• Home
  • »
  • News
  • »
  • state
  • »
  • Hubballi Crime News: ಯುವಕನ ಕೊಲೆ, ಇಬ್ಬರಿಗೆ ಚಾಕು ಇರಿತ; ಏನಾಗ್ತಿದೆ ಹುಬ್ಬಳ್ಳಿಯಲ್ಲಿ?

Hubballi Crime News: ಯುವಕನ ಕೊಲೆ, ಇಬ್ಬರಿಗೆ ಚಾಕು ಇರಿತ; ಏನಾಗ್ತಿದೆ ಹುಬ್ಬಳ್ಳಿಯಲ್ಲಿ?

ಹುಬ್ಬಳ್ಳಿ

ಹುಬ್ಬಳ್ಳಿ

ಇಬ್ಬರು ವ್ಯಕ್ತಿಗಳಿಗೆ ಚಾಕು ಇರಿದು ದುಷ್ಕರ್ಮಿಗಳು ಪರಾರಿಯಾದ ಘಟನೆ ಹುಬ್ಬಳ್ಳಿಯ ಆನಂದ ನಗರದಲ್ಲಿ ನಡೆದಿದೆ. ಆನಂದ ನಗರದ ವೆಲ್ ಕಮ್ ಹಾಲ್ ಮುಂದೆ ಘಟನೆ ನಡೆದಿದೆ. ಜೈಲಾನಿ ಶೇಖ್ ಹಾಗೂ ಜಾವಿದ್ ಶೇಖ್ ಎನ್ನುವ ಯುವಕರಿಗೆ ಚಾಕು ಇರಿಯಲಾಗಿದೆ.

  • Share this:

ಹುಬ್ಬಳ್ಳಿ: ಕೇವಲ ಐದು ರೂಪಾಯಿ ಗುಟ್ಕಾಕ್ಕಾಗಿ ಹುಬ್ಬಳ್ಳಿಯಲ್ಲಿ (Hubballi) ಯುವಕನ ಕೊಲೆ (Youth Murder) ನಡೆದು ಹೋಗಿತ್ತು. ಈ ಘಟನೆ ಹಸಿರಿರುವಾಗಲೇ ಕ್ಷುಲ್ಲಕ ಕಾರಣಕ್ಕೆ ಚಾಕು ಇರಿತ ಪ್ರಕರಣ ಒಂದು ಕಡೆ ನಡೆದಿದ್ದರೆ, ಮತ್ತೊಂದು ಕಡೆ ಯುವಕನ ಬರ್ಬರ ಹತ್ಯೆ ನಡೆದಿದೆ. ವಾಣಿಜ್ಯ ಚಟುವಟಿಕೆಗಳಿಗಿಂತ (Commercial Activities) ಅಪರಾಧ ಚಟುವಟಿಕೆಗಳೇ (Crime Activity) ಹುಬ್ಬಳ್ಳಿಯಲ್ಲಿ ಹೆಚ್ಚಾಗಿ ನಡೀತಿವೆ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ. ಹುಬ್ಬಳ್ಳಿಯಲ್ಲಿ ಏನಾಗ್ತಿದೆ ಎನ್ನೋ ಪ್ರಶ್ನೆ ಎಲ್ಲರನ್ನೂ ಕಾಡಲಾರಂಭಿಸಿದೆ. ಹುಬ್ಬಳ್ಳಿಯ ಹೃದಯ ಭಾಗದ ರೈಲ್ವೆ ಟ್ರ್ಯಾಕ್ (Railway Track) ಪಕ್ಕದಲ್ಲಿ ಯುವಕನ ಶವ ಪತ್ತೆಯಾಗಿದೆ. ದೇಸಾಯಿ ಬ್ರಿಡ್ಜ್ (Desai Bridge) ಪಕ್ಕದ ರೈಲ್ವೆ ಟ್ರ್ಯಾಕ್ ನಲ್ಲಿ ಮೃತ ದೇಹ ಪತ್ತೆಯಾಗಿದೆ. ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ರೀತಿಯಲ್ಲಿ ಶವ (Deadbody) ಪತ್ತೆಯಾಗಿದ್ದು, ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.


ಮುಖ ಗುರುತು ಸಿಗದೆ ರೀತಿಯಲ್ಲಿ ಶವ ಕೊಳೆತು ಹೋಗಿದೆ. ಬೇರೆ ಕಡೆ ಕೊಲೆ ಮಾಡಿ ಅಥವಾ ಇಲ್ಲಿಯೇ ಕಲ್ಲಿನಿಂದ ಜಜ್ಜಿ ರೈಲ್ವೆ ಹಳಿ ಪಕ್ಕದಲ್ಲಿ ಶವ ಹಾಕಿರೋ ಶಂಕೆ ವ್ಯಕ್ತವಾಗಿದೆ. ಮೃತ ವ್ಯಕ್ತಿ ಯಾರು, ಎಲ್ಲಿಯವನು ಎಂಬಿತ್ಯಾದಿ ಮಾಹಿತಿ ಲಭ್ಯವಾಗಿಲ್ಲ. ಸ್ಥಳಕ್ಕೆ ಹುಬ್ಬಳ್ಳಿ ರೈಲ್ವೆ ಪೊಲೀಸರು ದೌಡಾಯಿಸಿದ್ದಾರೆ. ಶವ ಪರಿಶೀಲನೆ ಮಾಡಿರೋ ಪೊಲೀಸರು, ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.


ಕ್ಷುಲ್ಲಕ ಕಾರಣಕ್ಕೆ ಸಹೋದರರಿಗೆ ಚಾಕು ಇರಿತ


ಇಬ್ಬರು ವ್ಯಕ್ತಿಗಳಿಗೆ ಚಾಕು ಇರಿದು ದುಷ್ಕರ್ಮಿಗಳು ಪರಾರಿಯಾದ ಘಟನೆ ಹುಬ್ಬಳ್ಳಿಯ ಆನಂದ ನಗರದಲ್ಲಿ ನಡೆದಿದೆ. ಆನಂದ ನಗರದ ವೆಲ್ ಕಮ್ ಹಾಲ್ ಮುಂದೆ ಘಟನೆ ನಡೆದಿದೆ. ಜೈಲಾನಿ ಶೇಖ್ ಹಾಗೂ ಜಾವಿದ್ ಶೇಖ್ ಎನ್ನುವ ಯುವಕರಿಗೆ ಚಾಕು ಇರಿಯಲಾಗಿದೆ.


ಇದನ್ನೂ ಓದಿ:  Hassan Crime News: ತಾಳಿ ಕಟ್ಟಿದ ಪತಿಗೆ ಚಟ್ಟ ಕಟ್ಟಿದ ಪತ್ನಿ; ಪಾತಕಿಗೆ ಅಮ್ಮ, ಮಗ ಸಾಥ್​


ಜೈಲಾನಿ ಶೇಖ್ ಹಾಗೂ ಜಾವಿದ್ ಶೇಖ್ ಇಬ್ಬರೂ ಸಹೋದರರು. ತೀವ್ರ ಗಾಯಗೊಂಡಿರುವ ಇಬ್ಬರನ್ನೂ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು.


ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ


ಸುಮ್ಮನೇ ಕುಳಿತ ವ್ಯಕ್ತಿಗಳಿಗೆ ಚಾಕು ಇರಿದಿದ್ದಾರೆ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಚಾಕು ಇರಿತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಎದೆ ಮತ್ತು ತಲೆಗೆ ಚಾಕುವಿನಿಂದ ಇರಿಯಲಾಗಿದೆ. ತೀವ್ರ ರಕ್ತಸ್ರಾವವಾಗುತ್ತಿದ್ದು, ಅವರಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ. ರಫೀಕ್, ಮಮ್ಮು, ಅಲ್ತಾಫ್ ಹಾಗೂ ಇನ್ನೋರ್ವ ಚಾಕು ಇರಿದಿದ್ದಾನೆ ಎಂದು ಗಾಯಾಳುಗಳು ಮಾಹಿತಿ ನೀಡಿದ್ದಾರೆ.


ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ


ಘಟನಾ ಸ್ಥಳಕ್ಕೆ ಹಾಗೂ ಕಿಮ್ಸ್ ಆಸ್ಪತ್ರೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಗುಟ್ಕಾ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಕೊಲೆ ನಡೆದು ಹೋಗಿತ್ತು. ಇದೀಗ ಕ್ಷುಲ್ಲಕ ಕಾರಣಕ್ಕೆ ಮತ್ತೊಂದು ಭಯಾನಕ ಅಟ್ಯಾಕ್ ನಡೆದಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


KIMSನಲ್ಲಿ ಮಗು ಕಳ್ಳತನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್


ಹುಬ್ಬಳ್ಳಿಯ ಕಿಮ್ಸ್ ನಲ್ಲಿ (KIMS, Hubballi) ಮಗು ನಾಪತ್ತೆ ಪ್ರಕರಣಕ್ಕೆ (Baby Missing Case) ಬಿಗ್ ಟ್ವಿಸ್ಟ್ ಸಿಕ್ಕಿದೆ. ಕಿಮ್ಸ್ ಆವರಣದಲ್ಲೇ ಮಗು ದಿಢೀರ್ ಪ್ರತ್ಯಕ್ಷವಾಗಿದೆ. ನಾಪತ್ತೆಯಾಗಿದ್ದ ಮಗು ಕಿಮ್ಸ್ ನಲ್ಲೇ ಪತ್ತೆಯಾಗಿರೋದು ಅಚ್ಚರಿಗೆ ಕಾರಣವಾಗಿದೆ. ಮಗು ನಾಪತ್ತೆ ಹಿಂದೆ ತಾಯಿ (Mother) ಕೈವಾಡವಿರೋ ಶಂಕೆ ವ್ಯಕ್ತವಾಗಿದೆ. ಮಗು ಕಳುವಾಗಿದ್ದರೂ ಹೆತ್ತ ಕರುಳು ಮಾತ್ರ ನಿನ್ನೆ ರಾತ್ರಿಯೇ ತಮ್ಮ ಊರಿಗೆ ವಾಪಸ್ಸಾಗಿರೋದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.


ಇದನ್ನೂ ಓದಿ:  Death: ಸಾಂಬಾರ್‌ ಪಾತ್ರೆಯಲ್ಲಿ ಬಿದ್ದು ಗಾಯಗೊಂಡಿದ್ದ ಮಹಿಳೆ ಸಾವು! ಹೇಗೆ ನಡೆಯಿತು ಗೊತ್ತಾ ಘೋರ ದುರಂತ?


ಮೂರು ತಂಡ ರಚಿಸುವ ಮೂಲಕ ಮಗು ಪತ್ತೆಗೆ ಪೊಲೀಸರು (Police) ಜಾಲ ಬೀಸಿದ್ದರು. ಪೊಲೀಸ್ ತನಿಖೆ ಚುರುಕುಗೊಂಡ ಹಿನ್ನೆಲೆ ಭಯಗೊಂಡ ಆರೋಪಿತರು, ಮಗುವನ್ನ ಕಿಮ್ಸ್ ಆವರಣಕ್ಕೆ (KIMS Hospital Ground) ವಾಪಸ್ ತಂದಿಟ್ಟು ಪರಾರಿಯಾಗಿದ್ದಾರೆ.

Published by:Mahmadrafik K
First published: