Love Jihad: ಆರೋಪಿಗೆ ಬಲೆ ಬೀಸಿದ ಪೊಲೀಸರು; ಕಾಸರಗೋಡಿನಲ್ಲಿ ಅಜೀಜ್ & ಸಲ್ಮಾಗಾಗಿ ಹುಡುಕಾಟ

ಶಿಲ್ಪಾ ಸಾವಿನ ಬೆನ್ನಲ್ಲೇ ಲವ್ ಜಿಹಾದ್ (Love Jihad) ಎಂದು ಆಕ್ರೋಶ ಹೊರಹಾಕಿರುವ ಹಿಂದೂ ಸಂಘಟನೆಗಳು ಶಿಲ್ಪಾ ಸಾವಿಗೆ ಕಾರಣರಾದ ಅಜೀಜ್ ಹಾಗೂ ಸಲ್ಮಾ ದಂಪತಿಯನ್ನ ಬಂಧಿಸುವಂತೆ 24 ಗಂಟೆಗಳ‌ ಗಡುವು ನೀಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಲವ್ ಸೆಕ್ಸ್ ದೋಖಾ ಗೆ ಶಿಲ್ಪಾ ದೇವಾಡಿಗ ಎಂಬ ಯುವತಿ (Young Girl) ಬಲಿಯಾಗಿದ್ದಾಳೆ.‌ ಶಿಲ್ಪಾ ಸಾವಿನ ಬೆನ್ನಲ್ಲೇ ಸಾವಿಗೆ ಕಾರಣರಾದ ಮುಸ್ಲಿಂ ದಂಪತಿಯನ್ನ (Muslim Couple) ಬಂಧಿಸುವಂತೆ ಹಿಂದೂ ಸಂಘಟನೆ (Hindu Organization) ಒತ್ತಾಯಿಸಿದೆ.‌ ಈ ಬಗ್ಗೆ ಆರೋಪಿಯ ಜಾಡು ಹಿಡಿದಿರುವ ಪೊಲೀಸರು (Police Investigation) ಪತ್ತೆ ಕಾರ್ಯ ಚುರುಕುಗೊಳಿಸಿದ್ದಾರೆ. ಹೌದು, ಶಿಲ್ಪಾ ಸಾವಿನ ಬೆನ್ನಲ್ಲೇ ಲವ್ ಜಿಹಾದ್ (Love Jihad) ಎಂದು ಆಕ್ರೋಶ ಹೊರಹಾಕಿರುವ ಹಿಂದೂ ಸಂಘಟನೆಗಳು ಶಿಲ್ಪಾ ಸಾವಿಗೆ ಕಾರಣರಾದ ಅಜೀಜ್ ಹಾಗೂ ಸಲ್ಮಾ ದಂಪತಿಯನ್ನ ಬಂಧಿಸುವಂತೆ 24 ಗಂಟೆಗಳ‌ ಗಡುವು ನೀಡಿದೆ. ‌

ಅಲ್ಲದೆ ಸರ್ಕಾರ ಕೂಡ ಲವ್ ಜಿಹಾದ್ ತಡ ಕಾನೂನು ತರಬೇಕು ಜೊತೆಗೆ ಪ್ರಕರಣ ಸಿಐಡಿಗೆ ಕೊಡುವುದರ ಜೊತೆಗೆ ಶಿಲ್ಪಾ ಕುಟುಂಬಕ್ಕೆ10 ಲಕ್ಷ ಪರಿಹಾರ ಕೊಡಬೇಕು ಎಂದು ಆಗ್ರಹಿಸಿರುವ ಭಜರಂಗದಳ ಇದೊಂದು ಮತಾಂತರ ಮಾಡುವ ಬಹುದೊಡ್ಡ ಷಡ್ಯಂತ್ರ. ಇದೊಂದು ಲವ್ ಜಿಹಾದಿನ ವ್ಯವಸ್ಥಿತ ಸಂಚು ಎಂದು ಆರೋಪ ಮಾಡಿದೆ.

ಇನ್ನು ಶಿಲ್ಪಾ ಅಜೀಜ್ ಅಕ್ರಮ ಸಂಪರ್ಕ ಕಣ್ಣಾರೆ ಕಂಡ ಸನ್ ವಿಜಯ್ ಪರ್ಲ್ ಫ್ಲಾಟ್  ನ ಮೂರನೇ ಮಹಡಿಯಲ್ಲಿರುವ ಅಜೀಜ್ ಪಕ್ಕದ ಮನೆಯ ನಿವಾಸಿ ವಿನುತಾ ಎಂಬ ಮಹಿಳೆ ನೋವನ್ನ ಹೊರಹಾಕಿದ್ದಾರೆ.

ಇದನ್ನೂ ಓದಿ:  Girl Suicide: ಮದುವೆ ಆಗಲು ಮತಾಂತರದ ಕಂಡಿಷನ್; ಲವ್ ಜಿಹಾದ್​ಗೆ ಯುವತಿ ಬಲಿ; ಆರೋಪಿ ಪರಾರಿ

ಶಿಲ್ಪಾ ಬಂದು ಹೋಗಿರೋದನ್ನು ಕಂಡಿದ್ದೇನೆ

ಶಿಲ್ಪಾ ಒಂದೆರಡು ಸಲ ಅಜೀಜ್ ಮನೆಗೆ ಬಂದು ಹೋಗಿರುವುದನ್ನ ನಾನು ನೋಡಿದ್ದೇನೆ. ಫೋಟೋದಲ್ಲಿರುವುದಕ್ಕಿಂತ ತುಂಬ ಸುಂದರವಾಗಿದ್ದಾಳೆ ಶಿಲ್ಪಾ. ಇಷ್ಟು ಚಂದದ ಹುಡುಗಿ ಅಜೀಜನ ಮನೆಗೆ ಹೋಗುವುದು ನೋಡಿ ಬೇಸರವಾಗಿತ್ತು.‌ ಶಿಲ್ಪಾಳದ್ದು ಸಣ್ಣ ವಯಸ್ಸು ಇನ್ನೂ ಚೆನ್ನಾಗಿ ಬಾಳಿ ಬದುಕಬೇಕಿತ್ತು. ಪ್ರತೀ ಹೆಣ್ಮಕ್ಕಳು ಪಾಠ ಕಲಿಯಬೇಕು.‌

ಇನ್ನು ಶಿಲ್ಪಾ ಗೇಟಿಂದ ಬಂದರೆ ಅಜೀಜ್ ಫ್ಲಾಟ್ ನ ಪಾರ್ಕಿಂಗ್ ಇಂದ ಬರುತ್ತಿದ್ದ. ಇಬ್ಬರು ಕದ್ದು ಮುಚ್ಚಿ ಬರುತ್ತಿದ್ದರು, ಅಜೀಜ್ ಮನೆಯಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿತ್ತು. ಸಂಜೆ ಹೊತ್ತಿಗೆ ಮುಸ್ಲಿಂ ಯುವಕರ ಕೂಟವನ್ನ ಕರೆದುಕೊಂಡು ಬರುತ್ತಿದ್ದ.‌

ಪತಿಯ ಪರವಾಗಿ ನಿಲ್ಲುತ್ತಿದ್ಳು ಸಲ್ಮಾ

ಓಮ್ನಿ ಕಾರಲ್ಲಿ ಬಂದು ಏನೇನೋ ಸಪ್ಲೈ ಮಾಡೋದನ್ನ ನೋಡಿದ್ದೇನೆ. ಇದನ್ನ ಪ್ರಶ್ನೆ ಮಾಡುತ್ತಿದ್ದ ನಮ್ಮ ಮೇಲೆ ತಿರುಗಿಬೀಳುತ್ತಿದ್ದ  ಬಗ್ಗೆ ಈ ಹಿಂದೆ ಹಲವು ಬಾರಿ ಪೊಲೀಸರಿಗೆ ದೂರು ನೀಡಿದ್ದೇನೆ. ಆದರೂ ಅಜೀಜ್ ಹಾಗೂ ಸಲ್ಮಾ ಬದಲಾಗಿಲ್ಲ. ಹೆಂಡತಿ ಇಲ್ಲದ ಸಮಯದಲ್ಲಿ ಮನೆಗೆ ಯುವತಿಯರನ್ನೆಲ್ಲ ಕರೆದುಕೊಂಡು ಬರುತ್ತಿದ್ದ ಅಜೀಜ್ ಬಗ್ಗೆ ಸಲ್ಮಾಳಿಗೆ ಮಾಹಿತಿ ನೀಡಿದ್ರೂ ಪತಿ ಪರವಾಗಿ ನಿಲ್ತಾಯಿದ್ಲು ಸಲ್ಮಾ.‌ ಬೆಳಗಿನ ಜಾವ 5 ಗಂಟೆ ಭಟ್ಕಳಕ್ಕೆ ಹೋಗುತ್ತಿದ್ದ ಮಧ್ಯರಾತ್ರಿ ಮನೆಗೆ ಬರುತ್ತಿದ್ದ. ಕೂಡಲೇ ಅಜೀಜ್ ಹಾಗೂ ಆತನ ಪತ್ನಿ ಸಲ್ಮಾಳನ್ನ ಬಂಧಿಸಬೇಕು ಎಂದು ವಿನುತಾ ಆಗ್ರಹಿಸಿದ್ದಾರೆ.

ಬಂಧನಕ್ಕೆ ಎರಡು ತಂಡಗಳ ರಚನೆ

ಇನ್ನು ಅಜೀಜ್ ಸಲ್ಮಾಳ ಬಂಧನಕ್ಕೆ ಬಲೆ ಬೀಸಿರುವ ಪೊಲೀಸರು ಎರಡು ತಂಡ‌ ರಚನೆ ಮಾಡಿದ್ದಾರೆ. ಈಗಾಗಲೇ ಒಂದು ತಂಡ ಕೇರಳದ ಕಾಸರಗೋಡಿಗೆ ಅಜೀಜ್ ಸಲ್ಮಾಳ‌ ಜಾಡನ್ನ ಹಿಡಿದು ಹೊರಟಿದೆ. ಶಿಲ್ಪಾ ಕುಟುಂಬಸ್ಥರು ಪ್ರೀತಿಸಿ ವಂಚನೆ ಮಾಡಿದ್ದಾನೆ ಅಂತ ಅಜೀಜ್ ಹಾಗೂ ಆತನ ಪತ್ನಿ ಮೇಲೆ ದೂರನ್ನ ದಾಖಲಿಸಿದ್ದಾರೆ.

ಇದನ್ನೂ ಓದಿ:  Firing: ಶಿಗ್ಗಾಂವಿಯಲ್ಲಿ ಮತ್ತೆ ಗುಂಡಿನ ಸದ್ದು, ಕರೆಂಟ್ ಹೋದ ಟೈಮ್​ನಲ್ಲಿ ಮಹಿಳೆ ಮೇಲೆ ಫೈರಿಂಗ್

ಒಟ್ಟಾರೆ ಲವ್ ಸೆಕ್ಸ್ ದೋಖಾ ಪ್ರತೀ ಭಾರಿ ನಡೆಯುತ್ತಿದ್ರೂ ಹದಿಹರೆಯದ ಯುವತಿಯರು ಇನ್ನೂ ಮೋಸ ಬಲೆಗೆ ಬೀಳ್ತಿರುವುದು ದುರ್ದೈವ.‌ ಮಾತಿಗೆ ಮರುಳಾಗಿ ಕುರುಡು ಪ್ರೀತಿಗೆ ಬಿದ್ದು ಜೀವನ ಹಾಳು ಮಾಡಿಕೊಳ್ಳುವ ಯುವತಿಯರು ಅದ್ಯಾವಾಗ ಎಚ್ಚೆತ್ತುಕೊಳ್ಳುತ್ತಾರೋ ದೇವರೇ ಬಲ್ಲ.
Published by:Mahmadrafik K
First published: