• Home
  • »
  • News
  • »
  • state
  • »
  • Yadagiri: ಕಲುಷಿತ ನೀರು ಕುಡಿದು ಇಬ್ಬರು ಸಾವು; ಅನೇಕರು ಆಸ್ಪತ್ರೆಗೆ ದಾಖಲು

Yadagiri: ಕಲುಷಿತ ನೀರು ಕುಡಿದು ಇಬ್ಬರು ಸಾವು; ಅನೇಕರು ಆಸ್ಪತ್ರೆಗೆ ದಾಖಲು

ಕಲುಷಿತ ನೀರು ಕುಡಿದು ಅನೇಕರು ಆಸ್ಪತ್ರೆಗೆ ದಾಖಲು

ಕಲುಷಿತ ನೀರು ಕುಡಿದು ಅನೇಕರು ಆಸ್ಪತ್ರೆಗೆ ದಾಖಲು

ಕಲುಷಿತ ನೀರು ಕುಡಿದು ಗ್ರಾಮದ ಇಬ್ಬರು ಮೃತಪಟ್ಟಿರುವಂತಹ ಘಟನೆ ನಡೆದಿದ್ದು, 34  ಅಧಿಕ ಜನ ವಾಂತಿ ಬೇಧಿಯಿಂದ ಅಸ್ವಸ್ಥಗೊಂಡು ಆಸ್ಪತ್ರೆ ಪಾಲಾಗಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ಯಾದಗಿರಿ: ಶುದ್ಧ ಕುಡಿಯುವ ನೀರಿಗಾಗಿ (Drinking Water) ಹಾಗೂ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಸರ್ಕಾರ (Government) ಕೋಟಿ ಕೋಟಿ ರೂಪಾಯಿ ಹಣ ಖರ್ಚು ಮಾಡುತ್ತೆ. ಆದರೆ ಆ ಹಣ ಖರ್ಚಾದರೂ ಸಹ ಇದುವರೆಗೆ ಅನೇಕ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಸಾಧ್ಯವಾಗ್ತಿಲ್ಲ. ಅಷ್ಟಕ್ಕೂ ಇಲ್ಲೊಂದು ಗ್ರಾಮವಿದೆ. ಕಲುಷಿತ ನೀರು ಸೇವಿಸಿ ಇಬ್ಬರು ಸಾವನ್ನಪ್ಪಿದ್ರೆ, ಅನೇಕ ಜನ ವಾಂತಿ ಭೇದಿಯಿಂದ ಆಸ್ಪತ್ರೆ ಪಾಲಾಗಿದ್ದಾರೆ. ಯಾದಗಿರಿ (Yadagiri) ಜಿಲ್ಲೆಯ ಶಹಾಪುರ ತಾಲೂಕಿನ ಹೊತಪೇಟ  ಗ್ರಾಮದಲ್ಲಿ  ವಾಂತಿಬೇಧಿ ಪ್ರಕರಣ ಬೆಳಕಿಗೆ ಬಂದಿದೆ.


ಕಲುಷಿತ ನೀರು ಕುಡಿದು ಗ್ರಾಮದ ಇಬ್ಬರು ಸಾವು


ಕಲುಷಿತ ನೀರು ಕುಡಿದು ಗ್ರಾಮದ ಇಬ್ಬರು ಮೃತಪಟ್ಟಿರುವಂತಹ ಘಟನೆ ನಡೆದಿದ್ದು, 34  ಅಧಿಕ ಜನ ವಾಂತಿ ಬೇಧಿಯಿಂದ ಅಸ್ವಸ್ಥಗೊಂಡು ಆಸ್ಪತ್ರೆ ಪಾಲಾಗಿದ್ದಾರೆ. ಹೊತಪೇಟ್ ಗ್ರಾಮದ ಹೊನ್ನಪ್ಪಗೌಡ  ಮತ್ತು ಈರಮ್ಮ  ಹಿರೇಮಠ   ಕಲುಷಿತ ನೀರು ಸೇವಿಸಿ ವಾಂತಿ ಬೇಧಿಯಿಂದ ಬಳಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಹೊನ್ನಪ್ಪಗೌಡ ಅವರು ಕಲುಷಿತ ನೀರು ಸೇವನೆ ಮಾಡಿ ಮೃತಪಟ್ಟಿದ್ದಾನೆ ಎಂದು ಶಂಕಿಸಲಾಗಿದೆ.ಆದರೆ ಆರೋಗ್ಯ ಇಲಾಖೆ ಅಧಿಕಾರಿಗಳು ಕಲುಷಿತ ನೀರು ಸೇವಿಸಿ ಮೃತಪಟ್ಟಿರುವ ಬಗ್ಗೆ ಖಚಿತ ಪಡಿಸಿಲ್ಲ‌.




ಗ್ರಾಮದಲ್ಲಿ ಹಳೆ ಕಾಲದ ಕುಡಿಯುವ ನೀರಿನ ಬಾವಿಯಿದ್ದು, ಅನೇಕ ಜನ ಇದೇ ಬಾವಿಯಿಂದ ಟ್ಯಾಂಕ್‌ಗೆ ನೀರು ಸರಬರಾಜು ಆಗಿ ಆ ನೀರನ್ನ ನಲ್ಲಿ ಮೂಲಕ ಜನರಿಗೆ ಸರಬರಾಜು ಮಾಡಲಾಗ್ತಿದೆ. ತೆರೆದ ಬಾವಿಯಾಗಿದ್ದರಿಂದ ಕಸಕಡ್ಡಿ ಬಿದ್ದು ನೀರು ಕಲುಷಿತಗೊಂಡಿದ್ದು, ಇದೀಗ ಅದೇ ನೀರು ಕುಡಿದು ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಗ್ರಾಮಸ್ಥರ ಹೇಳಿಕೆಯಾಗಿದೆ.


ಇನ್ನೂ ಹೊತಪೇಟ್ ಗ್ರಾಮದಲ್ಲಿ ಅನೇಕ ವರ್ಷಗಳಿಂದ ಕಲುಷಿತ ನೀರು ಸೇವಿಸಿ ಜನ ಕಾಯಿಲೆಗಳಿಗೆ ತುತ್ತಾಗುತ್ತಿದ್ದು, ಈ ಬಗ್ಗೆ ಗ್ರಾಮ ಪಂಚಾಯತಿ ಮತ್ತು ಜಿಲ್ಲಾ ಪಂಚಾಯತ್ ಅಧಿಕಾರಿಗಳಿಗೆ ಮನವಿ ಮಾಡಿದರು ಸಹ ಶುದ್ಧ ಕುಡಿಯುವ ನೀರು ಪೂರೈಸುವುದು ದೂರದ ಮಾತು. ಕೊನೆ ಪಕ್ಷ ಇರೋ ಬಾವಿಗೆ ಮೇಲೆ ಆಶ್ರಯ ಕೂಡ ಕಲ್ಪಿಸಿಲ್ಲ.


ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ


ಸದ್ಯ ಇಬ್ಬರು ಗ್ರಾಮಸ್ಥರು ಕಲುಷಿತ ನೀರು ಕುಡಿದು ಸಾವನ್ನಪ್ಪಿದ ಹಿನ್ನಲೆಯಲ್ಲಿ ಗ್ರಾಮಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ದೌಡಾಯಿಸಿ ಬಿಡುಬಿಟ್ಟಿದ್ದು, ಸಕಲ ರೀತಿಯಲ್ಲಿ ಚಿಕಿತ್ಸೆ ನೀಡಲು ವ್ಯವಸ್ಥೆಗಳನ್ನ ಕಲ್ಪಿಸಿಕೊಳ್ಳಲಾಗಿದೆ.. ಅಲ್ಪಪ್ರಮಾಣದಲ್ಲಿ ಅಸ್ವಸ್ಥಗೊಂಡವರನ್ನ ಗ್ರಾಮದಲ್ಲೆ ಚಿಕಿತ್ಸೆ ನೀಡುತ್ತಿದ್ದರು, ಜಾಸ್ತಿ ಆರೋಗ್ಯ ಹದಗೆಟ್ಟವರನ್ನ ಯಾದಗಿರಿ ಜಿಲ್ಲಾಸ್ಪತ್ರೆಗೆ  ಹಾಗೂ ತಾಲೂಕಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.


ಈ ಬಗ್ಗೆ ತಾಲೂಕಾ ಆರೋಗ್ಯ ಅಧಿಕಾರಿ ಡಾ.ರಮೇಶ ಗುತ್ತೆದಾರ ಅವರು ಮಾತನಾಡಿ, ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿದ ಹಿನ್ನಲೆ ವಾಂತಿಬೇಧಿ ಕಾಣಿಸಿಕೊಂಡಿದೆ.34 ಜನರು ಅಶ್ವಸ್ಥಗೊಂಡು ಚಿಕಿತ್ಸೆ ಪಡೆದಿದ್ದಾರೆ‌. ಈರಮ್ಮ ಹಿರೇಮಠ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಹೊನ್ನಪ್ಪಗೌಡ ಅವರು ಜಿಲ್ಲಾಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾನೆ. ಹೊನ್ನಪ್ಪಗೌಡ ಸಾವಿನ ಬಗ್ಗೆ ಯಾವುದೇ ಮಾಹಿತಿ ಹೇಳಲು ಬರುವುದಿಲ್ಲ. ವರದಿ ಬಂದ ನಂತರ ಈ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದರು.


ಇದನ್ನೂ ಓದಿ:  Rahul Gandhi Letter: ಕರ್ನಾಟಕ ಕೋಮು ಸಂಘರ್ಷದ ಕಾರ್ಖಾನೆ; ರಾಗಾ ಹೇಳಿಕೆಗೆ ಸಿಎಂ ತಿರುಗೇಟು


ಅದೇನೇ ಇರಲಿ ಅನೇಕ ವರ್ಷಗಳಿಂದ ಹೊತಪೇಟ್ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಜನ ಅಸ್ವಸ್ಥಗೊಂಡು ಇದೀಗ ಅದೇ ಕಲುಷಿತ ನೀರು ಸೇವಿಸಿ ಇಬ್ಬರೂ ಸಾವನ್ನಪ್ಪಿದ್ದು ಮಾತ್ರ ದುರಂತವೇ ಸರಿ.ಇನ್ನಾದರೂ ಆರೋಗ್ಯ ಇಲಾಖೆ, ಜಿಲ್ಲಾಡಳಿತ ಎಚ್ಚೆತ್ತುಕೊಂಡು ಹೊತಪೇಟ್ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡ್ತಾರಾ ಅನ್ನೊದನ್ನು ಕಾದು ನೋಡಬೇಕು.

Published by:ಪಾವನ ಎಚ್ ಎಸ್
First published: