HOME » NEWS » State » TWO PEOPLE COMMITTING SUICIDE AT RAICHUR AND SUSPENSION OF ILLEGAL RELATIONSHIP LG

ರಾಯಚೂರಿನಲ್ಲಿ ಆತ್ಮಹತ್ಯೆಗೆ ಶರಣಾದ ಇಬ್ಬರು ಪ್ರೇಮಿಗಳು; ಅನೈತಿಕ ಸಂಬಂಧದ ಶಂಕೆ

ನಿನ್ನೆ ಕಂಪ್ಯೂಟರ್ ಕ್ಲಾಸಿಗೆ ಹೋಗುತ್ತೇನೆ ಎಂದು ಮಧ್ಯಾಹ್ನ ಹೋದವಳು ವಾಪಸ್ಸು ಬಂದಿಲ್ಲ. ಇಲ್ಲಿ ಆಕೆಯನ್ನು ರಂಗನಾಥ ಕರೆದುಕೊಂಡು ಹೋಗಿ ನೇಣು ಹಾಕಿರಬಹುದು, ಅಥವಾ ಯಾರೊ ನೇಣು ಹಾಕಿರಬಹುದು ಈ ಬಗ್ಗೆ ತನಿಖೆಯಾಗಲಿ ಎಂದು ರಂಗಮ್ಮನ ಸಂಬಂಧಿಗಳು ಆಗ್ರಹಿಸಿದ್ದಾರೆ.

news18-kannada
Updated:January 28, 2021, 1:57 PM IST
ರಾಯಚೂರಿನಲ್ಲಿ ಆತ್ಮಹತ್ಯೆಗೆ ಶರಣಾದ ಇಬ್ಬರು ಪ್ರೇಮಿಗಳು; ಅನೈತಿಕ ಸಂಬಂಧದ ಶಂಕೆ
ಸಾಂದರ್ಭಿಕ ಚಿತ್ರ.
  • Share this:
ರಾಯಚೂರು(ಜ.28): ಇದೊಂದು ಅನೈತಿಕ ಸಂಬಂಧದ ಸಾವು, ಇಬ್ಬರು ಒಂದೇ ಕಡೆ ನೇಣಿಗೆ ಶರಣಾಗಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದಿಲ್ಲ. ಹುಡುಗ ಹಾಗೂ ಹುಡುಗಿಗೆ ಈಗಾಗಲೇ ಮದುವೆಯಾಗಿದೆ. ಮದುವೆಯಾದ ನಂತರವೂ ಅವರ ಮಧ್ಯೆ ಸಂಬಂಧ ಮುಂದುವರೆದಿದೆ. ನಿನ್ನೆ ಏನಾಯಿತೋ ಏನೋ ಇಬ್ಬರು ಒಂದೇ ಸಮಯಕ್ಕೆ ನೇಣು ಹಾಕಿಕೊಂಡಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕೆಂಬುದು ಹುಡುಗಿಯ ಕಡೆಯವರ ಒತ್ತಾಯ. ಒಂದೇ ಕಡೆ ನೇಣಿಗೆ ಶರಣಾಗಿರುವ ದೃಶ್ಯ ನೋಡಿದರೆ ಇದು ಬಹುತೇಕ ಪ್ರೇಮಿಗಳು ಎನ್ನುವಂತೆ ಇದೆ. ಒಂದು ಅರ್ಥದಲ್ಲಿ ಪ್ರೇಮಿಗಳೇ ಆದರೆ ಅದು ನೈತಿಕ ಪ್ರೇಮವಲ್ಲ, ಅನೈತಿಕ ಸಂಬಂಧ ಎನ್ನಲಾಗಿದೆ.

ದೇವದುರ್ಗಾ ತಾಲೂಕಿನ ಹೇಮನೂರಿನಲ್ಲಿ ಕಾರ್ಮಿಕರನ್ನು ಸಾಗಿಸುವ ವಾಹನ ಮಾಲೀಕ ಹಾಗು ಚಾಲಕನಾಗಿದ್ದ ರಂಗನಾಥನಿಗೆ ಆರು ವರ್ಷಗಳ ಹಿಂದೆ ಕೊತ್ತದೊಡ್ಡಿಯ ಶಿವಮ್ಮ ಎಂಬುವವರೊಂದಿಗೆ ಮದುವೆಯಾಗಿತ್ತು. ಇಲ್ಲಿಯವರೆಗೂ ಮಕ್ಕಳಾಗಿಲ್ಲ, ಈ ಮಧ್ಯೆ ನಿನ್ನೆ ಹೇಮನೂರು ಗ್ರಾಮದಲ್ಲಿ ಯಾರಿಗೂ ಗೊತ್ತಾಗದಂತೆ ಬಂದ ದೇವದುರ್ಗಾದ ಗೌರಂಪೇಟೆಯ ರಂಗಮ್ಮ ಎಂಬುವವರು ಬಂದು ನೇಣಿಗೆ ಶರಣಾಗಿದ್ದಾರೆ.

ರಂಗಮ್ಮ ಕಾಲೇಜಿಗೆ ಹೋಗುತ್ತಿದ್ದಳು, ಕಳೆದ ಒಂದು ವರ್ಷದ ಹಿಂದೆ ಮದುವೆಯಾಗಿದೆ. ಅದೇಗೆ ಅವರಿಬ್ಬರಿಗೂ ಪರಿಚಯವಾಯಿತೊ, ಅವರಿಬ್ಬರ ಮಧ್ಯೆ ಏನು ಸಂಬಂಧವಿದೆ ಎಂಬ ಬಗ್ಗೆ ಗೊತ್ತಿಲ್ಲ, ಆಕೆಯನ್ನು ಮೊದಲು ನೋಡಿಲ್ಲ, ಆದರೆ ನಿನ್ನೆಯ ದಿನ ರಂಗನಾಥ ಹೆಂಡತಿ ಕೊತ್ತದೊಡ್ಡಿಯಲ್ಲಿ ಜಾತ್ರೆಗೆ ಹೋಗಿದ್ದಳು, ರಂಗನಾಥ ಹಾಗು ಆತನ ಪತ್ನಿ ಬೇರೆ ಕಡೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು, ನಿನ್ನೆ ಮಧ್ಯಾಹ್ನದ ವೇಳೆ ಮನೆಯಲ್ಲಿ ಯಾರೂ ಇಲ್ಲದ ಸಮಯಕ್ಕೆ ಬಂದ ರಂಗಮ್ಮನೊಂದಿಗೆ ಏನು ಮಾತುಕತೆ ನಡೆಯುತ್ತೊ ಗೊತ್ತಿಲ್ಲ.

ವಿಧಾನಮಂಡಲ ಅಧಿವೇಶನ ಪ್ರಾರಂಭ; ರಾಜ್ಯಪಾಲರ ಭಾಷಣದ ಹೈಲೈಟ್ಸ್

ಮೊದಲೇ ನಿರ್ಧಾರಿಸಿದಂತೆ ರಂಗನಾಥ ಊರಿನ ಅಂಗಡಿಯೊಂದರಲ್ಲಿ ಎತ್ತಿಗೆ ಹಾಕುವ ಮೂಗುದಾರ ಖರೀದಿಸಿ ಮನೆಗೆ ಬಂದು ಒಂದೇ ಕಡೆ ನೇಣು ಹಾಕಿಕೊಂಡಿದ್ದಾನೆ. ಸಾಮಾನ್ಯವಾಗಿ ತನ್ನ ವಾಹನದಲ್ಲಿ ಕೃಷಿ ಕಾರ್ಮಿಕರನ್ನು ಕರೆದುಕೊಂಡು ಹೋಗಿ ಅವರನ್ನು ಬಿಟ್ಟು ಬಂದಿದ್ದೆ ಸಂಜೆಯಾದರೂ ವಾಪಸ್ಸು ಕರೆದುಕೊಂಡು ಹೋಗಲು ಬಾರದ ಹಿನ್ನಲೆಯಲ್ಲಿ ಕೂಲಿಕಾರರು ಮೊದಲು ರಂಗನಾಥನಿಗೆ ಫೋನು ಮಾಡಿದ್ದಾರೆ, ಫೋನು ಸಂಪರ್ಕಕ್ಕೆ ಸಿಗದ ಹಿನ್ನಲೆ ಊರಿನ ಕೆಲವರಿಗೆ ಫೋನು‌ ಮಾಡಿ ವಿಚಾರಿಸಲಾಗಿ ಮನೆಯಲ್ಲಿ ಹೋಗಿ ನೋಡಿದಾಗ ನೇಣು ಹಾಕಿಕೊಂಡಿದ್ದು ಗೊತ್ತಾಗಿದೆ.

ರಂಗನಾಥ ಈ ಮೊದಲು ರಂಗಮ್ಮನೊಂದಿಗೆ ಸಂಬಂಧ ಇಟ್ಟುಕೊಂಡಿದ್ದರ ಬಗ್ಗೆ ರಂಗಮ್ಮ ಕುಟುಂಬದವರಿಗೆ ಗೊತ್ತಿಲ್ಲ. ಆದರೆ ಆಗಾಗ ರಂಗಮ್ಮನ ತಂದೆಯನ್ನು ಮಾತನಾಡಿಸುತ್ತಿದ್ದ. ನಿನ್ನೆ ಕಂಪ್ಯೂಟರ್ ಕ್ಲಾಸಿಗೆ ಹೋಗುತ್ತೇನೆ ಎಂದು ಮಧ್ಯಾಹ್ನ ಹೋದವಳು ವಾಪಸ್ಸು ಬಂದಿಲ್ಲ. ಇಲ್ಲಿ ಆಕೆಯನ್ನು ರಂಗನಾಥ ಕರೆದುಕೊಂಡು ಹೋಗಿ ನೇಣು ಹಾಕಿರಬಹುದು, ಅಥವಾ ಯಾರೊ ನೇಣು ಹಾಕಿರಬಹುದು ಈ ಬಗ್ಗೆ ತನಿಖೆಯಾಗಲಿ ಎಂದು ರಂಗಮ್ಮನ ಸಂಬಂಧಿಗಳು ಆಗ್ರಹಿಸಿದ್ದಾರೆ.
ಮೃತ ರಂಗನಾಥನ ಪತ್ನಿ ಶಿವಮ್ಮ ಅನೈತಿಕ ಸಂಬಂಧಕ್ಕಾಗಿ ನೇಣು ಹಾಕಿಕೊಂಡಿದ್ದಾರೆ ಎಂದು ದೇವದುರ್ಗಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.  ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಒಂದು ಕಡೆ ಮಹಿಳೆಯ ಕಡೆಯವರು ಇನ್ನೊಂದು ಕಡೆ ವಿವಾಹಿತ ಮನೆಯವರಲ್ಲಿ ಆಕ್ರಂದನ. ಈ ಸಂಬಂಧವೇನು? ಮದುವೆಯ ನಂತರವೂ ಇಬ್ಬರು ಸಂಬಂಧವಿಟ್ಟುಕೊಂಡು ಕೊನೆಗೆ ಆತ್ಮಹತ್ಯೆ ನಿರ್ಧಾರಕ್ಕೆ ಬಂದರಾ? ಎಂಬ ಬಗ್ಗೆ ಪೊಲೀಸರ ತನಿಖೆಯ ನಂತರ ತಿಳಿಯಲಿದೆ.
Published by: Latha CG
First published: January 28, 2021, 1:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories