ಬೈಕ್​​​ ಜೊತೆ ಸೆಲ್ಪಿ ತೆಗೆದು ಕೊಳ್ಳುವುದಾಗಿ ಹೇಳಿ ಗಾಡಿ​​​ ಸಮೇತ ಪರಾರಿಯಾದ ಖದೀಮರು

ಸಿನಿಮಿಯ ರೀತಿ ಅಪರಾಧ ಪ್ರಕರಣವೊಂದು ನಡೆದಿದೆ. ಹೋಂಡಾ ಆಕ್ಟೀವಾದಲ್ಲಿ ಬಂದಿದ್ದ ಇಬ್ಬರು ಖದೀಮರು ಹೋಂಡಾ ಗೋಲ್ಡ್ ವಿಂಗ್ ಬೈಕ್ ಅನ್ನ ನೋಡಿ ಆಕರ್ಷಿತರಾಗಿದ್ದರು. ಅದರ ಮೇಲೆ ಕುಳಿತು ಫೋಟೊ ಕ್ಲಿಕ್ಕಿಸಿಕೊಳ್ಳುತ್ತೇವೆ ಅನ್ನುತ್ತ ಅದನ್ನೇ ಎಗರಿಸಿಕೊಂಡು ಹೋಗಿದ್ದಾರೆ.

G Hareeshkumar | news18
Updated:April 25, 2019, 3:40 PM IST
ಬೈಕ್​​​ ಜೊತೆ ಸೆಲ್ಪಿ ತೆಗೆದು ಕೊಳ್ಳುವುದಾಗಿ ಹೇಳಿ ಗಾಡಿ​​​ ಸಮೇತ ಪರಾರಿಯಾದ ಖದೀಮರು
ಬೈಕ್​​ ಕಳ್ಳ
G Hareeshkumar | news18
Updated: April 25, 2019, 3:40 PM IST
ಬೆಂಗಳೂರು (ಏ.25) : ನಿಮ್ಮ ಬೈಕ್​​​​ ಚೆನ್ನಾಗಿದೆ ಸೆಲ್ಪಿ ತೆಗೆದುಕೊಳ್ಳುತ್ತೇವೆ ಅಂತಾ ಹೇಳಿ ಗಾಡಿಜೊತೆ ಖದೀಮರು ಸಿನಿಮಯ ರೀತಿಯಲ್ಲಿ ಪರಾರಿಯಾದ ಘಟನೆ ನಗರದ ಕೋರಮಂಗಲದ ಬೆಥಾನಿ ಸ್ಕೂಲ್​​ ಬಳಿ ನಡೆದಿದೆ.

ಹೋಂಡಾ ಗೋಲ್ಡ್ ವಿಂಗ್ ಎಂಬ ಬೈಕ್​ನ್ನ ಗಣೇಶ್ ಗೌಡ ಎಂಬುವರು ಖರೀದಿಸಿ ರಸ್ತೆಯಲ್ಲಿ ತೆರಳುತ್ತಿದ್ದರು. ಈ ವೇಳೆ ಗೋಲ್ಡ್ ವಿಂಗ್ ಬೈಕ್ ಎಲ್ಲಾ ಸಾರ್ವಜನಿಕರನ್ನ ಆಕರ್ಷಣೆ ಮಾಡ್ತಿತ್ತು. ಹಾಗೆ ಹೋಂಡಾ ಆಕ್ಟೀವಾದಲ್ಲಿ ಬಂದಿದ್ದ ಇಬ್ಬರು ಖದೀಮರು ಬೈಕ್ ಮಾಲೀಕ ಗಣೇಶ್ ಗೌಡರನ್ನ ಮಾತಿಗೆಳೆದು ಮೊದಲು ವಿದೇಶಿ ಬೈಕ್ ಚೆನ್ನಾಗಿದೆ. ಅದರಲ್ಲಿ ಕುಳಿತು ಒಂದು ಸೆಲ್ಪಿ ತೆಗೆದುಕೊಳ್ತೇವೆ ಎಂದು ಮನವಿ ಮಾಡಿ ಫೋಟೋ ಕ್ಲಿಕ್ಕಿಸಿಕೊಂಡರು.

ಇದನ್ನೂ ಓದಿ :  ಶೋರೂಂ ಮುಂದೆ ನಿಲ್ಲಿಸಿದ ಬೈಕ್ ನಾಪತ್ತೆ- ಸಿಸಿಟಿವಿಯಲ್ಲಿ ಪತ್ತೆಯಾಯ್ತು ಕಳ್ಳನ ಕರಾಮತ್ತು

ಬೈಕ್ ಕೀ ಕಸಿದು ಬೈಕ್​​ ಮಾಲೀಕ ಗಣೇಶ್ ಅವರಿಗೆ  ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಬೆರಳುಗಳಿಗೆ ನಕ್ಕಲ್ ಧರಿಸಿ ಪಂಚ್ ನೀಡಿದ್ದ ಅಪರಿಚಿತರು ಎನ್ನಲಾಗಿದೆ. ಈ ಬಗ್ಗೆ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.

First published:April 25, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...