ಬೆಂಗಳೂರು: ನೀವು ಬೆಂಗಳೂರಿನ ಲಾಲ್‌ಬಾಗ್ (Lalbagh) ಅಥವಾ ಕಬ್ಬನ್ ಪಾರ್ಕ್ (Cubbon Park) ಉದ್ಯಾನವನಕ್ಕೆ ಹೋಗಿರಬಹುದು. ಅಲ್ಲೆಲ್ಲ ಮರವನ್ನು (Tree) ಪ್ರೀತಿಸುವವರಿಗಿಂತ, ‘ಮರದ ಹಿಂದೆ’ ಪ್ರೀತಿಸೋ ‘ಅಮರ ಪ್ರೇಮಿ’ಗಳೇ ಕಾಣಸಿಗುತ್ತಾರೆ. ಹೀಗೆ ಎಲ್ಲೆಂದರಲ್ಲಿ ಮೈಮರೆಯುವ ಪ್ರೇಮಿಗಳನ್ನೇ ಕೆಲ ಖದೀಮರು ಟಾರ್ಗೆಟ್ (Target) ಮಾಡ್ತಾರೆ. ಅವರನ್ನು ಬೆದರಿಸಿ, ಹಣ (Money) ವಸೂಲಿ ಮಾಡ್ತಾರೆ. ಬೆಂಗಳೂರಿನ (Bengaluru) ಬಾಗಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ (Bagaluru Police Station Limit) ಇಂಥದ್ದೇ ಘಟನೆ ನಡೆದಿದೆ. ಪ್ರೇಮಿಗಳಿಬ್ಬರ (Lovers) ಖಾಸಗಿ ಕ್ಷಣಗಳ ವಿಡಿಯೋ ಮಾಡಿ, ಅದನ್ನು ಸಿಡಿ (CD) ಮಾಡ್ತೀವಿ ಅಂತ ಬೆದರಿಸಿ, ಹಣಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಇಬ್ಬರ ಬಂಧನ
ಪ್ರೇಮಿಗಳಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ. ಸಹಕಾರ ನಗರದ ನಿವಾಸಿ ಉಷಾ ಹಾಗೂ ದ್ವಾರಕ ನಗರದ ನಿವಾಸಿ ಸುರೇಶ್ ಬಾಬು ಬಂಧಿತರು. ಪ್ರೇಮಿಗಳು ನೀಡಿದ್ದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಅಸಲಿಗೆ ಇವರಿಬ್ಬರೂ ಕೂಡ ಪ್ರೇಮಿಗಳಾಗಿದ್ದರು ಎನ್ನಲಾಗಿದೆ. ಅಲ್ಲದೇ ಸಂತ್ರಸ್ಥೆಯು ಬಂಧಿತ ಆರೋಪಿ ಉಷಾಳ ಸಂಬಂಧಿ ಆಗಿದ್ದಳು ಎಂದು ಸಹ ಹೇಳಲಾಗ್ತಿದೆ.
ಹೋಟೆಲ್‌ನಲ್ಲಿ ಪ್ರೇಮಿಗಳಿದ್ದ ವಿಡಿಯೋ ರೆಕಾರ್ಡ್
ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಪ್ರೇಮಿಗಳು ಯಲಹಂಕ ಬಳಿಯ ಹೋಟೆಲ್‌ವೊಂದರ ಕೊಠಡಿಗೆ ಹಲವು ಬಾರಿ ಹೋಗಿ ಬಂದಿದ್ದರು. ಈ ವಿಷಯ ತಿಳಿದುಕೊಂಡಿದ್ದ ಆರೋಪಿಗಳು, ಪ್ರೇಮಿಗಳ ವಿಡಿಯೊ ಚಿತ್ರೀಕರಣ ಮಾಡಿ ಬ್ಲ್ಯಾಕ್‌ಮೇಲ್ ಮಾಡಲು ಸಂಚು ರೂಪಿಸಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಪ್ರೇಮಿಗಳು ಇತ್ತೀಚೆಗೆ ಪುನಃ ಹೋಟೆಲ್ ಕೊಠಡಿಗೆ ಹೋಗಿ ಉಳಿದುಕೊಂಡಿದ್ದರು. ಅದೇ ಕೊಠಡಿಯಲ್ಲೇ ರಹಸ್ಯ ಕ್ಯಾಮೆರಾ ಅಳವಡಿಸಿದ್ದ ಆರೋಪಿಗಳು, ಪ್ರೇಮಿಗಳ ಖಾಸಗಿ ಕ್ಷಣಗಳ ವಿಡಿಯೊ ಚಿತ್ರೀಕರಣ ಮಾಡಿದ್ದರೆಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಮೂಲಗಳು ಹೇಳಿವೆ.
ಪ್ರೇಮಿಗಳನ್ನು ಬೆದರಿಸಿ 20 ಲಕ್ಷಕ್ಕೆ ಬ್ಲ್ಯಾಕ್‌ಮೇಲ್
ಬಂಧಿತ ಉಷಾ ಹಾಗೂ ಸುರೇಶ್ ಇಬ್ಬರೂ ಪ್ರೇಮಿಗಳಿಬ್ಬರ ಖಾಸಗಿ ಕ್ಷಣದ ವಿಡಿಯೊ ಚಿತ್ರೀಕರಿಸಿ, 25 ಲಕ್ಷ ರೂಪಾಯಿ ನೀಡುವಂತೆ ಕೇಳುತ್ತಿದ್ದರು. ಹಣ ನೀಡದಿದ್ದರೆ ಸಿಡಿ ಮಾಡಿ, ವೈರಲ್ ಮಾಡುವುದಾಗಿ ಕೆಲ ದಿನಗಳ ಹಿಂದೆ ವಾಟ್ಸಪ್ ಮೂಲಕ ಬೆದರಿಕೆ ಹಾಕಿದ್ದರು. ಅಲ್ಲದೇ ವಾಟ್ಸಾಪ್‌ನಲ್ಲಿ ವಿಡಿಯೋ ಸಹ ಕಳಿಸಿದ್ದರು. ಬಳಿಕ ಅದೇ ನಂಬರ್ ನಿಂದ ಇಪತ್ತೈದು ಲಕ್ಷ ಹಣ ಕೊಡಿ ಇಲ್ಲಾವಾದ್ರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಇನ್ನು ತನ್ನ ಮೊಬೈಲ್ ಗೂ ಯಾರೋ ನಿಮ್ಮ ವಿಡಿಯೋ ಕಳಿಸಿದ್ದಾರೆ ಅಂತ ಆರೋಪಿ ಉಷಾ ಹೇಳಿದ್ದಳು.
ಇದನ್ನೂ ಓದಿ: Marriage Dhoka: ವಯಸ್ಸು 30 ಅಂತ ಯಾಮಾರಿಸಿ ಯುವಕನನ್ನು ಮದ್ವೆಯಾದ 52ರ ಆಂಟಿ! ಮೇಕಪ್ ನೋಡಿ ಮೋಸ ಹೋದ ಹುಡುಗ
ಪೊಲೀಸರಿಂದ ಆರೋಪಿಗಳಿಬ್ಬರ ಬಂಧನ
ಹಣಕ್ಕೆ ಬೇಡಿಕೆ ಇಟ್ಟು ಕಿರುಕುಳ ಕೊಡ್ತಿದ್ರಿಂದ ಪ್ರೇಮಿಗಳು ಕುಟುಂಬಸ್ಥರಿಗೆ ವಿಚಾರ ತಿಳಿಸಿದ್ಗಾರೆ. ಬಳಿರ ಬಾಗಲೂರು ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದ ಬಾಗಲೂರು ಠಾಣೆ ಪೊಲೀಸರು ಇದೀಗ ಇಬ್ಬರನ್ನು ಬಂಧಿಸಿದ್ದಾರೆ. ಸದ್ಯ ವಿಚಾರಣೆ ನಡೆಯುತ್ತಿದ್ದು, ಈ ಪ್ರೇಮಿಗಳಿಗೆ ಮಾತ್ರ ಖದೀಮರು ಕಿರುಕುಳ ನೀಡಿದ್ದರೋ, ಅಥವಾ ಈ ರೀತಿ ತುಂಬಾ ಜನಕ್ಕೆ ಬ್ಲ್ಯಾಕ್ ಮೇಲ್ ಮಾಡಿದ್ದರಾ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ