News18 India World Cup 2019

ರಾಜ್ಯ ಮಹಿಳಾ ನಿಲಯದಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ಇಬ್ಬರು ಅನಾಥೆಯರು

G Hareeshkumar | news18
Updated:October 12, 2018, 9:36 PM IST
ರಾಜ್ಯ ಮಹಿಳಾ ನಿಲಯದಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ಇಬ್ಬರು ಅನಾಥೆಯರು
G Hareeshkumar | news18
Updated: October 12, 2018, 9:36 PM IST
- ಶಿವರಾಮ ಅಸುಂಡಿ, ನ್ಯೂಸ್ 18 ಕನ್ನಡ

ಕಲಬುರ್ಗಿ (ಅ.12) :  ಕಲಬುರ್ಗಿಯ ರಾಜ್ಯ ಮಹಿಳಾ ನಿಲಯ ಇಬ್ಬರು ಅನಾಥೆಯರ ವಿವಾಹ ಮಹೋತ್ಸವಕ್ಕೆ ವೇದಿಕೆಯಾಯಿತು. ಪೋಷಕರಿಲ್ಲದೆ ಅನಾಥರಂತೆ ಬಂದು ರಾಜ್ಯ ಮಹಿಳಾ ನಿಲಯ ಸೇರಿದ್ದ ಅಶ್ವಿನಿ ಮತ್ತು ಅಂಬಿಕಾ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಶ್ವಿಯನ್ನು ಪವನ್ ಕುಮಾರ್ ವರಿಸಿದರೆ, ಅಂಬಿಕಾಳನ್ನು ಗುಂಡೂರಾವ್ ವಿವಾಹವಾದರು. ರಾಜ್ಯ ಮಹಿಳಾ ಸಿಬ್ಬಂದಿ ಮತ್ತು ನಾಗರೀಕರು, ಅಧಿಕಾರಿಗಳು ನವ ಜೋಡಿಗಳಿಗೆ ಶುಭ ಹಾರೈಸಿದರು.

ರಾಜ್ಯ ಮಹಿಳಾ ನಿಲಯ ಆಗಾಗ ಸುದ್ದಿಯಲ್ಲಿರುತ್ತದೆ. ಈ ಬಾರಿ ಇಬ್ಬರು ಅನಾಥೆಯರ ವಿವಾಹ ಮಹೋತ್ಸವಕ್ಕೆ ಮಹಿಳಾ ನಿಲಯ ವೇದಿಕೆಯಾಯಿತು. ಹೆತ್ತವರಿಲ್ಲದೆ, ಕಂಗಾಲಾಗಿ ರಾಜ್ಯ ಮಹಿಳಾ ನಿಲಯದಲ್ಲಿ ಆಶ್ರಯ ಪಡೆದಿದ್ದ ಇಬ್ಬರು ಅನಾಥೆಯರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮಹಿಳಾ ನಿಲಯದ ಸಿಬ್ಬಂದಿ, ನಾಗರೀಕರು ವಿವಾಹ ಮಹೋತ್ಸವಕ್ಕೆ ಸಾಕ್ಷಿಯಾದರು. ರಾಜ್ಯ ಮಹಿಳಾ ನಿಲಯದಲ್ಲಿದ್ದ ಅನಾಥೆ ಅಶ್ವಿನಿ ಮತ್ತು ಅಂಬಿಕಾರ ವಿವಾಹ ಸಂಭ್ರಮದಿಂದ ನೆರವೇರಿತು. ಅಶ್ವಿನಿಯನ್ನು ಶಹಾಬಾದ್ ನ ಪವನಕುಮಾರ್ ವರಿಸಿದರೆ,  ಅಂಬಿಕಾಳನ್ನು ಯಾದಗಿರಿಯ ಗುಂಡೂರಾವ್ ವಿವಾಹವಾದರು.

ರಾಜ್ಯ ಮಹಿಳಾ ನಿಲಯದ ಮುಂದೆ ಹಾಕಲಾಗಿದ್ದ ಚಪ್ಪರದಲ್ಲಿ ಸಂಭ್ರಮದಿಂದ ಮದುವೆ ಕಾರ್ಯ ನೆರವೇರಿತು. ಅಂಬಿಕಾ 7 ವರ್ಷಗಳ ಹಿಂದೆ ಮತ್ತು ಅಶ್ವಿನಿ 4 ವರ್ಷಗಳ ಹಿಂದೆ ರಾಜ್ಯ ಮಹಿಳಾ ನಿಲಯಕ್ಕೆ ಬಂದಿದ್ದರು. ಅವರ ಭವಿಷ್ಯ ಸುಖಕರವಾಗಿರಲಿ ಎಂದು ಸಾಂಪ್ರದಾಯಿಕವಾಗಿ ಮತ್ತು ಕಾನೂನಾತ್ಮಕವಾಗಿ ವಿವಾಹ ಮಹೋತ್ಸವ ನೆರವೇರಿಸಲಾಗಿದೆ ಎಂದು ರಾಜ್ಯ ಮಹಿಳಾ ನಿಲಯದ ಅಧೀಕ್ಷಕಿ ವಿಜಯಲಕ್ಷ್ಮೀ ತಿಳಿಸಿದ್ದಾರೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಗಳಲ್ಲಿ ಸಂಭ್ರಮ ಮನೆ ಮಾಡಿತ್ತು. ಪೋಷಕರನ್ನು ಕಳೆದುಕೊಂಡಿದ್ದ ಅಂಬಿಕಾ ರಾಜ್ಯ ಮಹಿಳಾ ನಿಲಯ ಸೇರುಂತಾಗಿದ್ದರೆ, ಅಶ್ವಿನಿ ಬಳ್ಳಾರಿಯ ರಾಜ್ಯ ಮಹಿಳಾ ನಿಲಯದಿಂದ ಇಲ್ಲಿಗೆ ಬಂದು ಆಸರೆ ಪಡೆದಿದ್ದಳು. ಇಬ್ಬರ ವಿವಾಹವೂ ಸಂಭ್ರಮದಿಂದ ನಡೆದ್ದು, ನವ ದಂಪತಿಗಳು ಹರ್ಷದ ಹೊನಲಿನಲ್ಲಿ ತೇಲಿದರು. ತಮ್ಮ ಪೋಷಕರಿಲ್ಲದೇ ಇದ್ದರೂ ರಾಜ್ಯ ಮಹಿಳಾ ನಿಲಯದಲ್ಲಿ ನಾವೆಲ್ಲ ಅಕ್ಕ-ತಂಗಿಯರಂತೆ ಜೀವನ ಸಾಗಿಸಿದೆವು. ಮಹಿಳಾ ನಿಲಯದ ಅಧಿಕಾರಿಗಳೇ ಅಪ್ಪ-ಅಮ್ಮನ ಸ್ಥಾನದಲ್ಲಿ ನಿಂತು ಮದುವೆ ಮಾಡಿಸಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವುದಕ್ಕೆ ಸಂತಸ ತರುವ ಜೊತೆಗೆ ಸಹೋದರಿಯರನ್ನು ಅಗಲುತ್ತಿರುವುದಕ್ಕೆ ದುಃಖವೂ ಆಗುತ್ತಿದೆ ಎಂದು ನವ ವಿವಾಹಿತರಾದ ಅಂಬಿಕಾ ಮತ್ತು ಅಶ್ವಿನಿ ಅಭಿಪ್ರಾಯಪಟ್ಟಿದ್ದಾರೆ.

ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾದ ಮಹಿಳಾ ನಿಲಯದ ಸಿಬ್ಬಂದಿ, ಹಿರಿಯ ಅಧಿಕಾರಿಗಳು, ನಾಗರೀಕರು ನವ ದಂಪತಿಗಳಿಗೆ ಶುಭ ಕೋರಿದರು. ಮದುವೆ ಊಟ ಸವಿದು ಸಂಭ್ರಮಿಸಿದರು. ಮಹಿಳಾ ನಿಲಯದಲ್ಲಿ ಇದೇ ಪ್ರಥಮ ಬಾರಿಗೆ ಏಕ ಕಾಲಕ್ಕೆ ಇಬ್ಬರು ಅನಾಥೆಯರ ವಿವಾಹ ಮಹೋತ್ಸವ ನಡೆಯಿತು.
Loading...

ತಾಯಿ-ಮಗಳ ಸಂಬಂಧಕ್ಕೆ ಕಾನೂನು ತೊಡಕು...ಕಲಬುರ್ಗಿಯಲ್ಲೊಂದು ಕರುಣಾಜನಕ ಕಥೆ 
First published:October 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...