ಆರೆಸ್ಸೆಸ್ ಸ್ವಯಂಸೇವಕರ ಬಗ್ಗೆ ಕಾಂಗ್ರೆಸ್ಸಿಗರಿಗೆ ಏನು ಗೊತ್ತು? ಸಿಎಂ ವಿರುದ್ಧ ವಾಗ್ದಾಳಿ

ಆರೆಸ್ಸೆಸ್ಸಿಗರನ್ನು ಉಗ್ರಗಾಮಿಗಳೆಂದು ಸಂಬೋಧಿಸಿದ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ವಿಧಾನಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಹರಿಹಾಯ್ದಿದ್ದಾರೆ. ಮುಖ್ಯಮಂತ್ರಿಗಳಿಗೆ ಸ್ವಯಂಸೇವಕ ಎಂಬುದರ ಅರ್ಥ ತಿಳಿದಿಲ್ಲ. ಕಾಂಗ್ರೆಸ್ ಅಧಿವೇಶನದಲ್ಲಿ ಚಾಕರಿ ಮಾಡುತ್ತಿದ್ದವರನ್ನು ಕಾಂಗ್ರೆಸ್ಸಿಗರು ಕೀಳಾಗಿ ನೋಡುತ್ತಾರೆ. ಆರೆಸ್ಸೆಸ್ ಸ್ವಯಂಸೇವಕರನ್ನೂ ಹಾಗೆಯೇ ನೋಡುತ್ತಿದ್ದಾರೆ. ಆರೆಸ್ಸೆಸ್ ಸ್ವಯಂಸೇವಕರು ಏನೆಂಬುದನ್ನು ಸಿಎಂ ಮೊದಲು ತಿಳಿದುಕೊಳ್ಳಬೇಕು ಎಂದು ಬಿಜೆಪಿ ಮುಖಂಡ ಸಲಹೆ ನೀಡಿದ್ದಾರೆ.


Updated:January 14, 2018, 1:19 PM IST
ಆರೆಸ್ಸೆಸ್ ಸ್ವಯಂಸೇವಕರ ಬಗ್ಗೆ ಕಾಂಗ್ರೆಸ್ಸಿಗರಿಗೆ ಏನು ಗೊತ್ತು? ಸಿಎಂ ವಿರುದ್ಧ ವಾಗ್ದಾಳಿ
ಸಿಎಂ ಹೇಳಿಕೆ ವಿರುದ್ಧ ಉಡುಪಿ ಜಿಲ್ಲಾ ಬಿಜೆಪಿಯಿಂದ ಜೈಲ್ ಭರೋ ಪ್ರತಿಭಟನೆ

Updated: January 14, 2018, 1:19 PM IST
ಉಡುಪಿ(ಜ. 14): ಆರೆಸ್ಸೆಸ್ಸಿಗರನ್ನು ಉಗ್ರಗಾಮಿಗಳೆಂದು ಸಂಬೋಧಿಸಿದ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ವಿಧಾನಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಹರಿಹಾಯ್ದಿದ್ದಾರೆ. ಮುಖ್ಯಮಂತ್ರಿಗಳಿಗೆ ಸ್ವಯಂಸೇವಕ ಎಂಬುದರ ಅರ್ಥ ತಿಳಿದಿಲ್ಲ. ಕಾಂಗ್ರೆಸ್ ಅಧಿವೇಶನದಲ್ಲಿ ಚಾಕರಿ ಮಾಡುತ್ತಿದ್ದವರನ್ನು ಕಾಂಗ್ರೆಸ್ಸಿಗರು ಕೀಳಾಗಿ ನೋಡುತ್ತಾರೆ. ಆರೆಸ್ಸೆಸ್ ಸ್ವಯಂಸೇವಕರನ್ನೂ ಹಾಗೆಯೇ ನೋಡುತ್ತಿದ್ದಾರೆ. ಆರೆಸ್ಸೆಸ್ ಸ್ವಯಂಸೇವಕರು ಏನೆಂಬುದನ್ನು ಸಿಎಂ ಮೊದಲು ತಿಳಿದುಕೊಳ್ಳಬೇಕು ಎಂದು ಬಿಜೆಪಿ ಮುಖಂಡ ಸಲಹೆ ನೀಡಿದ್ದಾರೆ.

ಮುಖ್ಯಮಂತ್ರಿಗಳ ಹಿಂದೂ ಉಗ್ರಗಾಮಿ ಹೇಳಿಕೆಯನ್ನು ಖಂಡಿಸಇ ಉಡುಪಿ ಜಿಲ್ಲಾ ಬಿಜೆಪಿಯಿಂದ ಬ್ರಹ್ಮಗಿರಿ ಸರ್ಕಲ್​ನಲ್ಲಿ ನಡೆದ ಜೈಲ್ ಭರೋ ಪ್ರತಿಭಟನೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಭಾಗವಹಿಸಿದ ಸಂದರ್ಭ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಪ್ರತಿಭಟನೆ ವೇಳೆ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ತಡೆದು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ.
First published:January 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ