• Home
  • »
  • News
  • »
  • state
  • »
  • Udupi: ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಿದ IAS ಅಧಿಕಾರಿ; ಹೂಡೆ ಬೀಚ್​​ನಲ್ಲಿ ನೀರು ಪಾಲಾದ ಮೂವರು

Udupi: ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಿದ IAS ಅಧಿಕಾರಿ; ಹೂಡೆ ಬೀಚ್​​ನಲ್ಲಿ ನೀರು ಪಾಲಾದ ಮೂವರು

ಐಎಎಸ್ ಅಧಿಕಾರಿ

ಐಎಎಸ್ ಅಧಿಕಾರಿ

ಉಡುಪಿ ಜಿಲ್ಲೆಯಲ್ಲಿ ಒಂದು ಸಾವಿರಕ್ಕಿಂತ ಹೆಚ್ಚು ಮಹಿಳೆಯರು ಕಸ ಸಂಗ್ರಹಣೆಯಲ್ಲಿ ತೊಡಗಿಸಿದ್ದಾರೆ. ಅವರೆಲ್ಲರಿಗೆ ಸ್ಪೂರ್ತಿ ತುಂಬುವ ಉದ್ದೇಶದಿಂದ ಮತ್ತು ಕಸ ಸಂಗ್ರಹದ ಸಂದರ್ಭ ಇರುವಂತಹ ಸವಾಲುಗಳು ಸಾರ್ವಜನಿಕರ ಸಮಸ್ಯೆಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗಿದೆ.

  • Share this:

ಗ್ರಾಮಗಳ ಅಭಿವೃದ್ಧಿ (Rural Development) ಜೊತೆಗೆ ಇಡೀ ಜಿಲ್ಲೆಯ ಹಳ್ಳಿಗಳ ನಿರ್ವಹಣೆಯ ನಿಗಾ ವಹಿಸುವುದು ಸಿಇಓ (Udupi Zilla Panchayat CEO) ಕೆಲಸ. ಆದರೆ ಉಡುಪಿ (Udupi) ಸಿಇಓ ಇಡೀ ರಾಜ್ಯ ಆಶ್ಚರ್ಯ ಪಡುವ ದೇಶದ ಅಧಿಕಾರಿಗಳು ಇತ್ತ ನೋಡುವ ಕೆಲಸವೊಂದನ್ನು ಮಾಡಿದ್ದಾರೆ. ದಿನಾ ಇನ್ನೋವ ಕಾರು ಹತ್ತುವ ಐಎಎಸ್ ಅಧಿಕಾರಿ ಪ್ರಸನ್ನ (IAS Officer Prasanna) ತ್ಯಾಜ್ಯ ಸಾಗಾಟ ಟೆಂಪೋ (Garbage transportation Tempo) ಚಲಾಯಿಸಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಗ್ರಾಮಗಳಲ್ಲಿ ಸ್ವಚ್ಛತೆಯ ಕುರಿತು ಇನ್ನಷ್ಟು ಜನಜಾಗೃತಿ ಮೂಡಿಸುವುದರ ಜೊತೆಗೆ ಅಕ್ಟೋಬರ್ 2ರ ಒಳಗೆ ಪ್ರತೀ ಮನೆ ಮನೆಯಲ್ಲೂ ಸ್ಚಚ್ಛ ಭಾರತ್ ಅಭಿಯಾನ ಮನೆ ಮನೆಗೂ ತಲುಪಿಸುವ ನಿಟ್ಟಿನಲ್ಲಿ ಐಎಎಸ್ ಅಧಿಕಾರಿಯೊಬ್ಬರು ಹೊಸ ಹೆಜ್ಜೆಗೆ ಮುನ್ನಡಿ‌ ಇಟ್ಟಿದ್ದಾರೆ. ಬಿಳಿ ಟಿ ಷರ್ಟ್ ಹಾಕೊಂಡು ಕಸದ ಗೋಣಿ ಸಂಗ್ರಹಿಸುತ್ತಿರುವ ಇವರು IAS ಅಧಿಕಾರಿ ಹೆಚ್. ಪ್ರಸನ್ನ.  ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇವರು ಬೆಳ್ಳಂ ಬೆಳಗ್ಗೆ ಎದ್ದು ಕಸ ಸಂಗ್ರಹಿಸುವ ಟೆಂಪೋವನ್ನು ಹತ್ತಿದ್ದಾರೆ.


ತಾವೇ ಕಸದ ವಾಹನ ಚಲಾವಣೆ ಮಾಡಿಕೊಂಡು ಹೋಗಿದ್ದಾರೆ. ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಿ ಸ್ವಚ್ಛ ಭಾರತ್ ಅಭಿಯಾನದ ಮಹತ್ವವನ್ನು ಸಾರಿದ್ದಾರೆ. ಜನರಲ್ಲಿ ಕಸ ನಿರ್ವಹಣೆ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.


ಸ್ವಚ್ಛತಾ ಹೀ ಸೇವಾ ಅಭಿಯಾನ


ಉಡುಪಿ ಜಿಲ್ಲೆಯ 155 ಗ್ರಾಮ ಪಂಚಾಯತ್​​ನಲ್ಲಿ 140 ಗ್ರಾಮ ಪಂಚಾಯತ್ ಶೇ. 80ರಷ್ಟು ಮನೆಗಳಿಂದ ಕಸ ಸಂಗ್ರಹ ಮಾಡಲಾಗುತ್ತಿದೆ. ಸ್ವಚ್ಛತಾ ಹೀ ಸೇವಾ ಅಭಿಯಾನ ದೇಶಾದ್ಯಂತ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಉಡುಪಿಯ 80 ಬಡಗುಬೆಟ್ಟು ಪಂಚಾಯತ್ ಸದಸ್ಯರು ಪಿಡಿಓ ಮತ್ತು ಸ್ಥಳೀಯ ಅಧಿಕಾರಿಗಳು ಸಿಇಒಗೆ ಕೈಜೋಡಿಸಿದರು.


Udupi zilla Panchayat CEO drives tempo and collecting garbage psud mrq
ಐಎಎಸ್ ಅಧಿಕಾರಿ


ಉಡುಪಿ ಜಿಲ್ಲೆಯಲ್ಲಿ ಒಂದು ಸಾವಿರಕ್ಕಿಂತ ಹೆಚ್ಚು ಮಹಿಳೆಯರು ಕಸ ಸಂಗ್ರಹಣೆಯಲ್ಲಿ ತೊಡಗಿಸಿದ್ದಾರೆ. ಅವರೆಲ್ಲರಿಗೆ ಸ್ಪೂರ್ತಿ ತುಂಬುವ ಉದ್ದೇಶದಿಂದ ಮತ್ತು ಕಸ ಸಂಗ್ರಹದ ಸಂದರ್ಭ ಇರುವಂತಹ ಸವಾಲುಗಳು ಸಾರ್ವಜನಿಕರ ಸಮಸ್ಯೆಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗಿದೆ.


Udupi zilla Panchayat CEO drives tempo and collecting garbage psud mrq
ಐಎಎಸ್​ ಅಧಿಕಾರಿ


ಮನೆ ಬಾಗಿಲಿಗೆ ತೆರಳಿ ಕಸ ಸಂಗ್ರಹಿಸಿದ ಅಧಿಕಾರಿ


ಸಿಇಓ ಉಡುಪಿ ಜಿಲ್ಲೆಯಲ್ಲಿ ‌ಅಧಿಕಾರ ವಹಿಸಿಕೊಂಡ ದಿನದಿಂದಲೂ ಮಾತಿನಿಂದ ಜನರ ಗಮನ ಸೆಳೆದಿದ್ರು. ಇದೀಗ ಹೊಸ ಹೆಜ್ಜೆ ಕಸ ಸಂಗ್ರಹಿಸುವ ವಾಹನವನ್ನೇ ಚಾಲನೆ ಮಾಡಿದಲ್ಲದೆ ಮನೆ ಬಾಗಿಲಿಗೆ ತೆರಳಿ ಕಸ ಸಂಗ್ರಹಿಸಿದ್ದಾರೆ. ‌ಜೊತೆಗೆ ಗ್ರಾಮಸ್ಥರ ಸಮಸ್ಯೆಯನ್ನು ಆಲಿಸಿ ಇದೀಗ ಜನರ ಮನಸ್ಸನ್ನ ಗೆದ್ದಿರುವುದು ಸುಳ್ಳಲ್ಲ. ಹೀಗೆ ಪ್ರತಿಯೊಬ್ಬ ಅಧಿಕಾರಿ ಇಂತದೊಂದು ಹೆಜ್ಜೆ ಇಟ್ಟಲ್ಲಿ ಸ್ಥಳಿಯಾಡಳಿತದ ಮೇಲೆ‌ ಗ್ರಾಮಸ್ಥರು ಇನ್ನಷ್ಟು ನಂಬಿಕೆ ಇಟ್ಟುಕೊಳ್ಳೋದ್ರಲ್ಲಿ ಎರಡು ಮಾತಿಲ್ಲ.


Udupi zilla Panchayat CEO drives tempo and collecting garbage psud mrq
ಐಎಎಸ್ ಅಧಿಕಾರಿ


ಸ್ವಚ್ಛ ಭಾರತ್ ಯೋಜನೆ ಮೂಲಕ  ಸರ್ಕಾರ ಒಳ್ಳೆಯ ಉದ್ದೇಶ ಇಟ್ಟುಕೊಂಡು ಕಾರ್ಯಕ್ರಮಗಳನ್ನು ರೂಪಿಸುತ್ತದೆ. ಜನರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಸಿಇಒ ಕರೆ ನೀಡಿದ್ದಾರೆ. ಅಧಿಕಾರಿಯ ಈ‌ ದೊಡ್ಡ ಹೆಜ್ಜೆ ರಾಜ್ಯದ ಗಮ‌ನ‌ ಸೆಳೆಯುವುದಲ್ಲಿ ಎರಡು ಮಾತಿಲ್ಲ.‌


ನೀರು ಪಾಲಾದ ವಿದ್ಯಾರ್ಥಿಗಳು


ವಿದ್ಯಾರ್ಥಿಗಳು ನೀರುಪಾಲಾದ ದುರ್ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೂಡೆ ಬೀಚ್ ನಲ್ಲಿ ನಡೆದಿದೆ.


ವೀಕೆಂಡ್ ಗೆ ಸಮುದ್ರದಲ್ಲಿ ಈಜಲು ಹೋದ ಮೂವರು ವಿದ್ಯಾರ್ಥಿಗಳು ನೀರು ಪಾಲಾಗಿದ್ದಾರೆ. ಮಣಿಪಾಲ ಎಂಐಟಿ ಎಂಜಿನಿಯರ್ ಕಾಲೇಜಿನ ನಿಶಾಂತ್, ಷಣ್ಮುಖ್ ಹಾಗೂ ಶ್ರೀಕರ್ ಮೃತಪಟ್ಟ ವಿದ್ಯಾರ್ಥಿಗಳು.


Udupi zilla Panchayat CEO drives tempo and collecting garbage psud mrq
ಬೀಚ್


ಇದನ್ನೂ ಓದಿ:  Karnataka Assembly Elections: ಬೆಳ್ತಂಗಡಿಯಲ್ಲಿ ಪೂಂಜಾ ಸೋಲಿಸಲು ಈ ಅಸ್ತ್ರ ಬಳಸುತ್ತಾ ಕಾಂಗ್ರೆಸ್​?


ಇಬ್ಬರು ಆಸ್ಪತ್ರೆಯಲ್ಲಿ ಸಾವು, ಒರ್ವನ ಮೃತದೇಹಕ್ಕಾಗಿ ಶೋಧ


ವಿದ್ಯಾರ್ಥಿಗಳು ಈಜುತ್ತಾ ಮುಂದೆ ‌ಹೋಗಿ  ನೀರುಪಾಲಾಗುತ್ತಿರುವುದನ್ನ ಕಂಡ ಸ್ಥಳೀಯ ಮೀನುಗಾರರು ಕೂಡಲೇ ರಕ್ಷಿಸಲು ಧಾವಿಸಿದ್ದಾರೆ.‌ ಈ ವೇಳೆ ನಿಶಾಂತ್ ಹಾಗೂ ಷಣ್ಮುಕ್ ಅವರನ್ನ ಮೇಲಕ್ಕೆತ್ತಲು ಸಾಧ್ಯವಾಗಿದೆ. ಆಸ್ಪತ್ರೆಗೆ ದಾಖಲಿಸಿದರೂ ನಿಶಾಂತ್ ಹಾಗೂ ಷಣ್ಮುಕ್‌ ಮೃತಪಟ್ಟಿದ್ದಾರೆ.


ಇನ್ನು ನೀರುಪಾಲಾದ ‌ಶ್ರೀಕರ್ ಮೃತದೇಹಕ್ಕಾಗಿ ಹುಡುಕಾಟ ಮುಂದುವರದಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌ ಇನ್ನು ಮೃತಪಟ್ಟವರು ಎಲ್ಲಿಯವರು ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ.


Udupi zilla Panchayat CEO drives tempo and collecting garbage psud mrq
ಬೀಚ್


ಇದನ್ನೂ ಓದಿ:  Karnataka Assembly Elections: ಬಂಟ್ವಾಳದಲ್ಲಿ ರೈ ವಿರುದ್ಧ ಯಾರು ಕಣಕ್ಕೆ? ಹಾಲಿ ಶಾಸಕನಿಗೆ ಕೈ ತಪ್ಪುತ್ತಾ ಬಿಜೆಪಿ ಟಿಕೆಟ್?


ಪ್ರಾಣಕ್ಕೆ ಕುತ್ತು ತಂದುಕೊಳ್ಳುವ ಹುಚ್ಚಾಟ


ಜಿಲ್ಲೆಯ ಮಲ್ಪೆ, ಹೂಡೆ,ಕಾಪು ಬೀಚ್ ಗಳಲ್ಲಿ ವಿದ್ಯಾರ್ಥಿಗಳ ವೀಕೆಂಡ್ ಮೋಜು ಮಸ್ತಿ ಪ್ರಾಣ ಕಳೆದುಕೊಳ್ಳುವಂತಾಗಿದೆ.‌ ಹೀಗೆ ಈಜಲು ಹೋಗಿ ಸಾವನ್ನಪ್ಪಿದ ಪ್ರಕರಣ ಹೆಚ್ಚಾಗುತ್ತಿದ್ದು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಎಚ್ಚೆತ್ತು ಬೀಚ್ ನಲ್ಲಿ ಯುವಕರ ಜಾಲಿ ಹುಚ್ಚಾಟಕ್ಕೆ ಕಡಿವಾಣ ಹಾಕಬೇಕಿದೆ

Published by:Mahmadrafik K
First published: