ಕೊರೋನಾದಿಂದ ಸೇಫ್ ಆಗ್ಬೇಕಿದ್ರೆ ವ್ಯಾಕ್ಸಿನ್ ಅತ್ಯಗತ್ಯ ಆದ್ರೆ ಇದೇ ವ್ಯಾಕ್ಸಿನ್ ಪಡೆದ ವ್ಯಕ್ತಿಯೊಬ್ರು ತನ್ನ ದೇಹ ಅಯಸ್ಕಾಂತೀಯ ಆಗೋಗಿದೆ ಅಂದ ಆತಂಕಕ್ಕೆ ಒಳಗಾಗಿದ್ದಾರೆ. ಇವರ ದೇಹ ಮ್ಯಾಗ್ನೆಟಿಕ್ ಆಗಿ ಬದಲಾಗಿದೆ. ಈ ಫೋಟೋ ನೋಡ್ತಿದ್ರೆ ನೀವು ಒಮ್ಮೆ ಶಾಕ್ ಆಗೋದಂತು ಸತ್ಯ. ಹೌದು ನಾಣ್ಯಗಳು, ಮೆಟಲ್ ಸ್ಪೂನು, ಸೌಟು ಹೀಗೆ ಕಬ್ಬಿಣದ ವಸ್ತುಗಳೆಲ್ಲ ದೇಹವನ್ನು ಅಂಟಿಕೊಂಡು ಬಿಡುತ್ತೆ. ಸ್ನಾನ ಮಾಡಿದ ಮೇಲೂ ಈ ಅಯಸ್ಕಾಂತೀಯ ಲಕ್ಷಣ ಕಂಡುಬರ್ತಾಯಿದೆ. ಹಣೆ, ಭುಜ, ಎದೆ, ಹೊಟ್ಟೆ, ಬೆನ್ನು, ಮೊಣಕೈ ಹೀಗೆ ಎಲ್ಲಾ ಭಾಗದಲ್ಲೂ ಮ್ಯಾಗ್ನೆಟಿಕ್ ಲಕ್ಷಣ ಕಂಡು ಬರುತ್ತಿದೆಯಂತೆ. ಈ ಮೊದಲು ಯಾವತ್ತೂ ಕಂಡು ಬಾರದ ಲಕ್ಷಣ ಇದೀಗ ವ್ಯಾಕ್ಸಿನ್ ತೆಗೆದುಕೊಂಡ ಬಳಿಕ ಗೋಚರಿಸ್ತಾಯಿರುವುದು ಅಚ್ಚರಿ ಮೂಡಿಸಿದೆ.
ಹೀಗೆ ಮ್ಯಾಗ್ನೆಟಿಕ್ ಅಂಶ ಕಂಡು ಬಂದ ಈ ವ್ಯಕ್ತಿಯ ಹೆಸರು ರಾಮ್ ದಾಸ್ ಶೇಟ್. ಉಡುಪಿ ತೆಂಕಪೇಟೆ ನಿವಾಸಿ. ಚಿನ್ನದ ಕೆಲಸ ಮಾಡುವ ಇವರು, ಕೊರೋನಾದಿಂದ ಸೇಫ್ ಆಗ್ಬೇಕು ಅಂತ ಏಪ್ರಿಲ್ ತಿಂಗಳಲ್ಲಿ ವ್ಯಾಕ್ಸಿನ್ ಪಡೆದುಕೊಂಡಿದ್ರು. ಅದೇನಾಯ್ತೋ ಏನೋ ಇತ್ತೀಚೆಗೆ ವ್ಯಾಕ್ಸಿನ್ ಪಡೆದ ಮೇಲೆ ಅಯಸ್ಕಾಂತೀಯ ದೇಹ ಲಕ್ಷಣ ಆಗಿರೋದು, ಮೆಟಲ್ ದೇಹಕ್ಕೆ ಅಂಟಿಕೊಂಡಿರುವ ವೀಡಿಯೋ ಇವರ ಕೈ ಸೇರುತ್ತೆ. ಕೂಡಲೇ ನಾನು ಒಂದು ಪ್ರಯತ್ನ ಮಾಡ್ತೇನೆ ಅಂತ ಮನೆಯಲ್ಲಿರೋ ಸ್ಪೂನು, ನಾಣ್ಯಗಳನ್ನ ದೇಹದ ಬಳಿ ತೆಗೆದುಕೊಂಡು ಹೋದಾಗ ದೇಹದಲ್ಲಿ ಅಯಸ್ಕಾಂತೀಯ ಅನುಭವ ಆಗಿದೆ. ಮತ್ತೆ ಮುಂದುವರೆದು ದೇಹದ ಮೇಲೆ ನಾಣ್ಯ, ಸ್ಪೂನು, ಸೌಟುಗಳನ್ನೆಲ್ಲ ಇಟ್ಟಾಗ ಎಲ್ಲವೂ ದೇಹಕ್ಕೆ ಅಂಟಿಕೊಂಡಿದೆ. ಇದು ಒಂದು ಕ್ಷಣ ಅಚ್ಚರಿಯಾದ್ರೂ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳ ತಂದೆಯಾಗಿರುವ ರಾಮ್ ದಾಸ್ ಮುಂದೇನು ಅಂತ ಭಯಭೀತರಾದ್ರು.
ಇದನ್ನೂ ಓದಿ: Vaccine Magnetic Power: ಲಸಿಕೆ ಪಡೆದ ಬಳಿಕ ದೇಹಕ್ಕೆ ಅಂಟಿಕೊಳ್ಳುತ್ತಿವೆ ಪಾತ್ರೆಗಳು..ಏನಿದರ ಮರ್ಮ?
ಅಯಸ್ಕಾಂತೀಯ ಅನುಭವ ಪಡೆದ ರಾಮ್ ದಾಸ್ ತನ್ನ ನೆರೆಮನೆ ಸ್ನೇಹಿತ ಕೆ.ವಿ ಕಾಮತ್ ಅವರನ್ನು ಕರೆದು ಮ್ಯಾಗ್ನೆಟಿಕ್ ಲಕ್ಷಣ ತೋರಿಸಿ ಚರ್ಚಿಸಿದ್ರು. ವೈದ್ತರೊಬ್ಬರಲ್ಲೂ ಸಲಹೆ ಪಡೆದುಕೊಂಡ್ರು ಆದ್ರೆ ಯಾವುದೇ ಸರಿಯಾದ ಉತ್ತರ ಸಿಕ್ಕಿಲ್ಲ. ಇವರ ಸ್ನೇಹಿತ ಕಾಮತರಿಗೂ ಮೆದುಳಿನ ಮೇಲೆ ಈ ಬದಲಾವಣೆ ಪರಿಣಾಮ ಬೀಳುತ್ತಾ ಎಂಬ ಹತ್ತು ಹಲವು ಪ್ರಶ್ನೆಗಳ ಜೊತೆ ಕೊನೆಗೆ ವೀಡಿಯೋ ಮಾಡಿ ಹರಿಯಬಿಟ್ಟಾಗ ಜಿಲ್ಲಾಧಿಕಾರಿ ಜಗದೀಶ್ ಇವರನ್ನ ಸಂಪರ್ಕಿಸಿ ಪರೀಕ್ಷೆ ಗೂ ಒಳಪಡಿಸಿದ್ದಾರೆ. ಪರೀಕ್ಷೆಯಲ್ಲಿ ಮ್ಯಾಗ್ನೆಟಿಕ್ ಲಕ್ಷಣ ಇರುವುದು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಿದ ಪರೀಕ್ಷೆಯಲ್ಲಿ ಕಂಡುಬಂದಿದೆ. ಆದ್ರೆ ಇದು ವ್ಯಾಕ್ಸಿನ್ ನಿಂದ ಆಗಿಲ್ಲ. ಈ ಬಗ್ಗೆ ಹೆಚ್ಚಿನ ವೈಧ್ಯಕೀಯ ಪರೀಕ್ಷೆ ನಡೆಸಬೇಕಿದೆ ಅಂತ ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರತಿಕ್ರಿಯಿಸಿದ್ದಾರೆ.
ಒಟ್ಟಾರೆ ದೆಹಲಿ ಹಾಗೂ ನಾಸಿಕ್ ನಲ್ಲಿ ಇತ್ತೀಚೆಗೆ ಸ್ಟೀಲ್ ಸಂಬಂಧಿ ವಸ್ತುಗಳು ವ್ಯಕ್ತಿಯ ದೇಹಕ್ಕೆ ಅಂಟಿಕೊಳ್ಳುವ ಮೂಲಕ ಸುದ್ದಿಯಾಗಿತ್ತು ಆದ್ರೆ ಅಲ್ಲಿನ ತಜ್ಞ ವೈದ್ಯರು ವ್ಯಾಕ್ಸಿನ್ ನಿಂದ ಆಗಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. ಅಂತಹದ್ದೇ ಲಕ್ಷಣ ಉಡುಪಿಯಲ್ಲಿ ಮೊದಲ ಬಾರಿಗೆ ಕಂಡುಬಂದಿದ್ದು ಇನ್ನಷ್ಟು ಮಂದಿ ಆತಂಕಕ್ಕೊಳಗಾಗುವ ಮೊದಲು ಈ ಲಕ್ಷಣಕ್ಕೆ ಇರುವ ನೈಜ ಕಾರಣ ತಜ್ಞ ವೈದ್ಯರು ಸ್ಪಷ್ಟಪಡಿಸಬೇಕಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ