ಅಕ್ಕ-ತಂಗಿಯ ಪುಷ್ಪ ಕೃಷಿ ಕಮಾಲ್; ಗುಲಾಬಿಯಿಂದ ಗುಲ್ಕಂದ್ವರೆಗೂ ಉಪ ಉತ್ಪನ್ನ ತಯಾರಿಸಿ ಯಶಸ್ವಿ ಉದ್ಯಮ
ರಾಧಿಕಾ ಹಾಗೂ ಸಂಗೀತ ಎಂಟು ವರ್ಷಗಳ ಹಿಂದೆ ಪುಷ್ಪಕೃಷಿ ಆರಂಭಿಸಿದಾಗ, ನೀರಿನ ತೊಂದರೆಯಿತ್ತು. ಆ ಸಂದರ್ಭದಲ್ಲಿ ಕೊಡದಲ್ಲಿ ನೀರು ತಂದು ಗಿಡಗಳಿಗೆ ಎರೆಯುವ ಮೂಲಕ ಎರಡು ವರ್ಷಗಳ ಕಾಲ ನಿರ್ವಹಣೆ ಮಾಡಿಕೊಂಡು ಬಂದಿದ್ದಾರೆ
news18-kannada Updated:March 7, 2020, 5:39 PM IST

ರಾಧಿಕಾ ಹಾಗೂ ಸಂಗೀತ
- News18 Kannada
- Last Updated: March 7, 2020, 5:39 PM IST
ಕಲಬುರ್ಗಿ(ಮಾ.07): ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಈ ಸಹೋದರಿಯರು. ಇಲ್ಲಿಬ್ಬರು ಮಹಿಳೆಯರು ಜೊತೆಗೂಡಿ ಗುಲಾಬಿ ಪುಷ್ಪಕೃಷಿ ಮಾಡಿದ್ದಾರೆ. ಗುಲಾಬಿ ಹೂವಿನಿಂದ ಗುಲ್ಕಂದ್, ರೋಜ್ ವಾಟರ್, ರೋಸ್ ಸಿರಪ್, ಸುಗಂಧ ದ್ರವ್ಯ, ಐ ಡ್ರಾಪ್ ಮಾಡಿ ಉದ್ಯಮ ಸ್ವರೂಪವನ್ನೂ ನೀಡಿದ್ದಾರೆ. ಬಂಜರು ಭೂಮಿಯಲ್ಲಿ ಪುಷ್ಪ ಕೃಷಿ ಮಾಡಿ, ಅದರೊಂದಿಗೆ ಉಪ ಉತ್ಪನ್ನಗಳನ್ನು ತಯಾರಿಸಿ ಕೃಷಿಗೆ ಪೂರಕವಾದ ಉದ್ಯಮ ನಿರ್ಮಾಣ ಮಾಡಿದ್ದಾರೆ.
ಅದು ಬಂಜರು ಭೂಮಿ. ಕಲ್ಲು-ಮುಳ್ಳಿನಿಂದ ಕೂಡಿದ ಜಮೀನು. ಅಂತಹ ಜಮೀನಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುವ ಮೂಲಕ ಯಶಸ್ಸಿನ ಮೆಟ್ಟಿಲುಗಳನ್ನು ಹತ್ತುತ್ತಿದ್ದಾರೆ ಈ ಅಕ್ಕ-ತಂಗಿ. ಸಾಮಾನ್ಯವಾಗಿ ರೈತರು ತೋಟಗಾರಿಕೆ ಬೆಳೆಗಳನ್ನು ಬೆಳೆದು ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಕೈತೊಳೆದುಕೊಳ್ಳುತ್ತಾರೆ. ಆದರೆ ಈ ಮಹಿಳೆಯರು ಮಾತ್ರ ತಾವು ಹೊಲದಲ್ಲಿ ಬೆಳೆದ ಬೆಳೆಯನ್ನು ಮಾರಾಟ ಮಾಡದೆ, ಅದರಿಂದ ಉಪ ಉತ್ಪನ್ನಗಳನ್ನು ಮಾಡಿ, ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ. ಹೀಗೆ ಕೃಷಿಗೆ ಪೂರಕವಾದ ಉದ್ಯಮ ಸೃಷ್ಟಿಸಿ, ಇಡೀ ರಾಜ್ಯಕ್ಕೆ ಮಾದರಿಯಾಗಿರುವ ಮಹಿಳೆಯರು ಸಂಗೀತಾ ತಾಪಡಿಯಾ ಹಾಗೂ ರಾಧಿಕಾ ತಾಪಡಿಯಾ. ಬಲದೇವಾ ತಾಪಡಿಯಾ ಹಾಗೂ ರಮೇಶ್ ತಾಪಡಿಯಾರ ಪತ್ನಿಯರಾದ ಈ ಇಬ್ಬರು ಮಹಿಳೆಯರು, ಕಲಬುರ್ಗಿ ಜಿಲ್ಲೆ ಸೇಡಂ ತಾಲೂಕಿನ ಸಟಪಟನಹಳ್ಳಿ ಗ್ರಾಮದಲ್ಲಿ ಐದು ಎಕರೆ ಪ್ರದೇಶದಲ್ಲಿ ಪುಷ್ಪಕೃಷಿ ಮಾಡುತ್ತಿದ್ದಾರೆ.
ಎಂಟು ವರ್ಷಗಳ ಹಿಂದೆ ಬಂಜರು ಭೂಮಿಯನ್ನು ತೆಗೆದುಕೊಂಡಾಗ ಬೇರೆ ರೈತರ ರೀತಿಯಲ್ಲಿಯೇ ತೊಗರಿ ಇತ್ಯಾದಿ ಬೆಳೆ ಹಾಕಿದ್ದರು. ನಂತರ ತರಕಾರಿ ಬೆಳೆಯುವ ಸಾಹಸಕ್ಕೆ ಕೈ ಹಾಕಿದರು. ಅದೂ ಸಹ ಅಷ್ಟಾಗಿ ಯಶಸ್ಸು ಕಾಣದೇ ಇದ್ದಾಗ, ಪುಷ್ಪಕೃಷಿಗೆ ಮುಂದಾದರು. ಇವರ ಪುಷ್ಪಕೃಷಿ ಆರಂಭಗೊಂಡಿದ್ದು ಕೇವಲ ನಾಲ್ಕು ಗುಲಾಬಿ ಗಿಡಗಳಿಂದ. ನಾಲ್ಕು ಗಿಡಗಳಿಂದ ಆರಂಭಗೊಂಡು ಪುಷ್ಪಕೃಷಿ, ಈಗ 9 ಸಾವಿರ ಗಿಡಗಳವರೆಗೂ ಅಭಿವೃದ್ಧಿಗೊಂಡಿದೆ. ಐದು ಎಕರೆ ಪ್ರದೇಶದ ವ್ಯಾಪ್ತಿಯಲ್ಲಿ ಗುಲಾಬಿ ಹೂಗಳು ಕಂಗೊಳಿಸುತ್ತಿವೆ.
ಇದನ್ನೂ ಓದಿ : ಆಯುಧ ಹಿಡಿದ ಕೈಯಲ್ಲಿ ಸ್ಟೆತಸ್ಕೋಪ್ - ಕೊಲೆ ಶಿಕ್ಷೆಗೆ ಗುರಿಯಾದಾತ ಈಗ ಜೀವದಾತ ವೈದ್ಯ
ರಾಧಿಕಾ ಹಾಗೂ ಸಂಗೀತ ಎಂಟು ವರ್ಷಗಳ ಹಿಂದೆ ಪುಷ್ಪಕೃಷಿ ಆರಂಭಿಸಿದಾಗ, ನೀರಿನ ತೊಂದರೆಯಿತ್ತು. ಆ ಸಂದರ್ಭದಲ್ಲಿ ಕೊಡದಲ್ಲಿ ನೀರು ತಂದು ಗಿಡಗಳಿಗೆ ಎರೆಯುವ ಮೂಲಕ ಎರಡು ವರ್ಷಗಳ ಕಾಲ ನಿರ್ವಹಣೆ ಮಾಡಿಕೊಂಡು ಬಂದಿದ್ದಾರೆ. ಡ್ರಿಪ್ ಅಳವಡಿಕೆಯ ನಂತರ ಗುಲಾಬಿ ಕೃಷಿಯೂ ವಿಸ್ತರಣೆಗೊಂಡಿದ್ದು, ಹಂತ ಹಂತವಾಗಿ ಅಭಿವೃದ್ಧಿಗೊಳಿಸಲಾಗಿದೆ ಎನ್ನುತ್ತಾರೆ ಸಂಗೀತಾ ತಾಪಡಿಯಾ.
ಇಡೀ ಐದು ಎಕರೆ ಪ್ರದೇಶದಲ್ಲಿ ಒಂದೇ ಮಾದರಿಯ ಗುಲಾಬಿ ಹೂಗಳು ನಳನಳಿಸುತ್ತಿವೆ. ದೇಸಿ ಗುಲಾಬ್ ಅಥವಾ ಪಿಂಕ್ ಗುಲಾಬ್ ಎಂದು ಕರೆಯಲ್ಪಡುವ ಈ ತಳಿಯನ್ನು ರಾಜಸ್ಥಾನದಿಂದ ತಂದು ನಾಟಿ ಮಾಡಲಾಗಿದ್ದು, ಸಂಪೂರ್ಣ ಸಾವಯವ ಕೃಷಿ ಪದ್ಧತಿಯಲ್ಲಿ ಪುಷ್ಪಕೃಷಿ ಮಾಡಲಾಗುತ್ತಿದೆ. ಹೂವಿನ ಪ್ರಮಾಣ ಹೆಚ್ಚಾದಂತೆಲ್ಲಾ ಈ ಮಹಿಳೆಯರು ಹೊಸದೊಂದು ಪ್ರಯೋಗಕ್ಕೆ ಮುಂದಾಗಿದ್ದಾರೆ. ಗುಲಾಬಿ ಹೂವಿನ ಕೃಷಿಗೆ ಪೂರಕವಾದ ಉದ್ಯಮವನ್ನೇ ಸೃಷ್ಟಿಸಿದ್ದಾರೆ. ಗುಲಾಬಿ ದಳ, ಸಕ್ಕರೆ, ಕಲ್ಲು ಸಕ್ಕರೆ ಮಿಶ್ರಣ ಮಾಡಿ ಹೊಲದಲ್ಲಿಯೇ ಗುಲ್ಕಂದ್ ತಯಾರಿಸಿದ ಕುಟುಂಬದ ಸದಸ್ಯರು, ಮೊದಲು ತಮ್ಮ ಬೀಗರು-ಬಿಜ್ಜರು, ಅಕ್ಕ-ಪಕ್ಕದವರಿಗೆ ಉಡುಗೊರೆ ರೂಪದಲ್ಲಿ ಕೊಟ್ಟಿದ್ದಾರೆ. ಸಿದ್ಧಪಡಿಸಿದ ಗುಲ್ಕಂದ್ ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಾಗ, ಅದಕ್ಕೆ ಉದ್ಯಮದ ಸ್ವರೂಪ ನೀಡಲಾಗಿದೆ.
ಗುಲಾಬೋ ಎಂಬ ಪ್ರತ್ಯೇಕ ಬ್ರ್ಯಾಂಡ್ ಮಾಡಿರೋದಾಗಿ ಹೇಳ್ತಾರೆ ರಾಧಿಕಾ ತಾಪಡಿಯಾ.
ಪಿಂಕ್ ಗುಲಾಬಿಯಿಂದ ಮೊದಲು ಗುಲ್ಕಂದ್ ಉತ್ಪಾದನೆ ಪ್ರಯೋಗ ಯಶಸ್ಸು ಕಾಣುತ್ತಿದ್ದಂತೆಯೇ ಸಂಗೀತಾ ಮತ್ತು ರಾಧಿಕಾ ಅವರು ಹೊಸ ಪ್ರಯೋಗಗಳನ್ನು ಮಾಡಲು ಮುಂದಾಗಿ, ಅದರಲ್ಲಿಯೂ ಯಶಸ್ಸು ಕಂಡಿದ್ದಾರೆ.
ಪಿಂಕ್ ಗುಲಾಬಿಯಿಂದ ಗುಲ್ಕಂದ್, ಗುಲಾಬ್ ಸಿರಪ್, ಸುಗಂಧ ದ್ರವ್ಯ, ಐ ಡ್ರಾಪ್ಸ್, ರೋಸ್ ವಾಟರ್ ಸೇರಿ ಐದು ಉಪ ಉತ್ಪನ್ನಗಳನ್ನು ಮಾಡುತ್ತಿದ್ದಾರೆ. ಬೇಸಿಗೆ, ಚೆಳಿಗಾಲದಲ್ಲಿ ಗುಲ್ಕಂದ್ ಮಾಡಲಾಗುತ್ತಿದೆ. ಮಳೆಗಾಲದಲ್ಲಿ ಹೂವಿನ ಮೇಲೆ ನೀರಿನ ತೇವ ಇರೋದ್ರಿಂದ ಗುಲ್ಕಂದ್ ಮಾಡೋದು ಕಷ್ಟ. ಹೀಗಾಗಿ ಮಳೆಗಾದಲ್ಲಿ ರೋಸ್ ವಾಟರ್, ರೋಸ್ ಸಿರಪ್, ಐ ಡ್ರಾಪ್ಸ್, ಸುಗಂಧ ದ್ರವ್ಯ ಸಿದ್ಧ ಮಾಡಲಾಗುತ್ತಿದೆ. ಇವರ ಉತ್ಪನ್ನಗಳಿಗೆ ಕರ್ನಾಟಕವಲ್ಲದೆ ದೇಶಧ ವಿವಿಧ ರಾಜ್ಯಗಳಲ್ಲಿಯೂ ಬೇಡಿಕೆಯಿದೆ. ಅಲ್ಲದೆ ಅಮೆರಿಕಾ ಮತ್ತಿತರ ರಾಷ್ಟ್ರಗಳಿಗೂ ಇಲ್ಲಿಂದ ಗುಲ್ಕಂತ್ ಮತ್ತಿತರ ಉತ್ಪನ್ನಗಳನ್ನು ಖರೀದಿಸಿ ತೆಗೆದುಕೊಂಡು ಹೋಗುತ್ತಿದ್ದಾರೆ.
ಇದನ್ನೂ ಓದಿ : ಸಿದ್ಧರಾಮಯ್ಯ ಬಿಜೆಪಿಗೆ ಬರುತ್ತಾರೆ, ಕೇಂದ್ರ ಸಚಿವರೂ ಆಗ್ತಾರೆ: ಬಾಬುರಾವ್ ಚಿಂಚನಸೂರ ಭವಿಷ್ಯ
ಸಾವಯವ ಪದ್ಧತಿಯಲ್ಲಿ ಗುಲಾಬಿ ಬೆಳೆಯುತ್ತಿರುವ ಈ ಮಹಿಳೆಯರು, ಸಾವಯವ ಪದ್ಥತಿಯಲ್ಲಿಯೇ ಉಪ ಉತ್ಪನ್ನಗಳನ್ನೂ ಮಾಡುತ್ತಿದ್ದಾರೆ. ಕೇವಲ ಐದು ಎಕರೆಯಲ್ಲಿ ವಾರ್ಷಿಕ 15 ಲಕ್ಷ ರೂಪಾಯಿಗೂ ಹೆಚ್ಚು ಆದಾಯ ಗಳಿಸುತ್ತಿದ್ದಾರೆ. ಇದರ ಜೊತೆಗೆ ಹಲವಾರು ಜನರಿಗೆ ಉದ್ಯೋಗವನ್ನೂ ಕೊಟ್ಟಿದ್ದಾರೆ.
ಒಟ್ಟಾರೆ ಕೇವಲ ಬೆಳೆ ಬೆಳೆದು ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ತಮ್ಮ ಕೆಲಸ ಮುಗಿಯಿತೆಂದು ರೈತರು ಕೈತೊಳೆದುಕೊಳ್ಳುವ ಸಂದರ್ಭದಲ್ಲಿಯೇ ಈ ಇಬ್ಬರು ಮಹಿಳೆಯರು, ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಉಪ ಉತ್ಪನ್ನಗಳನ್ನು ಮಾಡೋದರಿಂದ ಎಷ್ಟೆಲ್ಲ ಲಾಭ ಗಳಿಸಬಹುದೆಂಬುದನ್ನು ಸಾಧಿಸಿ ತೋರಿಸಿದ್ದಾರೆ.
</di
ಅದು ಬಂಜರು ಭೂಮಿ. ಕಲ್ಲು-ಮುಳ್ಳಿನಿಂದ ಕೂಡಿದ ಜಮೀನು. ಅಂತಹ ಜಮೀನಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುವ ಮೂಲಕ ಯಶಸ್ಸಿನ ಮೆಟ್ಟಿಲುಗಳನ್ನು ಹತ್ತುತ್ತಿದ್ದಾರೆ ಈ ಅಕ್ಕ-ತಂಗಿ. ಸಾಮಾನ್ಯವಾಗಿ ರೈತರು ತೋಟಗಾರಿಕೆ ಬೆಳೆಗಳನ್ನು ಬೆಳೆದು ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಕೈತೊಳೆದುಕೊಳ್ಳುತ್ತಾರೆ. ಆದರೆ ಈ ಮಹಿಳೆಯರು ಮಾತ್ರ ತಾವು ಹೊಲದಲ್ಲಿ ಬೆಳೆದ ಬೆಳೆಯನ್ನು ಮಾರಾಟ ಮಾಡದೆ, ಅದರಿಂದ ಉಪ ಉತ್ಪನ್ನಗಳನ್ನು ಮಾಡಿ, ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ.
ಎಂಟು ವರ್ಷಗಳ ಹಿಂದೆ ಬಂಜರು ಭೂಮಿಯನ್ನು ತೆಗೆದುಕೊಂಡಾಗ ಬೇರೆ ರೈತರ ರೀತಿಯಲ್ಲಿಯೇ ತೊಗರಿ ಇತ್ಯಾದಿ ಬೆಳೆ ಹಾಕಿದ್ದರು. ನಂತರ ತರಕಾರಿ ಬೆಳೆಯುವ ಸಾಹಸಕ್ಕೆ ಕೈ ಹಾಕಿದರು. ಅದೂ ಸಹ ಅಷ್ಟಾಗಿ ಯಶಸ್ಸು ಕಾಣದೇ ಇದ್ದಾಗ, ಪುಷ್ಪಕೃಷಿಗೆ ಮುಂದಾದರು. ಇವರ ಪುಷ್ಪಕೃಷಿ ಆರಂಭಗೊಂಡಿದ್ದು ಕೇವಲ ನಾಲ್ಕು ಗುಲಾಬಿ ಗಿಡಗಳಿಂದ. ನಾಲ್ಕು ಗಿಡಗಳಿಂದ ಆರಂಭಗೊಂಡು ಪುಷ್ಪಕೃಷಿ, ಈಗ 9 ಸಾವಿರ ಗಿಡಗಳವರೆಗೂ ಅಭಿವೃದ್ಧಿಗೊಂಡಿದೆ. ಐದು ಎಕರೆ ಪ್ರದೇಶದ ವ್ಯಾಪ್ತಿಯಲ್ಲಿ ಗುಲಾಬಿ ಹೂಗಳು ಕಂಗೊಳಿಸುತ್ತಿವೆ.
ಇದನ್ನೂ ಓದಿ : ಆಯುಧ ಹಿಡಿದ ಕೈಯಲ್ಲಿ ಸ್ಟೆತಸ್ಕೋಪ್ - ಕೊಲೆ ಶಿಕ್ಷೆಗೆ ಗುರಿಯಾದಾತ ಈಗ ಜೀವದಾತ ವೈದ್ಯ
ರಾಧಿಕಾ ಹಾಗೂ ಸಂಗೀತ ಎಂಟು ವರ್ಷಗಳ ಹಿಂದೆ ಪುಷ್ಪಕೃಷಿ ಆರಂಭಿಸಿದಾಗ, ನೀರಿನ ತೊಂದರೆಯಿತ್ತು. ಆ ಸಂದರ್ಭದಲ್ಲಿ ಕೊಡದಲ್ಲಿ ನೀರು ತಂದು ಗಿಡಗಳಿಗೆ ಎರೆಯುವ ಮೂಲಕ ಎರಡು ವರ್ಷಗಳ ಕಾಲ ನಿರ್ವಹಣೆ ಮಾಡಿಕೊಂಡು ಬಂದಿದ್ದಾರೆ. ಡ್ರಿಪ್ ಅಳವಡಿಕೆಯ ನಂತರ ಗುಲಾಬಿ ಕೃಷಿಯೂ ವಿಸ್ತರಣೆಗೊಂಡಿದ್ದು, ಹಂತ ಹಂತವಾಗಿ ಅಭಿವೃದ್ಧಿಗೊಳಿಸಲಾಗಿದೆ ಎನ್ನುತ್ತಾರೆ ಸಂಗೀತಾ ತಾಪಡಿಯಾ.
ಇಡೀ ಐದು ಎಕರೆ ಪ್ರದೇಶದಲ್ಲಿ ಒಂದೇ ಮಾದರಿಯ ಗುಲಾಬಿ ಹೂಗಳು ನಳನಳಿಸುತ್ತಿವೆ. ದೇಸಿ ಗುಲಾಬ್ ಅಥವಾ ಪಿಂಕ್ ಗುಲಾಬ್ ಎಂದು ಕರೆಯಲ್ಪಡುವ ಈ ತಳಿಯನ್ನು ರಾಜಸ್ಥಾನದಿಂದ ತಂದು ನಾಟಿ ಮಾಡಲಾಗಿದ್ದು, ಸಂಪೂರ್ಣ ಸಾವಯವ ಕೃಷಿ ಪದ್ಧತಿಯಲ್ಲಿ ಪುಷ್ಪಕೃಷಿ ಮಾಡಲಾಗುತ್ತಿದೆ. ಹೂವಿನ ಪ್ರಮಾಣ ಹೆಚ್ಚಾದಂತೆಲ್ಲಾ ಈ ಮಹಿಳೆಯರು ಹೊಸದೊಂದು ಪ್ರಯೋಗಕ್ಕೆ ಮುಂದಾಗಿದ್ದಾರೆ. ಗುಲಾಬಿ ಹೂವಿನ ಕೃಷಿಗೆ ಪೂರಕವಾದ ಉದ್ಯಮವನ್ನೇ ಸೃಷ್ಟಿಸಿದ್ದಾರೆ. ಗುಲಾಬಿ ದಳ, ಸಕ್ಕರೆ, ಕಲ್ಲು ಸಕ್ಕರೆ ಮಿಶ್ರಣ ಮಾಡಿ ಹೊಲದಲ್ಲಿಯೇ ಗುಲ್ಕಂದ್ ತಯಾರಿಸಿದ ಕುಟುಂಬದ ಸದಸ್ಯರು, ಮೊದಲು ತಮ್ಮ ಬೀಗರು-ಬಿಜ್ಜರು, ಅಕ್ಕ-ಪಕ್ಕದವರಿಗೆ ಉಡುಗೊರೆ ರೂಪದಲ್ಲಿ ಕೊಟ್ಟಿದ್ದಾರೆ. ಸಿದ್ಧಪಡಿಸಿದ ಗುಲ್ಕಂದ್ ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಾಗ, ಅದಕ್ಕೆ ಉದ್ಯಮದ ಸ್ವರೂಪ ನೀಡಲಾಗಿದೆ.

ರೋಸ್ ಸಿರಪ್