Viral Video; ಲಂಚ ಪಡೆಯುವ ವೇಳೆ ACB ಬಲೆಗೆ ಬೀಳುತ್ತಲೇ ಕಾಲಿಗೆ ಬುದ್ಧಿ ಹೇಳಿದ್ದ PSI ವಶಕ್ಕೆ

ಚಂದ್ರಣ್ಣ ನ್ಯಾಯಾಲಯದಿಂದ ಜಾಮೀನು ಪಡೆದು ಕಾರ್ ಹಿಂಪಡೆದುಕೊಳ್ಳಲು ಬಂದಾಗ ಪಿಎಸ್ಐ 28 ಸಾವಿರ ರೂಪಾಯಿಗೆ ಬೇಡಿಕೆ ಇರಿಸಿದ್ದರು. ನೇರವಾಗಿ ಹಣ ಕೇಳದ ಪಿಎಸ್ಐ ತನ್ನ ಕೈ ಕೆಳಗಿದ್ದ ಹಿರಿಯ ಪೇದೆ ನಯಾಜ್ ಮೂಲಕ ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು.

ಓಡಿ ಹೋದ ಪಿಎಸ್ಐ

ಓಡಿ ಹೋದ ಪಿಎಸ್ಐ

  • Share this:
ತುಮಕೂರು: ಲಂಚ ಪಡೆಯುತ್ತಿರುವ ವೇಳೆ ಎಸಿಬಿ (Anti Corruption Bureau) ಬಲೆಗೆ ಬೀಳುತ್ತಲೇ ಓಡಿ ಹೋಗಿದ್ದ PSIನ್ನು ಕೊನೆಗೂ ವಶಕ್ಕೆ ಪಡೆಯಲಾಗಿದೆ. ಬುಧವಾರ ಗುಬ್ಬಿ ತಾಲೂಕಿನ ಚಂದ್ರಶೇಖರಪುರ (ಸಿ.ಎಸ್.ಪುರ) ಪೊಲೀಸ್ ಠಾಣೆಯ ಮೇಲೆ ಎಸಿಬಿ ದಾಳಿ ನಡೆಸಿತ್ತು, ಈ ವೇಳೆ ಪಿಎಸ್ಐ ಸೋಮಶೇಖರ್ ಮತ್ತು ಹೆಡ್ ಕಾನ್ ಸ್ಟೇಬಲ್ ನಯಾಜ್ ಅಹಮದ್ ಅಧಿಕಾರಿಗಳ ಬಲೆಗೆ ಬಿದ್ದಿದ್ದರು. ಆದ್ರೆ ಮಧ್ಯಾಹ್ನ 1 ಗಂಟೆಗೆ ಎಸಿಬಿ ಅಧಿಕಾರಿಗಳು ಊಟ ಮಾಡುತ್ತಿರುವ ವೇಳೆ ಪಿಎಸ್ಐ ಸೋಮಶೇಖರ್ ಕಾಲಿಗೆ ಬುದ್ಧಿ ಹೇಳಿದ್ದರು. ಓಡಿ ಹೋಗುತ್ತಿದ್ದ ಪಿಎಸ್ಐ ಹಿಡಿಯಲು ಸಾರ್ವಜನಿಕರು ಬೆನ್ನತ್ತಿದ್ದರು, ಸಾರ್ವಜನಿಕರು ಬೆನ್ನಟ್ಟಿದ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.  

28 ಸಾವಿರ ರೂ.ಗೆ ಬೇಡಿಕೆ

ಸಿಎಸ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೌಟುಂಬಿಕ ಕಲಹ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಚಂದ್ರಣ್ಣ ಎಂಬವರ ವಿರುದ್ಧ ಅಕ್ಟೋಬರ್ 22ರಂದು ದೂರು ದಾಖಲಾಗಿತ್ತು. ಈ ಸಂಬಂಧ ಪೊಲೀಸರು ಚಂದ್ರಣ್ಣರ ಕಾರ್ ವಶಕ್ಕೆ ಪಡೆದುಕೊಂಡಿದ್ದರು. ಚಂದ್ರಣ್ಣ ನ್ಯಾಯಾಲಯದಿಂದ ಜಾಮೀನು ಪಡೆದು ಕಾರ್ ಹಿಂಪಡೆದುಕೊಳ್ಳಲು ಬಂದಾಗ ಪಿಎಸ್ಐ 28 ಸಾವಿರ ರೂಪಾಯಿಗೆ ಬೇಡಿಕೆ ಇರಿಸಿದ್ದರು. ನೇರವಾಗಿ ಹಣ ಕೇಳದ ಪಿಎಸ್ಐ ತನ್ನ ಕೈ ಕೆಳಗಿದ್ದ ಹಿರಿಯ ಪೇದೆ ನಯಾಜ್ ಮೂಲಕ ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು.

ಇದನ್ನೂ ಓದಿ:  ACB Raid - ಭ್ರಷ್ಟಾಚಾರ ಆರೋಪ: ರಾಜ್ಯಾದ್ಯಂತ 11 ಜಿಲ್ಲೆಗಳಲ್ಲಿ 28 ಕಡೆ ಎಸಿಬಿ ದಾಳಿ

ಎಸಿಬಿಗೆ ದೂರು ನೀಡಿದ್ದ ಚಂದ್ರಣ್ಣ

ನಯಾಜ್ ಎರಡು ಕಂತುಗಳಲ್ಲಿ ಹಣ ನೀಡುವಂತೆ ಹೇಳಲಾಗಿತ್ತು. ಮೊದಲ ಕಂತಿನಲ್ಲಿ 12 ಸಾವಿರ ರೂಪಾಯಿ ಲಂಚ ಪಡೆದುಕೊಂಡಿದ್ದರು, ಎರಡನೇ ಕಂತು 16 ಸಾವಿರ ರೂಪಾಯಿ ಲಂಚ ಪಡೆಯುತ್ತಿರುವ ವೇಳೆ ಎಸಿಬಿ ಇನ್ ಸ್ಪೆಕ್ಟರ್ ವಿಜಯಲಕ್ಷ್ಮಿ ಅವರ ತಂಡ ದಾಳಿ ನಡೆಸಿತ್ತು. ಇದಕ್ಕೂ ಮೊದಲು ಚಂದ್ರಣ್ಣ ಎಸಿಬಿಗೆ ದೂರು ನೀಡಿದ್ದರು.

ಎಸಿಬಿ ದಾಳಿ ವೇಳೆ ತಪ್ಪಿಸಿಕೊಂಡಿದ್ದ ಪಿಎಸ್ಐ ಸೋಮಶೇಖರ್ ಅವರನ್ನು ಜನ್ನೇನಹಳ್ಳಿ ಅರಣ್ಯ ಪ್ರದೇಶದಲ್ಲಿ ವಶಕ್ಕೆ ಪಡೆಯಲಾಗಿದೆ. ಸೋಮಶೇಖರ್ ಅವರನ್ನು ಬೆನ್ನಟ್ಟುವಾಗ ಸುಸ್ತಾಗಿ ಕುಸಿದಿದ್ದ ಎಸಿಬಿ ಪೇದೆ ಮಹೇಶ್ ಅವರಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಪಿಎಸ್ಐ ಸೋಮಶೇಖರ್ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ.

ಕೆಎಎಸ್​ ಅಧಿಕಾರಿ ಡಾ. ಸುಧಾ ಮನೆ ಮೇಲೆ ಎಸಿಬಿ ದಾಳಿ

ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ಕೆಎಎಸ್​ ಅಧಿಕಾರಿ ಡಾ. ಬಿ. ಸುಧಾ ಅವರ ಮನೆ ಮತ್ತು ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ಇಂದು ದಾಳಿ ನಡೆಸಿದ್ದರು. ಬೆಂಗಳೂರಿನ ಮನೆ, ಕಚೇರಿ ಸೇರಿದಂತೆ 6 ಕಡೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಹಿಂದೆ ಬಿಡಿಎನಲ್ಲಿ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿದ್ದ ಡಾ. ಬಿ. ಸುಧಾ ಅವರ ವಿರುದ್ಧ ಎಸಿಬಿಯಲ್ಲಿ ಅಕ್ರಮ ಆಸ್ತಿ ಗಳಿಕೆ ಹಾಗೂ ಅವ್ಯವಹಾರದ ಕುರಿತಾಗಿ ದೂರು ದಾಖಲಾಗಿತ್ತು.

ಇದನ್ನೂ ಓದಿ:  ACB Raids in Bangalore - ಬೆಳ್ಳಂಬೆಳಗ್ಗೆ ಭ್ರಷ್ಟ ಪೊಲೀಸ್​ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ

ಪ್ರಸ್ತುತ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನದ ಆಡಳಿತ ಅಧಿಕಾರಿ ಆಗಿರುವ ಕೆಎಎಸ್​ ಅಧಿಕಾರಿ ಡಾ. ಬಿ. ಸುಧಾ ಅವರ ಮನೆ ಮೇಲೆ ಇಂದು ಎಸಿಬಿ ದಾಳಿ ನಡೆಸಲಾಗಿದೆ. ಬೆಂಗಳೂರಿನ ಕೊಡಿಗೇಹಳ್ಳಿ ನಿವಾಸ, ಯಲಹಂಕದಲ್ಲಿ ಒಂದು ಫ್ಲ್ಯಾಟ್​ ಮೇಲೆಯೋ ದಾಳಿ ನಡೆದಿತ್ತು,.

ಸಂಬಳಕ್ಕಿಂತಲೂ ಆದಾಯದ ಮೊತ್ತ ಜಾಸ್ತಿ

ಬಿಡಿಎಯಲ್ಲಿ ಭೂ ಸ್ವಾಧೀನಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ವೇಳೆ ಡಾ. ಸುಧಾ ಭೂ ಪರಿಹಾರ ನೀಡುವ ವಿಚಾರದಲ್ಲಿ ತಮ್ಮ ಗಂಡ ಮತ್ತು ದಲ್ಲಾಳಿಗಳ ಮೂಲಕ ಲಂಚ ಪಡೆಯುತ್ತಿದ್ದರು. ಅಲ್ಲದೆ, ತಮ್ಮ ಸಂಬಳಕ್ಕಿಂತಲೂ ಆದಾಯದ ಮೊತ್ತ ಜಾಸ್ತಿ ಇದೆ ಎಂದು ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಾಹಾಂ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿ, ವರದಿ ಸಲ್ಲಿಸುವಂತೆ ಎಸಿಬಿಗೆ ಆದೇಶಿಸಲಾಗಿತ್ತು.
Published by:Mahmadrafik K
First published: