ಕೆಎಸ್‍ಒಯುಗೆ ಮಾನ್ಯತೆ ನೀಡಿದ ಯುಜಿಸಿ : 17 ಕೋರ್ಸ್​​ಗಳ ಆರಂಭಕ್ಕೆ ಅನುಮತಿ

news18
Updated:August 10, 2018, 1:00 PM IST
ಕೆಎಸ್‍ಒಯುಗೆ ಮಾನ್ಯತೆ ನೀಡಿದ ಯುಜಿಸಿ : 17 ಕೋರ್ಸ್​​ಗಳ ಆರಂಭಕ್ಕೆ ಅನುಮತಿ
news18
Updated: August 10, 2018, 1:00 PM IST
- ನ್ಯೂಸ್ 18 ಕನ್ನಡ


ಬೆಂಗಳೂರು (ಆಗಸ್ಟ್ 10) : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ಯುಜಿಸಿ ಮಾನ್ಯತೆ ನೀಡಿದ್ದು, ಸತತ ಐದು ವರ್ಷಗಳ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ.ಯುಜಿಸಿಯಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಕ್ಕೆ 2018 - 19ಸೇ ಸಾಲಿನಿಂದ 2022-23ನೇ ಸಾಲಿನ ವರೆಗೆ ದೂರ ಶಿಕ್ಷಣದ ಆಯ್ದ ಒಟ್ಟು 17 ಕೋರ್ಸ್ ನಡೆಸಲು ಅನುಮತಿ ನೀಡಲಾಗಿದೆ. ಕಳೆದ 5 ವರ್ಷಗಳಿಂದ ಯುಜಿಸಿ ದೂರ ಶಿಕ್ಷಣ ಕೋರ್ಸ್​ಗೆ ಅನುಮತಿ ನೀಡಿರಲಿಲ್ಲ. ಹೀಗಾಗಿ ಮುಕ್ತ ವಿವಿಯಲ್ಲಿ ಸರ್ಟಿಫಿಕೇಟ್ ಪಡೆದ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿತ್ತು. ಆದರೆ 5 ವರ್ಷಕ್ಕೆ ಯುಜಿಸಿ ಮಾನ್ಯತೆ ಘೋಷಿಸಿದೆ.Loading...


ಕರ್ನಾಟಕ ರಾಜ್ಯ ಮಕ್ತ ವಿಶ್ವವಿದ್ಯಾಲಯದ ಅಂದಿನ ಕುಲಪತಿಪ್ರೋ ಎಂ.ಜಿ.ಕೃಷ್ಣನ್ ಅವರು ಕುಲಪತಿಯಾಗಿದ್ದ ಸಂದರ್ಭದಲ್ಲಿ ಮುಕ್ತ ವಿಶ್ವವಿದ್ಯಾಲಯದ ಮಾನ್ಯತೆ ರದ್ದುಗೊಳಿಸುವಂತೆ ಯುಜಿಸಿ ಆದೇಶ ಹೊರಡಿಸಿತ್ತು. ಅಂದಿನಿಂದ ವಿದ್ಯಾರ್ಥಿಗಳ ಮಾನ್ಯತೆ ಕೊಡಿಸುವಂತೆ ಮುಖ್ಯಮಂತ್ರಿಗಳು ಸೇರಿದಂತೆ ಎಲ್ಲರಿಗೂ ಪತ್ರವನ್ನು ಬರೆದಿದ್ದರು.


ಈಗ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಹಾಗೂ ಯುಜಿಸಿ ಅಧ್ಯಕ್ಷ ಡಿ.ಪಿ.ಸಿಂಗ್ ಅವರು ಮುಕ್ತ ವಿಶ್ವವಿದ್ಯಾಲಯಕ್ಕೆ ಮಾನ್ಯತೆ  ನೀಡಿರುವುದರಿಂದ

ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಟ್ವಿಟರ್ ಮೂಲಕ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.


ಮುಕ್ತ ವಿವಿಯ ದೂರ ಶಿಕ್ಷಣಕ್ಕೆ ಅನುಮತಿ ರದ್ದುಗೊಂಡಿದ್ದರಿಂದ ಸಾವಿರಾರು ಆಕಾಂಕ್ಷಿಗಳು ಗೊಂದಲಕ್ಕೆ ಈಡಾಗಿದ್ದರಿದ್ದರು. ಜತೆಗೆ ವಿವಿಧ ಕೋರ್ಸ್​ಗಳಲ್ಲಿ ಈಗಾಗಲೇ ನೋಂದಾಯಿಸಿ ಪರೀಕ್ಷೆ ಬರೆದಿದ್ದವರು ಕೂಡ ಆತಂಕಕ್ಕೆ ಒಳಗಾಗಿದ್ದರು. ಕೊನೆಗೂ ಯುಜಿಸಿ ಮಾನ್ಯತೆ ನೀಡಿದ್ದರಿಂದ ಕೋರ್ಸ್ ಆಕಾಂಕ್ಷಿಗಳಿಗೆ ಪ್ರಯೋಜನವಾಗಲಿದೆ.ಬಿಎ, ಬಿಕಾಂ, ಲೈಬ್ರರಿ ಸೈನ್ಸ್​, ಎಂ.ಎ (ಇತಿಹಾಸ, ಅರ್ಥಶಾಸ್ತ್ರ, ಹಿಂದಿ, ಇಂಗ್ಲಿಷ್, ಪತ್ರಿಕೋದ್ಯಮ, ಕನ್ನಡ ,ರಾಜ್ಯಶಾಸ್ತ್ರ, ಸಾರ್ವಜನಿಕ ಆಡಳಿತ, ಸಮಾಜಶಾಸ್ತ್ರ, ಉರ್ದು, ಪರಿಸರ ಅಧ್ಯಯನ , ಎಂಕಾಂ, ಮಾಸ್ಟರ್​ ಆಫ್ ಲೈಬ್ರರಿ ಸೈನ್ಸ್​ ವಿಷಯಗಳಿಗೆ ಮಾನ್ಯತೆ ಸಿಕ್ಕಿದ್ದು, ಉಳಿದ ಯಾವುದೇ ವಿಷಯದ ಕೋರ್ಸ್​ ಪ್ರಾರಂಭ ಮಾಡುವಂತಿಲ್ಲ.

 
First published:August 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...