ಚಿಂತಾಜನಕ ಸ್ಥಿತಿಯಲ್ಲಿದ್ದ ಯುವತಿ ಸಾವು; ಆಸ್ಪತ್ರೆಗೆ ದಾಖಲಿಸಿದ ಯುವಕ ನಾಪತ್ತೆ

ಯುವತಿಗೆ ಪರಿಚಯಸ್ಥ ಯುವಕನೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಆತನ ನಾಪತ್ತೆಯಾಗಿದ್ದು, ಸಂಪರ್ಕಕ್ಕೆ ಸಿಗುತ್ತಿಲ್ಲ. ಇದರಿಂದ ಪ್ರಕರಣದ ಬಗ್ಗೆ ಸಾಕಷ್ಟು ಅನುಮಾನ ಮೂಡಿದೆ

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ಉಡುಪಿ (ಅ.25): ಮಾಡೆಲಿಂಗ್​ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ ಯುವತಿಯೊಬ್ಬಳು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಬಳಿಕ ಸಾವನ್ನಪ್ಪಿರುವ ಘಟನೆ ನಗರದ ಗಾಂಧಿ ಆಸ್ಪತ್ರೆಯಲ್ಲಿ ನಡೆದಿದೆ. ಯುವತಿಗೆ ಪರಿಚಯಸ್ಥ ಯುವಕನೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಆತನ ನಾಪತ್ತೆಯಾಗಿದ್ದು, ಸಂಪರ್ಕಕ್ಕೆ ಸಿಗುತ್ತಿಲ್ಲ. ಇದರಿಂದ ಪ್ರಕರಣದ ಬಗ್ಗೆ ಸಾಕಷ್ಟು ಅನುಮಾನ ಮೂಡಿದೆ. ಅಲ್ಲದೇ ಯುವತಿ ಕುತ್ತಿಗೆಯಲ್ಲಿ ಕಲೆಗಳು ಕಂಡು ಬಂದಿದ್ದು, ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಬಗ್ಗೆ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ. ಇಲ್ಲಿನ ಕುಕ್ಕೆಹಳ್ಳಿ ನಿವಾಸಿ ರಕ್ಷಿತಾ ನಾಯಕ್ (19) ಸಾವನ್ನಪ್ಪಿದ ಯುವತಿ. ಮಣಿಪಾಲದ ಗ್ರೂಪ್ ಆಪ್‌ ಮ್ಯಾನೇಜ್ ಮೆಂಟ್ ಕಾಲೇಜಿನಲ್ಲಿ ದ್ವಿತೀಯ ಪದವಿ ಓದುತ್ತಿದ್ದ ಯುವತಿ ಮಾಡೆಲಿಂಗ್​ ಕ್ಷೇತ್ರದಲ್ಲಿ ಕೂಡ ಗುರುತಿಸಿಕೊಂಡಿದ್ದಳು. 

ಪ್ರಶಾಂತ್​ ಕುಂದರ್​ ಎಂಬಾಂತ ಈಕೆಯನ್ನು ಆಸ್ಪತ್ರೆಗೆ ದಾಖಲಿಸಿದ ವ್ಯಕ್ತಿ. ರಕ್ಷಿತಾ ಹಾಗೂ ಪ್ರಶಾಂತ್​ ಇಬ್ಬರು ಸ್ನೇಹಿತರಾಗಿದ್ದರು. ಈತ ಫರ್ನೀಚರ್ ಅಂಗಡಿಯಗಲ್ಲಿ ಡಿಸೈನರ್ ಕಂ ಸೇಲ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಬೈಂದೂರಿನ ಜಡ್ಕಲ್ ಮೂಲದ ಈತ ಯುವತಿ ಜೊತೆ ಸಲಿಗೆಯ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಇನ್ನು ಯುವತಿ ಮನೆಗೆ ಕರೆ ಮಾಡಿದ ಈತ ವಿಷಯ ತಿಳಿಸಿದ್ದಾನೆ ಎನ್ನಲಾಗಿದೆ. ಹಿರಿಯಡ್ಕ ಮೂಲದ ರಕ್ಷಿತಾ ವಿದ್ಯಾಭ್ಯಾಸದ ಸಲುವಾಗಿ ಉಡುಪಿಯಲ್ಲಿ ವಾಸಿಸುತ್ತಿದ್ದಳು. ತಂದೆ-ತಾಯಿ ಜೊತೆ ಹೆಚ್ಚಿನ ಸಂಪರ್ಕ ಹೊಂದಿರಲಿಲ್ಲ ಎಂದು ತಿಳಿದು ಬಂದಿದೆ.

ಇದನ್ನು ಓದಿ: ಸಾಂಪ್ರದಾಯಿಕವಾಗಿ ನೇರವೇರಿದ ಆಯುಧಪೂಜೆ; ಜಂಬೂ ಸವಾರಿಗೆ ಭರದ ಸಿದ್ಧತೆ

ಯುವತಿಯನ್ನು ಚಿಂತಾಜನಕ ಸ್ಥಿತಿಯಲ್ಲಿ ಕರೆತಂದ ಈತನ ಬಗ್ಗೆ ಕೂಡ ಸಾಕಷ್ಟು ಅನುಮಾನ ಮೂಡಿದೆ. ಕಾರಣ, ಆಕೆಯನ್ನು ಆಸ್ಪತ್ರೆಗೆ ಕರೆತಂದು ಸೇರಿದ ಈತ ರಕ್ಷಿತಾ ಪೋಷಕರಿಗೆ ಕರೆ ಮಾಡಿ ತಿಳಿಸಿದ್ದಾನೆ. ಬಳಿಕ ನಾಪತ್ತೆಯಾಗಿದೆ. ಅಲ್ಲದೇ ಯುವತಿ ಕುತ್ತಿಗೆಯಲ್ಲಿ ರಕ್ತ ಹೆಪ್ಪುಗಟ್ಟಿರುವುದರಿಂದ ಇದು ಕೊಲೆಯಾಗಿದೆಯಾ ಎಂಬ ಅನುಮಾನವನ್ನು ಹೆಚ್ಚಿಸಿದೆ. ಈ ಕುರಿತು ಪ್ರಕರಣ ದಾಖಲಿಸಿರುವ ಪೊಲೀಸರು ಈತನ ಪತ್ತೆಗಾಗಿ ಹುಡುಕಾಟ ಆರಂಭಿಸಿದ್ದಾರೆ.
Published by:Seema R
First published: