ಬೆಂಗಳೂರಿನಲ್ಲಿ ರೌಡಿ ಶೀಟರ್​ಗಳ ವಿರುದ್ಧ ಪೊಲೀಸರ ಕಾರ್ಯಾಚರಣೆ; ಇಬ್ಬರಿಗೆ ಗುಂಡೇಟು

ಜಾಲಹಳ್ಳಿ ಇನ್ಸ್​ಪೆಕ್ಟರ್ ಯಶವಂತ್ ತಂಡ ನಂದಿನಿ ಲೇಔಟ್​ನ ಕೂಲಿನಗರದಲ್ಲಿ ಈ ಇಬ್ಬರು ಆರೋಪಿಗಳು ಅಡಗಿ ಕೂತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಬಂಧಿಸಲು ತೆರಳಿದ್ದಾರೆ.

ಆರೋಪಿ ವಿಜಿ ಹಾಗೂ ಅನಿ

ಆರೋಪಿ ವಿಜಿ ಹಾಗೂ ಅನಿ

  • Share this:
ಬೆಂಗಳೂರು (ಅ.6): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಬೆಳ್ಳಂಬೆಳಿಗ್ಗೆ ಗುಂಡಿನ ಮೊರೆತ ಕೇಳಿದೆ. ಜಾಲಹಳ್ಳಿ ಪೊಲೀಸರು ರೌಡಿ ಶೀಟರ್ ವಿಜಯ್ ಅಲಿಯಾಸ್ ದಡಿಯಾ ವಿಜಿ ಹಾಗೂ ಮೋರಿ ಅನಿ ಮೇಲೆ ಗುಂಡು ಹಾರಿಸಿದ್ದಾರೆ.

ಸುಮಾರು 15 ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಂದಿನಿ ಲೇಔಟ್ ರೌಡಿ ಶೀಟರ್ ದಡಿಯಾ ವಿಜಿಯನ್ನು ಪೊಲೀಸರು ಹುಡುಕುತ್ತಿದ್ದರು. ಇದೇವೇಳೆ ಕಳೆದ ವಾರ ವಿಜಿ ಹಾಗೂ ಅನಿ ಸರಗಳ್ಳತನ ಮಾಡಿದ್ದ ಸುಳಿವು ಪೊಲೀಸರಿಗೆ ಸಿಕ್ಕಿತ್ತು. ಅಲ್ಲದೆ ಇವರಿಬ್ಬರ ಕೈಚಳಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಮಾಜಿ ಪ್ರೇಯಸಿಗೆ ಲೈಂಗಿಕ ಕಿರುಕುಳ; ಒಂದೇ ತಿಂಗಳಲ್ಲಿ ಎರಡು ಬಾರಿ ಬಂಧನಕ್ಕೊಳಗಾದ ಬೆಂಗಳೂರಿನ ಯುವ ಉದ್ಯಮಿ

ಜಾಲಹಳ್ಳಿ ಇನ್ಸ್​ಪೆಕ್ಟರ್ ಯಶವಂತ್ ತಂಡ ನಂದಿನಿ ಲೇಔಟ್​ನ ಕೂಲಿನಗರದಲ್ಲಿ ಈ ಇಬ್ಬರು ಆರೋಪಿಗಳು ಅಡಗಿ ಕೂತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಬಂಧಿಸಲು ತೆರಳಿದ್ದಾರೆ. ಈ ವೇಳೆ ಪೊಲೀಸ್ ಸಿಬ್ಬಂದಿ ಶ್ರೀನಿವಾಸ್ ಮೂರ್ತಿ ಮತ್ತು ನರೇಶ್ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದಾರೆ.

ಆತ್ಮರಕ್ಷಣೆಗಾಗಿ ಇನ್ಸ್​ಪೆಕ್ಟರ್​ ಯಶವಂತ್ ಮತ್ತು ಪಿಎಸ್​ಐ ಲೇಪಾಕ್ಷಿ ಫೈರಿಂಗ್ ನಡೆಸಿದ್ದಾರೆ. ಬಳಿಕ ವಿಜಿ ಹಾಗೂ ಅನಿ ಯನ್ನು ಬಂಧಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇತ್ತ ಪೊಲೀಸ್ ಸಿಬ್ಬಂದಿ ಕೂಡ ಚಿಕಿತ್ಸೆ ಪಡೆಯುತ್ತಿದ್ದಾರೆ.

First published: