HOME » NEWS » State » UDUPI YAKSHAGANA BHAGAVATA SELLING VEGETABLES DUE TO COVID19 PANDEMIC SCT PSUDP

ಕೊರೋನಾಗೆ ತತ್ತರಿಸಿದ ಯಕ್ಷಗಾನ ಕಲಾವಿದರು; ಮೇಳದ ಭಾಗವತರಿಂದ ತರಕಾರಿ ಮಾರಾಟ

ಉತ್ತರ ಕನ್ನಡ,  ದಕ್ಷಿಣಕನ್ನಡ,  ಶಿವಮೊಗ್ಗ ಭಾಗದಲ್ಲಿ ಸುಮಾರು 50 ಮೇಳ‌ಗಳಲ್ಲಿ 2 ಸಾವಿರಕ್ಕೂ ಅಧಿಕ ಕಲಾವಿದರು ಯಕ್ಷಗಾನವನ್ನೇ ನಂಬಿ ಬದುಕುತ್ತಿದ್ದಾರೆ.‌ ಆದರೆ ಈ ವರ್ಷ ವಕ್ಕರಿಸಿದ ಕೊರೋನಾ ಯಕ್ಷಗಾನ ಕಲಾವಿದರ ಬದುಕನ್ನೇ ಛಿದ್ರಗೊಳಿಸಿದೆ.

news18-kannada
Updated:October 19, 2020, 8:19 AM IST
ಕೊರೋನಾಗೆ ತತ್ತರಿಸಿದ ಯಕ್ಷಗಾನ ಕಲಾವಿದರು; ಮೇಳದ ಭಾಗವತರಿಂದ ತರಕಾರಿ ಮಾರಾಟ
ಭಾಗವತ ಗಣೇಶ್
  • Share this:
ಉಡುಪಿ (ಅ. 19): ಕೊರೋನಾ ಎಂಬ ಮಹಾಮಾರಿಯಿಂದಾಗಿ ಕರಾವಳಿಯ ಗಂಡುಕಲೆ ಎಂದೇ ಕರೆಯಲ್ಪಡುವ‌‌ ಯಕ್ಷಗಾನಕ್ಕೆ ಬಹಳ ದೊಡ್ಡ ಹೊಡೆತ ಬಿದ್ದಿದೆ. ಯಕ್ಷಗಾನವನ್ನೇ ನಂಬಿ ಬದುಕುವ ಕಲಾವಿದರು ಅತಂತ್ರರಾಗಿದ್ದಾರೆ.‌ ಇದಕ್ಕೆ ಪ್ರತ್ಯಕ್ಷ ಸಾಕ್ಷಿಯೆಂಬಂತೆ ಭಾಗವತರೊಬ್ಬರು ಬದುಕು ಕಟ್ಟಿಕೊಳ್ಳಲು ತರಕಾರಿ ಮಾರುವಂತ ಸ್ಥಿತಿ ಎದುರಾಗಿದೆ. ಕೊರೋನಾ ಎಂಬ ಮಹಾಮಾರಿ ಅದೆಷ್ಟರ ಮಟ್ಟಿಗೆ ಸಂಕಷ್ಟ ತಂದೊಡ್ಡಿದೆಯಂದರೆ ಯಕ್ಷಗಾನವನ್ನೇ ನಂಬಿ ಬದುಕುತ್ತಿದ್ದ ಸಹಸ್ರ ಕಲಾವಿದರು ಬೀದಿಗೆ ಬಿದ್ದಿದ್ದಾರೆ. ಕರಾವಳಿ ಹಾಗೂ ಮಲೆನಾಡು ಭಾಗದ ನಾಲ್ಕು ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ,  ದಕ್ಷಿಣಕನ್ನಡ,  ಶಿವಮೊಗ್ಗ ಭಾಗದಲ್ಲಿ ಸುಮಾರು 50 ಮೇಳ‌ಗಳಲ್ಲಿ 2 ಸಾವಿರಕ್ಕೂ ಅಧಿಕ ಕಲಾವಿದರು ಯಕ್ಷಗಾನವನ್ನೇ ನಂಬಿ ಬದುಕುತ್ತಿದ್ದಾರೆ.‌ ಅದೆಷ್ಟೋ ಕಲಾವಿದರು ವರ್ಷವಿಡೀ ಮೇಳಗಳಲ್ಲಿ  ದುಡಿದು ಬದುಕು ಕಟ್ಟಿಕೊಂಡಿದ್ದಾರೆ. ಆದರೆ 2020 ಈ ವರ್ಷ ವಕ್ಕರಿಸಿದ ಕೊರೋನಾ ಎಂಬ ಸುನಾಮಿ ಯಕ್ಷಗಾನ ಕಲಾವಿದರ ಬದುಕನ್ನೇ ಛಿದ್ರಗೊಳಿಸಿದೆ.‌

ಹೀಗೆ ಅತಂತ್ರರಾದ ಕಲಾವಿದರಲ್ಲಿ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಪ್ರಸಿದ್ದ ಭಾಗವತ ಗಣೇಶ್ ಕುಮಾರ್ ಕೂಡ ಒಬ್ಬರು.‌ ಯಕ್ಷಗಾನ ಮೇಳದ ಭಾಗವತಿಕೆಯಲ್ಲಿ ಪ್ರಸಿದ್ದಿಯನ್ನು ಪಡೆದ ಗಣೇಶ್ ಅವರು ತಮ್ಮ ಬದುಕು ಕಟ್ಟಿಕೊಳ್ಳಲು ಇದೀಗ ತರಕಾರಿ ಮಾರುವಂತಾಗಿದೆ. ಕರಾವಳಿ ಭಾಗದಲ್ಲಿ ಕಳೆದ 35 ವರ್ಷಗಳಿಂದ ಯಕ್ಷಗನವನ್ನೇ ತಮ್ಮ ಬದುಕಿನ

ಭಾಗವನ್ನೇ ಮಾಡಿಕೊಂಡಿದ್ದರು. ‌25 ವರ್ಷ ಹವ್ಯಾಸಿ‌ ಕಲಾವಿದರಾಗಿ‌ ಇನ್ನುಳಿದ‌ 9 ವರ್ಷ ಪೂರ್ಣಕಾಲಿಕ ಭಾಗವತರಾಗಿ ಶನೀಶ್ಚರ ಮೇಳ, ಕಮಲಶಿಲೆ, ಹಟ್ಟಿಯಂಗಡಿ, ಬಪ್ಪನಾಡು ಮೇಳದಲ್ಲಿ ಯಕ್ಷಗಾನಕ್ಕೆ‌ ಜೀವ ತುಂಬಿದ್ದರು. ಆದರೆ ಈ ಕಲಾವಿದರ ಜೀವನ ಅತಂತ್ರವಾಗಿ ಇದೀಗ ತರಕಾರಿ‌‌ ಮಾರುವಂತಾಗಿದೆ.

Udupi Yakshagana Bhagavata Selling Vegetables due to Covid-19 Pandemic.
ಗಣೇಶ್​ ಅವರ ತರಕಾರಿ ಅಂಗಡಿ


ಇದನ್ನೂ ಓದಿ: ಕೊಪ್ಪಳದಲ್ಲಿ ಮರ್ಯಾದೆ ಹತ್ಯೆ; ಸ್ವಂತ ತಮ್ಮನಿಂದಲೇ ತ್ರಿವೇಣಿ ಕೊಲೆಯಾದ ವಿಚಾರ ಬೆಳಕಿಗೆ

ಹೌದು, ತಮ್ಮ‌ ಸುದೀರ್ಘ ಜೀವನದಲ್ಲಿ ಕಲೆ ಇವರನ್ನು ಯಾವತ್ತೂ ಕೈ ಬಿಟ್ಟಿರಲಿಲ್ಲ. ತಮ್ಮ‌ ಜೀವನದ ದೊಡ್ಡ ಸಾಲವನ್ನು ಇವರು ಯಕ್ಷಗಾನದಲ್ಲಿ ಬಂದ ಆದಾಯದಿಂದಲೇ ತೀರಿಸಿದ್ದರು. ‌ ಈ ಖುಷಿಯಲ್ಲೇ ಮನೆ ಕೂಡ ಕಟ್ಟಲು ಮುಂದಾದರು. ಅಷ್ಟರಲ್ಲಿ ಕೊರೋನಾ ಮಹಾಮಾರಿ ಭಾಗವತ ಗಣೇಶ್ ಅವರ ಜೀವನದ ದಿಕ್ಕನ್ನೇ ತಪ್ಪಿಸಿದೆ. ಎಲ್ಲೂ ಯಕ್ಷಗಾನ ಆಟಗಳಿಲ್ಲದೆ ಮನೆಯಲ್ಲೇ ಕುಳಿತುಕೊಳ್ಳುವಂತಾಗಿದೆ.‌ ಒಂದು ಕಡೆ ಸಾಲದ ಸುಳಿಯಲ್ಲಿದ್ದ ಇವರು ತಮ್ಮ ಕಾರನ್ನೂ‌ ಮಾರಿದ್ರು ಮುಂದೇನು ಅನ್ನುವಷ್ಟದಲ್ಲಿ ಸ್ನೇಹಿತರ ಸಲಹೆಯಂತೆ ತರಕಾರಿ ಅಂಗಡಿ ತೆರೆದೇ ಬಿಟ್ಟರು. ಆದರೂ ಇವರ ಜೀವನ ಆಮೆಗತಿಯಲ್ಲಿ ಸಾಗುತ್ತಿದೆ.
Youtube Video
ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಭಾಗವತರಾದ ಗಣೇಶ್ ಅವರ ಸ್ಥಿತಿ‌ ಶೋಚನೀಯ. ‌ಸರ್ಕಾರವೇನೋ 500 ರೂ. ಕಿಟ್ ನೀಡುವ ಮೂಲಕ ಕೈ ತೊಳೆದುಕೊಂಡಿದೆ. ಇತ್ತ ಜೀವನೋಪಾಯಕ್ಕೆ ಇಟ್ಟ ತರಕಾರಿ ಅಂಗಡಿಗೂ ಸ್ಥಳೀಯ ಗ್ರಾಮ ಪಂಚಾಯತ್ ಎನ್ ಓಸಿ ನೀಡದೆ ಸತಾಯಿಸುತ್ತಿದೆ.‌ ಇನ್ನಾದರೂ ಸರ್ಕಾರ ಹಾಗೂ ಸ್ಥಳೀಯ ಪಂಚಾಯತ್ ಗಳು ಇಂತಹ ಕಲಾವಿದರ ಬೆನ್ನೆಲುಬಾಗಿ ನಿಲ್ಲಬೇಕಿದೆ. ಸರ್ಕಾರ ಆದಷ್ಟು ಬೇಗ ಗಂಡುಕಲೆ‌ ಯಕ್ಷಗಾನ ಪ್ರದರ್ಶನಕ್ಕೆ ಆದಷ್ಟು ಬೇಗ ಅವಕಾಶ‌ ನೀಡಲಿ‌ ಅನ್ನೋದು ಎಲ್ಲರ‌ ಆಶಯ.
Published by: Sushma Chakre
First published: October 19, 2020, 8:19 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ