜಾಗರೂಕರಾಗಿರಬೇಕು. ಇಂಥವರು ವಿದ್ಯಾರ್ಥಿಗಳ ನೇರ ಸಂಪರ್ಕ ಇಟ್ಟುಕೊಳ್ಳಬಾರದು.

    18. ತೀರ ಅಗತ್ಯ ಇದ್ದರೆ ಮಾತ್ರ  ಹಾಸ್ಟೆಲ್ ಓಪನ್ ಮಾಡಬೇಕು. ರೋಗ ಲಕ್ಷಣ ಇರುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಲ್ಲಿ ಉಳಿದುಕೊಳ್ಳಲು ಅವಕಾಶ ಇಲ್ಲ.

    19.  ಹೊರ ರಾಜ್ಯ ಹೊರ ಜಿಲ್ಲೆಯಿಂದ ಬರುವ ವಿದ್ಯಾರ್ಥಿಗಳಿಗೆ 14 ದಿನ ಕ್ವಾರೆಂಟೈನ್ ಮುಗಿಸಿ ತರಗತಿಗೆ ಪ್ರವೇಶ( ರಾಜ್ಯ ಸರ್ಕಾರ ನಿರ್ದೇಶನ) ನೀಡಲಾಗುತ್ತದೆ.

    20. ಕೋವಿಡ್ ನೆಗೆಟಿವ್ ವರದಿ ಇದ್ದರೂ 14 ದಿನ ಕ್ವಾರಂಟೈನ್ ಇರಲೇಬೇಕು.

    21. ಹಾಸ್ಟೆಲ್ ನಲ್ಲಿ ಗುಂಪು ಗುಂಪಾಗಿ ಸೇರುವಂತಿಲ್ಲ. ಊಟದ ಹಾಲ್, ಆಟದ ಮೈದಾನ, ಕೊಠಡಿಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು.

    22. ಒಂದು ವೇಳೆ ಹಾಸ್ಟೆಲ್ ಒಪನ್ ಮಾಡಿದ್ರೆ, ಹಾಸ್ಟೆಲ್ ನಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿ ಮಾಸ್ಕ್ ಧರಿಸುವುದು ಹಾಗೂ ಸ್ಯಾನಿಟೈಸ್ ಮಾಡಿಕೊಳ್ಳುವುದು ಕಡ್ಡಾಯ.
    Published by:Latha CG
    First published: