Medicine Side Effect: ಯಾವುದೋ ರೋಗಕ್ಕೆ ಇನ್ಯಾವುದೋ ಔಷಧಿ! ಒಂದೆಡೆ ಮಗು, ಮತ್ತೊಂದೆಡೆ ವೃದ್ಧ ಸಾವು

ಯಾವ ಕಾಯಿಲೆಗೆ (Disease) ಯಾವ ಔಷಧಿ ತೆಗೆದುಕೊಳ್ಳಬೇಕು, ಎಷ್ಟು ಪ್ರಮಾಣದಲ್ಲಿ ಔಷಧಿ ತೆಗೆದುಕೊಳ್ಳಬೇಕು ಹಾಗೂ ಯಾವಾಗ ಔಷಧಿ ತೆಗೆದುಕೊಳ್ಳಬೇಕು ಎನ್ನುವುದು ಬಹಳ ಮುಖ್ಯ. ಇಲ್ಲವಾದರೆ ರೋಗಿಯ (patient) ಪಾಲಿಗೆ ಸಂಜೀವಿನಿ ಆಗಬೇಕಾದ ಔಷಧಿಗಳೇ ಪ್ರಾಣ ತೆಗೆಯುವ ವಿಷವಾಗುತ್ತದೆ!

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಕಲಬುರಗಿ/ಉತ್ತರ ಕನ್ನಡ: ಮಾತ್ರೆ (Tablet), ಔಷಧಿಗಳು (Medicine) ಜೀವ ರಕ್ಷಕ (Life Secure) ನಿಜ. ಆದರೆ ಕೆಲವೊಮ್ಮೆ ಅವೇ ಜೀವಕ್ಕೆ ಹಾನಿ (Damage) ಮಾಡುವ ಸಾಧ್ಯತೆಯೂ ಇದೆ. ಯಾವ ಕಾಯಿಲೆಗೆ (Disease) ಯಾವ ಔಷಧಿ ತೆಗೆದುಕೊಳ್ಳಬೇಕು, ಎಷ್ಟು ಪ್ರಮಾಣದಲ್ಲಿ ಔಷಧಿ ತೆಗೆದುಕೊಳ್ಳಬೇಕು ಹಾಗೂ ಯಾವಾಗ ಔಷಧಿ ತೆಗೆದುಕೊಳ್ಳಬೇಕು ಎನ್ನುವುದು ಬಹಳ ಮುಖ್ಯ. ಇಲ್ಲವಾದರೆ ರೋಗಿಯ (patient) ಪಾಲಿಗೆ ಸಂಜೀವಿನಿ ಆಗಬೇಕಾದ ಔಷಧಿಗಳೇ ಪ್ರಾಣ ತೆಗೆಯುವ ವಿಷವಾಗುತ್ತದೆ (Poison). ಕಲಬುರಗಿ (Kalaburagi) ಹಾಗೂ ಉತ್ತರ ಕನ್ನಡದಲ್ಲೂ (Uttara Kannada) ಇಂತದ್ದೊಂದು ಪ್ರಕರಣ (Case) ಬೆಳಕಿಗೆ ಬಂದಿದೆ. ಕಲಬುರಗಿಯಲ್ಲಿ ಕುಡುಕ ತಂದೆಗೆ (Father) ಅಂತ ತಂದಿದ್ದ ಮದ್ಯವರ್ಜಕ ಔಷಧಿ (Anti Alcohol Medicine) ಸೇವಿಸಿದ ಕಂದಮ್ಮ (Baby) ಮೃತಪಟ್ಟಿದೆ. ಇತ್ತ ಉತ್ತರ ಕನ್ನಡದ ಮುಂಡಗೋಡಿನಲ್ಲಿ ಮಾನಸಿಕ ಕಾಯಿಲೆಗೆ (Mental illness) ಕ್ಯಾನ್ಸರ್ ಔಷಧಿ (Cancer Medicine) ತಿಂದಿದ್ದ ವೃದ್ಧ (Old Men) ಮೃತಪಟ್ಟಿದ್ದಾನೆ. ಇದರಿಂದಾಗಿ ಮಗನ (Son) ಮದುವೆ (Marriage) ಸಂಭ್ರಮದಲ್ಲಿದ್ದ ಕುಟುಂಬಸ್ಥರು ಸೂತಕದಲ್ಲಿ ಕಣ್ಣೀರಿಡುತ್ತಿದ್ದಾರೆ.

ತಂದೆಗೆ ತಂದಿದ್ದ ಔಷಧಿ ಸೇವಿಸಿದ ಬಾಲಕ

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿಯ ಬಸವನಕಣಿ ಬಡಾವಣೆ ಎಂಬಲ್ಲಿ 8 ವರ್ಷದ ಬಾಲಕ ವಿಷ್ಣು ಜಾಧವ್ ಎಂಬಾತ ಮೃತಪಟ್ಟಿದ್ದಾನೆ. ಈತನ ತಂದೆಗೆ ವಿರರೀತ ಕುಡಿತದ ಚಟ ಇತ್ತಂತೆ. ಇದನ್ನು ಬಿಡಿಸಬೇಕು ಅಂತ ಮನೆಯವರೆಲ್ಲ ಮದ್ಯ ವರ್ಜಕ ಔಷಧಿ ತಂದು ಆತನಿಗೆ ಗೊತ್ತಾಗದಂತೆ ತಿನ್ನಿಸುತ್ತಾ ಇದ್ದರು ಎನ್ನಲಾಗಿದೆ. ಇದೀಗ ಅದೇ ಔಷಧಿ ಸೇವಿಸಿ ಬಾಲಕ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ವಿಪರೀತ ವಾಂತಿ ಭೇದಿಯಿಂದ ಬಳಲಿದ ಬಾಲಕ

ಮಿರ್ಚಿಯಲ್ಲಿ ಮದ್ಯ ವರ್ಜಕ ಔಷಧಿ ಸೇರಿಸಿ ಇಡಲಾಗಿತ್ತು. ಇದನ್ನು ತಿಳಿಯದ ಬಾಲಕ, ಮಿರ್ಚಿ ತಿಂದಿದ್ದಾನೆ ಎನ್ನಲಾಗಿದೆ. ಈ ವೇಳೆ ವಿಪರೀತ ವಾಂತಿ, ಭೇದಿ ಕಾಣಿಸಿಕೊಂಡು, ಬಾಲಕ ಕೊನೆಯುಸಿರೆಳೆದಿದ್ದಾನೆ.

ಇದನ್ನೂ ಓದಿ: Lost Memory: ಪತ್ನಿ ಜೊತೆ ಲೈಂಗಿಕ ಸಂಪರ್ಕದ 10 ನಿಮಿಷದಲ್ಲಿ 66ರ ವ್ಯಕ್ತಿಗೆ ಮೆಮೊರಿ ಲಾಸ್!

ಮಾನಸಿಕ ಕಾಯಿಲೆಗೆ ಕ್ಯಾನ್ಸರ್ ಔಷಧಿ ಸೇವನೆ

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿ ಮೆಡಿಕಲ್ ಸ್ಟೋರ್ಸ್ ಎಡವಟ್ಟಿಗೆ ವೃದ್ಧರೊಬ್ಬರು ಬಲಿಯಾಗಿದ್ದಾರೆ. ಮಾನಸಿಕ ಕಾಯಿಲೆಗೆ ಕ್ಯಾನ್ಸರ್ ಔಷಧಿ ಸೇವಿಸಿದ ಕಾರಣ 62 ವರ್ಷದ ಹನಮಂತಪ್ಪ ಪಾಟೀಲ್ ಎಂಬುವರು ಸಾವನ್ನಪ್ಪಿದ್ದಾರೆ.

ಬೇರೆ ಔಷಧಿ ಕೊಟ್ಟು ಎಡವಟ್ಟು ಮಾಡಿದ ಮೆಡಿಕಲ್ ಸ್ಟೋರ್ಸ್

ಹನಮಂತಪ್ಪ ಪಾಟೀಲ್ ಅವರು ಧಾರವಾಡದ ಪ್ರಸಿದ್ಧ ಮಾನಸಿಕ ತಜ್ಞರೊಬ್ಬರ ಬಳಿ ಚಿಕಿತ್ಸೆ ಪಡೆಯುತ್ತಾ ಇದ್ದರು. ಹುಬ್ಬಳ್ಳಿಯ ವೆಲ್ನೆಸ್ ಫಾರೆವರ್ ಮೆಡಿಕಲ್ ಶಾಪ್‌ನಲ್ಲಿ ಪಾಟೀಲ್ ಕುಟುಂಬಸ್ಥರು ಮಾನಸಿಕ ಕಾಯಿಲೆಯ ಔಷಧಿ ಖರೀದಿಸಿದ್ದಾರೆ. ಆದರೆ ಮೆಡಿಕಲ್ ಸ್ಟೋರ್ಸ್ ಸಿಬ್ಬಂದಿ ಮಾನಸಿಕ ಕಾಯಿಲೆ ಔಷಧಿ ಬದಲು ಕ್ಯಾನ್ಸರ್ ಔಷಧಿ ಕೊಟ್ಟುಬಿಟ್ಟಿದ್ದಾರೆ.

ವೃದ್ಧನ ಆರೋಗ್ಯದಲ್ಲಿ ಏರುಪೇರು

ಏಪ್ರಿಲ್ 29 ರಂದು ಹನಮಂತಪ್ಪ ಕುಟುಂಬಸ್ಥರು ಮಾತ್ರೆ ಖರೀದಿಸಿದ್ದಾರೆ. ಮಾನಸಿಕ ಚಿಕಿತ್ಸೆಗೆ ಬಳಸುವ ಮಾತ್ರ ಬದಲು ಕ್ಯಾನ್ಸರ್ ಹಾಗೂ ಆರ್ಥೈಟಿಸ್ ಮಾತ್ರೆ ಕೊಟ್ಟಿದ್ದಾರೆ. ಹನಮಂತಪ್ಪ ದಿನಕ್ಕೆ ಒಂದರಂತೆ ಮಾನಸಿಕ ಖಾಯಿಲೆಯ ಮಾತ್ರೆ ಅಂತ ಕ್ಯಾನ್ಸರ್ ಮಾತ್ರೆ ತೆಗೆದುಕೊಂಡಿದ್ದಾರೆ. ಅದಾದ ಬಳಿಕ ಕೇವಲ 10 ರಿಂದ 12 ದಿನಗಳಲ್ಲಿ ಹನುಮಂತಪ್ಪ ಆರೋಗ್ಯದಲ್ಲಿ ಏರುಪೇರಾಗಿದೆ.

ಆಸ್ಪತ್ರೆಗೆ ದಾಖಲಿಸಿದರು ಉಳಿಯಲಿಲ್ಲ ಜೀವ

ಇದಾದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ವಿವೇಕಾನಂದ ಆಸ್ಪತ್ರೆಗೆ ದಾಖಲ ಮಾಡಲಾಗಿದೆ. ಈ ವೇಳೆ methotrexate ಮಾತ್ರೆ ಅಡ್ಡ ಪರಿಣಾಮಗಳು ಪತ್ತೆಯಾಗಿವೆ. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಎಸ್ ಡಿಎಂ ಆಸ್ಪತ್ರೆಗೆ ಹನುಮಂತಪ್ಪ ಅವರನ್ನು ದಾಖಲೆ ಮಾಡಲಾಗಿದೆ. ಆದರೆ ಔಷಧಿಯ ಅಡ್ಡ ಪರಿಣಾಮ ಹೆಚ್ಚಿದ್ದರಿಂದ ಚಿಕಿತ್ಸೆ ಫಲಿಸಲಾರದೇ ಹನಮಂತಪ್ಪ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: Hubballi KIMS: ಕಿಡ್ನಿ ಕಸಿ ನಂತ್ರ ಯಶಸ್ವಿ ತೆರೆದ ಹೃದಯ ಚಿಕಿತ್ಸೆ; ಕಿಮ್ಸ್ ವೈದ್ಯರ ಕಾರ್ಯಕ್ಕೆ ಮೆಚ್ಚುಗೆ

ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲೀಗ ಸೂತಕ

ಹನಮಂತಪ್ಪ ಅವರ ಮನೆಯಲ್ಲಿ ಮಗನ ಮದುವೆ ನಿಶ್ಚಯವಾಗಿತ್ತು. ಆದರೆ ತಂದೆ ಸಾವಿನಿಂದಾಗಿ ಮದುವೆ ರದ್ದಾಗಿದೆ. ಸಂಭ್ರಮದಲ್ಲಿದ್ದ ಮನೆಯಲ್ಲಿ ಶೋಕ ಆವರಿಸಿದೆ. ಇದೀಗ ಹುಬ್ಬಳ್ಳಿಯ ವೆಲ್ನೆಸ್ ಫಾರೆವರ್ ಮೆಡಿಕಲ್ ಶಾಪ್ ನವರಿಗೆ ಹನಮಂತಪ್ಪ ಸಂಬಂಧಿಕರು ತರಾಟೆ ತೆಗೆದುಕೊಂಡಿದ್ದಾರೆ. ಇನ್ನು  ಗಲಾಟೆ ಆರಂಭವಾಗ್ತಿದ್ದಂತೆನೇ ಮೆಡಿಕಲ್ ಸ್ಟೋರ್ಸ್ ಸಿಬ್ಬಂದಿ ಅಂಗಡಿ ಬಾಗಿಲು ಮುಚ್ಚಿದ್ದಾರೆ.  ಇನ್ನು ಈ ವೃದ್ಧನ ಸಾವಿನ ಸಂಬಂಧ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
Published by:Annappa Achari
First published: