Udupi: ಪ್ರವಾಹವಿಲ್ಲ, ಸುನಾಮಿಯಿಲ್ಲ, ಎರಡೇ ದಿನಕ್ಕೆ ಸಮುದ್ರ ಪಾಲಾಯ್ತು 84 ಲಕ್ಷ! ಉದ್ಘಾಟನೆ ಬಳಿಕ ಕಿತ್ತೇ ಹೋಯ್ತು ಮಲ್ಪೆಯ ಫ್ಲೋಟಿಂಗ್ ಬ್ರಿಡ್ಜ್

ಉಡುಪಿಯ ಬಚ್ಪೆ ಬೀಚ್​ ನಲ್ಲಿ ತೇಲುವ ಸೇತುವೆಯನ್ನು (Floating Bridge) ಆರಂಭಿಸಲಾಗಿದೆ. ಇದು ಕರ್ನಾಟಕ ರಾಜ್ಯದಲ್ಲೇ ಪ್ರಥಮ ತೇಲುವ ಸೇತುವೆ (Bridge) ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಆದರೆ ಕಳೆದ 2 ದಿನಗಳ ಹಿಂದೆಯಷ್ಟೇ ಉದ್ಘಾಟನೆಯಾಗಿದ್ದ, ಈ ತೇಲುವ ಸೇತುವೆ ಇದೀಗ ಸ್ಥಗಿತಗೊಂಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಉಡುಪಿ: ಇನ್ನೇನು ಮಕ್ಕಳಿಗೆ ಬೇಸಿಗೆ ರಜೆ ಅಂತ್ಯವಾಗುತ್ತಾ ಬಂದಿದೆ. ಇದರ ನಡುವೆ ಈ ಭಾರಿಯ ಬಿಸಲಿನ ಝಳಕ್ಕೆ ಜನರು ತತ್ತರಿಸುತ್ತಿದ್ದಾರೆ. ಹೀಗಾಗಿ ಪ್ರವಾಸಿಗರು ಹೆಚ್ಚಾಗಿ ಸಮುದ್ರ ತೀರದ ಕಡೆ ಪಯಣ ಬೆಳೆಸುತ್ತಿದ್ದಾರೆ. ಅದರಲ್ಲಿಯೂ ಕರ್ನಾಟಕದ ಕರಾವಳಿ ಜಿಲ್ಲೆಗಳತ್ತ (Coastal Districts) ಪ್ರವಾಸಿಗರು ಲಕ್ಷಾಂತರ ಸಂಖ್ಯೆಯಲ್ಲಿ ತೆರಳುತ್ತಿದ್ದಾರೆ ಎಂದರೂ ತಪ್ಪಾಗಲಾರದು. ಇದರ ನಡುವೆ ಉಡುಪಿ (Udupi) ಜಿಲ್ಲೆಯ ಮಲ್ಪೆಯ ಬೀಚ್​ ಈ ಬಾರಿ ಪ್ರವಾಸಿಗರನ್ನು ಇನ್ನಷ್ಟು ಆಕರ್ಷಿಸುತ್ತಿದೆ ಎಂದು ಹೇಳಬಹುದು. ಹೌದು, ಏಕೆಂದರೆ ಇಲ್ಲಿನ ಬಚ್ಪೆ ಬೀಚ್​ ನಲ್ಲಿ ತೇಲುವ ಸೇತುವೆಯನ್ನು (Floating Bridge) ಆರಂಭಿಸಲಾಗಿದೆ. ಇದು ಕರ್ನಾಟಕ ರಾಜ್ಯದಲ್ಲೇ ಪ್ರಥಮ ತೇಲುವ ಸೇತುವೆ (Bridge) ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಆದರೆ ಕಳೆದ 2 ದಿನಗಳ ಹಿಂದೆಯಷ್ಟೇ ಉದ್ಘಾಟನೆಯಾಗಿದ್ದ, ಈ ತೇಲುವ ಸೇತುವೆ ಇದೀಗ ಸ್ಥಗಿತಗೊಂಡಿದೆ.

ತೇಲುವ ಸೇತುವೆ ಸ್ಥಗಿತ:

ಅಲೆಗಳ ಅಬ್ಬರದಿಂದ ತಾಂತ್ರಕ ದೋಷವುಂಟಾಗಿ ಉಡುಪಿಯ ಮಲ್ಪೆ ತೇಲುವ ಸೇತುವೆ ಸ್ಥಗಿತಗೊಂಡಿದೆ. ಹೌದು, ಕಳೆದ ಕೆಲ ದಿನಗಳಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯ ಅಬ್ಬರ ಹೆಚ್ಚಿರುವುದರಿಂದ ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದೆ. ಅಲೆಗಳ ಅಬ್ಬರಕ್ಕೆ ಸೇತುವೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಸೇತುವೆಗೆ ಅಳವಡಿಸಿರುವ ಬ್ಲಾಕ್‌ಗಳು ಕಿತ್ತುಹೋಗಿವೆ. ಸದ್ಯ ಇದರ ವಿಡಿಯೋಗಳೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ನಿನ್ನೆ ಸಂಜೆಯಿಂದ ಸಮುದ್ರದ ಅಲೆಗಳ ಅಬ್ಬರ ಜೋರಾಗಿದ್ದರಿಂದ ಸೇತುವೆಯಲ್ಲಿ ತಾಂತ್ರಿಕ ದೋಷಕಂಡುಬಂದ ಹಿನ್ನಲೆ ನಿರ್ವಹಣೆಯ ದೃಷ್ಟಿಯಿಂದ ತೇಲುವ ಸೇತುವೆ ಕಾರ್ಯ ಸ್ಥಗಿತಗೊಳಿಸಲಾಗಿದೆ ಎಂದು ನಿರ್ವಾಹಕರು ಮಾಹಿತಿ ನೀಡಿದ್ದಾರೆ. ಹೀಗಾಗಿ ತೇಲುವ ಸೇತುವೆ ಮೇಲೆ ಎಂಜಾಯ್ ಮಾಡಲು ಬಂದ ಪ್ರವಾಸಿಗರಿಗೆ ನಿರಾಸೆಯಾಗಿದೆ. ಭಾನುವಾರ ಸಂಜೆಯಿಂದಲೇ ತೇಲುಸೇತುವೆ ಬಂದ್ ಆಗಿದೆ ಎಂದು ತಿಳಿದುಬಂದಿದೆ.



ಇದನ್ನೂ ಓದಿ: Udupi: ಮಲ್ಪೆ ಬೀಚ್​ನಲ್ಲಿ ತೇಲುವ ಸೇತುವೆ, ನೀರಿನ ಮೇಲೆ ನಡೆದಾಡಿದ ಪ್ರವಾಸಿಗರು ಫುಲ್​ ಖುಷ್

80 ಲಕ್ಷ ವೆಚ್ಚದಲ್ಲಿ ಸೇತುವೆ ನಿರ್ಮಾಣ:

ಕಳೆದ ವಾರ ಶುಕ್ರವಾರ ಸೇತುವೆ ಉದ್ಘಾಟನೆಗೊಂಡಿತ್ತು. ಮೂವರು ಉದ್ಯಮಿಗಳ ಬಂಡವಾಳದಿಂದ ಸೇತುವೆ ನಿರ್ಮಾಣ ಮಾಡಲಾಗಿತ್ತು. ಅಲ್ಲದೇ ಜಿಲ್ಲಾಡಳಿತದ ಅನುಮತಿಯೊಂದಿಗೆ ಉದ್ಯಮಿಗಳಿಂದ ಸೇತುವೆ ನಿರ್ಮಾಣ ಮಾಡಿ ಖಾಸಗಿ ನಿರ್ವಹಣೆಯ ತೇಲುವ ಸೇತುವೆ ಇದೆ. ಇನ್ನು, ಮಲ್ಪೆ ಬೀಚ್ ನಲ್ಲಿ ನಿರ್ಮಿಸಲಾಗಿರೋ ಈ ತೇಲುವ ಸೇತುವೆಯು 100 ಮೀಟರ್ ಉದ್ದ ಮತ್ತು 3.5 ಮೀಟರ್ ಅಗಲ ಹೊಂದಿದ್ದು, ಥಾಯ್ ಲ್ಯಾಂಡ್ ನಿಂದ 8೦ ಲಕ್ಷ ವೆಚ್ಚದಲ್ಲಿ ಆಮದು ಮಾಡಿಕೊಂಡಿದ್ದ ತೇಲುವ ಸೇತುವೆ ಇದಾಗಿದೆ. ಆದರೆ ಇದೀಗ ಅಲೆಗಳ ಪ್ರಕ್ಷುಬ್ಧತೆಗೆ ತೇಲುವ ಸೇತುವೆ ಪ್ರತ್ಯೇಕಗೊಂಡಿದೆ.

ಇದನ್ನೂ ಓದಿ: Bengaluru Hotels: 24 ಗಂಟೆ ಹೋಟೆಲ್ ತೆರೆಯಲು ಪೊಲೀಸರು ಕೊಡ್ತಿಲ್ಲ ಗ್ರೀನ್ ಸಿಗ್ನಲ್; ಅನುಮತಿಗಾಗಿ ಮಾಲೀಕರ ಮನವಿ

15 ನಿಮಿಷಗಳ ಕಾಲ ಎಂಜಾಯ್:

ಇನ್ನು, ತೇಲುವ ಸೇತುವೆ ಮೇಲೆ ನೀವು ಒಂದು ಬಾರಿಗೆ ನೂರು ಜನರು ಸಾಗಬಹುದು. ಸೇತುವೆಯ ಕೊನೆಯಲ್ಲಿ ಸಮುದ್ರಕ್ಕೆ ಚಾಚಿರುವ 12 ಮೀಟರ್ ಉದ್ದ 7.5 ಮೀಟರ್ ಅಗಲದ ವೇದಿಕೆ ಇದೆ ಇದರಲ್ಲಿ 15 ನಿಮಿಷ ಕಾಲ ಕಳೆಯಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ಪ್ರವಾಸಿಗರಿಗೆ ಭದ್ರತೆ ಒದಗಿಸಲು 10 ಜೀವರಕ್ಷಕರನ್ನು ನಿಯೋಜಿಸಿರುವುದಾಗಿ ಉಡುಪಿ ಶಾಸಕ ಕೆ.ರಘುಪತಿ ಭಟ್ ಶುಕ್ರವಾರ ಸೇತುವೆಯನ್ನು ಉದ್ಘಾಟಿಸಿ ಹೇಳಿದ್ದರು. ಇದಲ್ಲದೇ ಐದು ವರ್ಷ ಮೇಲ್ಪಟ್ಟವರು 100 ರೂಪಾಯಿ ಪಾವತಿಸಿ 15 ನಿಮಿಷಗಳ ಕಾಲ ಸಮುದ್ರದ ಮೇಲೆ ನಡೆಯಬಹುದು. ಸೇತುವೆಯ ಬಳಿ ದೋಣಿ ಯಾವಾಗಲೂ ಇರುತ್ತದೆ ಮತ್ತು 30 ಲೈಫ್​ ಬಾಯ್ ರಿಂಗ್​ಗಳು ಸೇತುವೆಯ ಮೇಲೆ ಇರುತ್ತವೆ ಎಂದು ಸುದೇಶ್ ತಿಳಿಸಿದ್ದಾರೆ.

ಯಾವುದೇ ರೀತಿಯ ದುರಂತಗಳನ್ನು ತಪ್ಪಿಸಲು, ಸರ್ಕಾರವು ತೆಲುವ ಸೇತುವೆ ಮೇಲೆ ಎರಡು ಜೆಟ್ ಸ್ಕೀಗಳನ್ನು ಖರೀದಿಸಿ ಸೇಂಟ್ ಮೇರಿಸ್ ದ್ವೀಪ ಮತ್ತು ಮಲ್ಪೆ ಬೀಚ್ನಲ್ಲಿ ತಲಾ ಒಂದನ್ನು ಇರಿಸಿದೆ. 80 ಲಕ್ಷ ವೆಚ್ಚದಲ್ಲಿ ಈ ಸೇತುವೆ ನಿರ್ಮಿಸಲಾಗಿದ್ದು, ಬೆಳಗ್ಗೆ 9ರಿಂದ ಸಂಜೆ 6ರ ವರೆಗೆ ತೆರೆದಿರುತ್ತದೆ. ಆದರೆ ಸದ್ಯ ಸೇತುವೆ ಸ್ಥಗಿತಗೊಂಡಿದ್ದು, ಮತ್ತೆ ಯಾವಾಗ ಪ್ರಾರಂಭವಾಗಲಿದೆ ಎಂಬ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
Published by:shrikrishna bhat
First published: