ಶಿವರಾತ್ರಿ ದಿನವೇ ಸಕ್ಕರೆನಾಡಲ್ಲಿ ಡಬಲ್ ಮರ್ಡರ್: ಬೆಚ್ಚಿಬಿದ್ದ ಮಹದೇಶ್ವರಪುರ ಗ್ರಾಮ

ಪಾಂಡವಪುರ ತಾಲೂಕಿನಲ್ಲಿ ಘಟನೆ ಸಂಭವಿಸಿದೆ. ಜಾಗರಣೆಯಲ್ಲಿ ನಿರತರಾಗಿದ್ದ ಇಬ್ಬರ ಕೊಲೆಗೆ ಹಣಕಾಸು ವ್ಯವಹಾರ ಮತ್ತು ಪ್ರೇಮ ಪ್ರಕರಣಗಳು ಕಾರಣವೆಂದು ಹೇಳಲಾಗುತ್ತಿದೆ.

news18
Updated:February 22, 2020, 7:08 PM IST
ಶಿವರಾತ್ರಿ ದಿನವೇ ಸಕ್ಕರೆನಾಡಲ್ಲಿ ಡಬಲ್ ಮರ್ಡರ್: ಬೆಚ್ಚಿಬಿದ್ದ ಮಹದೇಶ್ವರಪುರ ಗ್ರಾಮ
ಮಂಡ್ಯ ಡಬಲ್ ಮರ್ಡರ್ ಪ್ರಕರಣ
  • News18
  • Last Updated: February 22, 2020, 7:08 PM IST
  • Share this:
ಮಂಡ್ಯ(ಫೆ. 22): ಸಕ್ಕರೆನಾಡು ಎನಿಸಿರೋ ಮಂಡ್ಯ ಜಿಲ್ಲೆಯೀಗ ಅಪರಾಧಗಳ ಜಿಲ್ಲೆಯಾಗಿ ಪರಿವರ್ತನೆಯಾಗ್ತಿದೆ. ಕೊಲೆ, ಸುಲಿಗೆ, ದರೋಡೆ, ಕಳ್ಳತನ‌ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ. ‌ಇದರ ನಡುವೆ ನಿನ್ನೆ ಶಿವರಾತ್ರಿಯ ಜಾಗರಣೆಯಲ್ಲಿದ್ದ ಇಬ್ಬರು ವ್ಯಕ್ತಿಗಳನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರೋ ಘಟನೆ ಪಾಂಡವಪುರ ತಾಲೂಕಿನ ಮಹದೇಶ್ವರಪುರ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.

ಮಹದೇಶ್ವರ ಪುರ ಗ್ರಾಮದ ದೇವಾಲಯದ ಮುಂಭಾಗದಲ್ಲಿರುವ ಟೀ ಹೋಟೆಲ್ ಬಳಿ ಈ ಕೊಲೆ ನಡೆದಿದೆ. ಜಾಗರಣೆ ಮಾಡುತ್ತಾ ಟೀ ಅಂಗಡಿ ಬಳಿ ಇದ್ದ ಮಹದೇಶ್ವರ ಪುರ ಗ್ರಾಮಸ್ಥರೇ ಆದ ಸುರೇಶ್‌ ಮತ್ತು‌ ನಾಗರಾಜು ಎಂಬುವರನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈಯ್ಯಲಾಗಿದೆ. ಅದೇ ಗ್ರಾಮದ ಕೃಷ್ಣ ಮತ್ತವರ ಕಡೆಯವರು ಈ ಕೃತ್ಯ ಎಸಗಿದ್ಧಾರೆನ್ನಲಾಗಿದೆ.

ಇದನ್ನೂ ಓದಿ: ಶೀಲ ಶಂಕಿಸಿ 17 ಬಾರಿ ಹೆಂಡತಿಗೆ ಚಾಕುವಿನಿಂದ ಇರಿದ ಗಂಡ; ಅದೃಷ್ಟವಶಾತ್​ ಬದುಕುಳಿದ ಪತ್ನಿ

ಇನ್ನು, ಕೊಲೆಗೆ ಮುಖ್ಯ ಕಾರಣ ಹಣಕಾಸು ಮತ್ತು ಪ್ರೇಮ ಪ್ರಕರಣ ಕಾರಣವೆಂದು ಹೇಳಲಾಗ್ತಿದೆ. ಕೊಲೆಯಾದ ಸುರೇಶ್ ಮೈಸೂರಿನಲ್ಲಿ ಆಟೋ ಓಡಿಸಿಕೊಂಡು ಜೀವನ‌ ಮಾಡುತ್ತಿದ್ದರು. ನಾಗರಾಜು ಜೆಸಿಬಿ ಯಂತ್ರದ ಜೊತೆಗೆ ಕೋಳಿ ಅಂಗಡಿ ಇಟ್ಟುಕೊಂಡು ಜೀವನ‌ ಸಾಗಿಸುತ್ತಿದ್ದರು. ನಿನ್ನೆ ಶಿವರಾತ್ರಿ ಹಬ್ಬಕ್ಕೆಂದು ಊರಿಗೆ ಬಂದಿದ್ದ ಸಂಧರ್ಭದಲ್ಲಿ ಅದೇ ಗ್ರಾಮದ ಅವರ ಸ್ನೇಹಿತರೇ ಆಗಿದ್ದ ರೌಡಿ ಶೀಟರ್ ಕೃಷ್ಣ ಮತ್ತು ಸಹಚರರು ಚಾಕುವಿನಿಂದ ಹತ್ಯೆ ಮಾಡಿದ್ದಾರೆ. ಇಬ್ಬರ ಸಾವಿನಿಂದ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಮೃತರ ಸಂಬಂಧಕರ ರೋಧನ‌ ಮುಗಿಲು‌ ಮುಟ್ಟಿತ್ತು.

ಒಟ್ಟಾರೆ, ಘಟನೆಯಿಂದಾಗಿ‌ ಗ್ರಾಮದಲ್ಲಿ‌ ಉದ್ವಿಗ್ನ ಪರಿಸ್ಥಿ ತಿ‌ ನಿರ್ಮಾಣವಾಗಿತ್ತು. ರಾತ್ರಿಯೇ ಸ್ಥಳಕ್ಕೆ ಭೇಟಿ‌ ನೀಡಿದ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿ ಕೃತ್ಯ ಎಸಗಿದ ಪ್ರಮುಖ ಆರೋಪಿ ಕೃಷ್ಣನನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ, ಗ್ರಾಮಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಿದ್ರು. ಇಂದು ಮೃತರ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವಗಳನ್ನು ಪೊಲೀಸ್ ಭದ್ರತೆಯಲ್ಲಿ ಗ್ರಾಮಕ್ಕೆ ಕೊಂಡೊಯ್ದು ಅಂತ್ಯ ಸಂಸ್ಕಾರ ನಡೆಸಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದು, ತಲೆ ಮರೆಸಿಕೊಂಡಿರೋ ಇನ್ನಿತರ ಆರೋಪಿಗಳಿಗೆ ಬಲೆ ಬೀಸಿದ್ದಾರೆ.

(ವರದಿ: ರಾಘವೇಂದ್ರ ಗಂಜಾಮ್)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:February 22, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading