ಉಪ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಜೂ. ಮೋದಿ ; ಸೆಲ್ಪೀಗಾಗಿ ಮುಗಿಬಿದ್ದ ಜನರು

ಜೂನಿಯರ್​ ನರೇಂದ್ರ ಮೋದಿ ಎಂದೇ ಖ್ಯಾತಿ ಪಡೆದಿರುವ ಸದಾನಂದ ನಾಯಕ್ ಅವರಿಗೆ ಹೋದಲ್ಲೆಲ್ಲಾ ಸೆಲ್ಪೀಗೆ ಪೋಸ್ ಕೊಡುವುದೇ ದೊಡ್ಡ ಕೆಲಸವಾಗಿದೆ. ಎಲ್ಲೇ ಹೋದರೂ ಜನ ಇವರಿಗೆ ಮುಗಿಬೀಳ್ತಾರೆ.

G Hareeshkumar | news18-kannada
Updated:December 3, 2019, 7:26 AM IST
ಉಪ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಜೂ. ಮೋದಿ ; ಸೆಲ್ಪೀಗಾಗಿ ಮುಗಿಬಿದ್ದ ಜನರು
ಸದಾನಂದ ನಾಯಕ್
  • Share this:
ಬೆಳಗಾವಿ (ಡಿ.03) : ದೇಶದಲ್ಲಿ ಎಲ್ಲಿ ನೋಡಿದರೂ ಪ್ರಧಾನಿ ನರೇಂದ್ರ ಮೋದಿಯವರದೇ ಹವಾ. ಯಾವುದೇ ಚುನಾವಣೆ ಬಂತೆಂದ್ರೆ ಸಾಕು ಪ್ರಧಾನಿಯವರೇ ಸ್ಟಾರ್ ಪ್ರಚಾರಕರು. ಈಗ ಮೋದಿಯವರಂತೆ ಕಾಣುವ ಜೂನಿಯರ್​ ಮೋದಿ ಎಂದೇ ಖ್ಯಾತಿ ಪಡೆದಿರುವ ಸದಾನಂದ ನಾಯಕ್​​​​ ಅವರಿಗೆ ಭಾರೀ ಬೇಡಿಕೆ ಇದೆ.

ಬೆಳಗಾವಿ ಜಿಲ್ಲೆಯ ಐನಾಪುರ ಪಟ್ಟಣದಲ್ಲಿ ಕಾಗವಾಡದ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ್ ಪರ ಪ್ರಚಾರಕ್ಕಾಗಿ ಜೂನಿಯರ್​ ಮೋದಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ನೆರದಿದ್ದ ಜನರಲ್ಲಿ ಗಮನ ಸೆಳೆದರು.

ಯಾರು ಜೂನಿಯರ್​ ನರೆಂದ್ರ ಮೋದಿ

ಉಡುಪಿ ಜಿಲ್ಲೆಯ ಹಿರಿಯಡ್ಕ ನಿವಾಸಿಯಾದ ಸದಾನಂದ ನಾಯಕ್. ಪ್ರಧಾನಿ ನರೇಂದ್ರ ಮೋದಿಯವರ ಹಾವಭಾವ, ಮಾತುಕತೆ. ಮೇಲಾಗಿ ಬಿಜೆಪಿಯಲ್ಲಿ ಮೋದಿಯವರ ಕಟ್ಟಾ ಅಭಿಮಾನಿ . ಉಡುಪಿಯ ಸದಾನಂದ ನಾಯಕ್ ಅವರಿಗೆ ಈಗ ಎಲ್ಲಿಲ್ಲದ ಬೇಡಿಕೆ.

ಸೆಲ್ಫಿಗೆ ಮುಗಿಬೀಳುವ ಜನ

ಜೂನಿಯರ್​ ನರೇಂದ್ರ ಮೋದಿ ಎಂದೇ ಖ್ಯಾತಿ ಪಡೆದಿರುವ ಸದಾನಂದ ನಾಯಕ್ ಅವರಿಗೆ ಹೋದಲ್ಲೆಲ್ಲಾ ಸೆಲ್ಪೀಗೆ ಪೋಸ್ ಕೊಡುವುದೇ ದೊಡ್ಡ ಕೆಲಸವಾಗಿದೆ. ಎಲ್ಲೇ ಹೋದರೂ ಜನ ಇವರಿಗೆ ಮುಗಿಬೀಳ್ತಾರೆ.

ಜೂನಿಯರ್​ ಮೋದಿ ಸದಾನಂದ ನಾಯಕ್​​​ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿರುವ ಜನರು
ಇದನ್ನೂ ಓದಿ : ಯು ಟರ್ನ್ ಹೊಡೆದ ಅನಿಲ್ ಲಾಡ್ ಕೈ ಪರ ಭರ್ಜರಿ ಪ್ರಚಾರ; ಲಿಂಗಾಯತ ಮತ ಸೆಳೆಯಲು ಫೀಲ್ಡಿಗಿಳಿದ ಸೋಮಣ್ಣ, ಮಾಧುಸ್ವಾಮಿ

ವೃತ್ತಿಯಿಂದ ಅಡುಗೆ ಭಟ್ಟ

ವೃತ್ತಿಯಿಂದ ಅಡುಗೆ ಭಟ್ಟ ಪ್ರಧಾನಿ ಮೋದಿ ಅವರು ಬಾಲ್ಯದಲ್ಲಿ ಚಾಯ್ ವಾಲಾ. ಆದರೆ ಉಡುಪಿಯ ಸದಾನಂದ ನಾಯಕ್ ಅಡುಗೆ ಭಟ್ಟ. ಮೂರು ವರ್ಷದ ಹಿಂದೆ ಹರಿದ್ವಾರಕ್ಕೆ ಪ್ರವಾಸ ಹೋದ ತಂಡದಲ್ಲಿ ಇವರು ಅಡುಗೆ ಕಾರ್ಯ ನಿರ್ವಹಿಸುತ್ತಾ ಇದ್ದರು. ಪ್ರವಾಸ ಇದ್ದ ಕಾರಣ ಗಡ್ಡ ತೆಗೆದಿರಲಿಲ್ಲ. ಗಡ್ಡ ಬಿಟ್ಟ ನಾಯಕ್ ರನ್ನು ನೋಡಿದ ಉತ್ತರ ಭಾರತದ ಜನ ಮೋದಿ ಅಂತ ಮುಗಿಬಿದ್ದರು.

(ವರದಿ : ಲೋಹಿತ್​ ಶಿರೋಳ )
First published:December 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading