ಮರಗಳ್ಳತನದ ಮಾಹಿತಿ ನೀಡಿದ ಎಂಬ ಕಾರಣಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಕಳ್ಳರು

ಮಾರಣಾಂತಿಕವಾಗಿ ಹಲ್ಲೆ ಮಾಡಿದವರಿಗೆ ಕೆಲ ರಾಜಕೀಯ ನಾಯಕರು ಬೆಂಬಲ ನೀಡಿದ್ದಾರೆ ಎನ್ನುವ ಅನುಮಾನಗಳು ವ್ಯಕ್ತವಾಗಿವೆ. ಹಲ್ಲೆಯಿಂದ ಗಂಭೀರವಾಗಿ  ಗಾಯಗೊಂಡಿರುವ ಯುವಕನನ್ನುಆಸ್ಪತ್ರೆ ಗೆ ದಾಖಲಿಸಲಾಗಿದೆ.

news18-kannada
Updated:March 6, 2020, 5:59 PM IST
ಮರಗಳ್ಳತನದ ಮಾಹಿತಿ ನೀಡಿದ ಎಂಬ ಕಾರಣಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಕಳ್ಳರು
ಸಾಂದರ್ಭಿಕ ಚಿತ್ರ
  • Share this:
ಚಿಕ್ಕಮಗಳೂರು(ಮಾ.06) : ಮರಗಳ್ಳತನದ ಬಗ್ಗೆ ಮಾಹಿತಿ ನೀಡಿದ್ದಾನೆ ಎನ್ನುವ ಶಂಕೆಯ ಮೇಲೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕೆಸವಿನಮನೆ ಗ್ರಾಮದಲ್ಲಿ ನಡೆದಿದೆ. 

ಗಾಯಗೊಂಡ ಯುವಕನನ್ನು ಆದರ್ಶ್ ಎಂದು ಗುರುತಿಸಲಾಗಿದೆ. ಗ್ರಾಮದಲ್ಲಿ ಮರಗಳ್ಳತನ ನಡೆಯುತ್ತಿತ್ತು. ಇದರ ಬಗ್ಗೆ ಅರಣ್ಯ ಇಲಾಖೆಗೆ ಯುವಕ ಆದರ್ಶ್​ ಮಾಹಿತಿ ನೀಡಿದ್ದರು. ಇದರಿಂದ ಕುಪಿತಗೊಂಡ ಮರಗಳ್ಳರು ಆದರ್ಶ್​ ಮೇಲೆ ಹಲ್ಲೆ ನಡೆಸಿದ್ದಾರೆ. ಮೈಮೇಲೆ ಬಾಸುಂಡೆ ಬರುವಂತೆ ಮಾರಣಾಂತಿಕವಾಗಿ ಥಳಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಎಂದು ಹೇಳಿಕೊಂಡು ದರ್ಪ ಮೆರೆಯುತ್ತಿರುವ ರಾಜೇಶ್ ಮತ್ತು ರಮೇಶ್ ಎಂಬ ಮರಗಳ್ಳರು ಆದರ್ಶ್​ನನ್ನು ಹೀನಾಯ  ಹೀನಾಯವಾಗಿ ಥಳಿಸಿ ಈ ಕೃತ್ಯ  ಎಸಗಿದ್ದಾರೆ.

 youth
ಹಲ್ಲೆಗೊಳಗಾದ ಯುವಕ

ಮಾರಣಾಂತಿಕವಾಗಿ ಹಲ್ಲೆ ಮಾಡಿದವರಿಗೆ ಕೆಲ ರಾಜಕೀಯ ನಾಯಕರು ಬೆಂಬಲ ನೀಡಿದ್ದಾರೆ ಎನ್ನುವ ಅನುಮಾನಗಳು ವ್ಯಕ್ತವಾಗಿವೆ. ಹಲ್ಲೆಯಿಂದ ಗಂಭೀರವಾಗಿ  ಗಾಯಗೊಂಡಿರುವ ಯುವಕನನ್ನುಆಸ್ಪತ್ರೆ ಗೆ ದಾಖಲಿಸಲಾಗಿದೆ.

ಇದನ್ನೂ ಓದಿ :  ಕೋಲಾರದಲ್ಲಿ ದ್ವೇಷದ ಬೆಂಕಿಗೆ ಸುಟ್ಟು ಕರಕಲಾದ 25 ಮಾವಿನ ಮರಗಳು

ಘಟನೆ ಬಗ್ಗೆ  ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಪೊಲೀಸರು ಮೀನಾಮೇಷ ಎಣಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
First published: March 6, 2020, 5:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading