ಎತ್ತಿನ ಬಂಡಿ ಹರಿದು ಇಬ್ಬರಿಗೆ ಗಾಯ: ಮೂಗೂರು ಜಾತ್ರೆ ವೇಳೆ ಅವಘಡ: ವಿಡಿಯೋ ವೈರಲ್

ಕಳೆದ ವರ್ಷ ಶಿಥಿಲಗೊಂಡಿದ್ದ ರಥ ಬಳಸಿ ಎಡವಟ್ಟು ಮಾಡಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವರ್ಷ ಎತ್ತಿನಬಂಡಿ ಹರಿದು ಇಬ್ಬರಿಗೆ ಗಂಭೀರ ಗಾಯವಾಗಿದೆ ಎಂದು ಸೂಕ್ತ ವ್ಯವಸ್ಥೆ ಕಲ್ಪಿಸದ ಅಧಿಕಾರಿಗಳಿಗೆ ಭಕ್ತರು ಹಿಡಿಶಾಪ ಹಾಕಿದ್ದಾರೆ. 

news18-kannada
Updated:January 12, 2020, 11:35 AM IST
ಎತ್ತಿನ ಬಂಡಿ ಹರಿದು ಇಬ್ಬರಿಗೆ ಗಾಯ: ಮೂಗೂರು ಜಾತ್ರೆ ವೇಳೆ ಅವಘಡ: ವಿಡಿಯೋ ವೈರಲ್
ಮೂಗೂರು ಜಾತ್ರೆ
  • Share this:
ಮೈಸೂರು(ಜ.12): ಟಿ.ನರಸೀಪುರ ತಾಲೂಕಿನ ಪ್ರಸಿದ್ಧ ಐತಿಹಾಸಿಕ ಮೂಗೂರು ತ್ರಿಪುರ ಸುಂದರಿ ಜಾತ್ರೆಯಲ್ಲಿ ಅವಘಡವೊಂದು ಸಂಭವಿಸಿದೆ. ಜಾತ್ರೆ ವೇಳೆ ಎತ್ತಿನ ಬಂಡಿ ಹರಿದು ಇಬ್ಬರು ಯುವಕರು ಗಂಭೀರ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ರವಿಕುಮಾರ್​​(28) ಮತ್ತು ಮಹೇಶ್​(27) ಎಂದು ಗುರುತಿಸಲಾಗಿದ್ದು, ಆಸ್ಪ್ರತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್​ ಇಬ್ಬರೂ ಸಹ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎತ್ತಿನ ಬಂಡಿ ಹರಿಯುವ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದ್ದು, ಮೈ ನಡುಕ ಹುಟ್ಟಿಸುವಂತಿದೆ.

ಪ್ರತಿ ವರ್ಷ ನಡೆಯುವ ಪ್ರಸಿದ್ಧ ಮೂಗೂರು ತ್ರಿಪುರ ಸುಂದರಿ ಜಾತ್ರೆಯನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಜನರು ಆಗಮಿಸುತ್ತಾರೆ. ಈ ಬಾರಿಯೂ ಸಹ ಜಾತ್ರೆಯಲ್ಲಿ ಜನಸಾಗರವೇ ನೆರೆದಿತ್ತು. ಜಾತ್ರೆ ವೇಳೆ ಎತ್ತಿನ ಬಂಡಿಯಲ್ಲಿ ದೇವರ ವಿಗ್ರಹ ಇಟ್ಟು ಊರೆಲ್ಲಾ ಮೆರವಣಿಗೆ ಮಾಡಲಾಗಿತ್ತು.

ಬೆಂಗಳೂರಿನಲ್ಲಿ ಖಲಿಸ್ತಾನದ ಪ್ರತ್ಯೇಕತಾವಾದಿಯ ಬಂಧನ; ಸಿಸಿಬಿ ಪೊಲೀಸರಿಂದ ಕಾರ್ಯಾಚರಣೆ

ಈ ವೇಳೆ ಎತ್ತುಗಳು ದಿಕ್ಕಾಪಾಲಾಗಿ ಓಡಿಹೋಗಿವೆ. ಪರಿಣಾಮ ಬಂಡಿ ಹಿಡಿದು ಬರುತ್ತಿದ್ದ ಇಬ್ಬರು ಯುವಕರು ಗಾಡಿಯ ಅಡಿಗೆ ಸಿಲುಕಿದ್ದಾರೆ. ಎತ್ತುಗಳು ಓಡುವ ರಭಸಕ್ಕೆ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ಕೂಡಲೇ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕಳೆದ ವರ್ಷ ಶಿಥಿಲಗೊಂಡಿದ್ದ ರಥ ಬಳಸಿ ಎಡವಟ್ಟು ಮಾಡಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವರ್ಷ ಎತ್ತಿನಬಂಡಿ ಹರಿದು ಇಬ್ಬರಿಗೆ ಗಂಭೀರ ಗಾಯವಾಗಿದೆ ಎಂದು ಸೂಕ್ತ ವ್ಯವಸ್ಥೆ ಕಲ್ಪಿಸದ ಅಧಿಕಾರಿಗಳಿಗೆ ಭಕ್ತರು ಹಿಡಿಶಾಪ ಹಾಕಿದ್ದಾರೆ. 

ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಹೈಕಮಾಂಡ್ ಬುಲಾವ್; ನಾಳೆ ದೆಹಲಿಗೆ ಪ್ರಯಾಣ

First published:January 12, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ