• Home
  • »
  • News
  • »
  • state
  • »
  • Mangaluru: 26ರ ಆರೋಪಿಯ ಬದಲಿಗೆ 46ರ ವ್ಯಕ್ತಿಯ ಬಂಧನ; ಪೊಲೀಸರಿಗೆ ಬಿತ್ತು ಭಾರೀ ದಂಡ

Mangaluru: 26ರ ಆರೋಪಿಯ ಬದಲಿಗೆ 46ರ ವ್ಯಕ್ತಿಯ ಬಂಧನ; ಪೊಲೀಸರಿಗೆ ಬಿತ್ತು ಭಾರೀ ದಂಡ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

10 ವರ್ಷದ ಹಿಂದೆ ಸಣ್ಣ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ವ್ಯಕ್ತಿಯನ್ನು ಪೋಕ್ಸೋ ಪ್ರಕರಣದಲ್ಲಿ ಬಂಧನ ಮಾಡಿರೋದು ಘೋರ ಅನ್ಯಾಯ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

  • Share this:

ಯಾವುದೇ ಕ್ರಿಮಿನಲ್ ಪ್ರಕರಣಗಳಲ್ಲಿ (Criminal Cases) ಭಾಗಿಯಾಗದ  ವ್ಯಕ್ತಿಯನ್ನು ಬಂಧಿಸಿ (Arrest) ಆತನ ವಿರುದ್ಧ ಪೋಕ್ಸ್ ಅಡಿಯಲ್ಲಿ (POCSO Case) ಹೊರಿಸಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ (Police Officer) ನ್ಯಾಯಾಲಯ (Court) 5 ಲಕ್ಷ ರೂಪಾಯಿ ದಂಡ ವಿಧಿಸಿ, ಸಂತ್ರಸ್ತ ವ್ಯಕ್ತಿಗೆ ಪರಿಹಾರ ನೀಡುವಂತೆ ಆದೇಶ ನೀಡಿದೆ. ಹಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್​ ಫಾಸ್ಟ್​ಟ್ರ್ಯಾಕ್ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ.ಎಂ.ರಾಧಾಕೃಷ್ಣ ಈ ಆದೇಶ ನೀಡಿದ್ದಾರೆ. ಅಂದಿನ ಪಾಂಡವೇಶ್ವರ ಮಹಿಳಾ ಪೊಲೀಸ್ ಠಾಣೆಯ (Pandeshwara Police Station) ಇನ್​ಸ್ಪೆಕ್ಟರ್ ರೇವತಿ ಮತ್ತು ಸಬ್​ಇನ್​ಸ್ಪೆಕ್ಟರ್ ರೋಸಮ್ಮ ವಿರುದ್ಧ ಕ್ರಮಕೈಗೊಳ್ಳಲು ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ತೀರ್ಪಿನ ರವಾನಿಸಲು ಸೂಚಿಸಲಾಗಿದೆ.


2021ರಲ್ಲಿ ಸಂತ್ರಸ್ತೆಯ ದೂರಿನ ಆಧಾರದಲ್ಲಿ ನವೀನ್ ಎಂಬಾತನ ವಿರುದ್ಧ ರೋಸಮ್ಮ, ಪೋಕ್ಸೋ ಕಾಯ್ದೆಯಡಿ ಸೆಕ್ಷನ್ 8, ಐಪಿಸಿ ಸೆಕ್ಷನ್ 374 ಅಡಿಯಲ್ಲಿ ಎಫ್​ಐಆರ್ ದಾಖಲಿಸಿದ್ದರು. ನಂತರ ಈ ಪ್ರಕರಣವನ್ನು ರೇವತಿ ಅವರಿಗೆ ಹಸ್ತಾಂತರಿಸಲಾಗಿತ್ತು.


26ರ ಬದಲು 46ರ ವ್ಯಕ್ತಿಯ ಬಂಧನ


ಮಂಗಳೂರು ಗ್ರಾಮಾಂತರ ಪೊಲೀಸರು ಎಫ್ಐಆರ್ ಅನ್ವಯ ಆರೋಪಿ 26 ವರ್ಷದ ನವೀನ್ ಬದಲಾಗಿ 46 ವರ್ಷದ ನವೀನ್ ಸಿಕ್ವೇರಾರರನ್ನು ಬಂಧಿಸಿದ್ದರು. ವಿಚಾರಣೆ ಸಮಯದಲ್ಲಿ ಬಂಧಿತ ವ್ಯಕ್ತಿ 26 ವರ್ಷದ ನವೀನ್ ಅಲ್ಲ ಎಂದು ಹೇಳಿದಾಗ ನ್ಯಾಯಾಲಯ ಅಧಿಕಾರಿಗಳ ವಿರುದ್ಧ ಚಾಟಿ ಬೀಸಿತ್ತು.


ಆರೋಪಿಯ ಪೂರ್ಣ ಹೆಸರು ಮಿಸ್


ಆರೋಪಿಯ ಬಂಧನದ ಬಳಿಕ ಅಪರಾಧ ಪ್ರಕರಣಗಳಲ್ಲಿ ಕಡ್ಡಾಯವಾಗಿ ಗುರುತಿನ ಪರೇಡ್ ನಡೆಸಿಲ್ಲ. ಸಿಆರ್‌ಪಿಸಿ ಸೆಕ್ಷನ್ 164 ರಲ್ಲಿ (ನ್ಯಾಯಾಂಗ ಮ್ಯಾಜಿಸ್ಟ್ರೇಟ್ ದಾಖಲಿಸಿದ ಸಂತ್ರಸ್ತೆಯ ಹೇಳಿಕೆ) ಆರೋಪಿಯ ಹೆಸರನ್ನು ಕೇವಲ ನವೀನ್ ಎಂದು ಬರೆಯಲಾಗಿದೆ ಎಂದು ರೋಸಮ್ಮ ಮತ್ತು ರೇವತಿ ಇಬ್ಬರೂ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದರು.


ಗಂಭೀರ ಆರೋಪಗಳು


10 ವರ್ಷದ ಹಿಂದೆ ಸಣ್ಣ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ವ್ಯಕ್ತಿಯನ್ನು ಪೋಕ್ಸೋ ಪ್ರಕರಣದಲ್ಲಿ ಬಂಧನ ಮಾಡಿರೋದು ಘೋರ ಅನ್ಯಾಯ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ. ಈ ಪ್ರಕರಣದಲ್ಲಿ ಆತ ಯಾವ ಭಾಗದಿಂದಲೂ ಸಂಪರ್ಕ ಹೊಂದಿರಲಿಲ್ಲ. ಪೊಲೀಸರ ನಿರ್ಲಕ್ಷ್ಯ ಮತ್ತು ಬೇಜಾವಾಬ್ದಾರಿತನದಿಂದ ನಮ್ಮ ಕಕ್ಷಿದಾರರು ಇಂತಹ ಗಂಭೀರ ಆರೋಪಗಳನ್ನು ಎದುರಿಸುವಂತಾಗಿದೆ ಎಂದು ವಕೀಲ ಅಮಟಾಡಿ ಹೇಳಿದ್ದಾರೆ.


ಪೋಕ್ಸೊ ಪ್ರಕರಣಗಳಲ್ಲಿ ಗಂಭೀರವಾದ ಕಾರ್ಯವಿಧಾನದ ಲೋಪಗಳು ಬಹಿರಂಗವಾಗಿವೆ. ಇದನ್ನು ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ) ಶ್ರೇಣಿಯ ಪೊಲೀಸ್ ಅಧಿಕಾರಿಗಳು ಪರಿಶೀಲಿಸುತ್ತಾರೆ ಎಂದು ಮಕ್ಕಳ ಹಕ್ಕುಗಳ ಕಾರ್ಯಕರ್ತರು ವಾದಿಸಿದರು.


ಇದನ್ನೂ ಓದಿ: ಹಿರಿಯ ಹಸುವಿನ ಅಂತ್ಯ ಸಂಸ್ಕಾರ ವೇಳೆ ನಡೆಯಿತು ಅಚ್ಚರಿ; ಗೋವುಗಳ ಅಂತಃಕರಣ ಕಂಡು ಸ್ವಾಮೀಜಿಗಳೇ ಮೂಕರಾದರು!


ಒಂದು ವರ್ಷದ ಬಳಿಕ ಜೈಲಿನಿಂದ ಹೊರಕ್ಕೆ


ನೈಜ ಆರೋಪಿಯನ್ನು ಬಂಧಿಸುವುದು ಸೇರಿದಂತೆ ಮುಂದಿನ ಕ್ರಮ ಕೈಗೊಳ್ಳಲು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಅವರು ನವೀನ್ ಪ್ರಕರಣವನ್ನು ಸಂಜೆ ತಮ್ಮ ಕಚೇರಿಗೆ ತಲುಪಿಸಿದ್ದಾರೆ ಎಂದು ಮಹಿಳಾ ಪೊಲೀಸ್ ಠಾಣೆಯ ಮೂಲಗಳು ತಿಳಿಸಿವೆ. ಒಂದು ವರ್ಷದ ಜೈಲುವಾಸದ ನಂತರ ಬಿಡುಗಡೆಯಾದ ನವೀನ್ ಸಿಕ್ವೇರಾ ಗುರುವಾರ ತನ್ನ ಸೆಲ್‌ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ.


ಇದನ್ನೂ ಓದಿ: Handcuff Rules: ಬಂಧನದ ವೇಳೆ ಸುಮ್ ಸುಮ್ಮನೆ ಕೈಗೆ ಕೋಳ ಹಾಕಿದ್ರೆ ಪೊಲೀಸರಿಗೆ ಲಕ್ಷ ಲಕ್ಷ ದಂಡ: ಹೈಕೋರ್ಟ್


Bhadravati: ಬೀದಿ ನಾಯಿಗಳ ದಾಳಿಗೆ 4 ವರ್ಷದ ಬಾಲಕ ಬಲಿ


ಬೀದಿನಾಯಿಗಳ (Stray Dogs) ಹಾವಳಿ ದಿನೇ ದಿನೇ ಹೆಚ್ಚುತ್ತಿದ್ದು, ಅಮಾಯಕರು ಈ ಶ್ವಾನಗಳಿಗೆ ಬಲಿಯಾಗುತ್ತಿದ್ದಾರೆ. ಸದ್ಯ ಭದ್ರಾವತಿಯ (Bhardavati) ಸೈಯದ್ ನಸ್ರುಲ್ಲಾ ಅವರ ಪುತ್ರ ಸೈಯದ್ ಹರ್ಷದ್ ಮದನಿ ಕೂಡಾ ಈ ಸಾಲಿಗೆ ಸೇರ್ಪಡೆಯಾಗಿದ್ದಾನೆ. ನಾಲ್ಕು ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ,- ಆತನನ್ನು ಬಲಿ ಪಡೆದಿವೆ

Published by:Mahmadrafik K
First published: