ಕೈತುಂಬ ಕೆಲಸ ನೀಡುವ ಕಾರ್ಪೋರೆಟ್ ಕೆಲಸ ಬಿಟ್ಟು ತನ್ನೂರನ್ನು ಬೆಳಗುತ್ತಿರುವ ಉಡುಪಿ ಎಂಬಿಎ ಪದವೀಧರೆ

ಇವರ ಹೆಸರು ಮಹಾಲಸ ಕಿಣಿ. ಉಡುಪಿ ಜಿಲ್ಲೆಯ ಮಣಿಪಾಲ ನಿವಾಸಿಯಾಗಿರುವ ಈಕೆ ಪ್ರತಿಷ್ಠಿತ ಕಾಲೇಜಿನಲ್ಲಿ ಎಂಬಿಎ ಮುಗಿಸಿ ಮುಂಬೈನಲ್ಲಿ ಉತ್ತಮ ಸಂಬಳ ಬರುವ ಉದ್ಯೋಗದಲ್ಲಿದ್ದರು. ಆದರೆ, ತನ್ನೂರಿನ ಉಡುಪಿ ಸೀರೆಯನ್ನು ಪ್ರಖ್ಯಾತಗೊಳಿಸಬೇಕು ಅಂತ ಪಣತೊಟ್ಟು ಕೆಲಸಕ್ಕೆ ರಿಸೈನ್ ಕೊಟ್ಟು ತನ್ನೂರಿಗೆ ಹಿಂದಿರುಗಿದ್ದಾರೆ.

ಮಹಾಲಸ

ಮಹಾಲಸ

  • Share this:
ಎಂಬಿಎ ಪದವಿ ಪಡೆದ ಈ ಯುವತಿಗೆ ಮುಂಬೈ‌ನಲ್ಲಿ ಕಾರ್ಪೋರೇಟ್ ಕಂಪೆನಿಯಲ್ಲಿ‌ ಕೈತುಂಬಾ ಸಂಬಳ ಬರುವ ಉದ್ಯೋಗ ಇತ್ತು. ಆದರೆ ತನ್ನೂರಿನ "ಉಡುಪಿ ಸೀರೆ" ಯನ್ನು ಉಳಿಸಿ ಬೆಳೆಸಬೇಕು ಅಂತ ಪಣತೊಟ್ಟಿರುವ ಯುವತಿ, ಮಗ್ಗದ ಸೀರೆಗೆ ಮಾಡರ್ನ್ ವಿನ್ಯಾಸ ರೂಪಿಸಿ, ಆನ್​​ಲೈನ್ನಲ್ಲಿ ಗ್ರಾಹಕರನ್ನು ಸೆಳೆಯುತ್ತಿದ್ದಾರೆ. ಇಷ್ಟೇ ಅಲ್ಲ ತನ್ನೂರಿನ ನೇಕಾರನ್ನು ಸೇರಿಸಿ ಪಾರಂಪರಿಕ ಉಡುಪಿ ಸೀರೆಗೆ ಮಾಡರ್ನ್ ಟಚ್ ನೀಡುತ್ತಿದ್ದಾರೆ.  

ಇವರ ಹೆಸರು ಮಹಾಲಸ ಕಿಣಿ. ಉಡುಪಿ ಜಿಲ್ಲೆಯ ಮಣಿಪಾಲ ನಿವಾಸಿಯಾಗಿರುವ ಈಕೆ ಪ್ರತಿಷ್ಠಿತ ಕಾಲೇಜಿನಲ್ಲಿ ಎಂಬಿಎ ಮುಗಿಸಿ ಮುಂಬೈನಲ್ಲಿ ಉತ್ತಮ ಸಂಬಳ ಬರುವ ಉದ್ಯೋಗದಲ್ಲಿದ್ದರು. ಆದರೆ, ತನ್ನೂರಿನ ಉಡುಪಿ ಸೀರೆಯನ್ನು ಪ್ರಖ್ಯಾತಗೊಳಿಸಬೇಕು ಅಂತ ಪಣತೊಟ್ಟು ಕೆಲಸಕ್ಕೆ ರಿಸೈನ್ ಮಾಡಿ ತನ್ನೂರಿಗೆ ಹಿಂದಿರುಗಿದ್ದಾರೆ.

ಊರಿನಲ್ಲೇ ಕೈ ಮಗ್ಗದ ಉಡುಪಿ ಸೀರೆಯ ವಿನ್ಯಾಸ ರೂಪಿಸಿ, ನೇಯ್ಗೆ ಕಲಿತು ಆಕರ್ಷಕವಾದ ಸೀರೆಗಳನ್ನು ತಯಾರು ಮಾಡಿಸುತ್ತಿದ್ದಾರೆ. ಹೊಸ ಲೈಫ್ ಸ್ಟೈಲ್ ನ ಯುವತಿಯರನ್ನು ಉಡುಪಿ ಸೀರೆಗಳತ್ತ ಆಕರ್ಷಿಸುವ ನಿಟ್ಟಿನಲ್ಲಿ ಮಾಡರ್ನ್ ಆದ ಹೊಸ ಹೊಸ ವಿನ್ಯಾಸವನ್ನು ರೂಪಿಸುತ್ತಿದ್ದಾರೆ‌‌. ಅದನ್ನು ಉಡುಪಿ ಪ್ರಾಥಮಿಕ ನೇಕಾರರ ಸಂಘ, ಶಿವಳ್ಳಿ ಪ್ರಾಥಮಿಕ ನೇಕಾರರ ಸಂಘ ಇವರಿಗೆ ನೀಡಿ, ಆಧುನಿಕ ಸ್ಪರ್ಶ ಇರುವ ಉಡುಪಿ ಸೀರೆ ತಯಾರು ಮಾಡಿಸುತ್ತಿದ್ದಾರೆ. ನಂತರ ಈ ಸೀರೆಗಳನ್ನು ಆನ್ಲೈನ್ ‌ನಲ್ಲಿ ರಾಷ್ಟ್ರ ಮಟ್ಟದಲ್ಲಿ ಮಾರಾಟ ಮಾಡುತ್ತಿದ್ದಾರೆ. ಹೊಸ ವಿನ್ಯಾಸದಿಂದ ಸೀಮಿತ ಮಾರುಕಟ್ಟೆ ಇರುವ ಉಡುಪಿ ಸೀರೆಗೆ ಮುಂಬೈ ಸೇರಿದಂತೆ ವಿವಿಧ ರಾಜ್ಯಗಳಿಂದಲೂ ಬೇಡಿಕೆ ಬರುತ್ತಿದೆ ಎನ್ನುತ್ತಾರೆ ಮಹಾಲಸ ಕಿಣಿ.

ಉಡುಪಿ ಸೀರೆ  ಕಡುಬೇಸಿಗೆಗೆ ಹೇಳಿ ಮಾಡಿಸಿದ ಬ್ರ್ಯಾಂಡ್, ಆದ್ರೆ ಇದನ್ನು ನೇಯುವ ನೇಕಾರರ ಕಷ್ಟವನ್ನು ಮಾತ್ರ ಯಾರೂ ಕೇಳೋರಿಲ್ಲ. ಯಕ್ಷಗಾನ ಹೇಗೆ ಕರಾವಳಿಯ ಲಾಂಛನವೋ ಹಾಗೆಯೇ ಒಂದು ಕಾಲದಲ್ಲಿ ಉಡುಪಿ ಸೀರೆಯನ್ನೂ ಕರಾವಳಿಯ ಸಿಂಬಲ್ ಅಂತ ಪರಿಗಣಿಸಲಾಗಿತ್ತು. ಯಕ್ಷಗಾನದಲ್ಲಿ ಬಳಸುವ ಕಲರ್ ಫುಲ್ ಬಟ್ಟೆಗಳು ಕರಾವಳಿಯ ಕೈಮಗ್ಗದ ಜಾಣ್ಮೆಗೆ ಸಾಕ್ಷಿ. ಶಿವರಾಮ ಕಾರಂತರಂತಹ ಹಿರಿಯ ಚೇತನಗಳು ಈ ಮಾದರಿ ಬಟ್ಟೆಯನ್ನು ಯಕ್ಷಗಾನದ ಮೂಲಕ ವಿದೇಶದಲ್ಲೂ ಜನಪ್ರಿಯಗೊಳಿಸಿದ್ದರು.

ಆದರೆ ಈಗೀಗ ಸೀರೆ ತೊಡುವವರೇ ಕಡಿಮೆಯಾಗುತ್ತಿದ್ದಾರೆ. ಹೀಗಾಗಿ ಮಹಾಲಸ ಕಿಣಿ ಯವರು ಹೊಸ ಹೊಸ ವಿನ್ಯಾಸ ರೂಪಿಸಿ ಮಾಡರ್ನ್ ಶೈಲಿಯಲ್ಲಿ ತಯಾರು ಮಾಡುವ ಕಾರಣ ಈಗೀನ ಯುವತಿಯರಿಗೂ ಇಷ್ಟವಾಗಿ ಬೇಡಿಕೆ ಹೆಚ್ಚಾಗುತ್ತಿದೆ. ಇದರಿಂದ ಪಾರಂಪರಿಕ ನೇಕಾರಿಗೂ ನೇರವಾಗಿದೆ.

ಸಿಟಿ ಲೈಫ್ ಮಾರು ಹೋಗಿ ನಗರಗಳತ್ತ ಮುಖ ಮಾಡುತ್ತಿರುವ ಇಂದಿನ ಕಾಲಘಟ್ಟದಲ್ಲಿ ತನ್ನೂರಿನ ಉಡುಪಿ ಸೀರೆಯನ್ನು ಆನ್ಲೈನ್ ವ್ಯವಹಾರ ಮಾಡುದರ ಜೊತೆಗೆ ನೇಕಾರ ವರ್ಗಕ್ಕೂ ನೆರವಾಗುತ್ತಿರುವುದು ಉತ್ತಮ ಬೆಳವಣಿಗೆಯೇ ಸರಿ.
Published by:Rajesh Duggumane
First published: