ಕಾಗಿಣಾ ನದಿಯಲ್ಲಿ ಈಜಲು ಹೋದ ಇಬ್ಬರು ಕುರಿಗಾಹಿಗಳು ಸಾವು

ಮೃತರನ್ನು ಬಿರನಹಳ್ಳಿ ಗ್ರಾಮದ ಯಲ್ಲಪ್ಪ (28) ಹಾಗೂ ನರವೀರ (22) ಎಂದು ಗುರತಿಸಲಾಗಿದೆ. ಇಬ್ಬರು ಬೆಳಗ್ಗೆ ಮನೆಯಿಂದ ಕುರಿ ಕಾಯಲು ಇಬ್ಬರು ಅರೆಬೊಮ್ಮನಹಳ್ಳಿಗೆ ತೆರಳಿದ್ದರು.

G Hareeshkumar | news18-kannada
Updated:December 11, 2019, 3:47 PM IST
ಕಾಗಿಣಾ ನದಿಯಲ್ಲಿ ಈಜಲು ಹೋದ ಇಬ್ಬರು ಕುರಿಗಾಹಿಗಳು ಸಾವು
ಮೃತ ಯುವಕರು
  • Share this:
ಕಲಬುರ್ಗಿ(ಡಿ.11): ಕುರಿ ಕಾಯಲು ಹೊಗಿದ್ದ ಇಬ್ಬರು ಕುರಿಗಾಹಿಗಳು ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಕಲಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಅರೆಬೊಮ್ಮನಹಳ್ಳಿಯಲ್ಲಿ ನಡೆದಿದೆ.

ಮೃತರನ್ನು ಬಿರನಹಳ್ಳಿ ಗ್ರಾಮದ ಯಲ್ಲಪ್ಪ (28) ಹಾಗೂ ನರವೀರ (22) ಎಂದು ಗುರತಿಸಲಾಗಿದೆ. ಇಬ್ಬರು ಬೆಳಗ್ಗೆ ಮನೆಯಿಂದ ಕುರಿ ಕಾಯಲು ಇಬ್ಬರು ಅರೆಬೊಮ್ಮನಹಳ್ಳಿಗೆ ತೆರಳಿದ್ದರು.

ಕುರಿ ಮೇಯಲು ಬಿಟ್ಟು ಪಕ್ಕದಲ್ಲಿ ಹರಿಯುತ್ತಿದ್ದ ಕಾಗಿಣಾ ನದಿಯಲ್ಲಿ ಈಜಾಡಲು ಮುಂದಾಗಿದ್ದರು. ನೀರಿನ ಸೆಳವಿಗೆ ಇಬ್ಬರು ಸಿಲುಕಿದರು. ಸೆಳವಿನಿಂದ ಹೊರಬರಲಾರದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ : ಮದುವೆ ನಿಲ್ಲಿಸಲು ಎಚ್​ಐವಿ ಸೋಂಕಿದೆ ಎಂದು ಹೈಡ್ರಾಮ ಮಾಡಿದ ವರ; ದೂರು ದಾಖಲಿಸಿದ ವಧು

ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಶವಗಳನ್ನು ಮೇಲೆತ್ತಿ, ಮೃತ ದೇಹಗಳನ್ನು ಶವ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಬಗ್ಗೆ ಮಳಖೇಡ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
First published:December 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ