ಎರಡು ಸಾವಿರ ಲಂಚ: ಎಸಿಬಿ ಬಲೆಗೆ ಚಾಮರಾಜನಗರದ ಸರ್ವೇ ಸೂಪರ್ ವೈಸರ್

ತಾಲೂಕು ಕಚೇರಿಯಲ್ಲಿರುವ  ಸರ್ವೆ ಇಲಾಖೆಯ ಸೂಪರ್ ವೈಸರ್ ನಾಗರಾಜು ಎಂಬುವರು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು  ಬೀಸಿದ ಬಲೆಗೆ ಸಿಕ್ಕಿಬಿದ್ದಿದ್ದು ಈಗ ಜೈಲುಪಾಲಾಗಿದ್ದಾರೆ. 

ಎಸಿಬಿ ಕಚೇರಿ

ಎಸಿಬಿ ಕಚೇರಿ

  • Share this:
ಚಾಮರಾಜನಗರ (ಡಿ. 09) ಕೇವಲ ಎರಡು ಸಾವಿರ ರೂಪಾಯಿಗೆ ಲಂಚಕ್ಕೆ ಕೈಒಡ್ಡಿದ  ಸರ್ವೆ ಇಲಾಖೆ ಸೂಪರ್ ವೈಸರ್ ಒಬ್ಬರು ಭ್ರಷ್ಟಾಚಾರ ನಿಗ್ರಹದಳದ ಬಲೆಗೆ ಬಿದ್ದು ಕಂಬಿ ಎಣಿಸುವಂತಾಗಿದೆ. ತಾಲೂಕು ಕಚೇರಿಯಲ್ಲಿರುವ  ಸರ್ವೆ ಇಲಾಖೆಯ ಸೂಪರ್ ವೈಸರ್ ನಾಗರಾಜು ಎಂಬುವರು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು  ಬೀಸಿದ ಬಲೆಗೆ ಸಿಕ್ಕಿಬಿದ್ದಿದ್ದು ಈಗ ಜೈಲುಪಾಲಾಗಿದ್ದಾರೆ.  ತಾಲೂಕಿನ ಚಿಕ್ಕಮೋಳೆ ಗ್ರಾಮದ  ಮಹೇಶ್ ಎಂಬುವರ ತಂದೆ ರಂಗಶೆಟ್ಟಿ ಎಂಬ ರೈತರ  ಹೆಸರಿನಲ್ಲಿ ಸರ್ವೆ ನಂಬರ್ 45/1ರಲ್ಲಿ 1ಎಕರೆ 22 ಗುಂಟೆ ಜಮೀನಿದ್ದು ಈ ಪೈಕಿ 31 ಗುಂಟೆ ಜಮೀನನ್ನು ಪೋಡಿ ಮಾಡಿಕೊಡಲು ರಂಗಶೆಟ್ಟಿ ತಹಸೀಲ್ದಾರ್ ಕಚೇರಿಗೆ ಅರ್ಜಿ  ಸಲ್ಲಿಸಿದ್ದ ಮೇರೆಗೆ ಈ ಜಮೀನುನ್ನು ಸರ್ವೆ ಮಾಡಲಾಗಿತ್ತು. ಆದರೆ ಪೋಡಿ ಮಾಡಿಕೊಟ್ಟಿರಲಿಲ್ಲ ಈ  ಬಗ್ಗೆ ರೈತ ಮಹೆಶ್ ಅವರು ಸರ್ವೆ ಇಲಾಖೆ ಸೂಪರ್ ವೈಸರ್ ನಾಗರಾಜು ಅವರನ್ನು ಭೇಟಿ ಮಾಡಿ ವಿಚಾರಿಸಿದ್ದಾರೆ. ಈ ವೇಳೆ ಎರಡು ಸಾವಿರ ರೂಪಾಯಿ ಲಂಚ ನೀಡುವಂತೆ ನಾಗರಾಜು ಬೇಡಿಕೆ ಇಟ್ಟಿದ್ದರು.

ಈ ಬಗ್ಗೆ ರೈತ ಮಹೇಶ್ ಚಾಮರಾಜನಗರದ ಭ್ರಷ್ಟಾಚಾರ ನಿಗ್ರಹದಳದ ಕಚೇರಿಗೆ ಭೇಟಿ ನೀಡಿ ದೂರು ನೀಡಿದ್ದರು. ಈ ಬಗ್ಗೆ ಭ್ರಷ್ಟಾಚಾರ ನಿಗ್ರಹದಳದ ಠಾಣೆಯಲ್ಲಿ ಕಲಂ 7(ಎ) ಪಿ.ಸಿ.ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಂಡ  ಅಧಿಕಾರಿಗಳು ನಾಗಾರಾಜು ಅವರನ್ನು ಟ್ರ್ಯಾಪ್ ಮಾಡಲು ಕಾರ್ಯತಂತ್ರ ರೂಪಿಸಿದರು.

ಇದನ್ನು ಓದಿ: ಇನ್ಮುಂದೆ ಮೈಸೂರು ಮುಕ್ತ ವಿವಿಯಿಂದ ಮಾತ್ರ ದೂರಶಿಕ್ಷಣಕ್ಕೆ ಅವಕಾಶ; ಬೆಂಗಳೂರು ವಿವಿ ಹೆಸರು ಬದಲಿಗೆ ಸದನದಲ್ಲಿ ಅಂಗೀಕಾರ

ಅದರಂತೆ ಇಂದು  ಸರ್ವೆ ಕಚೇರಿ ಆವರಣದಲ್ಲಿ ಮಹೇಶ್ ಅವರಿಂದ ನಾಗರಾಜು ಅವರು ರೈತ ಮಹೇಶ್ ಅವರಿಂದ ಎರಡು ಸಾವಿರ ರೂಪಾಯಿ ಸ್ವೀಕರಿಸುತ್ತಿದ್ದಾಗ ಚಾಮರಾಜನಗರ ಜಿಲ್ಲಾ ಭ್ರಷ್ಟಾಚಾರ ನಿಗ್ರಹದ ದಳದ ಸದಾನಂದ ತಿಪ್ಪಣವರ್, ಇನ್ಡ್ಪೆಕ್ಟರ್ ಗಳಾದ ಕಿರಣ್ ಕುಮಾರ್, ಎಲ್ ದೀಪಕ್ ಅವರು ದಾಳಿ ನಡೆಸಿ  ನಾಗರಾಜು ಅವರನ್ನು ರೆಡ್ ಹ್ಯಾಂಡ್ ಆಗಿ  ಹಿಡಿದಿದ್ದಾರೆ.

ಲಂಚದ ಹಣವನ್ನು ವಶಪಡಿಸಿಕೊಂಡಿರುವ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಸರ್ವೆ ಸೂಪರ್ ವೈಸರ್ ನಾಗರಾಜು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಧೀಶರು ಆರೋಪಿ ನಾಗರಾಜು ಅವರನ್ನು ನ್ಯಾಯಾಂಗಬಂಧನದಲ್ಲಿಡಲು ಆದೇಶಿಸಿದ್ದಾರೆ

(ವರದಿ: ಎಸ್.ಎಂ.ನಂದೀಶ್ )
Published by:Seema R
First published: