ಬೆಂಗಳೂರಿನಲ್ಲಿ ರೌಡಿಗಳ ಅಟ್ಟಹಾಸ; ನಡು ರಸ್ತೆಯಲ್ಲಿ ನಡೆಯಿತು ಭೀಕರ ಡಬ್ಬಲ್ ಮರ್ಡರ್

ಮಂಜನ ವಿರುದ್ಧ ಎರಡು ಕೊಲೆ ಪ್ರಕರಣಗಳಿವೆ. ಈ ಪೈಕಿ ಟ್ಯಾಬ್ಲೆಟ್ ರಘು ಎಂಬ ರೌಡಿ ಹತ್ಯೆ ಪ್ರಕರಣ ಸಹ ಒಂದು. ಹಾಗಾಗಿ ರಘು ಕಡೆಯವರಿಂದಲೇ ಈ ಕೃತ್ಯ ನಡೆದಿರುವ ಶಂಕೆ ಇದೆ.  

Rajesh Duggumane | news18-kannada
Updated:August 26, 2019, 9:35 AM IST
ಬೆಂಗಳೂರಿನಲ್ಲಿ ರೌಡಿಗಳ ಅಟ್ಟಹಾಸ; ನಡು ರಸ್ತೆಯಲ್ಲಿ ನಡೆಯಿತು ಭೀಕರ ಡಬ್ಬಲ್ ಮರ್ಡರ್
ಕೊಲೆಯಾದ ತಮ್ಮ ಮಂಜ
  • Share this:
ಬೆಂಗಳೂರು (ಆ.26): ನಗರದಲ್ಲಿ ರೌಡಿಗಳ ಅಟ್ಟಹಾಸ ಮುಂದುವರಿದಿದೆ. ಪೋಲೀಸರ ನೈಟ್​ಬೀಟ್​ ಕೂಡ ಲೆಕ್ಕಿಸದೇ ರೌಡಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. ಭಾನುವಾರ ರಾತ್ರಿ, ಸಿನಿಮೀಯ ಶೈಲಿಯಲ್ಲಿ ರೌಡಿ ಶೀಟರ್ ಸೇರಿ ಇಬ್ಬರ ಹತ್ಯೆ ನಡೆದಿದ್ದು, ಉದ್ಯಾನ ನಗರಿ ಬೆಚ್ಚಿಬಿದ್ದಿದೆ.

ತಮ್ಮ ಮಂಜ ಹೆಸರಿನ ರೌಡಿ ಶೀಟರ್​ ಮತ್ತು ನವೀನ್ ಹತ್ಯೆಗೊಳಗಾದವರು.  ನವೀನ್ ಬಿಲ್ಡರ್ ಒಬ್ಬರ ಮಗ. ಭಾನುವಾರ ರಾತ್ರಿ ಮಂಜನ ಜೊತೆ ಜೆ.ಪಿ ನಗರದ ತಂದೂರ್ ಹೋಟೆಲ್​ಗೆ ಊಟಕ್ಕೆ ಹೋಗಿದ್ದ. ಊಟ ಮುಗಿಸಿ ವಾಪಾಸು ಬರುವಾಗ ಜೆಪಿ ನಗರದ 24 ನೇ ಮುಖ್ಯ ರಸ್ತೆಯಲ್ಲಿ ರಾತ್ರಿ 11 :30ಕ್ಕೆ ಕೊಲೆ ನಡೆದಿದೆ.

ಮಂಜ ಮತ್ತು ನವೀನ್​ ಆಕ್ಟೀವಾದಲ್ಲಿ ಹೋಗುವಾಗ ಹಿಂದಿನಿಂದ ಐ20 ವಾಹನ ಗುದ್ದಿದೆ. ನಂತರ ಕಾರಿನಿಂದ ಇಳಿದ 5-6 ಆಘಂತುಕರು ನಡು ರಸ್ತೆಯಲ್ಲಿ ಇಬ್ಬರನ್ನೂ  ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. 200 ಮೀಟರ್ ಅಂತರದಲ್ಲಿ ಈ ಕೊಲೆ ನಡೆದಿದೆ .

ಮಂಜನ ವಿರುದ್ಧ ಎರಡು ಕೊಲೆ ಪ್ರಕರಣಗಳಿವೆ. ಈ ಪೈಕಿ ಟ್ಯಾಬ್ಲೆಟ್ ರಘು ಎಂಬ ರೌಡಿ ಹತ್ಯೆ ಪ್ರಕರಣ ಸಹ ಒಂದು. ಹಾಗಾಗಿ ರಘು ಕಡೆಯವರಿಂದಲೇ ಈ ಕೃತ್ಯ ನಡೆದಿರುವ ಶಂಕೆ ಇದೆ.

ಇದನ್ನೂ ಓದಿ: ಮಾಜಿ ಶಾಸಕನ ಮೇಲೆ ರೌಡಿ ಪಟ್ಟಿಗೆ ಸೇರಿಸಲು ಐಜಿಪಿ ಅಲೋಕಕುಮಾರ ಸೂಚನೆ

ಹಿಂಬಾಲಿಸುತ್ತಿದ್ದ ರೌಡಿಗಳು:

ಕೊಲೆ ನಡೆಯುವುದಕ್ಕೂ ಮೊದಲು ಆಘಂತುಕರು ನವೀನ್​ ಹಾಗೂ ರಘುವನ್ನು ಹಿಂಬಾಲಿಸುತ್ತಿದ್ದರು ಎನ್ನಲಾಗಿದೆ. ಹತ್ಯೆ ಮಾಡಿದ ನಂತರ ಕಾರನ್ನು ಅಲ್ಲಿಯೇ ಬಿಡಲಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ. ವೀರಭಧ್ರಸ್ವಾಮಿ ಎಂಬುವವರ ಹೆಸರಿನಲ್ಲಿ ಕೃತ್ಯಕ್ಕೆ ಬಳಸಿದ ಕಾರ್ ಇದೆ ಎನ್ನುವ ಮಾಹಿತಿ ಗೊತ್ತಾಗಿದೆ. ಪ್ರಕರಣ ಸಂಬಂಧ ಸದ್ಯ ಜೆಪಿನಗರ ಮತ್ತು ಪುಟ್ಟೇನಹಳ್ಳಿ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.(ವರದಿ: ಗಂಗಾಧರ್​)

(ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ)

First published:August 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ