Mandya: ಪ್ರತ್ಯೇಕ ಪ್ರಕರಣ: ನಾಲೆಯಲ್ಲಿ ತೇಲಿ ಬಂದ ಅರ್ಧ ಕತ್ತರಿಸಿದ ಇಬ್ಬರು ಮಹಿಳೆಯರ ಮೃತದೇಹ

ಎರಡೂ ಶವಗಳದ್ದು ಅರ್ಧ ಭಾಗ ಕತ್ತರಿಸಿ ಚೀಲದಲ್ಲಿ ತುಂಬಿ ನೀರಿನಲ್ಲಿ ಬಿಡಲಾಗಿದೆ. ಎರಡೂ ಕೊಲೆಗಳನ್ನು ಒಬ್ಬರೇ ಮಾಡಿದ್ದರಾ ಅನ್ನೋ ಅನುಮಾನಗಳು ಸಹ ವ್ಯಕ್ತವಾಗಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Mandya Crime News: ಮಂಡ್ಯ ಜಿಲ್ಲೆಯ ಎರಡು ಕಡೆ ಹೊಟ್ಟೆ ಭಾಗದಿಂದ ಕೆಳಗೆ ಕತ್ತರಿಸಿರುವ ಇಬ್ಬರು ಮಹಿಳೆಯರ ಮೃತದೇಹಗಳು (Woman Deadbody) ನಾಲೆಯಲ್ಲಿ (Canal) ತೇಲಿ ಬಂದಿವೆ. ಇಷ್ಟು ಭಯಾನಕ ಕೊಲೆ ಕಂಡ  ಜನರು ಬೆಚ್ಚಿಬಿದ್ದಿದ್ದಾರೆ. ಇಬ್ಬರು ಮಹಿಳೆಯರ ಗುರುತು (Deadbody Identity) ಪತ್ತೆಯಾಗಿಲ್ಲ. ಹೊಟ್ಟೆ ಭಾಗದಿಂದ ಕೆಳಗೆ ಕತ್ತರಿಸಿದ ದೇಹದ ಭಾಗವನ್ನು ಚೀಲದಲ್ಲಿ ಕಟ್ಟಿ ನಾಲೆಯಲ್ಲಿ ತೇಲಿ ಬಿಡಲಾಗಿದೆ. ಬೇರೆ ಎಲ್ಲಿಯೋ ಕೊಲೆ ಮಾಡಿ, ಮೃತದೇಹವನ್ನು ಇಲ್ಲಿ ಬಂದು ಎಸೆದು ಹೋಗಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಮಂಡ್ಯ ಜಿಲ್ಲೆಯ ಪಾಂಡವಪುರ (Pandavapura) ಟೌನ್ ಪೊಲೀಸ್ ಹಾಗೂ ಶ್ರೀರಂಗಪಟ್ಟಣ (Srirangatna) ತಾಲೂಕಿನ ಅರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದೇ ದಿನ ಮಹಿಳೆಯರ ಕತ್ತರಿಸಿದ ಮೃತದೇಹ ಪತ್ತೆಯಾಗಿದೆ.

ಪಾಂಡವಪುರ ತಾಲೂಕಿನ ಬೇಬಿ ಕೆರೆ- ಕೆ.ಬೆಟ್ಟಹಳ್ಳಿ ಮಾರ್ಗ ಮಧ್ಯೆದಲ್ಲಿರುವ ನಾಲೆಯಲ್ಲಿ ಸುಮಾರು 30 ರಿಂದ 35 ವರ್ಷದ ಮಹಿಳೆ ಶವ ಪತ್ತೆಯಾಗಿದೆ. ಶವದ ಆರ್ಧಭಾಗ ಮಾತ್ರ ಸಿಕ್ಕಿದೆ. ಇತ್ತ  ಶ್ರೀರಂಗಪಟ್ಟಣ ತಾಲೂಕಿನ ಅರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಅರೆ ಕೆರೆ ಗ್ರಾಮದ ಬಳಿಯ ಸಿಡಿಎಸ್ ನಾಲೆಯಲ್ಲಿ‌ಯೂ ಶವ ತೇಲಿ ಬಂದಿದೆ.

ಚೀಲದಲ್ಲಿ ತುಂಬಿ ಶವ ಎಸೆದ್ರು

ಎರಡೂ ಶವಗಳದ್ದು ಅರ್ಧ ಭಾಗ ಕತ್ತರಿಸಿ ಚೀಲದಲ್ಲಿ ತುಂಬಿ ನೀರಿನಲ್ಲಿ ಬಿಡಲಾಗಿದೆ. ಎರಡೂ ಕೊಲೆಗಳನ್ನು ಒಬ್ಬರೇ ಮಾಡಿದ್ದರಾ ಅನ್ನೋ ಅನುಮಾನಗಳು ಸಹ ವ್ಯಕ್ತವಾಗಿವೆ. ಸದ್ಯ ಪೊಲೀಸರು ಮಹಿಳೆಯರ ಗುರುತು ಪತ್ತೆ ಮಾಡಲು ಮುಂದಾಗಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಒಟ್ಟಾರೆ ಎರಡು ಕೊಲೆಗಳಿಂದ ಜನರು ಬೆಚ್ಚಿಬಿದಿದ್ದಾರೆ.

ಇದನ್ನೂ ಓದಿ:  Murder: ಮಂಡ್ಯದಲ್ಲಿ ಕೊಲೆ, ಹಾಸನದಲ್ಲಿ ಸಿಕ್ಕಿತು ಡೆಡ್ ಬಾಡಿ; ಭೂಮಿಯೊಳಗೆ ಹುಗಿದಿತ್ತು ಸಾವಿನ ರಹಸ್ಯ!

ಮಂಡ್ಯದಲ್ಲಿ ನಾಲ್ವರು ಮಕ್ಕಳ ಜೊತೆ ಮಹಿಳೆ ಕೊಂದಿದ್ಯಾರು?

ಮನೆಯೊಳಗೆ ಬಿದ್ದಿರುವ ಒಂದರ ಜೊತೆ ಒಂದು ಶವಗಳು.  ದುಃಖ, ಆತಂಕದಿಂದ ಮನೆ ಮುಂದೆ ಜಮಾಯಿಸಿರುವ ನೂರಾರು ಜನರು.. ಮನೆಯನ್ನ ಸುತ್ತುವರೆದು ಕೊಲೆ ಸಂಬಂಧ ತನಿಖೆ ನಡೆಸ್ತಿರೋ ಪೊಲೀಸರು. ಪೊಲೀಸ್ ಶ್ವಾನ ಆರೋಪಿಗಳ ಸುಳಿವು ಪತ್ತೆಗೆ ಸರ್ಚ್ ಮಾಡ್ತಿರೊ ದೃಶ್ಯ. ಈ ಎಲ್ಲಾ ದೃಶ್ಯ ಕಂಡು ಬಂದಿದ್ದು, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ KRS ಗ್ರಾಮದಲ್ಲಿ.

KRSನ ಬಜಾರ್ ಲೈನ್ ನಲ್ಲಿ ಗಂಗಾರಾಮ್ ಎಂಬುವವರ ಕುಟುಂಬ ವಾಸವಿತ್ತು. ಬಟ್ಟೆ, ಅಲಂಕಾರಿಕ ವಸ್ತುಗಳನ್ನ ಹಳ್ಳಿ ಹಳ್ಳಿಗಳಲ್ಲಿ ತಿರುಗಿ ವ್ಯಾಪಾರ ಮಾಡಿಕೊಂಡಿದ್ದ ಈ ಕುಟುಂಬ, ಕಳೆದ 15-20 ವರ್ಷಗಳಿಂದ ಇಲ್ಲೇ ವಾಸವಿತ್ತು. ವ್ಯಾಪಾರ ಸಂಬಂಧ ಗಂಗಾರಾಮ್ ಎರಡು ದಿನಗಳ ಹಿಂದೆಯೇ ಹೊರ ರಾಜ್ಯಕ್ಕೆ ತೆರಳಿದ್ರು. ಗಂಗಾರಾಮ್ ಪತ್ನಿ ಲಕ್ಷ್ಮೀ, ತನ್ನ ಮೂವರು ಮಕ್ಕಳು ಹಾಗೂ ಅಣ್ಣನ ಮಗನ ಜೊತೆ ಮನೆಯಲ್ಲೇ ಮಲಗಿದ್ದರು. ಬೆಳಿಗ್ಗೆ ಎದ್ದು ನೋಡುವಷ್ಟರಲ್ಲಿ ಮನೆಯಲ್ಲಿದ್ದ ಐವರು ಭೀಕರವಾಗಿ ಹತ್ಯೆಯಾಗಿದ್ದಾರೆ.

ಇದನ್ನೂ ಓದಿ:  Mandya Murder: ಅಯ್ಯೋ ಪಾಪಿಗಳ.. ಆಸ್ತಿ, ಹಣಕ್ಕಾಗಿ ತಂದೆಯನ್ನೇ ಕೊಲೆ ಮಾಡಿದ ಮಕ್ಕಳು..!

ಶಾರ್ಫ್ ಆಯುಧಗಳಿಂದ ಭೀಕರವಾಗಿ ಕೊಲೆ

ಇನ್ನು ಮೃತ ಲಕ್ಷ್ಮಿ ಬೆಳಿಗ್ಗೆ 8 ಗಂಟೆಯಾದರು ಮನೆಯಿಂದ ಹೊರ ಬಾರದಿದ್ದಕ್ಕೆ ಪಕ್ಕದ ಮನೆಯ ಲಕ್ಷ್ಮಿ ಬಾಗಿಲ ಬಳಿ ಹೋಗಿದ್ದಾರೆ. ಈ ವೇಳೆ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆಯಲ್ಲಿ 30 ವರ್ಷದ ಲಕ್ಷ್ಮೀ, ಅಣ್ಣನ ಮಗ 12 ವರ್ಷದ ರಾಜ್, ತನ್ನ ಮಕ್ಕಳಾದ 8 ವರ್ಷದ ಗೋವಿಂದ, 7 ವರ್ಷದ ಕೋಮಲ್ ಹಾಗೂ 4 ವರ್ಷದ ಕುನಾಲ್ ಅವರನ್ನ ಶಾರ್ಫ್ ಆಯುಧಗಳಿಂದ ಭೀಕರವಾಗಿ ಕೊಲೆ ಮಾಡಿದ್ದಾರೆ. ಘಟನೆಗೆ ಕಾರಣ ಏನು ಅನ್ನೋದು ಇನ್ನು ಗೊತ್ತಿಲ್ಲ. ಈ ಭೀಕರ ಹತ್ಯೆಯಿಂದಾಗಿ ಇಡೀ KRS ಗ್ರಾಮವೇ ಬೆಚ್ಚಿಬಿದ್ದಿದ್ದು, ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು.
Published by:Mahmadrafik K
First published: