ಮತ್ತೆ ಉಡುಪಿ ಕಾಲೇಜಿನಲ್ಲಿ Hijab ಜಟಾಪಟಿ.. ಪ್ರಾಯೋಗಿಕ ಪರೀಕ್ಷೆಗೆ ಪ್ರವೇಶ ನಿರಾಕರಣೆ

5 ನಿಮಿಷದಲ್ಲಿ ಜಾಗ ಖಾಲಿ ಮಾಡದಿದ್ದರೆ, ಪೊಲೀಸರಿಗೆ ದೂರು ನೀಡುವುದಾಗಿ ಹೆದರಿಸಿದರು. ಅಂದುಕೊಂಡಂತೆ ನಡೆದಿದ್ದರೆ ನಾವು ಲ್ಯಾಬ್​​​ ಪರೀಕ್ಷೆ ಬರೆದು ಮುಗಿಸಬೇಕಿತ್ತು. ಹಿಜಾಬ್ ಕುರಿತಾದ ದ್ವೇಷದಿಂದ ಈ ಪರಿಸ್ಥಿತಿ ನಮಗೆ ಬಂದೊದಗಿದೆ ಎಂದು ವಿದ್ಯಾರ್ಥಿನಿ ಟ್ವೀಟ್​​ ಮಾಡಿದ್ದಾರೆ.

ವಿದ್ಯಾರ್ಥಿನಿಯ ಪ್ರತಿಭಟನೆ (ಫೈಲ್​​ ಫೋಟೋ)

ವಿದ್ಯಾರ್ಥಿನಿಯ ಪ್ರತಿಭಟನೆ (ಫೈಲ್​​ ಫೋಟೋ)

  • Share this:
ಉಡುಪಿ: ರಾಜ್ಯದಲ್ಲಿ ಹಿಜಾಬ್​​ ವಿವಾದ (Hijab Controversy) ತಣ್ಣಗಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (Government Pre University College for Girls in Udupi) ಪ್ರಾಯೋಗಿಕ ಪರೀಕ್ಷೆ (Practical Exam) ಆರಂಭವಾಗುತ್ತಿದ್ದಂತೆಯೇ ಪರೀಕ್ಷೆ ಮುಂದೂಡುವಂತೆ ಕೋರಿ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಇಂದು ಆಗ್ರಹಿಸಿದರು. ಹಿಜಾಬ್ ಧರಿಸಿ ಕ್ಯಾಂಪಸ್‌ಗೆ ಆಗಮಿಸಿದ್ದವರಿಗೆ , ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗಲು ಕಾಲೇಜು ಅಧಿಕಾರಿಗಳು ಅನುಮತಿ ನಿರಾಕರಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಟ್ವೀಟ್​​ ಮೂಲಕ ವಿದ್ಯಾರ್ಥಿನಿ ಕಾಲೇಜಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಇಂದು ನಮಗೆ ಅಂತಿಮ ಪ್ರಾಕ್ಟಿಕಲ್ ಪರೀಕ್ಷೆ ಇತ್ತು. ನಾವು ವಿಜ್ಞಾನದ ರೆಕಾರ್ಡ್ ಬುಕ್ ಪೂರ್ಣಗೊಳಿಸಿದ್ದೇನೆ. ಅಪಾರ ನಿರೀಕ್ಷೆಯೊಂದಿಗೆ ನಾವು ಪರೀಕ್ಷೆ ಬರೆಯಲು ಕಾಲೇಜಿಗೆ ಹೋಗಿದ್ದೆವು. ಆದರೆ ನಮ್ಮ ಪ್ರಾಂಶುಪಾಲರು ನಮಗೆ ಪರೀಕ್ಷೆ ಬರೆಯುವ ಅವಕಾಶ ಕೊಡಲಿಲ್ಲ ಎಂದು ದೂರಿದ್ದಾರೆ.

ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾದ ಟ್ವೀಟ್​​

5 ನಿಮಿಷದಲ್ಲಿ ಜಾಗ ಖಾಲಿ ಮಾಡದಿದ್ದರೆ, ಪೊಲೀಸರಿಗೆ ದೂರು ನೀಡುವುದಾಗಿ ಹೆದರಿಸಿದರು. ಅಂದುಕೊಂಡಂತೆ ನಡೆದಿದ್ದರೆ ನಾವು ಲ್ಯಾಬ್​​​ ಪರೀಕ್ಷೆ ಬರೆದು ಮುಗಿಸಬೇಕಿತ್ತು. ಹಿಜಾಬ್ ಕುರಿತಾದ ದ್ವೇಷದಿಂದ ಈ ಪರಿಸ್ಥಿತಿ ನಮಗೆ ಬಂದೊದಗಿದೆ ಎಂದು ಟ್ವೀಟ್​​ ಮಾಡಿದ್ದಾಳೆ. ಈ ಟ್ವೀಟನ್ನು ಸಿಎಂ ಬೊಮ್ಮಾಯಿ, ಸಿದ್ದರಾಮಯ್ಯ, ಡಿಜಿಪಿ, ಉಡುಪಿ ಡಿಸಿ, ಉಡುಪಿ ಎಸ್ ಪಿ ಗೆ ಟ್ಯಾಗ್ ಮಾಡಲಾಗಿದೆ.

ಇದನ್ನೂ ಓದಿ: Court Case: ತವರಿನ ಆಸ್ತಿಯಲ್ಲಿ ಪಾಲು ಕೇಳುವ ಹೆಣ್ಣುಮಕ್ಕಳು ತಮ್ಮ ಮದುವೆಯ ವರದಕ್ಷಿಣೆಯನ್ನೂ ಉಲ್ಲೇಖಿಸಬೇಕೇ?

ಹಿಜಾಬ್ ನಿಷೇಧದ ಕುರಿತು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಆರು ಮುಸ್ಲಿಂ ವಿದ್ಯಾರ್ಥಿಗಳಲ್ಲಿ 12 ನೇ ತರಗತಿಯ ವಿಜ್ಞಾನ ವಿಭಾಗದ ಈ ಮೂವರು ವಿದ್ಯಾರ್ಥಿನಿಯರು ಸೇರಿದ್ದಾರೆ. ಕಳೆದ ವಾರ ಅರ್ಜಿದಾರರು ತಮ್ಮ ಪ್ರಾಯೋಗಿಕ ಪರೀಕ್ಷೆಯನ್ನು ಮುಂದೂಡಿ,  ಹೈಕೋರ್ಟ್ ಆದೇಶದ ನಂತರ ನಡೆಸುವಂತೆ ಪಿಯು ಇಲಾಖೆಯನ್ನು ಕೋರಿದ್ದರು. ಅವರು ಪ್ರಾಯೋಗಿಕ ಪರೀಕ್ಷೆಗೆ ತಯಾರಿ ನಡೆಸಿಲ್ಲ ಎಂದು ವಿದ್ಯಾರ್ಥಿನಿ ಸುದ್ದಿಗಾರರಿಗೆ ತಿಳಿಸಿದರು. ಉಡುಪಿಯ ಸರ್ಕಾರಿ ಪಿಯು ಕಾಲೇಜು ಮತ್ತು ಇತರ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ತರಗತಿಯೊಳಗೆ ಹಿಜಾಬ್ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳ ಬ್ಯಾಚ್‌ನ ವಿಚಾರಣೆಯನ್ನು ಪೂರ್ಣಗೊಳಿಸಿರುವ ಕರ್ನಾಟಕ ಹೈಕೋರ್ಟ್ ತನ್ನ ಆದೇಶವನ್ನು ಕಾಯ್ದಿರಿಸಿತ್ತು.

ಹಿಜಾಬ್​​​ ವಿವಾದ ಆಗಿದ್ದೇಗೆ?

ಫೆಬ್ರವರಿ 4 ರಂದು ಉಡುಪಿಯ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಹಿಜಾಬ್ ಪ್ರತಿಭಟನೆ ಪ್ರಾರಂಭವಾಯಿತು. ಹಿಜಾಬ್ ಧರಿಸಿದ್ದರಿಂದ ತರಗತಿಗಳಿಗೆ ಹಾಜರಾಗದಂತೆ ತಡೆಯಲಾಗಿದೆ ಎಂದು ಕೆಲವು ವಿದ್ಯಾರ್ಥಿಗಳು ಆರೋಪಿಸಿದರು. ಆದರೆ, ಪ್ರತಿಭಟನೆ ನಿರತ ಬಾಲಕಿಯರು ಕಾಲೇಜಿನ ಸಮವಸ್ತ್ರ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಕಾಲೇಜು ತಿಳಿಸಿದೆ. ವಿಶ್ವವಿದ್ಯಾನಿಲಯ ಪೂರ್ವ ಶಿಕ್ಷಣ ಮಂಡಳಿಯ ಸುತ್ತೋಲೆಯ ಪ್ರಕಾರ, ವಿದ್ಯಾರ್ಥಿಗಳು ಶಾಲಾ ಆಡಳಿತವು ಅನುಮೋದಿಸಿದ ಸಮವಸ್ತ್ರವನ್ನು ಮಾತ್ರ ಧರಿಸಬಹುದು. ಇತರ ಯಾವುದೇ ಧಾರ್ಮಿಕ ಆಚರಣೆಗಳನ್ನು ಅನುಮತಿಸಲಾಗುವುದಿಲ್ಲ ಎಂದು ತಿಳಿಸಿತ್ತು.

ಇದನ್ನೂ ಓದಿ: Explainer: ಕರ್ನಾಟಕದಲ್ಲಿ ಹಿಜಾಬ್ ‘ವಿವಾದ’ ಹೇಗಾಯ್ತು? ಇಲ್ಲಿಯವರೆಗೆ ಏನೆಲ್ಲಾ ನಡೆಯಿತು..Timeline ಇಲ್ಲಿದೆ

ತೀರ್ಪು ಕಾಯ್ದಿರಿಸಿರುವ ಕೋರ್ಟ್​

ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವ ಹಕ್ಕನ್ನು ರಕ್ಷಿಸುವಂತೆ ಕೋರಿ ಹಾಗೂ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದ್ದಕ್ಕೆ ಪ್ರವೇಶ ನಿರಾಕರಿಸಿದ ಸರ್ಕಾರಿ ಪಿಯು ಕಾಲೇಜಿನ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ತೀರ್ಪನ್ನು ಕಾಯ್ದಿರಿಸಲಾಗಿದೆ.  ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಮತ್ತು ನ್ಯಾಯಮೂರ್ತಿ ಜೆಎಂ ಖಾಜಿ ಅವರನ್ನೊಳಗೊಂಡ ಕರ್ನಾಟಕ ಹೈಕೋರ್ಟ್‌ನ ಪೂರ್ಣ ಪೀಠದ ಮುಂದೆ 11 ದಿನಗಳ ಕಾಲ ವಿಚಾರಣೆ ನಡೆಸಿತು ನಿರ್ಬಂಧಗಳೊಂದಿಗೆ ಹಿಜಾಬ್ ಧರಿಸಲು ಯಾವುದೇ ನಿರ್ಬಂಧವಿಲ್ಲ ಎಂದು .  ಕರ್ನಾಟಕ ಸರ್ಕಾರವು ನ್ಯಾಯಾಲಯಕ್ಕೆ ತಿಳಿಸಿತ್ತು. ಹಿಜಾಬ್ ಧರಿಸುವುದನ್ನು ನಿರಾಕರಿಸುವುದು ಸಂವಿಧಾನದ 15 ನೇ ವಿಧಿಯ ಉಲ್ಲಂಘನೆಯಾಗಿದೆ ಎಂಬ ಆರೋಪವನ್ನು ತಳ್ಳಿ ಹಾಕಿದೆ.
Published by:Kavya V
First published: