Hijab Row in Karnataka: ಮ್ಯಾಚಿಂಗ್ ಕಲರ್ ಹಿಜಾಬ್ ಹಾಕ್ತೀವಿ, ಹೈಕೋರ್ಟ್​ಗೆ ಉಡುಪಿ ಮುಸ್ಲಿಂ ವಿದ್ಯಾರ್ಥಿನಿಯರ ರಿಕ್ವೆಸ್ಟ್

ಕೇಂದ್ರೀಯ ವಿದ್ಯಾಲಯಗಳು ಮುಸ್ಲಿಂ ವಿದ್ಯಾರ್ಥಿಗಳಿಗೆ ತಮ್ಮ ಶಾಲಾ ಸಮವಸ್ತ್ರಕ್ಕೆ ಹೊಂದಿಕೆಯಾಗುವ ಬಣ್ಣಗಳಲ್ಲಿ ಹಿಜಾಬ್ ಧರಿಸಲು ಆಯ್ಕೆಯನ್ನು ನೀಡುವುದನ್ನು ಮುಂದಿರಿಸಿದ ಕರ್ನಾಟಕದ ಮುಸ್ಲಿಂ ವಿದ್ಯಾರ್ಥಿನಿಯರು ಇದೇ ವಿಚಾರವನ್ನು ವಾದಿಸುತ್ತಿದ್ದಾರೆ.

ಹಿಜಾಬ್ ವಿವಾದ

ಹಿಜಾಬ್ ವಿವಾದ

  • Share this:
ಕರ್ನಾಟಕದಲ್ಲಿ (Karnataka) ಹಿಜಾಬ್ ಗಲಭೆ (Hijab Row) ಜೋರಾಗಿದ್ದು, ಈ ವಿಚಾರ ದೇಶಾದ್ಯಂತ ಸಂಚಲನ ಮೂಡಿಸಿದೆ. ಕರ್ನಾಟಕದ ಉಡುಪಿಯಲ್ಲಿ (Udupi) ಮುಸ್ಲಿಂ ವಿದ್ಯಾರ್ಥಿನಿಯರು (Muslim Girls) ಹಿಜಾಬ್ ಧರಿಸಿ ತರಗತಿಗೆ ಪ್ರವೇಶ ನಿರಾಕರಿಸಿದ್ದನ್ನು ಪ್ರತಿಭಟಿಸಿದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಇದು ಸುದ್ದಿಯಾಗಿದೆ. ಶಿವಮೊಗ್ಗ, ಮಂಡ್ಯ ಸೇರಿ ಹಲವೆಡೆ ಈ ಹಿಜಾಬ್ ಗಲಭೆ ಪ್ರತಿಧ್ವನಿಸಿದೆ. ಈಗಾಗಲೇ ಹೈಕೋರ್ಟ್​ ಹಿಜಾಬ್ ಗಲಭೆ ವಿಚಾರದಲ್ಲಿ ಶಾಲಾ ಕಾಲೇಜುಗಳಿಗೆ (Colleges) ಕೆಲವು ದಿನಗಳ ರಜೆ ಘೋಷಣೆಯೂ ಮಾಡಿತ್ತು. ಆದರೆ ಇನ್ನೂ ಈ ವಿಚಾರ ಇತ್ಯರ್ಥವಾಗಿಲ್ಲ. ಯೋಗಿ ಆದಿತ್ಯನಾಥ್, ಹೇಮಾ ಮಾಲಿನಿ, ಪ್ರಿಯಾಂಕ ಗಾಂಧೀ ವಾದ್ರಾ ಸೇರಿ ಹಲವು ರಾಜಕೀಯ ಗಣ್ಯರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಕೇಂದ್ರೀಯ ವಿದ್ಯಾಲಯಗಳು ಮುಸ್ಲಿಂ ವಿದ್ಯಾರ್ಥಿಗಳಿಗೆ ತಮ್ಮ ಶಾಲಾ ಸಮವಸ್ತ್ರಕ್ಕೆ ಹೊಂದಿಕೆಯಾಗುವ ಬಣ್ಣಗಳಲ್ಲಿ ಹಿಜಾಬ್ ಧರಿಸಲು ಆಯ್ಕೆಯನ್ನು ನೀಡುವುದನ್ನು ಮುಂದಿರಿಸಿದ ಕರ್ನಾಟಕದ ಮುಸ್ಲಿಂ ವಿದ್ಯಾರ್ಥಿನಿಯರು ಇದೇ ವಿಚಾರವನ್ನು ವಾದಿಸುತ್ತಿದ್ದಾರೆ. ಕರ್ನಾಟಕದ ಕೆಲವು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ (Govt Education Institutions) ಹಿಜಾಬ್ ನಿಷೇಧದ ವಿರುದ್ಧ ಅರ್ಜಿದಾರರು ಸೋಮವಾರ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ತಮಗೂ ಅದೇ ಅವಕಾಶ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.

ಹೊಸ ಬೇಡಿಕೆ ಸಲ್ಲಿಸಿದ ವಿದ್ಯಾರ್ಥಿಗಳು

ಉಡುಪಿಯ ಪ್ರಿ-ಯೂನಿವರ್ಸಿಟಿ ಕಾಲೇಜುಗಳ ಮುಸ್ಲಿಂ ಬಾಲಕಿಯರು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ, ನ್ಯಾಯಮೂರ್ತಿ ಜೆಎಂ ಖಾಝಿ ಮತ್ತು ನ್ಯಾಯಮೂರ್ತಿ ಕೃಷ್ಣ ಎಂ ದೀಕ್ಷಿತ್ ಅವರನ್ನೊಳಗೊಂಡ ಪೂರ್ಣ ಪೀಠದ ಮುಂದೆ ಈ ಮನವಿಯನ್ನು ಸಲ್ಲಿಸಲಾಯಿತು. ಕಾಲೇಜು ಸಮಿತಿಯು ಸೂಚಿಸಿದ ಸಮವಸ್ತ್ರವನ್ನು ಉಲ್ಲಂಘಿಸಿ ಹಿಜಾಬ್ ಧರಿಸಿದ್ದಕ್ಕಾಗಿ ತರಗತಿಗಳಿಂದ ಈ ವಿದ್ಯಾರ್ಥಿನಿಯರನ್ನು ನಿರ್ಬಂಧಿಸಲಾಗಿತ್ತು.

ಸಮವಸ್ತ್ರಕ್ಕೆ ಮ್ಯಾಚಿಂಗ್ ಹಿಜಾಬ್:

ಕೇಂದ್ರೀಯ ವಿದ್ಯಾಲಯಗಳಿಂದ ಮುಸ್ಲಿಂ ಹುಡುಗಿಯರಿಗೆ ಸಂಬಂಧಿಸಿದಂತೆ ಅವರು ಧರಿಸುವ ಸಮವಸ್ತ್ರದ (Uniform) ಅದೇ ಬಣ್ಣದ ಹಿಜಾಬ್ ಧರಿಸಲು ಅವಕಾಶ ನೀಡಲಾಗಿದೆ ಎಂದು ಹಿರಿಯ ವಕೀಲ ದೇವದತ್ತ ಕಾಮತ್ ಪೂರ್ಣ ಪೀಠಕ್ಕೆ ತಿಳಿಸಿದ್ದಾರೆ.

ಇದನ್ನು ಓದಿ: Hijab Controversy: 3 ದಿನಗಳ ಕಾಲ ಶಾಲಾ-ಕಾಲೇಜುಗಳಿಗೆ ರಜೆ: ನಾಳೆ ಮತ್ತೆ ಹೈಕೋರ್ಟ್​​ನಲ್ಲಿ​​ ವಿಚಾರಣೆ

ಸಮವಸ್ತ್ರವಿದ್ದರೂ ಹಿಜಾಬ್ ಧರಿಸುತ್ತಾರೆ

ಕೇಂದ್ರೀಯ ವಿದ್ಯಾಲಯಗಳು ಸಮವಸ್ತ್ರವನ್ನು ಹೊಂದಿದ್ದರೂ ಅಧಿಸೂಚನೆಯ ಮೂಲಕ ಹಿಜಾಬ್​ಗೆ ಅನುಮತಿ ನೀಡುತ್ತವೆ. ರಾಷ್ಟ್ರಮಟ್ಟದಲ್ಲಿಯೂ ಇದು ಸಂಪ್ರದಾಯವಾಗಿದೆ. ತಲೆಗೆ ಸ್ಕಾರ್ಫ್ ಧರಿಸಲು ಸರ್ಕಾರಗಳು ಅನುಮತಿ (Permission) ನೀಡಿವೆ ಎಂದು ಕಾಮತ್ ಹೇಳಿದ್ದಾರೆ. ಮುಸ್ಲಿಂ ಹುಡುಗಿಯರಿಗೆ ಹಿಜಾಬ್ ಮತ್ತು ಸಿಖ್ಖರಿಗೆ ಅವರ ಸಂಪ್ರದಾಯಿಕ ಟರ್ಬನ್ ಧರಿಸಲು ಅನುಮತಿ ಇದೆ. ಇದು ಸಂವಿಧಾನದ 25ನೇ ಪರಿಚ್ಛೇದಕ್ಕೆ ಅನುಗುಣವಾಗಿದೆ ಎಂದು ವಾದಿಸಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ.

ಫೆಬ್ರವರಿ 5 ರ ಕರ್ನಾಟಕ ಸರ್ಕಾರದ ಆದೇಶವು ನಿಷೇಧವನ್ನು ಕಾನೂನುಬದ್ಧಗೊಳಿಸುವವರೆಗೆ ಮುಸ್ಲಿಂ ಹುಡುಗಿಯರು ತಮ್ಮ ತರಗತಿಗಳಿಗೆ ಹಿಜಾಬ್ ಧರಿಸಿದ್ದರು ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯದ ಮುಂದೆ ವಾದಿಸಿದ್ದಾರೆ.

ಇದನ್ನು ಓದಿ: Hijab Row: ವಿವಾದಾತ್ಮಕ ಪೋಸ್ಟ್ ಮಾಡಿದ್ರೆ ಬೀಳುತ್ತೆ ಕೇಸ್, ಸೇರ್ತಿರಾ ಜೈಲ್, ಮಂಡ್ಯ ಪೊಲೀಸರ ವಾರ್ನಿಂಗ್

ರಾಜ್ಯದೆಲ್ಲೆಡೆ ವ್ಯಾಪಿಸಿದ ಹಿಜಾಬ್ ವಿವಾದ

ಕೆಲ ವಾರಗಳಿಂದ ಕರ್ನಾಟಕದ ಉಡುಪಿ, ಚಿಕ್ಕಮಗಳೂರು ಮತ್ತು ಮಂಡ್ಯ (Mandya) ಜಿಲ್ಲೆಗಳ ಹಲವಾರು ಪಟ್ಟಣಗಳಲ್ಲಿ ಕಾಲೇಜು ವಿದ್ಯಾರ್ಥಿಗಳು ತರಗತಿಯಲ್ಲಿ ಹಿಜಾಬ್ ಧರಿಸುವ ಹಕ್ಕಿನ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಮಂಡ್ಯದಲ್ಲಿ ಯುವತಿಯೊಬ್ಬಳನ್ನು ಉದ್ರಿಕ್ತ ಪುರುಷರ ಗುಂಪು ಕೇಸರಿ ಸ್ಕಾರ್ಫ್ ಬೀಸುತ್ತಾ 'ಜೈ ಶ್ರೀ ರಾಮ್' (Jai Sri Ram) ಎಂದು ಘೋಷಣೆ ಕೂಗಿದ ವಿಡಿಯೋ ದೃಶ್ಯಗಳು ವೈರಲ್ (Viral) ಆಗಿದ್ದವು. ದಾವಣಗೆರೆ ಜಿಲ್ಲೆಯ ಎರಡು ಪಟ್ಟಣಗಳಲ್ಲಿ ಹಿಜಾಬ್ ಧರಿಸಿದ ಪ್ರತಿಭಟನಾಕಾರರು ಮತ್ತು ಕೇಸರಿ ಶಾಲು ಧರಿಸಿದವರು ಪರಸ್ಪರ ಕಲ್ಲು ತೂರಾಟ ನಡೆಸಿದ ನಂತರ ಸಭೆ ಸೇರುವುದನ್ನು ನಿಷೇಧಿಸಲಾಯಿತು.
Published by:Divya D
First published: