ಬಡ ಕೂಲಿಕಾರ್ಮಿಕನ ಹೃದಯ ಶ್ರೀಮಂತಿಕೆ; 70 ಕುಟುಂಬಕ್ಕೆ ಸಹಾಯ

ಉಡುಪಿಯಲ್ಲಿ ಕೂಲಿಕಾರ್ಮಿಕನ ಹೃದಯ ಶ್ರೀಮಂತಿಕೆಕೋವಿಡ್ ಸಂಕಷ್ಟದ ನಡುವೆ ಕಾರ್ಮಿಕನ ಒಂದೊಳ್ಳೆ ಕೆಲಸತನಗಿಂತ ಹೀನ ಸ್ಥಿತಿಯಲ್ಲಿರುವ ಎಪ್ಪತ್ತು ಕುಟುಂಬಕ?

ಕೃಷ್ಣ

ಕೃಷ್ಣ

  • Share this:
ಉಡುಪಿ (ಜೂ. 14): ಒಂದು ಹೊತ್ತಿನ ಅನ್ನದ ಮಹತ್ವ ಹಸಿದವನಿಗೆ ಗೊತ್ತು. ಅದರಲ್ಲೂ  ಮಹಾಮಾರಿ ಕೊರೋನಾ ಬಡವರನ್ನು ಮತ್ತಷ್ಟು ಕಷ್ಟಕ್ಕೆ ಸಿಲುಕಿಸಿದೆ. ಈ ಸಮಯದಲ್ಲಿ ಉಳ್ಳವರು ಫುಡ್ ಕಿಟ್, ಊಟ ನೀಡುವ ಮೂಲಕ ಬಡವರಿಗೆ ಆಸರೆಯಾಗುವ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಸಂಕಷ್ಟದ ಕಾಲದಲ್ಲಿ ಉಡುಪಿಯ ಬಡ ಕೂಲಿ ಕಾರ್ಮಿಕರೊಬ್ಬರು ಇತರರ ಸಹಾಯಕ್ಕೆ ನಿಲ್ಲುವ ಮೂಲಕ ಔದರ್ಯ ಮೆರೆದಿದ್ದಾರೆ.  ತನಗಿಂತ ಹೀನ ಸ್ಥಿತಿಯಲ್ಲಿರುವ ಎಪ್ಪತ್ತು ಕುಟುಂಬಕ್ಕೆ ಅನ್ನ ನೀಡುವ ಮಹತ್ಕಾರ್ಯ ಮಾಡಿದ್ದಾರೆ. ಸಂದಿಗ್ಧ ಸ್ಥಿತಿಯಲ್ಲಿಯೂ ಇತರರಿಗೆ ಆಸರೆಯಾಗುವ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.  ಇವರು ಉಡುಪಿ ತಾಲೂಕಿ‌ನ ಅಂಬಲಪಾಡಿ ಗ್ರಾಮದ ನಿವಾಸಿ ಕೃಷ್ಣ ಈ ಕಾರ್ಯ ನಡೆಸಿರುವ ವ್ಯಕ್ತಿ.  ಕಿಟ್ಟ ಎಂದು ಜನರಿಂದ ಪ್ರೀತಿಯಿಂದ ಕರೆಯಲ್ಪಡುವ  ಇವರು ವೃತ್ತಿ ಕೂಲಿ ಕೆಲಸ, ಮರ ಕಡಿಯುವುದು. ಮರದ ಗೆಲ್ಲು ಜಾರಿಸುವುದನ್ನು ಮಾಡುತ್ತಾರೆ. 

ಕೃಷ್ಣ ಬೆವರು ಸುರಿಸಿ ಸಂಪಾದಿಸಿದ ಸುಮಾರು 70 ಸಾವಿರ ರೂಪಾಯಿಯನ್ನು ದಾನ ಮಾಡಿದ್ದಾರೆ. ಅಕ್ಕಿ ಬೇಳೆ ಉಪ್ಪು ಸಕ್ಕರೆ ಚಹಾ ಕುಡಿ ಎಲೆ-ಅಡಿಕೆ ಮತ್ತಿತರ ಅಗತ್ಯ ವಸ್ತುಗಳನ್ನು 70 ಕುಟುಂಬಗಳಿಗೆ ಕೊಟ್ಟಿದ್ದಾರೆ.

ಕೃಷ್ಣ ಆರ್ಥಿಕವಾಗಿ ಶ್ರೀಮಂತನಲ್ಲ. ಹೆಚ್ಚಿನ ಶ್ರೀಮಂತರಿಗೆ ಇಲ್ಲದ ಹೃದಯ ಶ್ರೀಮಂತಿಕೆ ಇವರಿಗೆ ಇದೆ. ನಾನು ಚಿಕ್ಕಂದಿನಲ್ಲಿ ಅನುಭವಿಸಿದ ಕಷ್ಟ ಏನು ಎಂಬುದು ಮರೆಯದ ಅವರು, ಉಡುಪಿ ಸುತ್ತಲ ಐದಾರು ಗ್ರಾಮದ ಕಡುಬಡವರನ್ನು ಗುರುತಿಸಿ ಎಲ್ಲರಿಗೂ ದಿನಸಿ ಕಿಟ್ ಗಳನ್ನು ಕೊಟ್ಟಿದ್ದಾರೆ.

ಇದನ್ನು ಓದಿ: ಸೋಂಕಿತ ಕುಟುಂಬಗಳಿಂದ ಹಾಲು ಖರೀದಿಗೆ ಡೈರಿಗಳ ನಿರಾಕರಣೆ: ಸಂಕಷ್ಟದಲ್ಲಿ ಹೈನುಗಾರರು

ಕಳೆದ ಒಂದೆರಡು ವರ್ಷ ಸಂಪಾದಿಸಿದ ಕೂಲಿ ಹಣದಲ್ಲಿ ಪ್ರತಿದಿನ ಪ್ರತ್ಯೇಕವಾಗಿ ಕೂಡಿಡುತ್ತಿದ್ದರು. ಕೊರೋನಾ ಎರಡನೇ ಅಲೆಯಲ್ಲಿ ಜನರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದನ್ನು ಕಂಡು ಕರಗಿದ ಕೃಷ್ಣ ಎಲ್ಲವನ್ನೂ ದಾನ ಮಾಡಿದ್ದಾರೆ. ಕೃಷ್ಣನ ಈ  ಸಮಾಜಸೇವೆಗೆ ಮತ್ತೊಬ್ಬ ಸಮಾಜಸೇವಕ ವಿಶು ಶೆಟ್ಟಿ ಅಂಬಲ್ಪಾಡಿ ಪ್ರೇರಣೆಯಂತೆ. ವಿಶು ಅವರ ನಿರಂತರ ಜನಸೇವೆಯಿಂದ ಉತ್ತೇಜಿತರಾಗಿ ಈ ಕೆಲಸ ಮಾಡಿದ್ದಾರೆ. ಕಿಟ್ಟನಂತೆ ಎಲ್ಲರೂ ಆಲೋಚನೆ ಮಾಡಿದರೆ ಪಕ್ಕದ ಮನೆ ಬಡವರು ಉಪವಾಸ ಇರಬೇಕಾಗಿಲ್ಲ.

ಒಂದು ಕಡೆ ಉಳ್ಳವರು ಶ್ರೀಮಂತರು ತಮ್ಮ ಬಳಿ ಎಷ್ಟೇ ಹಣವಿದ್ದರೂ ಮತ್ತೊಬ್ಬರಿಗೆ ಸಹಾಯ ಹಸ್ತ ಚಾಚದ ಈ ಕಾಲಘಟ್ಟದಲ್ಲಿ ಇಷ್ಟು ಹೃದಯ ವೈಶಾಲ್ಯ ಮೆರೆದಿರುವ ಇವರ ಕಾರ್ಯಕ್ಕೆ ಎಲ್ಲೆಡ ಮೆಚ್ಚುಗೆ ವ್ಯಕ್ತವಾಗಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
Published by:Seema R
First published: