• Home
  • »
  • News
  • »
  • state
  • »
  • Kidnap: ಕಾಲೇಜ್ ಶುಲ್ಕ ಪಾವತಿಸಲು ಬಾಲಕನ ಕಿಡ್ನ್ಯಾಪ್; 15 ಲಕ್ಷಕ್ಕೆ ಬೇಡಿಕೆ; ತಗ್ಲಾಕೊಂಡಿದ್ದು ಹೇಗೆ?

Kidnap: ಕಾಲೇಜ್ ಶುಲ್ಕ ಪಾವತಿಸಲು ಬಾಲಕನ ಕಿಡ್ನ್ಯಾಪ್; 15 ಲಕ್ಷಕ್ಕೆ ಬೇಡಿಕೆ; ತಗ್ಲಾಕೊಂಡಿದ್ದು ಹೇಗೆ?

ಆರೋಪಿಗಳು

ಆರೋಪಿಗಳು

15 ಲಕ್ಷ ರೂಪಾಯಿಯಲ್ಲಿ ಸುನಿಲ್ ಕುಮಾರ್ ಕಾಲೇಜು ಶುಲ್ಕ ಪಾವತಿಸಿದ್ದಾನೆ. ಇದೇ ಹಣದಲ್ಲಿ ಒಂದು ಬೈಕ್ ಮತ್ತು ಡಿಜಿಟಲ್ ಕ್ಯಾಮೆರಾ ಖರೀದಿಸಿದ್ದನು.

  • Share this:

    ಕಾಲೇಜು ಶುಲ್ಕ (College Fess) ಪಾವತಿಸಲು 14 ವರ್ಷ ಬಾಲಕನ್ನು ಅಪಹರಿಸಿದ್ದ (Kidnap) ಇಬ್ಬರನ್ನು ಬೆಂಗಳೂರಿನ ಸಂಪಿಗೆಹಳ್ಳಿ ಠಾಣೆಯ ಪೊಲೀಸರು (Police) ಬಂಧಿಸಿದ್ದಾರೆ. ಅಪಹರಣದ ಬಳಿಕ ಬಾಲಕನ ಪೋಷಕರಿಂದ 15 ಲಕ್ಷ ರೂಪಾಯಿ ಪಡೆದುಕೊಂಡಿದ್ದರು. ಗುಡಿಬಂಡೆ ತಾಲೂಕಿನ ಎಂ. ಸುನಿಲ್‌ ಕುಮಾರ್‌ (23), ಚಿಕ್ಕಬಳ್ಳಾಪುರದ ಮಂಡಿಕಲ್‌ನ ವೈ. ವಿ. ನಾಗೇಶ್‌ ಬಂಧಿತ ಆರೋಪಿಗಳು. ಮಾನ್ಯತಾ ಲೇಔಟ್ ನಿವಾಸಿ ರಮೇಶ್ ಬಾಬು ಅವರ ಪುತ್ರ ಭವೇಶ್ (14) ನನ್ನು ಸೆಪ್ಟೆಂಬರ್ 2ರಂದು ಅಪಹರಣ ಮಾಡಲಾಗಿತ್ತು. ಮನೆಯ ನೆಲ ಮಹಡಿಯ ಕೋಣೆಯಲ್ಲಿ ಭವೇಶ್ ಒಬ್ಬನೇ ಮಲಗುತ್ತಿದ್ದನು. ಯುವಕರು ಬಾಗಿಲು ಬಡಿದ್ದಾರೆ. ಈ ವೇಳೆ ಪೋಷಕರು (Parents) ಇರಬಹುದು ಎಂದು ಭವೇಶ್ ಬಾಗಿಲು ತೆಗೆದಿದ್ದಾನೆ. ಬಾಲಕನ ಕುತ್ತಿಗೆ ಚಾಕು ಇರಿಸಿ ಭವೇಶ್​​ನನ್ನು ಅಪಹರಿಸಿದ್ದಾರೆ. ರಮೇಶ್ ಬಾಬು ಅವರ  ಕಾರ್​ನಲ್ಲಿಯೇ ಭವೇಶ್​ನನ್ನು ಕರೆದುಕೊಂಡು ಆರೋಪಿಗಳು ಪರಾರಿಯಾಗಿದ್ದಾರೆ. ರಮೇಶ್ ಬಾಬು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದಾರೆ.


    ಮಗ ಕಾಣದಿದ್ದಾಗ ರಮೇಶ್ ಬಾಬು ಕುಟುಂಬ ಆತಂಕಕ್ಕೆ ಒಳಗಾಗಿತ್ತು. ಮರುದಿನ ಬೆಳಗ್ಗೆ ಸುಮಾರು 10 ಗಂಟೆಗೆ ಭವೇಶ್ ಮೊಬೈಲ್​ನಿಂದ ಕರೆ ಮಾಡಿ 15 ಲಕ್ಷ ರೂ. ಬೇಡಿಕೆ ಇರಿಸಿದ್ದರು. ಹಣ ನೀಡದಿದ್ದರೆ ನಿಮ್ಮ ಮಗನನ್ನು ಕೊಲೆ ಮಾಡಲಾಗುವುದು ಎಂದು ಬೆದರಿಕೆ ಹಾಕಿದ್ದರು.


    ಇದರಿಂದ ಹೆದರಿದ ರಮೇಶ್ ಬಾಬು ಆರೋಪಿಗಳು ಹೇಳಿದಂತೆ ಹಣ ಹೊಂದಿಸಿಕೊಂಡು ನೆಲಮಂಗಲದ ಬಳಿಯ ರೈಲ್ವೇ ಟ್ರ್ಯಾಕ್ ಬಳಿ 15 ಲಕ್ಷ ರೂ. ತುಂಬಿದ ಬ್ಯಾಗ್ ಇರಿಸಿದ್ದರು. ಅಲ್ಲಿಗೆ ಬಂದ ಆರೋಪಿಗಳ ಹಣದ ಬ್ಯಾಗ್ ತೆಗೆದುಕೊಂಡು ಭವೇಶ್​ನನ್ನು ಅಲ್ಲಿಯೇ ಬಿಟ್ಟು ಕಾಲಿಗೆ  ಬುದ್ಧಿ ಹೇಳಿದ್ದರು.


    Two people arrested in boy kidnapping case mrq
    ಸಾಂದರ್ಭಿಕ ಚಿತ್ರ


    ಆರೋಪಿಗಳು ತಗ್ಲಾಕೊಂಡಿದ್ದು ಹೇಗೆ?


    ಇತ್ತ ಮಗ ಮನೆ  ತಲುಪಿದ ನಂತರ ರಮೇಶ್ ಬಾಬು ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ತೆರಳಿ ಘಟನೆ ಬಗ್ಗೆ ಮಾಹಿತಿ ನೀಡಿ ದೂರು ಸಲ್ಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮನೆಯ ಮುಂಭಾಗದ ಸಿಸಿಟಿವಿ, ಮೊಬೈಲ್ ಲೋಕೆಶನ್ ಮಾಹಿತಿ ಆಧರಿಸಿ ಆರೋಪಿಗಳಾದ ಸುನಿಲ್ ಕುಮಾರ್, ನಾಗೇಶ್​ನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.


    ಬಂಧಿತರಿಂದ 9.69 ಲಕ್ಷ ರೂ. ನಗದು, ಒಂದು ಕಾರ್, ಎರಡು ಬ್ಯಾಗ್ ಮತ್ತು ಒಂದು ಕ್ಯಾಮೆರಾ ವಶಕ್ಕೆ ಪಡೆದುಕೊಳ್ಳಲಾಗಿದೆ.


    ಇದನ್ನೂ ಓದಿ:  Bengaluru: ಕದ್ದ ಕಾರ್​ನ್ನೇ ಮನೆ ಮಾಡ್ಕೊಂಡು ಜೀವನ ನಡೆಸ್ತಿದ್ದ ದಂಪತಿ ಅರೆಸ್ಟ್


    ಕಾಲೇಜು ಶುಲ್ಕ ಪಾವತಿಸಲು ಅಪಹರಣ


    ಯಲಹಂಕದಲ್ಲಿ ವಾಸವಾಗಿದ್ದ ಸುನಿಲ್ ಕುಮಾರ್ ಹಗಲು ಕಟ್ಟಡ ಮತ್ತು ಗಾರ್ಡನ್ ಕೆಲಸ ಮಾಡಿಕೊಂಡಿದ್ದನು. ಸಂಜೆ ಕಾಲೇಜಿನಲ್ಲಿ ಎರಡನೇ ವರ್ಷದ ಬಿಕಾಂ ಓದುತ್ತಿದ್ದನು. ಇತ್ತೀಚೆಗೆ ಕಾಲೇಜು ಶುಲ್ಕ ಪಾವತಿಸಲು ಆಗದೇ ಸಂಕಷ್ಟಕ್ಕೆ ಸಿಲುಕಿದ್ದನು. ಆಪ್ತ ಮಿತ್ರರ ಬಳಿಯೂ ಕೇಳಿದ್ರೂ ಸುನಿಲ್ ಕುಮಾರ್​ಗೆ ಹಣ ಸಿಕ್ಕಿರಲಿಲ್ಲ. ಮಾನ್ಯತಾ ಲೇಔಟ್​​ನಲ್ಲಿ ಗಾರ್ಡನ್ ಕೆಲಸಕ್ಕೆ ಹೋದಾಗ ಭವೇಶ್ ಪರಿಚಯವಾಗಿದ್ದನು. ಕೆಳ ಮಹಡಿಯಲ್ಲಿ ಭವೇಶ್ ಒಬ್ಬನೇ ಮಲಗುವ ವಿಚಾರವೂ ಸುನಿಲ್ ಕುಮಾರ್​ಗೆ ಗೊತ್ತಾಗಿತ್ತು.


    Two people arrested in boy kidnapping case mrq
    ಸಾಂದರ್ಭಿಕ ಚಿತ್ರ


    ಭವೇಶ್​ನನ್ನು ಅಪಹರಿಸಿದ್ರೆ ಆತನ ಪೋಷಕರು ಕೇಳಿದಷ್ಟು ಹಣ ನೀಡುವಷ್ಟು ಆರ್ಥಿಕವಾಗಿ ಶಕ್ತರಾಗಿರುವ ವಿಷಯವನ್ನು ಸಹ ಸುನಿಲ್ ಕುಮಾರ್ ತಿಳಿದುಕೊಂಡಿದ್ದನು. ಈ ವಿಷಯವನ್ನು ಬಾಲ್ಯದ ಗೆಳೆಯ ನಾಗೇಶ್ ಜೊತೆ ಹೇಳಿಕೊಂಡಿದ್ದನು. ಇಬ್ಬರು ಸೇರಿ ಪ್ಲಾನ್ ಮಾಡಿ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದು ಭವ್ಯೇಶ್​ನನ್ನು ಅಪಹರಿಸಿದ್ದರು.


    ಇದನ್ನೂ ಓದಿ:  PFI Ban: ಪಿಎಫ್​ಐ ನಿಷೇಧದ ಬಗ್ಗೆ ಸಿದ್ದರಾಮಯ್ಯ, ನಟ ಚೇತನ್ ಹೇಳಿದ್ದೇನು?


    ಬಂದ ಹಣದಲ್ಲಿ ಕಾರ್ ಖರೀದಿ


    ಇನ್ನು ರಮೇಶ್ ಬಾಬು ನೀಡಿದ 15 ಲಕ್ಷ ರೂಪಾಯಿಯಲ್ಲಿ ಸುನಿಲ್ ಕುಮಾರ್ ಕಾಲೇಜು ಶುಲ್ಕ ಪಾವತಿಸಿದ್ದಾನೆ. ಇದೇ ಹಣದಲ್ಲಿ ಒಂದು ಬೈಕ್ ಮತ್ತು ಡಿಜಿಟಲ್ ಕ್ಯಾಮೆರಾ ಖರೀದಿಸಿದ್ದನು. ಇದರಲ್ಲಿ ಮನೆ ಬಾಡಿಗೆ ಅಡ್ವಾನ್ಸ್ ನೀಡಿದ್ದನು. ಉಳಿದ ಹಣವನ್ನು ತನ್ನ ಬಳಿಯೇ ಇರಿಸಿಕೊಂಡಿದ್ದನು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    Published by:Mahmadrafik K
    First published: