• Home
  • »
  • News
  • »
  • state
  • »
  • Udupi: ನಗರದಲ್ಲೇ ದ್ವೀಪ ವಾಸಿಗಳಂತೆ ಪರಿಶಿಷ್ಟ ಪಂಗಡ ನಿವಾಸಿಗಳ ವಾಸ; ಆಡಳಿತ ನಿರ್ಲಕ್ಷ್ಯಕ್ಕೆ ಸ್ಥಳೀಯರ ಆಕ್ರೋಶ

Udupi: ನಗರದಲ್ಲೇ ದ್ವೀಪ ವಾಸಿಗಳಂತೆ ಪರಿಶಿಷ್ಟ ಪಂಗಡ ನಿವಾಸಿಗಳ ವಾಸ; ಆಡಳಿತ ನಿರ್ಲಕ್ಷ್ಯಕ್ಕೆ ಸ್ಥಳೀಯರ ಆಕ್ರೋಶ

ಪಾಡಿಗಾರ್ ಪ್ರದೇಶ

ಪಾಡಿಗಾರ್ ಪ್ರದೇಶ

ನಗರಸಭೆ ಹಾಗೂ ಶಾಸಕರ ಕಚೇರಿಗೆ ಅಲೆದು ಅಲೆದು ಸುಸ್ತಾದ‌ ನಿವಾಸಿಗಳು ಇದೀಗ ಮಾಧ್ಯಮದ ಮೂಲಕ ಸಂಪರ್ಕ‌ ರಸ್ತೆ ಮಾಡಿಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. 

  • Share this:

ನಗರದ ಮಧ್ಯಭಾಗದಲ್ಲಿರುವ ಪರಿಶಿಷ್ಟ ಪಂಗಡವೊಂದು (Scheduled Tribe)  ಸಂಪರ್ಕ ರಸ್ತೆಯನ್ನೇ (Road) ಕಾಣದೇ ಮೂರು ದಶಕಗಳಾಗುತ್ತ ಬಂದಿದೆ.‌ ಈ ಭಾಗಕ್ಕೆ ತುರ್ತು ಸೇವೆಗಳು (Emergency Service) ತಲುಪಲು ಸಾಧ್ಯವೇ ಇಲ್ಲದಂತ ಸ್ಥಿತಿ. ಹಾಗಾದ್ರೆ ಮೂಲಭೂತ ಸೌಕರ್ಯ ವಂಚಿತ ಆ ನಗರ ಪ್ರದೇಶದಲ್ಲಿ ಆದ್ರೂ ಯಾವುದು ಅನ್ನೋ ಬಗ್ಗೆ ಒಂದು ವರದಿ ‌ಇಲ್ಲಿದೆ.  ಉಡುಪಿ (Udupi)‌ ನಗರಸಭಾ ವ್ಯಾಪ್ತಿಯ ಕಡಿಯಾಳಿ ವಾರ್ಡ್ ಸಂಬಂದಪಟ್ಟ ಪಾಡಿಗಾರ್ ಪ್ರದೇಶದ ದುಸ್ಥಿತಿ. ಪರಿಶಿಷ್ಟ ಪಂಗಡಕ್ಕೆ ಸೇರಿದ ಸುಮಾರು 25 ಕುಟುಂಬ ಈಗಲೂ ಸಂಪರ್ಕ ರಸ್ತೆಯಿಲ್ಲದೆ ನಗರಾಡಳಿತದಿಂದ ವಂಚನೆಗೊಳಗಾಗಿದೆ. ಈ ‌ಭಾಗದ ಪರಿಶಿಷ್ಟ ಪಂಗಡ ನಿವಾಸಿಗಳ‌‌ ಪಾಡು ಹೇಳತೀರದು ಶಾಲಾ ಮಕ್ಕಳು (Students) ಕಾಲುದಾರಿಯಲ್ಲಿ ನಡೆದುಕೊಂಡು ಹೋಗಲು ಹರಸಾಹಸ ಪಡಬೇಕಾದ ಪರಿಸ್ಥಿತಿ.‌ ಹಾವುಗಳ ಓಡಾಟ ಇರುವ ಈ ಸ್ಥಳದಲ್ಲಿ ಶಾಲಾ‌ ಮಕ್ಕಳಿಗೆ ಅಪಾಯವೇ ಹಾದಿಯಾಗಿದೆ.‌


ಇನ್ನು ಮಳೆ‌ ಬಂದ್ರೆ ಓಡಾಡೋದು ಕಷ್ಟ. ಹೆರಿಗೆ ಅಥವಾ ವೃದ್ಧರಿಗೆ ಅನಾರೋಗ್ಯ ಆದ್ರೆ ಕೆಲವು ದೂರ ಎತ್ತಿಕೊಂಡೇ ಹೋಗಬೇಕು. ಕೆಲವೇ ದೂರ ಇರುವ ಒಂದಷ್ಡು ಮನೆಗಳು ಖಾಸಗಿ‌ ಜಾಗ ಮಾಡಿಕೊಂಡ ಕಾರಣ ಬೇಲಿ  ಹಾಕಿದಲ್ಲಿ ದ್ವಿಚಕ್ರ ವಾಹನಗಳ ಓಡಾಟಕ್ಕೂ ಕಷ್ಟ.‌ ಹೀಗಾಗಿ ನಗರಸಭೆ ಹಾಗೂ ಶಾಸಕರ ಕಚೇರಿಗೆ ಅಲೆದು ಅಲೆದು ಸುಸ್ತಾದ‌ ನಿವಾಸಿಗಳು ಇದೀಗ ಮಾಧ್ಯಮದ ಮೂಲಕ ಸಂಪರ್ಕ‌ ರಸ್ತೆ ಮಾಡಿಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.


40 ಲಕ್ಷ ಹಣ ಬಿಡುಗಡೆ


ಪ್ರತೀ ಚುನಾವಣೆ ಬಂದಾಗಲೂ ಈ ವಾರ್ಡ್ ನ ನಗರಸಭಾ ಸದಸ್ಯೆ ಗೀತಾ ಶೇಟ್ ಭರವಸೆ ಕೊಟ್ಟು ನಿರ್ಲಕ್ಷ್ಯ ಮಾಡುತ್ತಲೇ ಬಂದಿದ್ದಾರೆ.‌ ಶಾಸಕ ರಘುಪತಿ ಭಟ್ ಇಲ್ಲಿ ರಸ್ತೆ ಸಂಪರ್ಕಕ್ಕೆ ಬಿಡುಗಡೆ ಮಾಡಿರುವ ನಲವತ್ತು ಲಕ್ಷ ಹಣ ಬಿಡುಗಡೆಯಾಗಿ ಬಹಳಷ್ಟು ವರ್ಷಗಳೇ ಕಳೆದಿದೆ. ಆದರೆ ಸಂಪರ್ಕ ರಸ್ತೆ ಕಾಮಗಾರಿ‌‌ ಇನ್ನೂ ಪ್ರಾರಂಭ ಆಗೇ ಇಲ್ಲ.‌


Udupi padigara area has no road facility psud mrq
ಪಾಡಿಗಾರ್ ಪ್ರದೇಶದ ನಿವಾಸಿಗಳು


ಇದಕ್ಕೆ ಕಾರಣ ನೋಡಲು ಹೋದರೆ ಸ್ಥಳೀಯರೊಬ್ಬರ ಕೋರ್ಟ್ ತಡೆ. ಹೌದು, ಈ ಪ್ರದೇಶ ನಗರದ ಕಡಿಯಾಳಿ ವಾರ್ಡ್ ಗೆ ಸಂಬಂಧಪಟ್ಟಿರೋದ್ರಿಂದ ಈ ವಾರ್ಡ್ ಕೌನ್ಸಿಲರ್ ಗೀತಾ ಶೇಟ್ ಈ ಭಾಗದಲ್ಲಿ ಕಾಂಕ್ರೀಟ್ ರಸ್ತೆ ಮಾಡುತ್ತಿರುವಾಗಲೇ ಈ ಭಾಗದ ನಿವಾಸಿಯೊಬ್ಬರು ಖಾಸಗಿ ಜಾಗದ ತಗಾದೆ ಎತ್ತಿ ಕೋರ್ಟ್ ತಡೆ ಹಾಕಿದ್ದಾರೆ.‌ ಹೀಗಾಗಿ ಅರ್ಧಕ್ಕೆ ನಿಂತಿದ್ದ ರಸ್ತೆ ಕಾಮಗಾರಿ ಸಂಪೂರ್ಣವಾಗಲೇ ಇಲ್ಲ.


ಇದನ್ನೂ ಓದಿ:  Siddaramaiah: ಮಾನ-ಮರ್ಯಾದೆ ಇದ್ರೆ ಕ್ಷಮೆ ಕೇಳಿ; ಬಿಜೆಪಿ ಅನುಭವಿಸುತ್ತಿರುವ ಅಧಿಕಾರದ ಹಿಂದೆ ಅಮಾಯಕ ಯುವಕರ ರಕ್ತದ ಕಲೆ ಇದೆ!


ಖಾಸಗಿ ಸ್ಥಳದಲ್ಲಿ ಬೇಲಿ


ಉಳ್ಳವರ ದುರಾಸೆ- ಸ್ವಾರ್ಥದಿಂದ ಪರಿಶಿಷ್ಟ ಪಂಗಡದ ನಿವಾಸಿಗಳು ಸಂಪರ್ಕ ಕಾಣದೇ ಪರಬಾಡದ ಪಾಡನ್ನ ಅನುಭವಿಸುವಂತಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾದರೂ ಖಾಸಗಿ ಸ್ಥಳದಲ್ಲಿ ತಡೆ ಹಾಕಿದ ಕುಟುಂಬ ಬೇಲಿ ಹಾಕಿದ್ದಲ್ಲಿ ದ್ವಿಚಕ್ರ ವಾಹನವೂ ಹೋಗದ ಸ್ಥಿತಿ ತಲೆದೋರುತ್ತೆ.


Udupi padigara area has no road facility psud mrq
ಪಾಡಿಗಾರ್ ಪ್ರದೇಶ


ಇನ್ನು ಈ ಬಗ್ಗೆ ಸ್ಪಷ್ಟನೆ ಕೊಟ್ಟ ಕೌನ್ಸಿಲರ್ ಗೀತಾ ಶೇಟ್,  ಕೋರ್ಟ್ ತಡೆಯಿಂದ ರಸ್ತೆ ಕಾಮಗಾರಿ ಮೊಟಕುಗೊಂಡಿದೆ. ಬೇರೊಂದು ಮಾರ್ಗ ಗುರುತಿಸಲಾಗಿದೆ. ಆ ಮಾರ್ಗದ ಮೂಲಕ ರಸ್ತೆ ಮಾಡಲು ಫಂಡ್ ಸಾಕಾಗಲ್ಲ. ಮೀಸಲಿಟ್ಟ 40 ಲಕ್ಷ ಸಾಕಾಗಲ್ಲ. ಹೆಚ್ಚಿನ ‌ಅನುದಾನಕ್ಕೆ ಬೇಡಿಕೆ ಇಟ್ಟು ಈ ವರ್ಷದ ಡಿಸೆಂಬರ್ ಅಂತ್ಯದೊಳಗೆ ರಸ್ತೆ ಕಾಮಗಾರಿ ಮುಗಿಸಲಾಗುವುದು ಎಂದು ನ್ಯೂಸ್ 19 ಮೂಲಕ ಭರವಸೆ ನೀಡಿದ್ದಾರೆ.‌


Udupi padigara area has no road facility psud mrq
ಪಾಡಿಗಾರ್ ಪ್ರದೇಶ


ಇದನ್ನೂ ಓದಿ:  Kodimutt Shri: ರಾಜ್ಯಕ್ಕೆ ಒಂದು ಅವಘಡ, ಅಪಮೃತ್ಯು, ಹೋಗುವಾಗ ವಿಪರೀತ ಕ್ಷಾಮ: ಮತ್ತೆ ಭವಿಷ್ಯ ನುಡಿದ್ರು ಕೋಡಿಮಠ ಶ್ರೀಗಳು


ಭರವಸೆ ನೀಡಿದ ಜನಪ್ರತಿನಿಧಿಗಳು


ಇನ್ನು ನಗರಸಭೆ ಅಧ್ಯಕ್ಷೆ ಸುಮಿತ್ರ ಅವರು ಕೂಡ ಸ್ಥಳ ಪರಿಶೀಲಿಸಿ ರಸ್ತೆ ಸಂಪರ್ಕ‌ ಕಲ್ಪಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಒಟ್ಟಾರೆ ನ್ಯೂಸ್ 18 ಧ್ವನಿ ಎತ್ತಿದ ಬಳಿಕ ಈ ವಾರ್ಡ್ ಕೌನ್ಸಿಲರ್ ಹಾಗೂ ನಗರಸಭೆ ಅಧ್ಯಕ್ಚರು ಎಚ್ಚೆತ್ತುಕೊಳ್ಳುವ ಭರವಸೆ ನೀಡಿದ್ದಾರೆ.


ಪಾಡಿಗಾರ್ ಪ್ರದೇಶ


ಈ 21 ನೇ ಶತಮಾನದಲ್ಲೂ ನಗರ ಪ್ರದೇಶದಲ್ಲಿ ಇಂತದೊಂದು ಪರಿಸ್ಥಿತಿ ಇದೆಯಂದ್ರೆ ಮುಂದುವರಿದ ಸಮಾಜ ನಿಜಕ್ಕೂ ತಲೆತಗ್ಗಿಸಬೇಕು. ಇನ್ನಾದರೂ ಸ್ಥಳೀಯಾಡಳಿತ ಹಾಗೂ ಜನಪ್ರತಿನಿಧಿಗಳು ಇತ್ತ ಕಡೆ ಗಮನಹರಿಸಿ‌ ಅಲ್ಲಿನ ನಿವಾಸಿಗಳ ಹಕ್ಕನ್ನ ನೀಡಬೇಕಿದೆ.

Published by:Mahmadrafik K
First published: