ಬಾಂಬೆಯಲ್ಲಿ ಕುಳಿತು‌ ಡಾನ್‌‌ ತರ ಉಡುಪಿ ಅಧಿಕಾರಿಗಳನ್ನು ಹೆದರಿಸಿದರೆ ಜೈಲೇ ಗತಿ; ಜಿಲ್ಲಾಧಿಕಾರಿ‌ ಜಗದೀಶ್ ಎಚ್ಚರಿಕೆ

ಊಟ, ತಿಂಡಿ ಬಿಟ್ಟು ಜಿಲ್ಲೆಯ ಜನರ ಕಾಳಜಿಗಾಗಿ ದುಡಿಯುತ್ತಿದ್ದೇವೆ. ಹೀಗಿರುವಾಗ ಕೋವಿಡ್ ಯೋಧರಿಗೆ ಮಾನಸಿಕ ಕಿರುಕುಳ ನೀಡುವ ವ್ಯಕ್ತಿ ಎಷ್ಟೇ ದೊಡ್ಡವನಾಗಿರಲಿ, ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದು ನಿಶ್ಚಯ ಎಂದು ಉಡುಪಿ ಜಿಲ್ಲಾಧಿಕಾರಿ ಜಗದೀಶ್‌ ಗುಡುಗಿದ್ದಾರೆ.

news18-kannada
Updated:May 23, 2020, 2:17 PM IST
ಬಾಂಬೆಯಲ್ಲಿ ಕುಳಿತು‌ ಡಾನ್‌‌ ತರ ಉಡುಪಿ ಅಧಿಕಾರಿಗಳನ್ನು ಹೆದರಿಸಿದರೆ ಜೈಲೇ ಗತಿ; ಜಿಲ್ಲಾಧಿಕಾರಿ‌ ಜಗದೀಶ್ ಎಚ್ಚರಿಕೆ
ಉಡುಪಿ ಜಿಲ್ಲಾಧಿಕಾರಿ ಜಗದೀಶ್.
  • Share this:
ಉಡುಪಿ (ಮೇ 23); ಲಾಕ್‌ಡೌನ್ ಸಂದರ್ಭದಲ್ಲಿ ಮುಂಬಯಿಯಲ್ಲಿ ಕುಳಿತು ನಮಗೆ ಜಬರ್ದಸ್ತಿನಿಂದ ಕರೆ ಮಾಡುವುದು, ಫೋನ್ ಮಾಡಿ ಅಧಿಕಾರಿಗಳನ್ನು ಹೆದರಿಸುವ ಆಟ ಇನ್ನೂ ಉಡುಪಿ ಜಿಲ್ಲಾಡಳಿತದ ಮುಂದೆ ನಡೆಯೋದಿಲ್ಲ. ಅಂತಹದ್ದೇನಾದರೂ ಕಂಡು ಬಂದರೆ ಕಿಡಿಗೇಡಿಗಳನ್ನು ಜೈಲಿಗೆ ಅಟ್ಟಲಾಗುವುದು ಎಂದು ಜಿಲ್ಲಾಧಿಕಾರಿ ಜಗದೀಶ್‌ ಎಚ್ಚರಿಕೆ ನೀಡಿದ್ದಾರೆ.

ಕರಾವಳಿ ಭಾಗದಲ್ಲಿ ಇತ್ತೀಚೆಗೆ ಪುಡಿ ರೌಡಿಗಳು ಅಧಿಕಾರಿಗಳಿಗೆ ಕರೆ ಮಾಡಿ ಬೆದರಿಕೆ ಹಾಕುವುದು ಸಾಮಾನ್ಯವಾಗಿದೆ. ಈ ಕುರಿತು ಮಾತನಾಡಿರುವ ಜಿಲ್ಲಾಧಿಕಾರಿ, "ಕೆಲವು ಕಿಡಿಗೇಡಿಗಳು ಸುಖಾ ಸುಮ್ಮನೆ ಸಣ್ಣಪುಟ್ಟ ಕಾರಣಗಳಿಗೂ ಕರೆ ಮಾಡುತ್ತಾರೆ.‌ ಕರೆ ಮಾಡುವುದು ಮಾತ್ರವಲ್ಲದೇ ಆ ಸಂಭಾಷಣೆಯ ಆಡಿಯೋಗಳನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ ಲೋಡ್ ಮಾಡಿ ವೈರಲ್ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.‌

ಹೀಗೆ ಫೋನ್ ಸಂಭಾಷಣೆಗಳನ್ನು ರೆಕಾರ್ಡ್ ಮಾಡಿ ವೈರಲ್‌ ಮಾಡುವ ಕೆಲಸ ಇವತ್ತಿಗೆ ಕೊನೆಯಾಗಬೇಕು. ನಾಳೆಯಿಂದ ಯಾರಾದರೂ ಹೀಗೆ ಮಾಡಿದರೆ ಅಂತಹ ವ್ಯಕ್ತಿಗಳನ್ನು ಮುಲಾಜಿಲ್ಲದೆ ಜೈಲಿಗಟ್ಟುತ್ತೇನೆ" ಎಂದು ಕಿಡಿಕಾರಿದ್ದಾರೆ.

"ಬಾಂಬೆಯಲ್ಲಿ ಕುಳಿತು ಡಾನ್‌ ರೀತಿಯಲ್ಲಿ ಮಾತಾಡಿದರೆ ನಾವ್ಯಾರು ಹೆದರುವುದಿಲ್ಲ. ಫೋನ್ ಮಾಡಿ ಅಧಿಕಾರಿಗಳನ್ನು ಹೆದರಿಸುವ ಆಟ ಉಡುಪಿ ಜಿಲ್ಲಾಡಳಿತದ ಮುಂದೆ ನಡೆಯೋದಿಲ್ಲ. ಉಡುಪಿ ಜಿಲ್ಲೆಯ ಎಲ್ಲಾ ಅಧಿಕಾರಿ ವರ್ಗದವರು, ವೈದ್ಯಕೀಯ ಸಿಬ್ಬಂದಿಗಳೂ ಸೇರಿದಂತೆ ನಾವೆಲ್ಲರೂ ಕಳೆದ ಮೂರು ತಿಂಗಳಿಂದ ರಾತ್ರಿ ಹಗಲು ಕೆಲಸ ಮಾಡುತ್ತಿದ್ದೇವೆ.

ಊಟ, ತಿಂಡಿ ಬಿಟ್ಟು ಜಿಲ್ಲೆಯ ಜನರ ಕಾಳಜಿಗಾಗಿ ದುಡಿಯುತ್ತಿದ್ದೇವೆ. ಹೀಗಿರುವಾಗ ಕೋವಿಡ್ ಯೋಧರಿಗೆ ಮಾನಸಿಕ ಕಿರುಕುಳ ನೀಡುವ ವ್ಯಕ್ತಿ ಎಷ್ಟೇ ದೊಡ್ಡವನಾಗಿರಲಿ, ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದು ನಿಶ್ಚಯ. ಹಾಗೆಯೇ ಮೊಸರಲ್ಲಿ ಕಲ್ಲು ಹುಡುಕುವವರನ್ನು ಜಿಲ್ಲಾಡಳಿತ ಸುಮ್ಮನೆ ಬಿಡುವುದಿಲ್ಲ" ಎಂದು ಜಗದೀಶ್ ತಿಳಿಸಿದ್ದಾರೆ.

ಇದನ್ನೂ ಓದಿ : ರಾಜ್ಯದಲ್ಲಿ ಮತ್ತೆ ಹೊಸ ದಾಖಲೆ: 1939ಕ್ಕೆ ಏರಿದ ಕೊರೋನಾ ಪ್ರಕರಣ
First published:May 23, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading