Udupi Love Jihad Case: ಜಿಹಾದ್ ಪ್ರಕರಣದ ಪ್ರಮುಖ ಆರೋಪಿ ಅಜೀಜ್ & ಆತನ ಸೋದರ ಅರೆಸ್ಟ್

ಭಟ್ಕಳದಿಂದ (Bhatkala) ಉಡುಪಿಯತ್ತ (Udupi) ಬರುತ್ತಿರುವಾಗ ಹೆಮ್ಮಾಡಿಯಲ್ಲಿ (Hemmadi) ಅಜೀಜ್ ಮತ್ತು ರಹೀಂ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ರಹೀಂ ಮತ್ತು ಅಜೀಜ್

ಬಂಧಿತ ರಹೀಂ ಮತ್ತು ಅಜೀಜ್

  • Share this:
Udupi Love Jihad Case: ಲವ್, ಸೆಕ್ಸ್, ಜಿಹಾದ್ ಪ್ರಕರಣದ ಆರೋಪಿ ಅಜೀಜ್ ಮತ್ತು ಆತನ ಸೋದರ ರಹೀಂನನ್ನು ಬಂಧಿಸುವಲ್ಲಿ ಪೊಲೀಸರು (Police) ಯಶಸ್ವಿಯಾಗಿದ್ದಾರೆ. ಸದ್ಯ ಅಜೀಜ್ ಪತ್ನಿ ಸಲ್ಮಾ ನಾಪತ್ತೆಯಾಗಿದ್ದು, ಆಕೆಯ ಬಂಧನಕ್ಕಾಗಿ ಬಲೆ ಬೀಸಲಾಗಿದೆ. ಭಟ್ಕಳದಿಂದ (Bhatkala) ಉಡುಪಿಯತ್ತ (Udupi) ಬರುತ್ತಿರುವಾಗ ಹೆಮ್ಮಾಡಿಯಲ್ಲಿ (Hemmadi) ಅಜೀಜ್ ಮತ್ತು ರಹೀಂ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಆರೋಪಿಗಳಿಬ್ಬರನ್ನು ಕುಂದಾಪುರ ಸೆಷನ್ ಕೋರ್ಟ್ (Kundapura Court) ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಅಜೀಜ್ ನನ್ನು 7 ದಿನ ಪೊಲೀಸ್ ಕಸ್ಟಡಿಗೆ (Police Custody) ಮತ್ತು ರಹೀಂಗೆ 14 ದಿನ ನ್ಯಾಯಾಂಗ ಬಂಧನಕ್ಕೆ (Judicial Custody) ನೀಡಲಾಗಿದೆ. ರಹೀಂ ಸೋದರ ಅಜೀಜ್ ಗೆ ಆಶ್ರಯ ನೀಡಿದ ಹಿನ್ನೆಲೆ ಆತನನನ್ನು ಸಹ ಬಂಧಿಸಲಾಗಿದೆ.

ಕೆಲವು ದಿನಗಳ ಹಿಂದೆಯಷ್ಟೆ ಲವ್ ಸೆಕ್ಸ್ ಜಿಹಾದ್ ಗೆ ಉಪ್ಪಿನಕುದ್ರು ನಿವಾಸಿ ಶಿಲ್ಪಾ ದೇವಾಡಿಗ ಆತ್ಮಹತ್ಯೆ ಮಾಡಿಕೊಂಡಿದ್ದರು. ಶಿಲ್ಪಾ ದೇವಾಡಿಗ ಅವರೊಂದಿಗೆ ಪ್ರೀತಿ ಪ್ರೇಮದ ನಾಟಕವಾಡಿ ಲೈಂಗಿಕವಾಗಿ ಅಜೀಜ್ ಬಳಸಿಕೊಂಡಿದ್ದನು. ವಿವಾಹಿತನಾಗಿದ್ದ ಅಜೀಜ್ ಶಿಲ್ಪಾಳನ್ನು ಮದುವೆಯಾಗಲು ಇಸ್ಲಾಂ ಸ್ವೀಕರಿಸಲು ಒತ್ತಡ ಹಾಕಿದ್ದನು. ಈ ಹಿನ್ನೆಲೆಯಲ್ಲಿ ಶಿಲ್ಪಾ ದೇವಾಡಿಗ ಮನನೊಂದು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಮದುವೆ ಮಾಡಿಕೊಳ್ಳಲು ಮತಾಂತರಕ್ಕೆ ಒತ್ತಾಯ

ಕಳೆದ ಐದು ವರ್ಷಗಳ ಹಿಂದೆ ಮೂಡುಗೋಪಾಡಿ ನಿವಾಸಿ  ಅಜೀಜ್ (32) ಎಂಬಾತ ಶಿಲ್ಪಾಳ ಸ್ನೇಹ ಸಂಪಾದಿಸಿದ್ದ. ಮೊದಲೇ‌ ಮೋಸ ಮಾಡುವುದರಲ್ಲೇ ಚಾಲಾಕಿಯಾದ್ದ ಅಜೀಜ್, ಶಿಲ್ಪಾಳಿಗೆ ಪ್ರೀತಿ ಗೀತಿ ಅಂತ ಯಾಮಾರಿಸಿ ನಿರಂತರವಾಗಿ ದೈಹಿಕ ಸಂಪರ್ಕ ಹೊಂದಿದ್ದ. ಆಗಾಗ ಕೋಟೇಶ್ವರದಲ್ಲಿ ತನ್ನ ಫ್ಲಾಟ್ ಗೆ ಶಿಲ್ಪಾಳನ್ನು ಕರೆಯಿಸಿಕೊಳ್ತಿದ್ದ.

ಇದನ್ನೂ ಓದಿ:  Kodagu: ವಿವಾದದ ಸ್ವರೂಪ ಪಡೆದ ಬುರ್ಖಾ, ಹಿಜಾಬ್ ಧರಿಸಿ ಮಾಡಿದ ಯುವಕರ ಡ್ಯಾನ್ಸ್

ಅಜೀಜ್, ಆಕೆಯ ಬೆತ್ತಲೆ ಫೋಟೋಗಳನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದ, ಆಗಾಗ ಆಕೆಗೆ ಬೆತ್ತಲೆ ಫೋಟೋ ಕಳುಹಿಸುವಂತೆ, ಬೆತ್ತಲೆ ವಿಡಿಯೋ ಕಾಲ್ ಮಾಡುವಂತೆ, ಒತ್ತಾಯಿಸುತ್ತಿದ್ದ. ಕಳೆದ ಕೆಲವು ದಿನಗಳ ಹಿಂದೆ ಶಿಲ್ಪಾ ತನ್ನನ್ನು ಮದುವೆಯಾಗುವಂತೆ ಅಜೀಜ್  ಬಳಿ ಕೇಳಿದ್ರೆ ಆತ ಮತಾಂತರವಾಗುವಂತೆ ಒತ್ತಾಯ ಮಾಡಿದ್ದ.

ವಿಡಿಯೋ ವೈರಲ್​ ಮಾಡೋದಾಗಿ ಬೆದರಿಕೆ

ಕೊನೆ ಕೊನೆಗೆ ಮದುವೆ ಹಠ ಹಿಡಿದಾಗ ಮುಸ್ಲಿಂ ಧರ್ಮಕ್ಕೆ ಮತಾಂತರಕ್ಕೆ ಒತ್ತಾಯ ಮಾಡುತ್ತಿದ್ದ ಇದಕ್ಕೆ ಶಿಲ್ಪಾ ಒಪ್ಪದಿದ್ದಾಗ ಆಕೆ ಬೆತ್ತಲೆ ಫೋಟೋ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ ಬೆನ್ನಲ್ಲೆ ಶಿಲ್ಪಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಿರಂತರವಾಗಿ ಶಿಲ್ಪಾಳನ್ನು ದೈಹಿಕವಾಗಿ ಬಳಸಿಕೊಂಡಿದ್ದ ಅಜೀಜ್‌ಗೆ ಶಿಲ್ಪಾಳ ಪರಿಚಯಕ್ಕೂ ಮೊದಲೇ ಹಂಗಳೂರಿನ ಸಲ್ಮಾ (30) ಎಂಬ ಮುಸ್ಲಿಂ ಯುವತಿಯನ್ನು ಮದುವೆಯಾಗಿದ್ದ.

ಶಿಲ್ಪಾ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅಜೀಜ್ ಕುಟುಂಬ ಸಮೇತ ನಾಪತ್ತೆಯಾಗಿದ್ದನು. ಅಜೀಜ್ ಕುಟುಂಬ ಸಮೇತನಾಗಿ ಕೇರಳದ ಕಾಸರಗೋಡಿನಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಹೇಳಲಾಗಿತ್ತು. ಪತಿಯ ಕೃತ್ಯಕ್ಕೆ ಪತ್ನಿ ಸಲ್ಮಾ ಸಹ ಸಾಥ್ ನೀಡಿರುವ ಆರೋಪಗಳು ಕೇಳಿ ಬಂದಿವೆ.

ಅಣ್ಣನ ಮುಂದೆ ವಿಷಯ ಹೇಳಿದ್ದ ಶಿಲ್ಪಾ

ವಿಷ ಸೇವಿಸಿದ್ದ ಶಿಲ್ಪಾಳನ್ನು ಕುಟುಂಬಸ್ಥರು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಶಿಲ್ಪಾ ಮೃತರಾಗಿದ್ದರು. ಸಾಯುವ ಮುನ್ನ ಅಣ್ಣನಿಗೆ ತಾನು ಮಾಡಿರುವ ತಪ್ಪಿನ ಬಗ್ಗೆ ಹೇಳಿಕೊಂಡಿದ್ದರು.

ಇದನ್ನೂ ಓದಿ:  Hijab Row: ಹಿಜಾಬ್ ಧರಿಸಲು ಅನುಮತಿ ಕೋರಿ ಡಿಸಿ ಕಚೇರಿ ಮೆಟ್ಟಿಲೇರಿದ ವಿದ್ಯಾರ್ಥಿನಿಯರು

ಶಿಲ್ಪಾ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹ

ಸರ್ಕಾರ ಕೂಡ ಲವ್ ಜಿಹಾದ್ ತಡ ಕಾನೂನು ತರಬೇಕು ಜೊತೆಗೆ ಪ್ರಕರಣ ಸಿಐಡಿಗೆ ಕೊಡುವುದರ ಜೊತೆಗೆ ಶಿಲ್ಪಾ ಕುಟುಂಬಕ್ಕೆ10 ಲಕ್ಷ ಪರಿಹಾರ ಕೊಡಬೇಕು ಎಂದು ಆಗ್ರಹಿಸಿರುವ ಭಜರಂಗದಳ ಇದೊಂದು ಮತಾಂತರ ಮಾಡುವ ಬಹುದೊಡ್ಡ ಷಡ್ಯಂತ್ರ. ಇದೊಂದು ಲವ್ ಜಿಹಾದಿನ ವ್ಯವಸ್ಥಿತ ಸಂಚು ಎಂದು ಆರೋಪ ಮಾಡಿದೆ.
Published by:Mahmadrafik K
First published: