ಉಡುಪಿಯಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ: ಪೊಲೀಸರಿಂದ ತೀವ್ರ ವಿಚಾರಣೆ

ಬೆಂಗಳೂರು ಪೊಲೀಸರು ಉಡುಪಿಯಲ್ಲಿಂದು ನಸುಕಿನ ವೇಳೆ ಭಾರೀ ಕಾರ್ಯಾಚರಣೆ ನಡೆಸಿದ್ದರು. ಈ  ಕಾರ್ಯಾಚರಣೆಯಲ್ಲಿ ತಮಿಳುನಾಡಿನಲ್ಲಿ ಪೊಲೀಸ್ ಅಧಿಕಾರಿ ವಿಲ್ಸನ್ ಎಂಬುವರನ್ನು ಹತ್ಯೆಗೈದು ತಪ್ಪಿಸಿಕೊಂಡಿದ್ದ ಇಬ್ಬರು ಉಗ್ರರನ್ನು ವಶಕ್ಕೆ ಪಡೆದಿದ್ದಾರೆ ಎಂದೇಳಲಾಗುತ್ತಿದೆ.

news18-kannada
Updated:January 14, 2020, 3:32 PM IST
ಉಡುಪಿಯಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ: ಪೊಲೀಸರಿಂದ ತೀವ್ರ ವಿಚಾರಣೆ
ಬೆಂಗಳೂರು ಪೊಲೀಸರು ಉಡುಪಿಯಲ್ಲಿಂದು ನಸುಕಿನ ವೇಳೆ ಭಾರೀ ಕಾರ್ಯಾಚರಣೆ ನಡೆಸಿದ್ದರು. ಈ  ಕಾರ್ಯಾಚರಣೆಯಲ್ಲಿ ತಮಿಳುನಾಡಿನಲ್ಲಿ ಪೊಲೀಸ್ ಅಧಿಕಾರಿ ವಿಲ್ಸನ್ ಎಂಬುವರನ್ನು ಹತ್ಯೆಗೈದು ತಪ್ಪಿಸಿಕೊಂಡಿದ್ದ ಇಬ್ಬರು ಉಗ್ರರನ್ನು ವಶಕ್ಕೆ ಪಡೆದಿದ್ದಾರೆ ಎಂದೇಳಲಾಗುತ್ತಿದೆ.
  • Share this:
ಬೆಂಗಳೂರು(ಜ.14): ಉಡುಪಿ ರೈಲ್ವೆ ನಿಲ್ದಾಣದಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನವಾಗಿದೆ. ಉಡುಪಿ-ಬೆಂಗಳೂರು ಪೊಲೀಸರ ಜಂಟಿ ಕಾರ್ಯಾಚರಣೆ ವೇಳೆ ಅಲ್​​​-ಉಮ್ರ ಸಂಘಟನೆಗೆ ಸೇರಿದ ಉಗ್ರರು ಸಿಕ್ಕಿಬಿದ್ದಿದ್ದಾರೆ ಎನ್ನುತ್ತಿವೆ ಮೂಲಗಳು.

ಬೆಂಗಳೂರು ಪೊಲೀಸರು ಉಡುಪಿಯಲ್ಲಿಂದು ನಸುಕಿನ ವೇಳೆ ಭಾರೀ ಕಾರ್ಯಾಚರಣೆ ನಡೆಸಿದ್ದರು. ಈ  ಕಾರ್ಯಾಚರಣೆಯಲ್ಲಿ ತಮಿಳುನಾಡಿನಲ್ಲಿ ಪೊಲೀಸ್ ಅಧಿಕಾರಿ ವಿಲ್ಸನ್ ಎಂಬುವರನ್ನು ಹತ್ಯೆಗೈದು ತಪ್ಪಿಸಿಕೊಂಡಿದ್ದ ಇಬ್ಬರು ಉಗ್ರರನ್ನು ವಶಕ್ಕೆ ಪಡೆದಿದ್ದಾರೆ ಎಂದೇಳಲಾಗುತ್ತಿದೆ.

ಬಂಧಿತ ಉಗ್ರರ ಬಗ್ಗೆ ಮಾಹಿತಿ ನೀಡಲು ಸ್ಥಳಿಯ ಪೊಲೀಸರು ನಿರಾಕರಿಸಿದ್ದಾರೆ. ಇಬ್ಬರು ಉಗ್ರರು ಕೇರಳ ಮೂಲಕ ಕರಾವಳಿಗೆ ಆಗಮಿಸಿರುವ ಶಂಕೆಯಂತೂ ವ್ಯಕ್ತವಾಗಿದೆ. ಹಾಗಾಗಿ ಈ ಭಯೋತ್ಪಾದಕರನ್ನು ಬಂಧಿಸಿ ಈಗ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.

ಜನವರಿ 8ನೇ ತಾರೀಕು ಬುಧವಾರ ರಾತ್ರಿ ತಮಿಳುನಾಡು ಪೊಲೀಸ್​​ ಅಧಿಕಾರಿ ವಿಲ್ಸನ್ ಎಂಬುವರು​ ಕಲಿಯಕ್ಕಾವಿಲೈ ಚೆಕ್‌ಪೋಸ್ಟ್‌ ಬಳಿ ಹತ್ಯೆಯಾಗಿದ್ದರು. ಅವರ ದೇಹದಲ್ಲಿ ಇರಿತದ ಗಾಯಗಳಿದ್ದವು. ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದ ಪೊಲೀಸರು ಆರೋಪಿಗಳಾದ ಶಮೀಮ್ ಮತ್ತು ತೌಫಿಕ್ ಎಂಬುವವರನ್ನು ಬಂಧಿಸಿದ್ದರು.

ಇದನ್ನೂ ಓದಿ: ಮೂವರು ಉಗ್ರರಿಗೆ ಮನೆಯಲ್ಲಿ ಆಶ್ರಯ: ಜಮ್ಮು-ಕಾಶ್ಮೀರದ ಡಿವೈಎಸ್​​​ಪಿ ದೇವೇಂದರ್​​ ಸಿಂಗ್ ಅಮಾನತು

ಬೆಂಗಳೂರಿನಲ್ಲಿ ಇಮ್ರಾನ್ ಖಾನ್, ಹನೀಫ್, ಝಿಯಾದ್ ಎಂಬುವವರನ್ನು ಬಂಧಿಸಿದಕ್ಕೆ ಪ್ರತೀಕಾರವಾಗಿ ಅಧಿಕಾರಿಯನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದರು. ವಿಲ್ಸನ್​​ ಹತ್ಯೆಗೈದು ಪೊಲೀಸರಿಂದ ಬಂಧನಕ್ಕೀಡಾಗಿದ್ದಾರೆನ್ನಲಾದ ಶಮೀಮ್​​ ಮತ್ತು ತೌಫಿಕ್ ತಮಿಳುನಾಡಿನಿಂದ ತಪ್ಪಿಸಿಕೊಂಡಿದ್ಧಾರೆ. ಇವರಿಗಾಗಿ ಎನ್​​ಐಎ ತಂಡ ಶೋಧಕಾರ್ಯ ನಡೆಸುತ್ತಿದೆ. ಈ ಮಧ್ಯೆ ಉಡುಪಿಯಲ್ಲಿ ರಾಜ್ಯದ ಪೊಲೀಸ ಬಲೆಗೆ ಸಿಕ್ಕಿಬಿದ್ದಿದ್ದಾರೆ.
First published:January 14, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading