ಪ್ರತ್ಯೇಕ ಎರಡು ಕಡೆ ರಸ್ತೆ ಅಪಘಾತ : ಇಬ್ಬರು ಪತ್ರಕರ್ತರ ದಾರುಣ ಸಾವು

news18
Updated:January 14, 2018, 6:46 PM IST
ಪ್ರತ್ಯೇಕ ಎರಡು ಕಡೆ ರಸ್ತೆ ಅಪಘಾತ : ಇಬ್ಬರು ಪತ್ರಕರ್ತರ ದಾರುಣ ಸಾವು
news18
Updated: January 14, 2018, 6:46 PM IST
ನ್ಯೂಸ್ 18ಕನ್ನಡ

ಬೆಳಗಾವಿ/ಹಾವೇರಿ(ಜ.14) : ಕಾರು ಮರಕ್ಕೆ ಗುದ್ದಿದ ಪರಿಣಾಮ ಹಿರಿಯ ಪತ್ರಕರ್ತ ಡಾ. ವೀರೇಶ ಹಿರೇಮಠ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ನಂದಗಡ ಬಳಿ ಭಾನುವಾರ ನಸುಕಿನ ಜಾವ ಸಂಭವಿಸಿದೆ.
ಅಪಘಾತದಲ್ಲಿ ಪತ್ನಿ ಗೌರಿ, ಕಾರು ಚಾಲಕ ಸುನೀಲ್‌ಗೆ ಗಂಭೀರ ಗಾಯಗಳಾಗಿವೆ. ಗೋವಾ ಪ್ರವಾಸ ಮುಗಿಸಿ ಬಾಗಲಕೋಟೆಗೆ ಹಿಂದಿರುಗುವಾಗ ನಂದಗಡದ ಬಳಿ ಕಾರು ಮರಕ್ಕೆ ರಭಸದಿಂದ ಗುದ್ದಿದೆ. ಸದ್ಯ ಬಾಗಲಕೋಟೆಯ ಬಿವಿವಿ ಕಾಲೇಜಿನಲ್ಲಿ ಪತ್ರಿಕೊಧ್ಯಮ ಅಧ್ಯಾಪಕರಾಗಿ ಸೇವೆ ಸಲ್ಲಿಸುತಿದ್ದರು.

ಮತ್ತೊಂದೆಡೆ ಉತ್ತರಕನ್ನಡ ಜಿಲ್ಲೆ ಶಿರಸಿಯಲ್ಲಿ ಖಾಸಗಿ ವಾಹಿನಲ್ಲಿ ವರದಿಗಾರರಾಗಿ ಕೆಲಸ ಮಾಡುತ್ತಿದ್ದ ಮೌನೇಶ ಪೋತರಾಜ್ ಎನ್ನುವ ಯುವ ಪತ್ರಕರ್ತ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಗುಂಡೂರು ಗ್ರಾಮದ ಬಳಿ ಗ್ರಾಮದ ಬಳಿ ಬೈಕ್​ ಮರಕ್ಕೆ ಡಿಕ್ಕಿಯಾಗಿ ಸಾವನ್ನಪ್ಪಿದ್ದಾನೆ. ನಿನ್ನೆ ರಾತ್ರಿ ಶಿರಸಿಯಿಂದ ಛಬ್ಬಿ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಇಬ್ಬರು ಪತ್ರಕರ್ತರು ಕರ್ನಾಟಕ ವಿಶ್ವವಿದ್ಯಾಲಯದ ಧಾರವಾಡ ಪತ್ರಿಕೋಧ್ಯಮ ವಿಭಾಗದ ಹಳೆಯ ವಿದ್ಯಾರ್ಥಿಗಳು. ಒಟ್ಟಾರೆಯಾಗಿ  ಸಂಕ್ರಾತಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇಬ್ಬರು ಪತ್ರಕರ್ತರು ನಮ್ಮನ್ನ ಅಗಲಿದ್ದಾರೆ.
First published:January 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ