ಜಡೆ ಜಗಳ: ಗಂಡನಿಗಾಗಿ ಹೊಡೆದಾಡಿಕೊಂಡ ಇಬ್ಬರು ಹೆಂಡತಿಯರು!


Updated:August 31, 2018, 5:51 PM IST
ಜಡೆ ಜಗಳ: ಗಂಡನಿಗಾಗಿ ಹೊಡೆದಾಡಿಕೊಂಡ ಇಬ್ಬರು ಹೆಂಡತಿಯರು!

Updated: August 31, 2018, 5:51 PM IST
ಹೆಚ್​ಎಂಪಿ ಕುಮಾರ್​, ನ್ಯೂಸ್​ 18 ಕನ್ನಡ

ದಾವಣಗೆರೆ(ಆ.31): ಗಂಡನಿಗಾಗಿ ಇಬ್ಬರು ಹೆಂಡತಿಯರು ಜಡೆಜಗಳವಾಡಿದ್ದಾರೆ. ತಾಳಿ ಕಟ್ಟಿದ ಗಂಡ ಬೆಂಗಳೂರಿಗೆ ಕೆಲಸಕ್ಕೆ ಹೋಗುವ ಬದಲು ಬೇರೆ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಇಟ್ಕೊಂಡಿದ್ದ. ಇದರಿಂದ ಕೆರಳಿದ ಮೊದಲನೇ ಪತ್ನಿ ಸವತಿಗೆ ಹಿಗ್ಗಾಮುಗ್ಗಾ ಥಳಿಸಿ ಚಳಿಜ್ವರ ಬಿಡಿಸಿದ್ದು, ಗಂಡ ಬೇಕೆಂದು ದುಂಬಾಲು ಬಿದ್ದಿದ್ದಾಳೆ. ಅಷ್ಟಕ್ಕೂ ಈ ಘಟನೆ ನಡೆದಿದ್ದು ಎಲ್ಲಿ ಅಂತೀರಾ ಇಲ್ಲಿದೆ ವಿವರ

ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಪುಣಬಗಟ್ಟ ಗ್ರಾಮದ ಭಾಗ್ಯ ಎಂಬುವರಿಗೆ ಅದೇ ಗ್ರಾಮದ ವಸಂತ್ ಜೊತೆ ಒಂಬತ್ತು ವರ್ಷಗಳ ಹಿಂದೆ ವಿವಾಹವಾಗಿತ್ತು. ಇಬ್ಬರ ದಾಂಪತ್ಯಕ್ಕೆ ಒಂದು ಗಂಡು, ಒಂದು ಹೆಣ್ಣು ಮಗು ಕೂಡ ಇದೆ. ಭಾಗ್ಯ ಅನಾಥ ಯುವತಿಯಾಗಿದ್ದರಿಂದ ವಸಂತ್ ಆಕೆಯನ್ನ ಮದುವೆಯಾಗಿದ್ದ. ಇಬ್ಬರೂ ಚೆನ್ನಾಗಿಯೇ ಜೀವನ ನಡೆಸುತ್ತಿದ್ದರು. ಆದ್ರೆ ಮೂರು ವರ್ಷಗಳ ಹಿಂದೆ ವಸಂತ್ ಬೆಂಗಳೂರಿನ ಖಾಸಗಿ ಸಂಸ್ಥೆಗೆ ಕೆಲಸಕ್ಕೆ ಹೋಗಿದ್ದಾನೆ. ಆಗ ಪತಿ ತಿಂಗಳಿಗೆ ಒಂದು ಬಾರಿ ಬಂದು ಹೋಗಿ ಮಾಡುತ್ತಿದ್ದ. ಗಂಡ ದುಡಿಮೆ ಮಾಡಲು ಹೋಗಿದ್ದಾನೆ ಎಂದು ತಿಳಿದ ಭಾಗ್ಯ ಪತಿಗಾಗಿ ಕಾಯುತ್ತಿದ್ದಳು. ಆದರೆ ಹೋದ ಪತಿ ಕೊನೆಗೆ ಮನೆಗೆ ಬರುವುದನ್ನೇ ಬಿಟ್ಟಿದ್ದ. ಏಕೆಂದರೆ ಆತನಿಗೆ ಕವಲೆತ್ತು ಗ್ರಾಮದ ರೇಖಾ ಜೊತೆ ಸಂಬಂಧ ಇಟ್ಟುಕೊಂಡಿದ್ದ. ಈ ವಿಚಾರ ತಿಳಿದು ಕವಲೆತ್ತು ಗ್ರಾಮದ ರೇಖಾಳ ಮನೆಗೆ ಹೋದ ಭಾಗ್ಯ ಆಕೆಗೆ ಹಿಗ್ಗಾಮುಗ್ಗಾ ಥಳಿಸಿದ್ದಾಳೆ.

ವಂಸತ್ ಕೆಲಸಕ್ಕೆಂದು ಹೋದವನು ರೇಖಾ ಜೊತೆ ಸಂಬಂಧ ಇಟ್ಕೊಂಡು ಆಕೆಯೊಂದಿಗೆ ಇರುತ್ತಿದ್ದ. ಈ ವಿಚಾರ ತಿಳಿದ ಭಾಗ್ಯ ಆಕೆಯ ಮನೆಯ ಮೇಲೆ ದಾಳಿ ಮಾಡಿದ್ದಾಳೆ. ಪತಿ ವಸಂತ್ ಕೂಡ ಆಕೆಯೊಂದಿಗೆ ಇದ್ದಾನೆ ಎಂಬ ಮಾಹಿತಿ ಪಡೆದ ಮೇಲೆ ಭಾಗ್ಯ ಅಲ್ಲಿಗೆ ಹೋಗಿದ್ದಾಳೆ. ಆದರೆ ವಂಸತ್ ಅಲ್ಲಿ ಇರಲಿಲ್ಲ. ರೇಖಾಳನ್ನು ಕಂಡ ವಸಂತ್ ಮೊದಲ ಪತಿ ಆಕ್ರೋಶಗೊಂಡು ಆಕೆಗೆ ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಈ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಕುಮಾರಪಟ್ಟಣಂ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಇತ್ತಾ ಭಾಗ್ಯ ತನಗೆ ಪತಿ ಬೇಕೆಂದು ಪಟ್ಟು ಹಿಡಿದಿದ್ದು, ಪತಿ ಮನೆಗೆ ಬರುವಂತೆ ಮನವಿ ಮಾಡಿಕೊಂಡಿದ್ದಾಳೆ.

ಇದೀಗ ಗಂಡನಿಗಾಗಿ ನಡೆದ ಜಡೆ ಜಗಳ ತಾರಕ್ಕೇರಿದೆ. ಇತ್ತ ಪತಿ ವಸಂತ್ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಏನೇ ಆಗಲೀ ಇದೀಗ ಭಾಗ್ಯ ಗಂಡನಿಗಾಗಿ ಪಟ್ಟು ಹಿಡಿದಿದ್ದು, ಮುಂದೆ ಇದು ಯಾವ ಹಂತಕ್ಕೆ ತಲುಪುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
First published:August 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...