ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ಕನಸಿಗೆ ಕುತ್ತಾಗಲಿರುವ ಮೈತ್ರಿ ಅಭ್ಯರ್ಥಿ

lok sabha elections 2019 : ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಎಂದರೆ ಸಾಮಾನ್ಯವಾಗಿ ಬಿಜೆಪಿಯ ಕೋಟೆ ಎಂದೆ ಬಿಂಬಿಸಲಾಗುತ್ತದೆ. ಆದರೆ, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಎದುರು ಕಠಿಣ ಸವಾಲಿರುವುದು ಮಾತ್ರ ಸ್ಪಷ್ಟವಾಗಿ ಗೋಚರಿಸುತ್ತಿದೆ. ಒಂದು ವೇಳೆ ಮೋದಿ ಅಲೆ ಕೆಲಸ ಮಾಡದೆ ಜನ ವಾಸ್ತವದ ಮೇಲೆ ಮತ ಚಲಾಯಿಸದರೆ ಎರಡನೇ ಬಾರಿ ಸಂಸದೆಯಾಗುವ ಕನಸು ಕಾಣುತ್ತಿರುವ ಶೋಭ ಕರಂದ್ಲಾಜೆಗೆ ತೊಡಕಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

MAshok Kumar | news18
Updated:April 18, 2019, 8:21 AM IST
ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ಕನಸಿಗೆ ಕುತ್ತಾಗಲಿರುವ ಮೈತ್ರಿ ಅಭ್ಯರ್ಥಿ
ಪ್ರಮೋದ್ ಮಧ್ವರಾಜ್ ಮತ್ತು ಶೋಭ ಕರಂದ್ಲಾಜೆ.
MAshok Kumar | news18
Updated: April 18, 2019, 8:21 AM IST
ಅರಬ್ಬಿ ಕಡಲು, ಕಾಫಿಯ ಒಡಲು, ಬಟಾಬಯಲು ಒಳಗೊಂಡ ವಿಶಿಷ್ಟ ಲೋಕಸಭಾ ಕ್ಷೇತ್ರ ಉಡುಪಿ-ಚಿಕ್ಕಮಗಳೂರು. ಪೌರಾಣಿಕ, ಐತಿಹಾಸಿಕ, ಧಾರ್ಮಿಕ ಹಾಗೂ ಪ್ರಾಕೃತಿಕವಾಗಿ ಮಹತ್ವ ಪಡೆದಿರುವ ಈ ಕ್ಷೇತ್ರ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಶೋಭಾ ಕರಂದ್ಲಾಜೆ ಮತ್ತು ಮೈತ್ರಿ ಅಭ್ಯರ್ಥಿ ಪ್ರಮೋದ್ ಮದ್ವರಾಜ್ ನಡುವಿನ ಮೂಡಿರುವ ನೇರಾನೇರ ಸ್ಪರ್ಧೆ ರಾಜಕೀಯ ವಠಾರದಲ್ಲಿ ಕುತೂಹಲ ಮೂಡಿಸಿದೆ.

ಚಿಕ್ಕಮಗಳೂರು 80ರ ದಶಕದಲ್ಲಿ ಇಂದಿರಾಗಾಂಧಿಗೆ ರಾಜಕೀಯ ಪುನರ್ಜನ್ಮ ನೀಡಿದ ಕ್ಷೇತ್ರ. ಇಲ್ಲಿನ ಉಡುಪಿ 5 ಬಾರಿ ಗಾಂಧಿ ಕುಟುಂಬದ ಆಪ್ತ ಆಸ್ಕರ್ ಫರ್ನಾಂಡಿಸ್‍ಗೂ ಗೆಲುವಿನ ಸಿಹಿ ನೀಡಿತ್ತು. ಹೀಗೆ ಗಾಂಧಿ ಕಟುಂಬ ಹಾಗೂ ಕಾಂಗ್ರೆಸ್ ಪಕ್ಷದ ಗೆಲುವಿನಲ್ಲಿ ಐತಿಹಾಸಿ ಕೊಡುಗೆ ನೀಡಿದ್ದ ಇದೇ ಕ್ಷೇತ್ರ, 2013ರ ವಿಧಾನಸಭಾ ಚುನಾವಣೆಯಲ್ಲಿ ಸೋತು ಬಸವಳಿದಿದ್ದ ಬಿಜೆಪಿಯ ಶೋಭಾ ಕರಾಂದ್ಲಾಜೆಗೂ 2014ರ ಲೋಕಸಭೆಯಲ್ಲಿ ಪುನರ್ಜನ್ಮ ನೀಡಿತ್ತು. ಬೆಂಗಳೂರಿನ ಹೆಬ್ಬಾಳದ ಮತದಾರೆಯಾಗಿರುವ ಶೋಭಾ ಕರಂದ್ಲಾಜೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಎರಡನೇ ಬಾರಿ ಸ್ಪರ್ಧಿಸುತ್ತಿದ್ದಾರೆ.

ಆದರೆ, ಕಳೆದ ಬಾರಿ ಗೆದ್ದ ಶೋಭ ಕರಂದ್ಲಾಜೆ ಜಿಲ್ಲೆಯ ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡಿಲ್ಲ ಎಂದು ಸ್ವಪಕ್ಷೀಯರಿಂದಲೇ ‘ಗೋಬ್ಯಾಕ್ ಶೋಭಕ್ಕ’ ಎಂಬ ಕೂಗು ಕೇಳಿಬರುತ್ತಿದೆ. ಈ ನಡುವೆ ದಿನದಿಂದ ದಿನಕ್ಕೆ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಹವಾ ಸಹ ಜಿಲ್ಲೆಯಲ್ಲಿ ಜೋರಾಗುತ್ತಿದ್ದು, ಶೋಭಕ್ಕನಿಗೆ ಕಂಟಕವಾಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ.

ಇದನ್ನೂ ಓದಿ : ಚುನಾವಣೆ ಸಮೀಕ್ಷೆ; ಬೆಂಗಳೂರು ದಕ್ಷಿಣದಲ್ಲಿ ದಶಕಗಳ ಬಿಜೆಪಿ ಪಾರುಪತ್ಯಕ್ಕೆ ಕಾಂಗ್ರೆಸ್​ ಹಾಕತ್ತಾ ಬ್ರೇಕ್​?

ಹಾಗಾದ್ರೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಮತದಾರರಿಗೇಕೆ ಶೋಭಕ್ಕನ ಮೇಲೆ ಇಷ್ಟು ಕೋಪ? ಅಸಲಿಗೆ ಇಲ್ಲಿನ ಸಮಸ್ಯೆಗಳಾದರೂ ಏನು? ಪ್ರತಿನಿಧಿಗಳು ವಿಫಲವಾಗಿದ್ದೆಲ್ಲಿ? ಇಲ್ಲಿದೆ ಕಂಪ್ಲೀಟ್​ ಡೀಟೆಲ್ಸ್.

ಜಿಲ್ಲೆಯೊಂದು ಸಮಸ್ಯೆ ನೂರೊಂದು :  ಮೇಲ್ನೋಟಕ್ಕೆ ಉಡುಪಿ-ಚಿಕ್ಕಮಗಳೂರು ಸುಂದರವಾದ ಕ್ಷೇತ್ರ. ಆದರೆ ವಾಸ್ತವದಲ್ಲಿ ಇದು ಅರೆ ಬಯಲುಸೀಮೆ ಕ್ಷೇತ್ರವಾದ ಕಾರಣ ಜಿಲ್ಲೆಯ ಶೇ.60 ರಷ್ಟು ಭೂಮಿಗಳಿಗೆ ಮಳೆಯೇ ಆಧಾರ. ಇದಲ್ಲದೆ ಕ್ಷೇತ್ರದ ವ್ಯಾಪ್ತಿಯಲ್ಲಿ ಮರಳಿನ ಸಮಸ್ಯೆ ತೀವ್ರವಾಗಿದೆ. ಎನ್‍ಎಚ್ 66 ಚತುಷ್ಪಥ ರಸ್ತೆ ಅಸಮರ್ಪಕ ಕಾಮಗಾರಿ, ಡೀಮ್ಡ್ ಫಾರೆಸ್ಟ್, ಒತ್ತುವರಿ, ಅರಣ್ಯವಾಸಿಗಳ ಒಕ್ಕಲೆಬ್ಬಿಸುವಿಕೆ, 110 ದಿನಗಳ ಹಿಂದೆ ದೋಣಿ ಸಹಿತ 7 ಮಂದಿ ಮೀನುಗಾರರ ನಾಪತ್ತೆ, ಅಡಕೆ, ಕಾಫಿ, ಕಾಳುಮೆಣಸಿನ ಧಾರಣೆ ಕುಸಿತ, ಶಿಶಿಲ-ಭೈರಾಪುರ ರಾಷ್ಟ್ರೀಯ ಹೆದ್ದಾರಿ, ಶಾಶ್ವತ ನೀರಾವರಿ ಕೊರತೆ, ಚಿಕ್ಕಮಗಳೂರಿನಲ್ಲಿ ರೈಲ್ವೆ ಸಂಪರ್ಕದ ಕೊರತೆ, ಬಿಎಸ್ಸೆನ್ನೆಲ್ ಸಮಸ್ಯೆ ಸೇರಿದಂತೆ ಜಿಲ್ಲೆಯಲ್ಲಿ ರಾಶಿ ರಾಶಿ ಸಮಸ್ಯೆಗಳಿವೆ.
Loading...

ಆದರೆ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದ್ದ ಜನಪ್ರತಿನಿಧಿಗಳು ಮಾತ್ರ ಈ ಕುರಿತು ಹೆಚ್ಚು ತಲೆಕೆಡಿಸಿಕೊಂಡತೆ ಕಾಣುತ್ತಿಲ್ಲ. ಇನ್ನೂ ಸಂಸದೆ ಶೋಭಾ ಕರಂದ್ಲಾಜೆ ಗೆದ್ದ ನಂತರ ಕ್ಷೇತ್ರದ ಕಡೆ ತಲೆಯೇ ಹಾಕಿಲ್ಲ ಎಂಬ ಆರೋಪವೂ ಇದೆ. ಇದೇ ಕಾರಣಕ್ಕೆ ಚಿಲ್ಲೆಯಾದ್ಯಂತ ‘ಗೋ ಬ್ಯಾಕ್ ಶೋಭಾ’ ಅಭಿಯಾನ ಕಳೆದ ಕೆಲ ತಿಂಗಳಿನಿಂದ ವ್ಯಾಪಕವಾಗಿ ಕೇಳಿಬರುತ್ತಿದೆ. ಅಸಲಿಗೆ ಸ್ವಪಕ್ಷೀಯರೆ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

‘ಗೋ-ಬ್ಯಾಕ್​ ಶೋಭಕ್ಕ’ ಅಭಿಯಾನ ಮತ್ತು ಮೋದಿ ಅಲೆ: ಉಡುಪಿ-ಚಿಕ್ಕಮಗಳೂರು ಕ್ಷೇತ್ರ 2008ರಲ್ಲಿ ಹೊಸದಾಗಿ ಅಸ್ಥಿತ್ವಕ್ಕೆ ಬಂದಿತ್ತು. 2008ರಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದ ಬಿಜೆಪಿಯ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಪ್ರಾಯಾಸದ ಗೆಲುವು ಸಾಧಿಸಿದ್ದರೆ, 2012ರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕೆ. ಜಯಪ್ರಕಾಶ ಹೆಗಡೆ ಗೆಲುವು ಸಾಧಿಸಿದ್ದರು. 2014ರ ಲೋಕಸಭಾ ಚುನಾವಣಾ ಟಿಕೆಟ್ ಘೋಷಣೆ ಸಂದರ್ಭದಲ್ಲೇ ಶೋಭ ಕರಾಂದ್ಲಾಜೆಗೆ ಟಿಕೆಟ್ ನೀಡಬಾರದು ಎಂಬ ಕೂಗು ಸ್ವಪಕ್ಷೀಯರಿಂದಲೇ ವ್ಯಾಪಕವಾಗಿ ಕೇಳಿಬಂದಿತ್ತು. ಆದರೆ ಬಿಜೆಪಿ ರಾಷ್ಟ್ರಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರಭಾವದಿಂದಾಗಿ ಟಿಕೆಟ್ ಲಭಿಸಿತ್ತು.

ಇದನ್ನೂ ಓದಿ : ಚುನಾವಣಾ ಸಮೀಕ್ಷೆ; ಚಾಮರಾಜ ನಗರದಲ್ಲಿ ಕೈ ಕಮಲದ ನಡುವಿನ ಸ್ಟ್ರೈಟ್ ಫೈಟ್​ನಲ್ಲಿ ಗೆಲ್ಲೋರ್ಯಾರು?

“ಆದರೆ, ಗೆದ್ದ ನಂತರ ಶೋಭಕ್ಕ ಕ್ಷೇತ್ರಕ್ಕೆ ಆಗಮಿಸಲೇ ಇಲ್ಲ. ಜಿಲ್ಲೆಯಲ್ಲಿ ಕಾರ್ಯಕರ್ತರ ಜೊತೆಗೂ ಉತ್ತಮ ಬಾಂಧವ್ಯ ಇಲ್ಲ. ಈಗ ಚುನಾವಣೆ ಹತ್ತಿರಾಗುತ್ತಿದ್ದಂತೆ ಮತ್ತೆ ಕ್ಷೇತ್ರಕ್ಕೆ ಆಗಮಿಸಿರುವ ಸಂಸದೆ ತರಾತುರಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಹೀಗಾಗಿ ಇವರಿಗೆ ಟಿಕೆಟ್ ನೀಡಬಾರದು” ಎಂಬುದು ಕ್ಷೇತ್ರದ ಜನರ ಹಾಗೂ ಕಾರ್ಯಕರ್ತರ ಆರೋಪ.

‘ಪರಿಣಾಮ ಫೇಸ್​ಬುಕ್​ನಲ್ಲಿ ಶೋಭಕ್ಕ ಹಠಾವೋ’ ಎಂಬ ಪೇಜ್ ಕ್ರಿಯೇಟ್ ಮಾಡಿರುವ ಕೆಲವು ನೆಟ್ಟಿಗರು ‘ಐದು ವರ್ಷ ಕ್ಷೇತ್ರಕ್ಕೆ ಕಾಲಿಡದೆ ಚುನಾವಣೆ ಹೊಸ್ತಿಲಲ್ಲಿ ಚಿಕ್ಕಮಗಳೂರಿಗೆ ಫೈಯಿಂಗ್ ವಿಸಿಟ್ ಕೊಡುವ ಸಂಸದೆ ನಮಗೆ ಬೇಡ’ ಎಂದು ಗೇಲಿ ಮಾಡುತ್ತಿದ್ದಾರೆ. ಅಲ್ಲದೆ ‘ಗೋ-ಬ್ಯಾಕ್ ಶೋಭಕ್ಕ’ ಚಳುವಳಿಯೂ ಕ್ಷೇತ್ರದಲ್ಲಿ ವ್ಯಾಪಕವಾಗಿದೆ. ಆದರೂ, ಜಿಲ್ಲೆಯಲ್ಲಿ ಈಗಲೂ ಜೀವಂತ ಇರುವ ಪ್ರಧಾನಿ ನರೇಂದ್ರ ಮೋದಿ ಅಲೆ ಶೋಭಕ್ಕನನ್ನು ಕಾಪಾಡುತ್ತದೆ ಎಂಬ ಗ್ಯಾರಂಟಿ ಮೇಲೆ ಹಲವರ ವಿರೋಧದ ನಡುವೆಯೂ ಪಕ್ಷ ಹಾಲಿ ಸಂಸದರಿಗೆ ಟಿಕೆಟ್ ಘೋಷಿಸಲಾಗಿದೆ.

ಮಧ್ವರಾಜ್​ರಿಂದ ಕಠಿಣ ಪೈಪೋಟಿ ನಿರೀಕ್ಷೆ : ರಾಜ್ಯ ಸರ್ಕಾರದ ಮೈತ್ರಿ ಸೂತ್ರದ ಅನ್ವಯ ಕಾಂಗ್ರೆಸ್ ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಟ್ಟಿತ್ತು. ಜೆಡಿಎಸ್​ ಪಕ್ಷದಿಂದ ಕಡೂರಿನ ಮಾಜಿ ಶಾಸಕ ವೈ.ಎಸ್​.ವಿ. ದತ್ತಾ ಸ್ಪರ್ಧಿಸುತ್ತಾರೆ ಎಂದೆ ಊಹೆ ಮಾಡಲಾಗಿತ್ತು. ಆದರೆ, ಅವರು ಸ್ಪರ್ಧಿಸಲು ನಿರಾಕರಿಸಿದ ಹಿನ್ನೆಲೆ ಕಾಂಗ್ರೆಸ್ ನ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರನ್ನು ಜೆಡಿಎಸ್​ಗೆ ಪಕ್ಷಾಂತರಗೊಳಿಸಿ ಕಣಕ್ಕಿಳಿಸಲಾಗುತ್ತಿದೆ.

ಇದನ್ನೂ ಓದಿ : ಚುನಾವಣಾ ಸಮೀಕ್ಷೆ; ಕೋಲಾರ ಲೋಕಸಭೆಯಲ್ಲಿ ಮೊದಲ ಬಾರಿಗೆ ಅರಳುವ ತವಕದಲ್ಲಿ ಕಮಲ..!

ಕ್ಷೇತ್ರದಲ್ಲಿ ಕೈಗೆ ಟಿಕೆಟ್ ತಪ್ಪಿದ ನೋವು ಕಾರ್ಯಕರ್ತರಿಗಿದ್ದರು ಅಭ್ಯರ್ಥಿ ನಮ್ಮವರೇ ಎಂಬ ಸಮಾಧಾನವಿದೆ. ಅಲ್ಲದೆ ಕ್ಷೇತ್ರದಲ್ಲಿ ಹೇಗಾದರು ಬಿಜೆಪಿಯನ್ನು ಶಾತಾಯಗತಾಯ ಸೋಲಿಸಲೇಬೇಕು ಎಂಬ ಹಠ ಮೈತ್ರಿಯೊಳಗಿನ ಅಂತಃ ಕಲಹವನ್ನು ಸದ್ಯಕ್ಕೆ ಮರೆಮಾಚಿದೆ. ಅಲ್ಲದೆ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್​ಗೆ ಒಳ್ಳೆಯ ಹೆಸರಿದೆ. ಅವರು ಸಚಿವರಾಗಿದ್ದಾಗ 3 ಸಾವಿರ ಕೋಟಿ ಅನುದಾನ ತಂದು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದರು. ಅಲ್ಲದೆ ನಂ. 1 ಶಾಸಕ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದರು. ಇದು ಸಮಾನ್ಯವಾಗಿ ಕ್ಷೇತ್ರದಲ್ಲಿ ಅವರ ವರ್ಚಸ್ಸು ಹೆಚ್ಚಲು ಕಾರಣವಾಗಿದೆ.

ಆದರೆ, ಪ್ರಮೋದ್ ಮಧ್ವರಾಜ್ ಮೂಲತಃ ಉಡುಪಿ ಜಿಲ್ಲೆಯವರು ಚಿಕ್ಕಮಗಳೂರಿನವರಿಗೆ ಮಧ್ವರಾಜ್ ಮುಖ ಅಷ್ಟಾಗಿ ಪರಿಚಯವಿಲ್ಲ. ಹೀಗಾಗಿ ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಹೆಚ್ಚಿನ ಮತ ಪಡೆಯುವುದು ಕಷ್ಟ ಎಂದೆ ಹೇಳುಲಾಗುತ್ತಿರುವುದು ಕಾಂಗ್ರೆಸ್​ಗೆ ಹಿನ್ನಡೆಯಾದರೆ ಅಚ್ಚರಿ ಇಲ್ಲ.

ಜಾತಿ ಸಮೀಕರಣ ಮತ್ತು ಗೆಲುವಿನ ಲೆಕ್ಕಾಚಾರ : ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯ 2.65 ಲಕ್ಷ ಮತಗಳಿದ್ದರೆ, ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತರ ಮತ ಸುಮಾರು 4 ಲಕ್ಷ ಇದೆ. ಇದಲ್ಲದೆ 1.55 ಲಕ್ಷ ಬಿಲ್ಲವ, 1.31 ಲಕ್ಷ ಬಂಟ, 1.04 ಲಕ್ಷ ಮೊಗವೀರ, 1,05 ಲಕ್ಷ ಒಕ್ಕಲಿಗ, 74 ಸಾವಿರ ಬ್ರಾಹ್ಮಣ, 68 ಸಾವಿರ ಬ್ರಾಹ್ಮಣ ಹಾಗೂ 54 ಸಾವಿರ ಕುರುಬ ಮತದಾರರಿದ್ದಾರೆ,

ಇದನ್ನೂ ಓದಿ : ಚುನಾವಣಾ ಸಮೀಕ್ಷೆ; ಬೆಂಗಳೂರು ಕೇಂದ್ರದಲ್ಲಿ ರಂಗೇರಿದ ತ್ರಿಕೋನ ಸ್ಪರ್ಧೆ: ಯಾರಿಗೆ ಒಲಿಯಲಿದೆ ಗೆಲುವು?

ಕ್ಷೇತ್ರದ ಮಟ್ಟಿಗೆ ಎಸ್​.ಸಿ ಹಾಗೂ ಎಸ್​.ಟಿ ಮತಗಳೇ ನಿರ್ಣಾಯಕ. ಒಕ್ಕಲಿಗರಾದ ಶೋಭಕ್ಕ ಹೆಚ್ಚು ಬಿಜೆಪಿ ಮತಬ್ಯಾಂಕ್​ ಅನ್ನೇ ನಂಬಿರುವ ಮೇಲ್ನೊಟಕ್ಕೆ ಸ್ಪಷ್ಟವಾಗಿದೆ. ಅಲ್ಲದೆ ಕ್ಷೇತ್ರದ 8 ಶಾಸಕರ ಪೈಕಿ 7 ಜನ ಶಾಸಕರು ಬಿಜೆಪಿಯವರೇ ಆಗಿರುವುದು ಹಾಗೂ ಜಿಲ್ಲೆಯಲ್ಲಿ ಈಗಲೂ ಮೋದಿ ಹೆಸರಿನ ಅಲೆ ಇರುವುದು ಶೋಭಕ್ಕನಿಗೆ ಬಲವಾದರೆ, ಇನ್ನೂ ಮೊಗವೀರ ಸಮುದಾಯಕ್ಕೆ ಸೇರಿದ ಪ್ರಮೋದ್ ಮಧ್ವರಾಜ್ ಅವರಿಗೆ ತಮ್ಮ ಸಮುದಾಯದ ಮತಗಳ ಜೊತೆಗೆ ಕಾಂಗ್ರೆಸ್ ಪಕ್ಷದ ಪಾರಂಪರಿ ಮತಗಳಾದ ಎಸ್​.ಸಿ, ಎಸ್​.ಟಿ ಮತಗಳು ನಿರೀಕ್ಷೆಯಂತೆ ಚಲಾವಣೆಯಾದರೆ ಗೆಲುವು ಕಷ್ಟವೇನಲ್ಲ.

ಒಟ್ಟಾರೆ ಚಿಕ್ಕಮಗಳೂರು-ಉಡುಪಿ ಕ್ಷೇತ್ರ ಎಂದರೆ ಸಾಮಾನ್ಯವಾಗಿ ಬಿಜೆಪಿಯ ಕೋಟೆ ಎಂದೆ ಬಿಂಬಿಸಲಾಗುತ್ತದೆ. ಆದರೆ, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಎದುರು ಕಠಿಣ ಸವಾಲಿರುವುದು ಮಾತ್ರ ಸ್ಪಷ್ಟವಾಗಿ ಗೋಚರಿಸುತ್ತಿದೆ. ಒಂದು ವೇಳೆ ಮೋದಿ ಅಲೆ ಕೆಲಸ ಮಾಡದೆ ಜನ ವಾಸ್ತವದ ಮೇಲೆ ಮತ ಚಲಾಯಿಸದರೆ ಎರಡನೇ ಬಾರಿ ಸಂಸದೆಯಾಗುವ ಕನಸು ಕಾಣುತ್ತಿರುವ ಶೋಭ ಕರಂದ್ಲಾಜೆಗೆ ತೊಡಕಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

First published:April 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626